ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಜಲಾಶಯಗಳ ನೀರು ಕುಡಿಯಲು ಮಾತ್ರ ಸಾಕಾಗುತ್ತೆ!

By Nayana
|
Google Oneindia Kannada News

ಬೆಂಗಳೂರು, ಮೇ.3: ಬಿಸಿಲು ಬೇಗೆ ಹೆಚ್ಚಾಗಿ ಕರ್ನಾಟಕದಲ್ಲಿರುವ ಜಲಾಶಯಗಳ ನೀರಿನ ಮಟ್ಟ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುವಂತೆ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿರುವುದು ಕರ್ನಾಟಕದ ಜನತೆಗೆ ಆಘಾತವನ್ನುಂಟು ಮಾಡಿದೆ.

ರಾಜ್ಯದಲ್ಲಿ ಕಳೆದ ಬಾರಿ ಉತ್ತಮ ಮಳೆಯಾಗಿತ್ತು. ಹಾಗಾಗಿ ಸಾಕಷ್ಟು ಜಲಾಶಯಗಳು ಭರ್ತಿಯಾಗಿದ್ದವು. ರಾಜ್ಯದ ಜನತೆಗೆ ಈ ಸಲ ಕುಡಿಯುವ ನೀರಿಗೆ ಏನೂ ತೊಂದರೆಯಿಲ್ಲ ಎನ್ನುವಾಗ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಜಲಾಶಯಗಳ ನೀರಿನ ಮಟ್ಟ ಕುಗ್ಗುತ್ತದೆ. ರಾಜ್ಯದ ಪ್ರಮುಖ ಜಲಾಶಯಗಳಿಗೆ ಒಳಹರಿವಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಜಲಾಶಯಗಳು ಖಾಲಿಯಾಗುತ್ತಿವೆ.

ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುವಂತೆ ಸುಪ್ರಿಂ ಆದೇಶ ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುವಂತೆ ಸುಪ್ರಿಂ ಆದೇಶ

ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ಇರುವುದು ಕೇವಲ 72.46 ಅಡಿ ನೀರು ಹೀಗಾಗಿ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ. ಜೂನ್ ಅಂತ್ಯದವರೆಗೆ ಕುಡಿಯುವ ನೀರಿನ ಅಗತ್ಯತೆ ಇದೆ. 72.46 ಅಡಿ ನೀಡಿನಲ್ಲಿ ಕೇವಲ 7 ಟಿಎಂಸಿ ಮಾತ್ರ ಬಳಕೆಗೆ ಲಭ್ಯವಾಗುತ್ತಿದೆ.

Karnataka reservoirs have water for drinking purpose only

ಲಿಂಗನಮಕ್ಕಿ ಅಣೆಕಟ್ಟು: ಅಣೆಕಟ್ಟು 1819 ಅಡಿಗಳಿಷ್ಟಿದ್ದು ನೀರಿನ ಮಟ್ಟ 1761.55 ಅಡಿಗಳಷ್ಟಿದೆ. 29.38 ಟಿಎಂಸಿಯಷ್ಟು ಮಾತ್ರ ನೀರಿದೆ ಆದರೆ ಕಳೆದ ವರ್ಷಕ್ಕಿಂತ ಉತ್ತಮವಾಗಿದೆ. ಶರಾವತಿ ನದಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಎಂಬಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1819 ಅಡಿ ಎತ್ತರವಾಗಿದೆ. 1964ರಲ್ಲಿ ಉದ್ಘಾಟನೆಯಾದ ಈ ಅಣೆಕಟ್ಟಿನಿಂದ ಸುಮಾರು 300 ಕಿಲೋಮೀಟರ್ಗಳಷ್ಟು 'ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಕರ್ನಾಟಕಕ್ಕೆ ಅಗತ್ಯವಿರುವ ವಿದ್ಯುತ್ತಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಲಿಂಗನಮಕ್ಕಿಯಲ್ಲೇ ಉತ್ಪಾದನೆಯಾಗುತ್ತದೆ.

