ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಹೊಸ ಕೋವಿಡ್ ಪ್ರಕರಣ ಕೊಂಚ ಇಳಿಕೆ

|
Google Oneindia Kannada News

ಬೆಂಗಳೂರು, ಮೇ 10; ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಕಳೆದ 24 ಗಂಟೆಯಲ್ಲಿ 39,305 ಹೊಸ ಪ್ರಕರಣ ದಾಖಲಾಗಿದ್ದು, 596 ಜನರು ಮೃತಪಟ್ಟಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. 24 ಗಂಟೆಯಲ್ಲಿ 32,188 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1973683ಕ್ಕೆ ಏರಿಕೆಯಾಗಿದೆ.

ಬೆಂಗಳೂರು; 380 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ ಬೆಂಗಳೂರು; 380 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭ

Karnataka Reports 39,305 New COVID Cases

ಹೆಲ್ತ್ ಬುಲೆಟಿನ್ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 5,71,006ಕ್ಕೆ ಏರಿಕೆಯಾಗಿದೆ. ಇದುವರೆಗೂ ಆಸ್ಪತ್ರೆಯಿಂದ 1383285 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ 19,372 ಜನರ ಮೃತಪಟ್ಟಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಂತ ಬಿ.ವಿ ಶ್ರೀನಿವಾಸ್ ಮತ್ತು ತಂಡಕೋವಿಡ್ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಂತ ಬಿ.ವಿ ಶ್ರೀನಿವಾಸ್ ಮತ್ತು ತಂಡ

24 ಗಂಟೆಯಲ್ಲಿ 7065 ಆಂಟಿಜೆನ್ ಪರೀಕ್ಷೆ, 117045 ಆರ್‌ಟಿಪಿಸಿಆರ್‌ ಪರೀಕ್ಷೆ ಸೇರಿ ಒಟ್ಟು 124110 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೂ 27142330 ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಬುಲೆಟಿನ್‌ನಲ್ಲಿ ಮಾಹಿತಿ ನೀಡಿದೆ.

ಏನಿದು ಡಿಆರ್‌ಡಿಒ Anti-ಕೋವಿಡ್ ಡ್ರಗ್ಸ್? ಹೇಗೆ ಉಪಯುಕ್ತ? ಏನಿದು ಡಿಆರ್‌ಡಿಒ Anti-ಕೋವಿಡ್ ಡ್ರಗ್ಸ್? ಹೇಗೆ ಉಪಯುಕ್ತ?

ಯಾವ ಜಿಲ್ಲೆಯಲ್ಲಿ ಎಷ್ಟು?; ಬೆಂಗಳೂರು ನಗರದಲ್ಲಿ 16,747 ಹೊಸ ಪ್ರಕರಣ ದಾಖಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 967640. ಸಕ್ರಿಯ ಪ್ರಕರಣಗಳ ಸಂಖ್ಯೆ 352454.

ದಕ್ಷಿಣ ಕನ್ನಡದಲ್ಲಿ 1175. ಧಾರವಾಡ 1006. ಹಾಸನ 1800. ಮಂಡ್ಯ1113. ಮೈಸೂರು 1537. ತುಮಕೂರು 2168 ಹೊಸ ಪ್ರಕರಣಗಳು ವರದಿಯಾಗಿವೆ.

Recommended Video

ಮತ್ತೆ ತೇಜಸ್ವಿ ಸೂರ್ಯರನ್ನು ಅಪಾಯಕಾರಿ ವೈರಸ್ ಎಂದು ಕಾಮೆಂಟ್ ಮಾಡಿದ ಸಿದ್ದಾರ್ಥ್ | Oneindia Kannada

ಯಾದಗಿರಿ 727. ವಿಯಜಪುರ 659. ಉತ್ತರ ಕನ್ನಡ 885. ಶಿವಮೊಗ್ಗ 820. ರಾಮನಗರ 337. ರಾಯಚೂರು 582. ಕೊಪ್ಪಳ 412. ಕಲಬುರಗಿ 988. ಹಾವೇರಿ 214. ಬಾಗಲಕೋಟೆ 968 ಪ್ರಕರಣ ದಾಖಲಾಗಿದೆ.

English summary
Karnataka reported 39,305 new COVID cases in last 24 hours. 596 people died according to health bulletin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X