ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ಮೊದಲು ಪಿಯುಸಿ ಫಲಿತಾಂಶಕ್ಕೆ ದಿನಾಂಕ ನಿಗದಿ

|
Google Oneindia Kannada News

ಬೆಂಗಳೂರು, ಮೇ 1: ಮೊದಲ ಪಿಯುಸಿ ಫಲಿತಾಂಶಕ್ಕೆ ದಿನಾಂಕ ನಿಗದಿ ಪಡಿಸಿ, ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

2019-20ರ ಸಾಲಿನ ಫಲಿತಾಂಶವನ್ನು ಮೇ 5ರಂದು ಪ್ರಕಟಿಸುವಂತೆ, ಇಲಾಖೆ, ಎಲ್ಲಾ ಪದವಿಪೂರ್ವ ಕಾಲೇಜುಗಳಿಗೆ ತಿಳಿಸಿದೆ. ಜೊತೆಗೆ, ಕೋವಿಡ್ 19 ಸಂಬಂಧ, ಹಲವು ನಿರ್ಬಂಧವನ್ನೂ ವಿಧಿಸಿದೆ.

ಆತ್ಮಹತ್ಯೆ ಮಾಡಿಕೊಂಡ ದ್ವೀತಿಯ ಪಿಯುಸಿ ವಿದ್ಯಾರ್ಥಿಆತ್ಮಹತ್ಯೆ ಮಾಡಿಕೊಂಡ ದ್ವೀತಿಯ ಪಿಯುಸಿ ವಿದ್ಯಾರ್ಥಿ

ಫಲಿತಾಂಶವನ್ನು ಕಾಲೇಜ್ ನೊಟೀಸ್ ಬೋರ್ಡ್ ನಲ್ಲಿ ಹಾಕದಂತೆ ಸೂಚಿಸಲಾಗಿದೆ. ಇದರ ಬದಲು, ಎಲ್ಲಾ ವಿದ್ಯಾರ್ಥಿಗಳ ಅಥವಾ ಪೋಷಕರ ಮೊಬೈಲ್ ಮತ್ತು ಈಮೇಲ್ ವಿಳಾಸಕ್ಕೆ ಫಲಿತಾಂಶ ಕಳುಹಿಸಲು ಸೂಚಿಸಲಾಗಿದೆ.

Karnataka PU Board Sent A Circular To All Colleges To Announce 1st PU Result On May 5th

"ಹಸಿರು ಜಿಲ್ಲೆಯಲ್ಲಿರುವ ಕಾಲೇಜುಗಳಲ್ಲೂ, ವಿದ್ಯಾರ್ಥಿಗಳನ್ನು ಕಾಲೇಜಿಗೆ ಬರಲು ಅವಕಾಶ ನೀಡಬಾರದು. ಗುಂಪು ಗುಂಪಾಗಿ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸೇರುವುದನ್ನು ತಡೆಯಲು, ಎಲ್ಲಾ ಕಾಲೇಜಿನಲ್ಲಿ ಕಟ್ಟುನಿಟ್ಟಾಗಿ ಈ ಕ್ರಮವನ್ನು ಪಾಲಿಸಬೇಕೆಂದು" ಇಲಾಖೆಯ ನಿರ್ದೇಶಕಿ ಕನಕವಲ್ಲಿ ತಿಳಿಸಿದ್ದಾರೆ.

ಇನ್ನು, ದ್ವಿತೀಯ ಪಿಯುಸಿ ದಾಖಲಾತಿಯ ವಿಚಾರದಲ್ಲಿ ಶಿಕ್ಷಣ ಇಲಾಖೆ, ಹಲವು ಮಾರ್ಗಸೂಚಿಯನ್ನು ರಾಜ್ಯದ ಕಾಲೇಜುಗಳಿಗೆ ಕಳುಹಿಸಿದೆ. ಇದರಲ್ಲಿ ಶುಲ್ಕ ಪಾವತಿಸುವ ವಿಚಾರವೂ ಸೇರಿದೆ.

ಕೊರೊನಾ ಹೊಡೆತದಿಂದ ಜನರು ಆರ್ಥಿಕ ತೊಂದರೆಯಲ್ಲಿ ಇರುವುದರಿಂದ, ಕಾಲೇಜು ಶುಲ್ಕವನ್ನು ಒಂದೇ ಬಾರಿ ಪಾವತಿಸುವಂತೆ ಪೋಷಕರಿಗೆ ಒತ್ತಡ ಹೇರಬಾರದು ಎನ್ನುವ ಸೂಚನೆಯನ್ನೂ ಇಲಾಖೆ, ಕಾಲೇಜುಗಳಿಗೆ ಕಳುಹಿಸಿದೆ.

English summary
Karnataka PU Board Sent A Circular To All Colleges To Announce 1st PU Result On May 5th,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X