ನಮಗೇ ನೀರಿಲ್ಲ, ತಮಿಳುನಾಡಿಗೆ ಹೇಗೆ ಬಿಡೋಣ: ಸಿಎಂ ನಮಗೇ ನೀರಿಲ್ಲ, ತಮಿಳುನಾಡಿಗೆ ಹೇಗೆ ಬಿಡೋಣ: ಸಿಎಂ

ಸುಪಾ ಅಣೆಕಟ್ಟು: ಸುಪಾದಲ್ಲಿ 1849 ಅಡಿಯಿದ್ದು ಅದರಲ್ಲಿ 1757.24 ಅಡಿ ನೀರು ಸಂಗ್ರಹವಾಗಿದೆ. ,52.42 ಟಿಎಂಸಿ ನೀರು ಲಭ್ಯವಿದೆ. ಕಾಳಿ ನದಿಗೆ ನಿರ್ಮಿಸಲಾಗಿರುವ ಸುಪಾ ಅಣೆಕಟ್ಟು ಕರ್ನಾಟಕದ ಅತ್ಯಂತ ಎಲ್ಲರವಾದ ಅಣೆಕಟ್ಟು ಎಂಬ ಖ್ಯಾತಿ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಸುಪಾದಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು ವಿದ್ಯುತ್ ಉತ್ಪಾದನೆಯ ಕಾರಣಕ್ಕಾಗಿಯೇ ನಿರ್ಮಾಣಗೊಂಡಿದೆ. 1101 ಮೀಟರ್ ಎತ್ತರ ಇರುವ ಸುಪಾ ಅಣೆಕಟ್ಟು 332 ಮೀಟರ್ ಉದ್ದವಾಗಿದೆ. ಅಣೆಕಟ್ಟನ್ನು 1985ರಂದು ಉದ್ಘಾಟಿಸಲಾಗಿದೆ. ಇದು ಕರ್ನಾಟಕದ ಎರಡನೇ ಅತಿದೊಡ್ಡ ಅಣೆಕಟ್ಟು ಎಂಬ ಖ್ಯಾತಿಯನ್ನೂ ಗಳಿಸಿಕೊಂಡಿದೆ.

ಆಲಮಟ್ಟಿ: ಆಲಮಟ್ಟಿ 1704.81 ಅಡಿ ಇದ್ದು, ಅದರಲ್ಲಿ 1668.55 ಅಡಿ ನೀರು ಸಂಗ್ರಹವಾಗಿದೆ 19.11 ಟಿಎಂಸಿ ನೀರಿದೆ. ಜುಲೈ2005ರಲ್ಲಿ ಉದ್ಘಾಟನೆಯಾದ ಆಲಮಟ್ಟಿ ಸಮುದ್ರ ಮಟ್ಟದಿಂದ 509 ಮೀಟರ್ ಎತ್ತರವಾಗಿದೆ. ಇದನ್ನು ಈಗ ಸುಪ್ರಿಂ ಕೋರ್ಟಿನ ಆದೇಶದ ಮೇರೆಗೆ 519 ಮೀಟರ್ಗೆ ಏರಿಸಲಾಗುತ್ತಿದೆ. ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಈ ಅಣೆಕಟ್ಟು ನಿರಾವರಿ ಹಾಗೂ ವಿದ್ಯುತ್ ಉತ್ಪಾದನೆ ಈ ಎರಡೂ ಉದ್ದೇಶ ಹೊಂದಿದೆ. ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಈ ಅಣೆಕಟ್ಟು 1565.15 ಮೀಟರ್ ಉದ್ದವಾಗಿದೆ.

ತುಂಗಭದ್ರ: ತುಂಗಭದ್ರ ಜಲಾಶಯ 1633 ಅಡಿಗಳಿಷ್ಟಿದ್ದು, ನೀರಿನ ಮಟ್ಟ 1578.35 ಅಡಿ ಇದೆ. 3.50 ಟಿಎಂಸಿ ನೀರು ಸಂಗ್ರಹವಾಗಿದೆ.2441ಮೀಟರ್ ಉದ್ದ ಹಾಗೂ 49.38 ಮೀಟರ್ ಎತ್ತರ ಹೊಂದಿರುವ ತುಂಗಭದ್ರಾ ಅಣೆಕಟ್ಟು ನೀರಾವರಿ ಉದ್ದೇಶದಿಂದ ನಿರ್ಮಾಣಗೊಂಡಿದೆ. ಇದು ಹೊಸಪೇಟೆಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. 33 ಬಹುದೊಡ್ಡ ಗೇಟುಗಳನ್ನು ಹೊಂದಿರುವ ತುಂಗಭದ್ರ ಅಣೆಕಟ್ಟು ಬಹುದೊಡ್ಡ ಗಾತ್ರವನ್ನು ಹೊಂದಿದೆ. ಈ ಅಣೆಕಟ್ಟಿನಿಂದ ಸಂಗ್ರಹಿಸಲಾದ ನೀರನ್ನು ಕಾಲುವೆಗಳ ಮೂಲಕ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರಿ ಹಾಗೂ ಆಂದ್ರಪ್ರದೇಶದ ಕರ್ನೂಲು, ಮೆಹಬೂಬ್ ನಗರ ಮುಂತಾದ ಜಿಲ್ಲೆಗಳಿಗೆ ನಿರಾವರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ.

