ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಿಂದ 3ರಾಜ್ಯಸಭಾ ಸ್ಥಾನ ಗೆಲ್ಲಲು ಕಾಂಗ್ರೆಸ್ ರಣತಂತ್ರ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 10: ತನಗಿರುವ ಶಾಸಕರ ಸಂಖ್ಯಾ ಬಲದ ಆಧಾರದ ಮೇಲೆ ರಾಜ್ಯಸಭೆಗೆ ಕಾಂಗ್ರೆಸ್ ಎರಡು ಮತ್ತು ಬಿಜೆಪಿ ಒಬ್ಬರನ್ನು ಸುಲಭವಾಗಿ ಕಳುಹಿಸಬಹುದಾಗಿದೆ. ಆದರೆ ನಾಲ್ಕನೇ ಸ್ಥಾನಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ತನ್ನ ಅಭ್ಯರ್ಥಿಯನ್ನು ಕಾಂಗ್ರೆಸ್ ಬೆಂಬಲಿಸಬಹುದು ಎಂಬ ನಿರೀಕ್ಷೆಯಲ್ಲಿ ಜೆಡಿಎಸ್ ಇದೆ. ಆದರೆ ತನ್ನ ಻ಮೂರನೇ ಅಭ್ಯರ್ಥಿಯನ್ನು ಕಳುಹಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ.

ಮೋದಿಯನ್ನೇ ತಡವಿಕೊಂಡಿರುವ ಸಿದ್ದು ಸಮಸ್ಯೆ ಮೈ ಮೇಲೆ ಎಳೆದುಕೊಂಡರಾ? ಮೋದಿಯನ್ನೇ ತಡವಿಕೊಂಡಿರುವ ಸಿದ್ದು ಸಮಸ್ಯೆ ಮೈ ಮೇಲೆ ಎಳೆದುಕೊಂಡರಾ?

ರಾಜ್ಯಸಭೆಗೆ ಆಯ್ಕೆಯಾಗಲು 44 ಮೊದಲ ಪ್ರಾಶಸ್ತ್ಯದ ಮತಗಳು ಬೇಕಾಗಿವೆ. ಕಾಂಗ್ರೆಸ್ ಬಳಿ 122 ಶಾಸಕರಿದ್ದು ಎರಡು ಸ್ಥಾನಕ್ಕೆ 88 ಶಾಸಕರೆಂದರೆ ಮತ್ತೆ 34 ಶಾಸಕರು ಉಳಿಯುತ್ತಾರೆ. ಹೀಗಾಗಿ ಮೂರನೇ ಸ್ಥಾನದ ಆಯ್ಕೆಗೆ ಕಾಂಗ್ರೆಸ್ ಗೆ 10 ಶಾಸಕರ ಕೊರತೆ ಉಂಟಾಗಲಿದೆ.

Karnataka RS polls: How Congress plans to send 3 candidates to the Upper House

ಆದರೆ ಈ 10 ಮತಗಳನ್ನು ಹೊಂದಿಸುವ ಭರವಸೆ ಕಾಂಗ್ರೆಸ್ ಇದೆ. ಈಗಾಗಲೇ ದೇವೇಗೌಡರ ಜೆಡಿಎಸ್ ನಿಂದ ಹೊರ ಬಂದ 7 ಬಂಡಾಯ ಶಾಸಕರಿದ್ದು ಅವರ ಬೆಂಬಲ, ಜತೆಗೆ ಇನ್ನೂ ಮೂವರ ಮತಗಳನ್ನು ಪಡೆದರೆ ಕಾಂಗ್ರೆಸ್ ನ ಮೂರನೇ ಅಭ್ಯರ್ಥಿಯೂ ರಾಜ್ಯಸಭೆ ಪ್ರವೇಶಿಸಲಿದ್ದಾರೆ.

ಬಿಎಸ್ಆರ್ ನಿಂದ ಕಾಂಗ್ರೆಸ್ ಗೆ ಬಂದಿರುವ ಬಿ. ನಾಗೇಂದ್ರ, ಕೆಎಂಪಿಯ ಅಶೋಕ್ ಖೇಣಿ, ಕೆಜೆಪಿಯ ಬಿ.ಆರ್. ಪಾಟೀಲ್ ರ ಮತಗಳನ್ನು ಸೇರಿಸಿದರೆ ಕಾಂಗ್ರೆಸ್ ಗಿದ್ದ ಕೊರತೆಯ 10 ಮತಗಳು ಭರ್ತಿಯಾಗಲಿವೆ.

ಆದರೆ ಛಲ ಬಿಡದ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಯಲು ನಿರ್ಧರಿಸಿದ್ದು ಎಂ. ಫಾರೂಕ್ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಲ್ಲಿರುವ ಒಂದಷ್ಟು ಶಾಸಕರನ್ನು ಸಂಪರ್ಕಿಸಿ ಕುದುರೆ ವ್ಯಾಪಾರ ಮಾಡಿ ತನ್ನ ಸ್ಥಾನ ಗೆಲ್ಲಿಸಿಕೊಳ್ಳಲುವ ಆಲೋಚನೆಯಲ್ಲಿ ಜೆಡಿಎಸ್ ಇದೆ. ಆದರೆ ಅದು ಕೈಗೂಡುವ ಅವಕಾಶಗಳು ಕಡಿಮೆ.

English summary
The Congress can elect two while the BJP can send one of its candidates to the Rajya Sabha from Karnataka. The question is about the third seat and the Congress would 10 more MLAs to send its candidate to the upper house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X