ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣ ಇಲಾಖೆಯಲ್ಲಿ ಹಳೇ ಬೇರು ಹೊಸ ಹೆಸ(ಚಿಗು)ರು..!

|
Google Oneindia Kannada News

ಬೆಂಗಳೂರು, ಜೂ.25: ಮಗುವಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದೆ. ಮನೆಯ ನಂತರ ಪೂರ್ವ ಪ್ರಾಥಮಿಕ , ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣ ಹೀಗೆ ಶಿಕ್ಷಣ ವ್ಯವಸ್ಥೆ ಮುಂದುವರೆಯುತ್ತದೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಹಾಗೂ ಪದವಿ ಪೂರ್ವ ಶಿಕ್ಷಣ ಎಂಬ ಎರಡು ಇಲಾಖೆಗಳು ಕೆಲಸ ಮಾಡುತ್ತಿದೆ.

ಸರ್ಕಾರ ಕೆಲವು ರಾಜ್ಯಗಳನ್ನು ಉದಾಹರಣೆಯಾಗಿಟ್ಟುಕೊಂಡು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಪದವಿ ಪೂರ್ವ ಇಲಾಖೆಯನ್ನು ಒಂದೇ ಸೂರಿನಡಿಯಲ್ಲಿ ತರಲು ಇಚ್ಛಿಸಿದೆ. ಇದಕ್ಕಾಗಿ ಸರ್ಕಾರ ಇನ್ಮುಂದೆ ಈ ಇಲಾಖೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರು ನಾಮಕರಣವನ್ನು ಮಾಡಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯಲ್ಲಿ ನರ್ಸರಿಯಿಂದ 12 ನೇತರಗತಿವರೆಗಿನ ಶಿಕ್ಷಣ ವ್ಯವಸ್ಥೆಯನ್ನು ಶಾಲಾ ಶಿಕ್ಷಣ ಎಂದೇ ಪರಿಗಣಿಸಲಾಗುತ್ತದೆ. ಇದರಿಂದಾಗಿಯೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಶಿಕ್ಷಣ ಸಚಿವರೇ ಮುತುವರ್ಜಿಯನ್ನು ವಹಿಸಿ ಹೊಸದಾಗಿ ಇಲಾಖೆಯ ಹೆಸರನ್ನು ಮರುನಾಮಕರಣವನ್ನು ಮಾಡಿಸಿದ್ದಾರೆ.

ಇತರ ರಾಜ್ಯಗಳನ್ನು ಅನುಸರಿಸಿದ ಕರ್ನಾಟಕ

ಇತರ ರಾಜ್ಯಗಳನ್ನು ಅನುಸರಿಸಿದ ಕರ್ನಾಟಕ

ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ 12ನೇ ತರಗತಿವರೆಗಿನ ಶಿಕ್ಷಣವು ಶಾಲಾ ಶಿಕ್ಷಣದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿಯೂ ಸಹ ಸದರಿ ಅಂಶವನ್ನು ಪುನರುಚ್ಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ (ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನೊಳಗೊಂಡಂತೆ) ಶಾಲಾ ಶಿಕ್ಷಣ ಇಲಾಖೆ ಎಂದು ಬದಲಾಯಿಸುತ್ತಿರುವುದು ಸೂಕ್ತ ಎಂದು ವಿವಿಧ ಹಂತದಲ್ಲಿ ಚರ್ಚೆಯಲ್ಲಿ ತಜ್ಞರು ಅಭಿಪ್ರಾಯವನ್ನು ಪಟ್ಟಿರುತ್ತಾರೆ. ಈಗಾಗಲೇ ಕೇಂದ್ರ ಸರ್ಕಾರ ಮತ್ತು ಹೆಚ್ಚಿನ ರಾಜ್ಯಗಳಲ್ಲಿ "ಶಾಲಾ ಶಿಕ್ಷಣ ಇಲಾಖೆ' ಎಂಬ ಪದನಾಮ ರೂಢಿಯಲ್ಲಿರುವುದರಿಂದ ಕರ್ನಾಟಕ ರಾಜ್ಯದಲ್ಲಿವೂ ಸಹ ಇದೇ ಮಾದರಿಯನ್ನು ಅನುಸರಿಸುವಂತೆ ಶಿಕ್ಷಣ ಸಚಿವರು ಸೂಚಿಸಿರುತ್ತಾರೆ.