ವರಾಹಿ: ವರಾಹಿಯಲ್ಲಿ 1949.50 ಅಡಿಯಿದ್ದು, 1890.43 ಅಡಿಗಳಷ್ಟು ನೀರಿದ್ದು, 6.52 ಟಿಎಂಸಿ ನೀರು ಲಭ್ಯವಿದೆ. ಹರಾಡಿ ನದಿ ಎಂದೂ ಕರೆಯಲ್ಪಡುವ ವರಾಹಿ ನದಿ, ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಮೂಲಕ ಹರಿಯುತ್ತದೆ. ಇದು ಹಾಲಾಡಿ, ಬಸರುರ್, ಕುಂದಾಪುರ ಮತ್ತು ಗುಂಗಲ್ಲಿ ಮೂಲಕ ಸಮುದ್ರಕ್ಕೆ ಸೇರುತ್ತದೆ. ಇದು ಸೂಪಾರ್ಣಿಕಾ ನದಿ, ಕೆಡಾಕ ನದಿ, ಚಕ್ರ ನದಿ, ಮತ್ತು ಕುಬ್ಜಾ ನದಿಯನ್ನು ಸೇರಿಕೊಂಡು ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ಪುರಾಣಗಳ ಪ್ರಕಾರ, ವರಾಹವು ವಿಷ್ಣುವಿನ ಅವತಾರಗಳಲ್ಲಿ ಒಂದಾಗಿದೆ.

Karnataka reservoirs have water for drinking purpose only

ಹಾರಂಗಿ: ಹಾರಂಗಿ ಜಲಾಶಯ 2859 ಗರಿಷ್ಠ ಮಟ್ಟ ಇದ್ದು, 2808.96 ಅಡಿಗಳಷ್ಟು ನೀರಿದ್ದು, 1.35 ಟಿಎಂಸಿಯಷ್ಟು ನೀರು ಮಾತ್ರ ಲಭ್ಯವಿದೆ. ಕುಶಾಲನಗರದಿಂದ 9 ಕಿ.ಮೀ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲೊಂದಾದ ಹಾರಂಗಿ ಜಲಾಶಯ. ಅಣೆಕಟ್ಟೆಯ ಕೆಲಸ ಪ್ರಾರಂಭದ ವರ್ಷ 1962 , ಮುಗಿದ ವರ್ಷ1987 ಅಣೆಕಟ್ಟೆಯ ಎತ್ತರ - 174 ಅಡಿ, ಉದ್ದ - 2775ಅಡಿ. ಜಲಾನಯನ ವಿಸ್ತೀರ್ಣ - 259 ಚದುರು ಕಿಲೋಮೀಟರ್. 1,60,000 ಎಕರೆಗಳಿಗೆ ನೀರುಣಿಸುತ್ತದೆ. ಒಟ್ಟು ಮುಳುಗಡೆಯ ಪ್ರದೇಶ - 4717 ಎಕರೆ.

ಹೇಮಾವತಿ: ಹೇಮಾವತಿ 2922 ಅಡಿ ಗಳಿಷ್ಟಿದ್ದು, 863.55 ಅಡಿಗಳಷ್ಟು ನೀರಿದ್ದು 3.37 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಹೇಮಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಹಾಸನ ಜಿಲ್ಲೆಯ ಗೊರೂರು ಗ್ರಾಮದ ಬಳಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಮೇಲ್ಮುಖ ಭಾಗವಾಗಿ ಹೇಮಾವತಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ.

ಕಬಿನಿ: ಕಬಿನಿ ಜಲಾಶಯ 2284 ಅಡಿಗಳಿಷ್ಟಿದ್ದು , 2255 ಅಡಿಗಳಷ್ಟು ನೀರಿದ್ದು 1.86 ಟಿಎಂಸಿ ನೀರಿದೆ. ಕಬಿನಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಮೈಸೂರು ಜಿಲ್ಲೆಯ ಹೆಗ್ಗಡೆದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿ ಮತ್ತು ಬಿದರಹಳ್ಳಿ ಗ್ರಾಮಗಳ ಬಳಿ ಕಬಿನಿ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಕೆಳಮುಖ ಭಾಗವಾಗಿ ಕಬಿನಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ

ಮೈದುಂಬಿದ ಕಬಿನಿಗೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯಮೈದುಂಬಿದ ಕಬಿನಿಗೆ ಬಾಗಿನ ಅರ್ಪಿಸಿದ ಸಿದ್ದರಾಮಯ್ಯ

