ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ವಾರದಲ್ಲಿ ಕರ್ನಾಟಕದಲ್ಲಿ 60,192 ಕೋವಿಡ್ ಪ್ರಕರಣ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 5,19,537ಕ್ಕೆ ಏರಿಕೆಯಾಗಿದೆ. ಒಂದು ವಾರದಲ್ಲಿ ರಾಜ್ಯದಲ್ಲಿ 60,192 ಹೊಸ ಪ್ರಕರಣಗಳು ದಾಖಲಾಗಿವೆ.

ಭಾನುವಾರ ಒಂದೇ ದಿನ ರಾಜ್ಯದಲ್ಲಿ 8,191 ಹೊಸ ಪ್ರಕರಣ ದಾಖಲಾಗಿದೆ. ಇದರಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿನ 3,322 ಪ್ರಕರಣಗಳು ಸೇರಿವೆ. ಶೇ 14ರಷ್ಟು ಪ್ರಕರಣ ಬೆಂಗಳೂರು ನಗರದ್ದೇ ಆಗಿದೆ.

ಕೋವಿಡ್-19 ವಿಮೆ ರಕ್ಷಣೆಯಲ್ಲಿ ದಕ್ಷಿಣ ಭಾರತವೇ ಮುಂದು ಕೋವಿಡ್-19 ವಿಮೆ ರಕ್ಷಣೆಯಲ್ಲಿ ದಕ್ಷಿಣ ಭಾರತವೇ ಮುಂದು

ಕರ್ನಾಟಕದಲ್ಲಿ ಭಾನುವಾರ 8,611 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ 4,13,452 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 98,043.

ಕೊರೊನಾ ಟಾರ್ಗೆಟ್ ತಲುಪಲು ತನ್ನದೇ 15 ಮಾದರಿಗಳನ್ನು ನೀಡಿದ ವೈದ್ಯ: ವೈರಲ್ ವಿಡಿಯೋಕೊರೊನಾ ಟಾರ್ಗೆಟ್ ತಲುಪಲು ತನ್ನದೇ 15 ಮಾದರಿಗಳನ್ನು ನೀಡಿದ ವೈದ್ಯ: ವೈರಲ್ ವಿಡಿಯೋ

ರಾಜ್ಯದಲ್ಲಿ ಭಾನುವಾರ 101 ಜನರು ಮೃತಪಟ್ಟಿದ್ದಾರೆ. ಇದುವರೆಗೂ ಮೃತಪಟ್ಟವರ ಸಂಖ್ಯೆ 8023. ಬೆಂಗಳೂರು ನಗರದಲ್ಲಿಯೇ ಇದುವರೆಗೂ 2657 ಮಂದಿ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 54 ಲಕ್ಷಕ್ಕೆ ಏರಿಕೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 54 ಲಕ್ಷಕ್ಕೆ ಏರಿಕೆ

ಭಾನುವಾರ ಎಲ್ಲಿ, ಎಷ್ಟು ಪ್ರಕರಣ?

ಭಾನುವಾರ ಎಲ್ಲಿ, ಎಷ್ಟು ಪ್ರಕರಣ?

ಭಾನುವಾರ ಒಂದೇ ದಿನ ರಾಜ್ಯದಲ್ಲಿ 8,191 ಹೊಸ ಪ್ರಕರಣ ಪತ್ತೆಯಾಗಿದೆ. 3,332 ಪ್ರಕರಣ ಬೆಂಗಳೂರು ನಗರ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಮೈಸೂರು 481, ದಕ್ಷಿಣ ಕನ್ನಡ 380, ಕೊಪ್ಪಳ 337, ಬಳ್ಳಾರಿ 298, ಉಡುಪಿ ಮತ್ತು ಶಿವಮೊಗ್ಗದಲ್ಲಿ 295 ಪ್ರಕರಣ ಪತ್ತೆಯಾಗಿದೆ.

ಜಿಲ್ಲೆಗಳಲ್ಲಿ ಮರಣ ಸಂಖ್ಯೆ

ಜಿಲ್ಲೆಗಳಲ್ಲಿ ಮರಣ ಸಂಖ್ಯೆ

ಭಾನುವಾರ ರಾಜ್ಯದಲ್ಲಿ 101 ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಇವರಲ್ಲಿ 32 ಜನರು ಬೆಂಗಳೂರು ನಗರ ಜಿಲ್ಲೆಯವರು. ಮೈಸೂರಿನಲ್ಲಿ 12, ಬಳ್ಳಾರಿಯಲ್ಲಿ 8 ಜನರು ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 15ರಂದು ಒಂದು ವರ್ಷದ ಮಗು ಮೈಸೂರಿನಲ್ಲಿ ಮೃತಪಟ್ಟಿತ್ತು. ರಾಜ್ಯದಲ್ಲಿ ಇದುವರೆಗೂ ಮೃತಪಟ್ಟವರಲ್ಲಿ ಅತಿ ಕಡಿಮೆ ವಯಸ್ಸಿನ ಮಗು ಇದಾಗಿದೆ.

ಗುಣಮುಖರಾಗುವವರ ಸಂಖ್ಯೆ

ಗುಣಮುಖರಾಗುವವರ ಸಂಖ್ಯೆ

ಭಾನುವಾರ ಕರ್ನಾಟಕದಲ್ಲಿ 8,611 ಜನರು ಗುಣಮುಖರಾಗಿದ್ದಾರೆ. ಇವರಲ್ಲಿ 2,970 ಜನರು ಬೆಂಗಳೂರು ನಗರ ಜಿಲ್ಲೆಯಲ್ಲಿ ಗುಣಮುಖಗೊಂಡವರು. ರಾಜ್ಯದಲ್ಲಿ ಇದುವರೆಗೂ ಗುಣಮುಖಗೊಂಡವರ ಸಂಖ್ಯೆ 413452.

Recommended Video

IPL 2020 DC VS KXIP : ಪಂದ್ಯದ ಬಳಿಕ Mayank Agarwal ಮಾಧ್ಯಮದವರ ಮುಂದೆ ಹೇಳಿದ್ದೇನು | Oneindia Kannada
ಬೆಂಗಳೂರಿನ ಕೋವಿಡ್ ಪರಿಸ್ಥಿತಿ

ಬೆಂಗಳೂರಿನ ಕೋವಿಡ್ ಪರಿಸ್ಥಿತಿ

ಬೆಂಗಳೂರು ನಗರದಲ್ಲಿನ ಹೊಸ ಪರಕರಣಗಳಲ್ಲಿ ಶೇ 16ರಷ್ಟು ಯಲಹಂಕ ಝೋನ್‌ನಿಂದ ವರದಿಯಾಗಿವೆ. ಪೂರ್ವ ವಲಯದಲ್ಲಿ ಶೇ 15, ದಕ್ಷಿಣ ವಲಯದಲ್ಲಿ ಶೇ 14ರಷ್ಟು ಪ್ರಕರಣ ಹೊಸದಾಗಿ ದಾಖಲಾಗಿದೆ. ಬಿಬಿಎಂಪಿ ಮಾಹಿತಿ ಅನ್ವಯ 22,486 ಪರೀಕ್ಷೆಗಳನ್ನು ನಡೆಸಲಾಗಿದೆ.

English summary
8,191 new COVID 19 cases reported in Karnataka on September 21, 2020. Karnataka recorded 60,192 cases in last week. State total tally rise to 5,19,537.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X