ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಒಂದೇ ದಿನ 5 ಸಾವಿರ ಕೊರೊನಾ ಕೇಸ್

|
Google Oneindia Kannada News

ಬೆಂಗಳೂರು, ಜುಲೈ 23: ಕರ್ನಾಟಕದಲ್ಲಿ ಇಂದು ಒಂದೇ ದಿನ 5030 ಜನರಿಗೆ ಕೊವಿಡ್ ಸೋಂಕು ತಗುಲಿದ್ದು, 97 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ನೀಡಿದೆ.

Recommended Video

The Indian Premier League (IPL) 2020 is all set to kick-off | Oneindia Kannada

ಇಂದಿನ ವರದಿ ಬಳಿಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 80863ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ 49931 ಪ್ರಕರಣಗಳು ಸಕ್ರಿಯವಾಗಿದೆ. 2071 ಮಂದಿ ಇಂದು ಗುಣಮುಖರಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ಒಂದೇ ದಿನ ದಾಖಲೆಯ ಕೊರೊನಾ ಕೇಸ್ ಪತ್ತೆಆಂಧ್ರಪ್ರದೇಶದಲ್ಲಿ ಒಂದೇ ದಿನ ದಾಖಲೆಯ ಕೊರೊನಾ ಕೇಸ್ ಪತ್ತೆ

ಬೆಂಗಳೂರಿನಲ್ಲಿ ಇಂದು 2207 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇಂದು 47 ಜನರು ನಗರದಲ್ಲಿ ಮೃತಪಟ್ಟಿದ್ದು, 1038 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪ್ರಸ್ತುತ ಸಿಲಿಕಾನ್ ಸಿಟಿಯಲ್ಲಿ 29091 ಕೇಸ್ ಸಕ್ರಿಯವಾಗಿದೆ. ರಾಜ್ಯದಲ್ಲಿ ಇದುವರೆಗೂ 11,40,647 ಕೊವಿಡ್ ಪರೀಕ್ಷೆ ಮಾಡಲಾಗಿದೆ. ಒಟ್ಟು ಪ್ರಕರಣಗಳ ಸರಾಸರಿಯಲ್ಲಿ ಸಾವಿನ ಪ್ರಮಾಣ ಶೇಕಡಾ 1.81ರಷ್ಟಿದೆ ಎಂದು ಸರ್ಕಾರ ಹೇಳಿದೆ.

Karnataka reported highest single day spike reported 5030 new COVID19 cases

ಇನ್ಫೋಗ್ರಾಫಿಕ್ಸ್: ವಿಶ್ವದಲ್ಲಿ 1 ಮಿಲಿಯನ್ ಮಂದಿ ಗುಣಮುಖಇನ್ಫೋಗ್ರಾಫಿಕ್ಸ್: ವಿಶ್ವದಲ್ಲಿ 1 ಮಿಲಿಯನ್ ಮಂದಿ ಗುಣಮುಖ

ಅಚ್ಚರಿ ಅಂದ್ರೆ ಇಂದು ಆಂಧ್ರ ಪ್ರದೇಶದಲ್ಲೂ ಅತಿ ಹೆಚ್ಚು ಕೇಸ್ ವರದಿಯಾಗಿದೆ. ಒಂದೇ ದಿನ 7998 ಜನರಿಗೆ ಕೊವಿಡ್ ತಗುಲಿದೆ. ಇಂದಿನ ವರದಿ ಬಳಿಕ ಆಂಧ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 72711ಕ್ಕೆ ಏರಿಕೆಯಾಗಿದೆ. ಅದರಲ್ಲಿ 34272 ಪ್ರಕರಣಗಳು ಸಕ್ರಿಯವಾಗಿದ್ದರೆ, 37555 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೂ 884 ಜನರು ಪ್ರಾಣ ಕಳೆದುಕೊಂಡಿದ್ದಾರೆ.

- ಕೇರಳದಲ್ಲಿ ಇಂದು 1,078 ಹೊಸ ಕೋವಿಡ್-19 ಪಾಸಿಟಿವ್ ಕೇಸ್‌ಗಳು ದೃಢವಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳು 9,468ಕ್ಕೆ ತಲುಪಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಇಂದು 6572 ಮಂದಿಗೆ ಸೋಂಕು ದೃಢವಾಗಿದೆ.

English summary
Karnataka reported highest single day spike reported 5030 new cases and 97 deaths in last 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X