ಭದ್ರಾ ಜಲಾಶಯ: ಭದ್ರಾ ಜಲಾಶಯ 2158 ಅಡಿಗಳಿಷ್ಟಿದ್ದು ಅದರಲ್ಲಿ 2087.85 ಅಡಿ ನೀಡಿದೆ. 5.27 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ. ಭದ್ರಾ ನದಿ ಕುದುರೆಮುಖ ಶ್ರೇಣಿಯ ಪಶ್ಚಿಮ ಘಟ್ಟಗಳ ಅರೋಲಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಕುದುರೆಮುಖದ ಸಂಸೆ ಯಲ್ಲಿ, ಗಂಗಾಮೂಲ ಎಂಬಲ್ಲಿ ಹುಟ್ಟಿ, ಪೂರ್ವಾಭಿಮುಖವಾಗಿ ಡೆಕ್ಕನ್ ಪ್ರಸ್ಥಭೂಮಿಯ ಮೇಲೆ ಹರಿಯುತ್ತದೆ. ತನ್ನಿತರ ಉಪನದಿಗಳಾದ ಸೋಮವಾಹಿನಿ, ತಡಬೇಹಳ್ಳ ಮತ್ತು ಓಡಿರಾಯನಹಳ್ಳಗಳ ಜೊತೆ ಸೇರಿ ಭದ್ರ ಅಭಯರಣ್ಯದ ಮೂಲಕ ಹರಿಯುತ್ತ ಮುಂದೆ ಶಿವಮೊಗ್ಗ ಜಿಲ್ಲೆಯ ಸಣ್ಣ ಪಟ್ಟಣ 'ಕೂಡ್ಲಿ'ಯಲ್ಲಿ ತುಂಗಾ ನದಿಯೊಂದಿಗೆ ಸೇರಿ ತುಂಗಭದ್ರಾ ನದಿಯಾಗುತ್ತದೆ.

Karnataka reservoirs have water for drinking purpose only

ಘಟಪ್ರಭಾ: ಘಟಪ್ರಭಾ ಜಲಾಶಯ 2175 ಅಡಿಗಳಿಷ್ಟಿದ್ದು, ನೀರಿನ ಮಟ್ಟ 2095.31 ಅಡಿ ಇದೆ. 6.18 ಟಿಎಂಸಿ ನೀರು ಲಭ್ಯವಿದೆ. ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ ಎತ್ತರದಲ್ಲಿ ಜನಿಸುತ್ತದೆ. 283 ಕಿಮೀ ದೂರದಷ್ಟು ಹರಿದ ಬಳಿಕಬಾಗಲಕೋಟೆ ತಾಲೂಕಿನ ಕದಾಲಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ 35 ಕಿಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು 8829 ಚದುರು ಕಿಮೀ ವಿಸ್ತಾರವಾಗಿದೆ.

ಮಲಪ್ರಭಾ: ಮಲಪ್ರಭಾ 2079.50 ಅಡಿ ಇದ್ದು, ಅದರಲ್ಲಿ 2040 ಅಡಿ ನೀರು ಸಂಗ್ರಹವಾಗಿದೆ. 2.30 ಟಿಎಂಸಿ ನೀರು ಲಭ್ಯವಿದೆ. ನದಿಯು ಬೆಳಗಾವಿ ಜಿಲ್ಲೆಯಖಾನಾಪುರ ತಾಲೂಕಿನಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ 16 ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ 792 ಮೀಟರ ಎತ್ತರದಲ್ಲಿ ಅಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. 304 ಕಿಲೊಮೀಟರುಗಳವರೆಗೆ ಹರಿದು ಕೃಷ್ಣಾ ನದಿಯನ್ನು, ಸಮುದ್ರಮಟ್ಟದಿಂದ 488 ಮೀಟರ ಎತ್ತರದಲ್ಲಿರುವ ಕೂಡಲಸಂಗಮ ದಲ್ಲಿ ಕೂಡುತ್ತದೆ.

ನಾರಾಯಣಪುರ: ನಾರಾಯಣಪುರ ಜಲಾಶಯ 1615 ಅಡಿ ಇದ್ದು, 1598.21 ಅಡಿ ನೀರು ಸಂಗ್ರಹವಾಗಿದೆ. 7.58 ಟಿಎಂಸಿ ನೀರಿದೆ.ನಾರಾಯಣಪುರ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿದೆ. 1982 ರಲ್ಲಿ ಉದ್ಘಾಟನೆಗೊಂಡಿದೆ.

English summary
Many reservoirs of Karnataka have sufficient water for drinking purpose only, in Cauvery basin reservoirs can provide water up to June for Bangalore. If water to be released to Tamilnadu, Bangalore will suffer for the next two-three months for drinking water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X