ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಸ್ಟಿಂಗ್ ಕಮ್ಮಿಯಿಂದ ಹೊಸ ಕೇಸ್ ಇಳಿಕೆ: ಆದರೆ ಡಿಸ್ಚಾರ್ಜ್ ಸಂಖ್ಯೆ

|
Google Oneindia Kannada News

ಲಾಕ್ ಡೌನ್ ಪರಿಣಾಮದಿಂದ ಹೊಸ ಸೋಂಕಿತರ ಸಂಖ್ಯೆ ರಾಜಧಾನಿ ಬೆಂಗಳೂರಿನಲ್ಲಿ ಕಮ್ಮಿಯಾಗುತ್ತಾ ಸಾಗುತ್ತಿದ್ದರೆ, ರಾಜ್ಯದ ಇತರ ನಗರಗಳಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತಿದೆ.

ಬೆಂಗಳೂರಿನಲ್ಲಿ ಟೆಸ್ಟಿಂಗ್ ಸಂಖ್ಯೆ ಕಮ್ಮಿಯಾಗುತ್ತಿರುವುದರಿಂದ ಹೊಸ ಕೇಸುಗಳ ಸಂಖ್ಯೆಯೂ ಕಮ್ಮಿಯಾಗುತ್ತಾ ಇದೆ. ಕಳೆದ ಒಂದು ವಾರದಲ್ಲಿ ರ‍್ಯಾಪಿಡ್ ಆಂಟಿಜೆನ್ ಮತ್ತು ಆರ್ಟಿಪಿಸಿಆರ್ ಟೆಸ್ಟ್ ಸೇರಿ 8,94,749 ಟೆಸ್ಟ್ ಗಳನ್ನು ಮಾಡಲಾಗಿದೆ.

2ನೇ ಹಂತದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಹೈದರಾಬಾದ್‌ಗೆ ಆಗಮನ2ನೇ ಹಂತದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ಹೈದರಾಬಾದ್‌ಗೆ ಆಗಮನ

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಪ್ರಕಾರ, ರೈಲ್ವೆ, ಬಸ್, ಮೆಟ್ರೋ ನಿಲ್ದಾಣಗಳಲ್ಲಿ ರ‍್ಯಾಂಡಮ್ ಟೆಸ್ಟ್ ಮಾಡಲಾಗುತ್ತಿತ್ತು. ಇದೇ ಸುಮಾರು ಎಂಬತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿರುತ್ತಿತ್ತು ಎಂದು ಹೇಳಿದ್ದಾರೆ.

 ಸೈಟ್‍ಕೇರ್‌ನಿಂದ ಸ್ಟೆಪ್-ಡೌನ್ ಕೋವಿಡ್ ಆಸ್ಪತ್ರೆಗೆ ಚಾಲನೆ ಸೈಟ್‍ಕೇರ್‌ನಿಂದ ಸ್ಟೆಪ್-ಡೌನ್ ಕೋವಿಡ್ ಆಸ್ಪತ್ರೆಗೆ ಚಾಲನೆ

ವಿರೋಧ ಪಕ್ಷಗಳು ಟೆಸ್ಟಿಂಗ್ ಕಮ್ಮಿ ಮಾಡಿ, ಹೊಸ ಕೇಸ್ ಇಳಿಕೆಯಾಗಿದೆ, ಸರಕಾರ ಅಂಕಿಅಂಶ ಮುಚ್ಚಿಡುತ್ತಿದೆ ಎಂದು ಆರೋಪಿಸುತ್ತಿದೆ. ಆದರೆ, ಗಣನೀಯವಾಗಿ ಹೆಚ್ಚುತ್ತಿರುವ ಬಿಡುಗಡೆ ಹೊಂದುತ್ತಿರುವವರ ಸಂಖ್ಯೆಯ ಬಗ್ಗೆ ಒಳ್ಳೆಯ ಮಾತನ್ನು ಆಡುತ್ತಿಲ್ಲ.

