ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮತ್ತೊಬ್ಬ ಕಿಂಗ್‌ಪಿನ್ ಭಾಗಿ: ಸಿಐಡಿಯಿಂದ ಶೋಧ

|
Google Oneindia Kannada News

ಬೆಂಗಳೂರು, ಏ. 22: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಒಂದು ರೀತಿಯಲ್ಲಿ ಅಕ್ರಮ ನಡೆದಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಉತ್ತರ ಹಾಳೆಯಲ್ಲಿ ಅಕ್ರಮ ಮಾತ್ರ ನಡೆದಿಲ್ಲ. ಮುನ್ನಾಭಾಯ್ ಎಂಬಿಬಿಎಸ್ ಸ್ಟೈಲ್‌ನಲ್ಲಿ ಎಲೆಕ್ಟ್ರಿಕ್ ಡಿವೈಎಸ್ ಬಳಿಸಿ ಪರೀಕ್ಷೆ ಬರೆದು ಪಿಎಸ್ಐ ಆಗಿದ್ದನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ.

ಪಿಎಸ್ಐ ನೇಮಕಾತಿಯಲ್ಲಿ ಮುನ್ನಾಭಾಯ್ ಎಂಬಿಬಿಎಸ್ ಸ್ಟೈಲ್‌ನಲ್ಲಿ ಬ್ಲೂಟೂತ್ ಸಾಧನ ಬಳಸಿ ಪರೀಕ್ಷೆ ಬರೆದು ಪಿಎಸ್ಐ ನೇಮಕವಾಗಿದ್ದ ಹಯ್ಯಾಳಿ ದೇಸಾಯಿ ಅಲಿಯಾಸ್ ಅಯ್ಯಣ್ಣ ದೇಸಾಯಿಯನ್ನು ಬಂಧಿಸಿದ ಬೆನ್ನಲ್ಲೇ ಮತ್ತಿಬ್ಬರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಪಿಎಸ್ಐ ನೇಮಕಾತಿ ಅಕ್ರಮ: ಮೂಲಕ್ಕೆ ಹೋಗಿ ತನಿಖೆ ಮಾಡಲು ಸಿಎಂ ಸೂಚನೆಪಿಎಸ್ಐ ನೇಮಕಾತಿ ಅಕ್ರಮ: ಮೂಲಕ್ಕೆ ಹೋಗಿ ತನಿಖೆ ಮಾಡಲು ಸಿಎಂ ಸೂಚನೆ

ಕಲಬುರಗಿ ಮೂಲದ ವಿಶಾಲ್ ಹಾಗೂ ಅಫಜಲಪುರ ತಾಲೂಕಿನ ಶರಣ ಬಸಪ್ಪ ಬಂಧಿತ ಆರೋಪಿಗಳು. ಇವರು ಸಹ ಜ್ಞಾನ ಜ್ಯೋತಿ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಅಕ್ರಮ ಎಸಗಿ ಪಿಎಸ್ಐ ಆಗಿ ನೇಮಕವಾಗಿದ್ದರು.

Karnataka PSI Recruitment Scam: CID Arrested Candidates who used Electric Devices to Write Exam

ವಿಶಾಲ್ ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದಿದ್ದ. ಹೊರಗಿನವರಿಗೆ ಪ್ರಶ್ನೆ ಪತ್ರಿಕೆ ರವಾನಿಸಿ, ಬ್ಲೂಟೂತ್ ಮೂಲಕ ಉತ್ತರ ಪಡೆದು ಪರೀಕ್ಷೆಯನ್ನು ಬರೆದಿದ್ದ. ಪರೀಕ್ಷೆಯಲ್ಲಿ 147 ಅಂಕ ಗಳಿಸಿ 17 ನೇ ರ್‍ಯಾಂಕ್ ಪಡೆದು ಪಿಎಸ್ಐ ಆಗಿ ನೇಮಕವಾಗಿದ್ದ. ಜ್ಞಾನ ಜ್ಯೋತಿ ಶಾಲೆಯಲ್ಲಿಯೇ ವಿಶಾಲ್ ಪರೀಕ್ಷೆ ಬರೆದು ನೇಮಕವಾಗಿದ್ದು, ಇದೀಗ ಬಂಧನಕ್ಕೆ ಒಳಗಾಗಿದ್ದಾನೆ.

ದಿನದಿಂದ ದಿನಕ್ಕೆ ಬಿಚ್ಚಿಕೊಳ್ಳುತ್ತಿರುವ ದಿವ್ಯಾ ಹಾಗರಗಿ ಲಿಂಕ್: IPS ಅಧಿಕಾರಿ ಜೊತೆ ಫೋಟೊ ವೈರಲ್ದಿನದಿಂದ ದಿನಕ್ಕೆ ಬಿಚ್ಚಿಕೊಳ್ಳುತ್ತಿರುವ ದಿವ್ಯಾ ಹಾಗರಗಿ ಲಿಂಕ್: IPS ಅಧಿಕಾರಿ ಜೊತೆ ಫೋಟೊ ವೈರಲ್

