ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾಕ್ಕೆ ಬಸ್ ಸಂಚಾರ ಆರಂಭಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

|
Google Oneindia Kannada News

ಬೆಂಗಳೂರು, ಜುಲೈ 06; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗೋವಾ ರಾಜ್ಯಕ್ಕೆ ಬಸ್‌ಗಳ ಸಂಚಾರವನ್ನು ಆರಂಭಿಸಿದೆ. ಬಸ್‌ನಲ್ಲಿ ಸಂಚಾರ ನಡೆಸುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಹೊಂದಿರಬೇಕು.

ಜುಲೈ 6ರ ಮಂಗಳವಾರದಿಂದ ಬಸ್‌ಗಳು ಗೋವಾಕ್ಕೆ ಸಂಚಾರ ನಡೆಸಲಿವೆ. ಕರ್ನಾಟಕ-ಗೋವಾ ನಡುವೆ ಸಂಚಾರ ನಡೆಸುವವರು 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್ ನೆಗೆಟಿವ್ ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ಪಡೆದಿರಬೇಕು.

ಶಿವಮೊಗ್ಗ; ಖಾಸಗಿ ಬಸ್ ಸಂಚಾರ ಮತ್ತೆ ಆರಂಭಿಸಲು 5 ಸವಾಲು ಶಿವಮೊಗ್ಗ; ಖಾಸಗಿ ಬಸ್ ಸಂಚಾರ ಮತ್ತೆ ಆರಂಭಿಸಲು 5 ಸವಾಲು

ಪ್ರಯಾಣಿಕರು ನೆಗೆಟಿವ್ ವರದಿ ಹೊಂದಿರುವ ಬಗ್ಗೆ ಆಯಾ ಬಸ್‌ನ ನಿರ್ವಾಹಕರು ಕಡ್ಡಾಯವಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಈ ಕುರಿತು ಸಿಬ್ಭಂದಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ.

 ಅಂತಾರಾಜ್ಯ ಬಸ್ ಸೇವೆ ಆರಂಭಿಸಿದ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಂತಾರಾಜ್ಯ ಬಸ್ ಸೇವೆ ಆರಂಭಿಸಿದ ಕರ್ನಾಟಕ ರಸ್ತೆ ಸಾರಿಗೆ ನಿಗಮ

Karnataka Resumed Bus Service To Goa

ಪ್ರಯಾಣಿಕರ ದಟ್ಟಣೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಬಸ್‌ಗಳನ್ನು ಓಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಷ್ಟು ಬಸ್‌ಗಳು ಸಂಚಾರ ನಡೆಸಲಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ.

ಅನ್‌ಲಾಕ್; ಬಸ್ ಸಂಚಾರ ಆರಂಭವಾದರೂ ಪ್ರಯಾಣಿಕರಿಲ್ಲ! ಅನ್‌ಲಾಕ್; ಬಸ್ ಸಂಚಾರ ಆರಂಭವಾದರೂ ಪ್ರಯಾಣಿಕರಿಲ್ಲ!

ಲಾಕ್‌ಡೌನ್ ಸಡಿಲಿಕೆ; ಎರಡು ತಿಂಗಳ ಬಳಿಕ ಗೋವಾದಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಬಾರ್ ಮತ್ತು ರೆಸ್ಟೋರೆಂಟ್‌ಗಳು ಶೇ 50ರಷ್ಟು ಜನರೊಂದಿಗೆ ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ.

ಗೋವಾಕ್ಕೆ ವಿಮಾನ, ರಸ್ತೆ ಹೀಗೆ ಯಾವುದೇ ಮಾರ್ಗವಾಗಿ ಸಂಚಾರ ನಡೆಸುವ ಜನರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರಬೇಕು.

English summary
From July 6 Karnataka State Road Transport Corporation resumed bus service to Goa. Passengers should have Covid negative certificate of 72 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X