 ಬಿಬಿಎಂಪಿ ಆಯುಕ್ತರು ಹೇಳುವ ಪ್ರಕಾರ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಂದ್

ಬಿಬಿಎಂಪಿ ಆಯುಕ್ತರು ಹೇಳುವ ಪ್ರಕಾರ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಂದ್

ಬಿಬಿಎಂಪಿ ಆಯುಕ್ತರು ಹೇಳುವ ಪ್ರಕಾರ, ಲಾಕ್ ಡೌನ್ ಇರುವುದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಂದ್ ಆಗಿದೆ. ಹಾಗಾಗಿ, ನಿಲ್ದಾಣಗಳಲ್ಲಿ ಜನರು ಬರುತ್ತಿಲ್ಲ. ಇಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಸುತ್ತಿದ್ದದ್ದು. ಜೊತೆಗೆ, ಈಗ ಸೋಂಕಿನ ಲಕ್ಷಣ ಇರುವವರು ಮತ್ತು ಅವರ ಸಂಪರ್ಕಿತರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

 ಮೂವತ್ತು ಸಾವಿರಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆಗೆ ಬಿಡುಗಡೆಯಾಗುತ್ತಿದ್ದಾರೆ

ಮೂವತ್ತು ಸಾವಿರಕ್ಕೂ ಹೆಚ್ಚು ಸೋಂಕಿತರು ಆಸ್ಪತ್ರೆಗೆ ಬಿಡುಗಡೆಯಾಗುತ್ತಿದ್ದಾರೆ

ಕಳೆದ ಒಂದು ವಾರದಿಂದ ಸರಾಸರಿ ಮೂವತ್ತು ಸಾವಿರಕ್ಕೂ ಹೆಚ್ಚು ಸೋಂಕಿತರು ದಿನಾ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ಮೇ ಎಂಟರಿಂದ ಈ ಸಂಖ್ಯೆ ಏರುತ್ತಲೇ ಇದೆ. ತಿಂಗಳ ಆರಂಭದಲ್ಲಿ ಸುಮಾರು ಇಪ್ಪತ್ತು ಸಾವಿರವಿದ್ದ ಈ ಸಂಖ್ಯೆ ಈಗ ಮೂವತ್ತು ಸಾವಿರಕ್ಕೆ ಬಂದು ನಿಂತಿರುವುದು ಸಮಾಧಾನ ಪಡುವ ವಿಚಾರವಾಗಿದೆ.

 ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಬಿಡುಗಡೆಯಾದವರ ಸಂಖ್ಯೆ ಹೀಗಿದೆ: (ಕರ್ನಾಟಕ)

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಬಿಡುಗಡೆಯಾದವರ ಸಂಖ್ಯೆ ಹೀಗಿದೆ: (ಕರ್ನಾಟಕ)

ಮೇ 9: 31,796
ಮೇ 10: 32,188
ಮೇ 11: 22,584
ಮೇ 12: 34,752
ಮೇ 13: 34,057
ಮೇ 14: 35,879
ಮೇ 15: 34,425
ಒಟ್ಟು: 2,25,681

Recommended Video

3ನೇ ಮಹಾಯುದ್ಧ ತಡೆಯಲು ವಿಶ್ವಸಂಸ್ಥೆ ಎಂಟ್ರಿ, ಇಸ್ರೇಲ್ ನಿರ್ಧಾರವೇನು? | Oneindia Kannada
 ಒಂದು ವಾರದಿಂದ ರಾಜಧಾನಿಯಲ್ಲಿ ಬಿಡುಗಡೆಯಾದವರ ಸಂಖ್ಯೆ ಹೀಗಿದೆ: (ಬೆಂಗಳೂರು)

ಒಂದು ವಾರದಿಂದ ರಾಜಧಾನಿಯಲ್ಲಿ ಬಿಡುಗಡೆಯಾದವರ ಸಂಖ್ಯೆ ಹೀಗಿದೆ: (ಬೆಂಗಳೂರು)

ಮೇ 9: 15,000
ಮೇ 10: 14,289
ಮೇ 11: 5,378
ಮೇ 12: 18,089
ಮೇ 13: 15,191
ಮೇ 14: 12,898
ಮೇ 15: 7,379
ಒಟ್ಟು: 88,224

English summary
Karnataka Recorded Over Two Lakh Discharge Count In Last One Week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X