ಉಪನ್ಯಾಸಕರಿಗೆ ಸೆಡ್ಡು: ಪಿಯು ಮೌಲ್ಯಮಾಪನಕ್ಕೆ ಹೊಸ ಸೂತ್ರ

Subscribe to Oneindia Kannada

ಬೆಂಗಳೂರು, ಏಪ್ರಿಲ್, 16: ರಾಜ್ಯ ಸರ್ಕಾರ ಅಂತಿಮವಾಗಿ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಹೊಸ ಕ್ರಮವನ್ನು ತೆಗೆದುಕೊಂಡಿದೆ. ಪಿಯು ಬೋರ್ಡ್ ಸಿಬ್ಬಂದಿಯನ್ನೇ ಬಳಸಿಕೊಂಡು ಮೌಲ್ಯಮಾಪನ ಮಾಡುತ್ತೇವೆ ಎಂದು ಪಿಯು ಬೋರ್ಡ್ ನಿರ್ದೇಶಕ ಡಾ ರಾಮೇಗೌಡ ತಿಳಿಸಿದ್ದಾರೆ.

ಕೋಡಿಂಗ್ ಮತ್ತು ಡಿಕೋಡಿಂಗ್ ಪ್ರಕ್ರಿಯೆಯನ್ನು ರಾಜ್ಯದ 46 ಕೇಂದ್ರಗಳಲ್ಲಿ ಆರಂಭ ಮಾಡುತ್ತೇವೆ. ಸಿಬ್ಬಂದಿಗೂ ಈ ಬಗ್ಗೆ ತರಬೇತಿ ನೀಡಿದ್ದು ನಿಗದಿತ ದಿನಾಂಕದೊಳಗೆ ಫಲಿತಾಂಶ ನೀಡುತ್ತೇವೆ ಎಂದು ತಿಳಿಸಿದ್ದಾರೆ.[ಶುರುವಾಗದ ಮೌಲ್ಯಮಾಪನ: ವಿದ್ಯಾರ್ಥಿಗಳ ಭವಿಷ್ಯ ಅಯೋಮಯ]

puc

ರಾಜ್ಯ ಶಿಕ್ಷಣ ಸಂಶೋಧನ ಮತ್ತು ತರಬೇತಿ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ 460 ಜನರನ್ನು ಬಳಸಿಕೊಂಡು ಮೌಲ್ಯಮಾಪನ ಪ್ರಕ್ರಿಯೆ ಆರಂಭ ಮಾಡುತ್ತೇವೆ. 46 ಕೇಂದ್ರಗಳಿಗೆ ತಲಾ10 ಅಧಿಕಾರಿಗಳ ತಂಡ ನೇಮಕ ಮಾಡಿ ಮೇಲ್ವಿಚಾರಣೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.[ಉಪನ್ಯಾಸಕರ ಬೇಡಿಕೆಗಳೇನು?]

ಕೋಡಿಂಗ್ ಮುಗಿದ ತಕ್ಷಣವೇ ಮೌಲ್ಯಮಾಪನ ಪ್ರಾರಂಭ ಮಾಡಲಾಗುವುದು. ಏಪ್ರಿಲ್ 16 ಮತ್ತು 17 ರಂದು ಕೋಡಿಂಗ್ ಮತ್ತು ಡಿಕೋಡಿಂಗ್ ಪ್ರಕ್ರಿಯೆ ಮುಗಿಯುತ್ತದೆ. ಖಾಸಗಿಯ ಏಳು ಸಾವಿರ ಉಪನ್ಯಾಸಕರನ್ನು ಬಳಸಿಕೊಂಡು ಮೌಲ್ಯಮಾಪನವನ್ನು ಪೂರ್ಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇತ್ತ ಫ್ರೀಢಂ ಪಾರ್ಕ್ ನಲ್ಲಿ ಉಪನ್ಯಾಸಕರ ಧರಣಿ ಮುಂದುವರಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The PU board Finally took a decision to make evaluation of 2 PUC exam answers-scripts. The Board made alternate arrangement taking the help of PU Board officers and Private Lecturers in the evaluation work.
Please Wait while comments are loading...