ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರ ಎಲ್ಲರಿಗೂ ಕೊರೊನಾ ಲಸಿಕೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನ

|
Google Oneindia Kannada News

ಕರ್ನಾಟಕದ ಪ್ರತಿಯೊಬ್ಬ ಪ್ರಜೆಗೂ ಸೆಪ್ಟೆಂಬರ್ ತಿಂಗಳೊಳಗೆ ಎರಡೂ ಡೋಸ್ ಲಸಿಕೆಗಳನ್ನು ನೀಡಿ, ಮೂರನೇ ಕೋವಿಡ್ ಅಲೆಯಿಂದ ಕರ್ನಾಟಕವನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ನಾಳೆ (ಜೂ.10) ಬೆಳಿಗ್ಗೆ 9.10 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ.

ಕೋವಿಡ್ ಎರಡನೇ ಅಲೆಯಲ್ಲಿ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರವೇ ಮೂವತ್ತು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ, ವಾಸ್ತವದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ ಇದಕ್ಕಿಂತ ಹಲವು ಪಟ್ಟು ಹೆಚ್ಚಾಗಿದೆ. ಸಾವಿರಾರು ಮಕ್ಕಳು ಅನಾಥರಾಗಿದ್ದಾರೆ.‌ ಮೂರನೇ ಅಲೆಯನ್ನು ತಡೆದುಕೊಳ್ಳುವ ಶಕ್ತಿ ನಮಗಿಲ್ಲ, ಹೀಗಾಗಿ ತ್ವರಿತಗತಿಯಲ್ಲಿ ಲಸಿಕೆ ಕೊಡುವ ಕಾರ್ಯ ನಡೆಯಬೇಕು ಎಂದು ವೇದಿಕೆ‌ ಕಾರ್ಯಕರ್ತರು ರಾಜ್ಯ ಮತ್ತು ಒಕ್ಕೂಟ ಸರ್ಕಾರಗಳನ್ನು ಒತ್ತಾಯಿಸಲಿದ್ದಾರೆ. ಈ ಕುರಿತು ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಮಾಹಿತಿ ನೀಡಿದ್ದಾರೆ.

Karnataka Rakshana Vedike Twitter Campaign To Demand 2 Dose Corona Vaccine Within September

ಹಕ್ಕೊತ್ತಾಯಗಳು

1. ಉಚಿತ ಲಸಿಕೆ

ರಾಜ್ಯದ ಎಲ್ಲ ನಾಗರಿಕರಿಗೂ ಬಡವ-ಶ್ರೀಮಂತನೆಂಬ ಭೇದವಿಲ್ಲದೆ ಉಚಿತವಾಗಿಯೇ ಲಸಿಕೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣಕ್ಕೆ ಸಿಗುವ ಲಸಿಕೆಯಿಂದಾಗಿ ಅಸಮಾನತೆ ಸೃಷ್ಟಿಯಾಗುತ್ತದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿಯೇ ಲಸಿಕೆ ನೀಡಬೇಕು. ಹಲವಾರು ದೇಶಗಳಲ್ಲಿ ಯಾವ ರೀತಿ ಒಂದೇ ಒಂದು ಲಸಿಕೆಯನ್ನು ಮಾರಾಟಕ್ಕೆ ಇಟ್ಟಿಲ್ಲವೋ ಹಾಗೆಯೇ ಭಾರತದಲ್ಲೂ ಸಹ ಲಸಿಕೆ ಮಾರಾಟದ ವಿಷಯವಾಗಬಾರದು. ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ನೀಡಿರುವ ಶೇ 25 ರಷ್ಟು ವ್ಯಾಕ್ಸಿನ್ ಕೊಳ್ಳುವ ಅವಕಾಶವನ್ನು ರದ್ದುಗೊಳಿಸಿ, ನೂರಕ್ಕೆ ನೂರು ಲಸಿಕೆಗಳು ಉಚಿತವಾಗಿಯೇ, ಸರ್ಕಾರದಿಂದಲೇ ನೀಡಬೇಕು.

2. ಕಾಲಮಿತಿಯೊಳಗೆ ಲಸಿಕೆ

ಕೋವಿಡ್ ಮೂರನೇ ಅಲೆ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿರುವುದರಿಂದ ಸೆಪ್ಟೆಂಬರ್ ಅಂತ್ಯದೊಳಗೆ ಎರಡೂ ಡೋಸ್ ಲಸಿಕೆಗಳನ್ನು ಕರ್ನಾಟಕದ ಸಮಸ್ತ ಜನತೆಗೆ ನೀಡಬೇಕು. ಜೂನ್ ಅಂತ್ಯದೊಳಗೆ ಮೊದಲನೇ ಡೋಸ್ ನೀಡಬೇಕು. ಸೆಪ್ಟೆಂಬರ್ ಅಂತ್ಯದೊಳಗೆ ಎರಡನೇ ಡೋಸ್ ನೀಡಿ, ಲಸಿಕಾ ಅಭಿಯಾನವನ್ನು ಪೂರ್ಣಗೊಳಿಸಬೇಕು. ಲಸಿಕೆ ಇಲ್ಲದೆ ಜನರು ಸಾಯುವಂಥ ಸ್ಥಿತಿಯನ್ನು ನಿರ್ಮಾಣ ಮಾಡಬಾರದು.