ಎಲೆಕ್ಟ್ರಿಕ್ ಡಿವೈಸ್ ಕಿಂಗ್ ಪಿನ್‌ಗಾಗಿ ಶೋಧ: ಪಿಎಸ್ಐ ಮಾತ್ರವಲ್ಲದೇ ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಬ್ಲೂಟೂತ್ ಡಿವೈಎಸ್ ಪೂರೈಕೆ ಮಾಡಿ ಪರೀಕ್ಷೆ ಅಕ್ರಮಕ್ಕೆ ನಾಂದಿ ಹಾಡುತ್ತಿದ್ದ ಕಿಂಗ್ ಪಿನ್‌ಗಾಗಿ ಸಿಐಡಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಹಯ್ಯಾಳಿ ದೇಸಾಯಿ ಅಲಿಯಾಸ್ ಅಯ್ಯಣ್ಣ ದೇಸಾಯಿ ನೀಡಿರುವ ಮಾಹಿತಿ ಮೇರೆಗೆ ಕಿಂಗ್ ಪಿನ್ ಗಾಗಿ ಸಿಐಡಿ ಪೊಲೀಸರ ಒಂದು ತಂಡ ಹುಡುಕಾಟ ನಡೆಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೂರಾರು ಜನರಿಗೆ ಬ್ಲೂಟೂತ್ ಒದಗಿಸಿ ಪರೀಕ್ಷೆ ಅಕ್ರಮಕ್ಕೆ ನಾಂದಿ ಹಾಡಿರುವ ಕಿಂಗ್ ಪಿನ್ ತಲೆ ಮರೆಸಿಕೊಂಡಿದ್ದಾನೆ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಬ್ಲೂಟೂತ್ ಒದಗಿಸಿ ಆ ಬಳಿಕ ಪ್ರಶ್ನೆ ಪತ್ರಿಕೆ ಹೊರಗೆ ತರಿಸಿಕೊಂಡು ಉತ್ತರ ಬರೆಯುವಂತೆ ಮಾಡುತ್ತಿದ್ದ. ಈತ ಪ್ರಭಾವಿ ನಾಯಕನಾಗಿ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜನ ನಾಯಕನಾಗಲು ತಯಾರಿ ನಡೆಸಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ.

Karnataka PSI Recruitment Scam: CID Arrested Candidates who used Electric Devices to Write Exam

ಸಮಗ್ರ ತನಿಖೆ:

ಬ್ಲೂಟೂತ್ ಬಳಿಸಿ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಜಾಲ ಇಡೀ ಸಿಐಡಿ ತನಿಖಾ ತಂಡವನ್ನೇ ನಿದ್ದೆ ಗೆಡಿಸಿದೆ. 545 ಪಿಎಸ್ಐ ನೇಮಕಾತಿಗಳ ಪೈಕಿ ಹೆಚ್ಚು ಮಂದಿ ಕಲಬುರಗಿ ಸುತ್ತಮುತ್ತಲಿನಿಂದಲೇ ನೇಮಕವಾಗಿದ್ದಾರೆ. ಹೀಗಾಗಿ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೇವಲ ಪರೀಕ್ಷಾ ಕೇಂದ್ರಗಳಲ್ಲಿ ಉತ್ತರ ಬರೆದಿರುವುದು ಮಾತ್ರವಲ್ಲದೇ ಬ್ಲೂಟೂತ್ ಬಳಿಸಿ ಪರೀಕ್ಷೆ ಬರೆದಿರುವ ಸಂಖ್ಯೆ ಹೆಚ್ಚಾಗಿದೆ.

Karnataka PSI Recruitment Scam: CID Arrested Candidates who used Electric Devices to Write Exam

ತಪ್ಪಿತಸ್ಥರ ವಿರುದ್ಧ ಕ್ರಮ: 545 ಪಿಎಸ್ಐಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ನಂತರ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಇದರಲ್ಲಿ ಯಾರೇ ಶಾಮೀಲಾಗಿದ್ದರೂ ಕಟ್ಟು ನಿಟ್ಟಿನ ಕ್ರಮ ಜರುಗಿಸುತ್ತೇವೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿದ್ದವರ ಪೈಕಿ ಈಗಾಗಲೇ ಕೆಲವರು ಬಂಧನಕ್ಕೆ ಒಳಗಾಗಿದ್ದಾಎ. ತಪ್ಪಿತಸ್ಥರನ್ನು ಜೀವನ ಪರ್ಯಂತ ಅನರ್ಹಗೊಳಿಸಲಾಗುತ್ತದೆ. ಪ್ರತಿ ಉತ್ತರ ಹಾಳೆಯನ್ನು ಮೂರು ಬಾರಿ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Recommended Video

ಅಪ್ಪ ಸರಿ ಮಕ್ಕಳು ತಪ್ಪು ಅನ್ನೋ ಸರ್ಕಾರದ ನಡೆಗೆ ಟಾಂಗ್ ಕೊಟ್ಟ ಉಪೇಂದ್ರ | Oneindia Kannada

English summary
Karnataka PSI Recruitment Scam: CID Arrested Candidates Using Electric Devices to Write Exam after detained Annayya Desai. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X