3. ಮನೆಮನೆಗೆ ಲಸಿಕೆ

ಸರ್ಕಾರ ಕೂಡಲೇ ಚುನಾವಣೆ ಸಂದರ್ಭದ ಮತದಾನ ಬೂತ್ ಗಳ ಮಾದರಿಯಲ್ಲಿ ಕೋವಿಡ್ ಲಸಿಕೆ ಬೂತ್ ಸ್ಥಾಪಿಸಬೇಕು. ನೂಕುನುಗ್ಗಲು, ಜನದಟ್ಟಣೆ ಆಗದಂತೆ‌ ಎಲ್ಲ‌ ನಾಗರಿಕರು ಸುಲಭವಾಗಿ ವ್ಯಾಕ್ಸಿನ್ ಪಡೆಯುವಂಥ ಸ್ಥಿತಿ ನಿರ್ಮಾಣ ಮಾಡಬೇಕು.‌ ಸಾಧ್ಯವಾದರೆ ಮನೆಮನೆಗೂ ತೆರಳಿ ಲಸಿಕೆ‌ ನೀಡುವಂಥ ವ್ಯವಸ್ಥೆ ಜಾರಿಗೊಳಿಸಬೇಕು. ಲಸಿಕೆ ನೀಡಿಕೆಗೆ ಸರ್ಕಾರ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು.‌ ಸ್ಮಾರ್ಟ್ ಫೋನ್ ಇಲ್ಲದ,‌ ರಿಜಿಸ್ಟ್ರೇಷನ್ ಮಾಡಿಸಲು ಗೊತ್ತಾಗದ ಹಳ್ಳಿಗಾಡಿನ ಜನರ ಸಮಸ್ಯೆ ನೀಗಿಸಬೇಕು.

4. ತಾರತಮ್ಯವಿಲ್ಲದ ಲಸಿಕೆ
ಒಕ್ಕೂಟ ಸರ್ಕಾರ ಮೊದಲ ಹಂತದ ಲಸಿಕೆ ಹಂಚಿಕೆಗಳಲ್ಲಿ ಗುಜರಾತ್, ಉತ್ತರ ಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಹಂಚಿಕೆ‌ ಮಾಡಿ, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಪ್ರಮಾಣದಲ್ಲಿ ಹಂಚಿಕೆ ಮಾಡಿರುವುದು ಅಂಕಿಅಂಶಗಳಲ್ಲಿ ಬಯಲಾಗಿದೆ. ಒಕ್ಕೂಟ ಸರ್ಕಾರ ಆಕ್ಸಿಜನ್, ವೆಂಟಿಲೇಟರ್, ರೆಮ್ಡಿಸಿವಿರ್, ಆಂಫೋಟೆರಿಸಿನ್ ಬಿ ಇತ್ಯಾದಿಗಳ ಹಂಚಿಕೆ ಸಂದರ್ಭದಲ್ಲೂ ಕರ್ನಾಟಕದ ಪಾಲನ್ನು ಕಡಿಮೆ ಮಾಡಿ, ಗುಜರಾತ್ ಮತ್ತು ಉತ್ತರದ ರಾಜ್ಯಗಳಿಗೆ ಹೆಚ್ಚು ನೀಡಿದೆ. ಈ ತಾರತಮ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜೂನ್ 21 ರಿಂದ ಒಕ್ಕೂಟ ಸರ್ಕಾರ ನೀಡುವ ಲಸಿಕೆಗಳು ವೈಜ್ಞಾನಿಕವಾಗಿ, ಜನಸಂಖ್ಯೆ ಆಧರಿಸಿ ಹಂಚಿಕೆಯಾಗಬೇಕು.

Recommended Video

ಮೂರು ಹಂತಗಳಲ್ಲಿ ಬೆಂಗಳೂರು Unlock: ಪ್ರತ್ಯೇಕ ನಿಯಮಾವಳಿ | Oneindia Kannada

ಈ ಎಲ್ಲ ಹಕ್ಕೊತ್ತಾಯಗಳನ್ನು ಮುಂದಿಟ್ಟು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜ್ಯದ ಎಲ್ಲೆಡೆ ಪ್ರತಿಭಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಮಾಡಲಾಗುವುದು.

English summary
Karnataka Rakshana Vedike President TA Narayana Gowda Organised Twitter Campaign to Demand 2 Dose Corona Vaccine Within September On June 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X