ನಿಯಮಗಳ ತಿದ್ದುಪಡಿಗೆ ಸೂಚನೆ

ನಿಯಮಗಳ ತಿದ್ದುಪಡಿಗೆ ಸೂಚನೆ

ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಎಂದು ಕರೆಯಲ್ಪಡುವ ಇಲಾಖೆಯನ್ನು ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆ (Department of school education and Literacy) ಎಂದು ಮರು ನಾಮಕರಣಗೊಳಿಸಿ ಆದೇಶಿಸಲಾಗಿದೆ. ಇನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಸೇವಾ ನಿಯಮಗಳು)ಈ ಬಗ್ಗೆ ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು 1977ಕ್ಕೆ ಸೂಕ್ತ ತಿದ್ದುಪಡಿ ತರಲು ಸೂಚಿಲಾಗಿದೆ ಎಂದು ಶಿಕ್ಷಣ ಇಲಾಖೆಗೆ ಸ್ಪಷ್ಟಪಡಿಸಿದೆ.

ನಾಲ್ಕು ಹಂತದಲ್ಲಿ ಪ್ರಾಥಮಿಕ ಪ್ರೌಢಶಿಕ್ಷಣ ವಿಭಾಗ

ರಾಷ್ಟ್ರೀಯ ಶಿಕ್ಷಣ ನೀತಿ ಮೂರರಿಂದ ಎಂಟು ವರ್ಷದವರೆಗಿನ ಮಗು ಅಂದರೆ ಪ್ರೀ ಸ್ಕೂಲ್ ನಿಂದ ಎರಡನೇ ತರಗತಿವರೆಗೂ ಒಂದು ಹಂತ, ಎಂಟರಿಂದ 11 ವರ್ಷದವರೆಗಿನ ಮಕ್ಕಳು ಅಂದರೆ ಮೂರರಿಂದ ಐದನೇ ತರಗತಿಯ ಮಕ್ಕಳು ಎರಡನೇ ಹಂತ, 11 ರಿಂದ 14 ವಯೋಮಾನದ ಮಕ್ಕಳು ಅಂದರೆ 6 ರಿಂದ 8ನೇ ತರಗತಿ ಮೂರನೇ ಹಂತ, 14ರಿಂದ 18 ವಯೋಮಾನದ ಮಕ್ಕಳು ಅಂದರೆ 9 ರಿಂದ12ನೇ ತರಗತಿಯ ಮಕ್ಕಳು ನಾಲ್ಕನೇ ಹಂತದಲ್ಲಿರುತ್ತದೆ. ಅಂದರೆ ನರ್ಸರಿಯಿಂದ 12ನೇ ತರಗತಿವರೆಗಿನ ಶಿಕ್ಷಣವನ್ನು ಶಾಲಾ ಮಕ್ಕಳ ಶಿಕ್ಷಣ ಎಂದೇ ಪರಿಗಣಿಸಲಾಗುತ್ತದೆ. ಇದಕ್ಕಾಗಿ ಶಿಕ್ಷಣ ಇಲಾಖೆಯು ತನ್ನ ಹೆಸರನ್ನು ಮರುನಾಮಕರಣ ಮಾಡಿಕೊಂಡಿದೆ.

ಟ್ವೀಟ್ ಜೊತೆೆಯಲ್ಲಿ ಆದೇಶ ಪ್ರತಿ

ಟ್ವೀಟ್ ಜೊತೆೆಯಲ್ಲಿ ಆದೇಶ ಪ್ರತಿ

ಶಿಕ್ಷಣ ಸಚಿವ ಬಿಸಿ ನಾಗೇಶ್ ಟ್ವೀಟ್ ಮಾಡಿದ್ದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ ಎಂದಿದ್ದಾರೆ. ಟ್ವೀಟ್ ಜೊತೆೆಯಲ್ಲಿ ಆದೇಶಪ್ರತಿಯನ್ನು ಸಹ ಹಾಕಲಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಶೇರ್ ಮಾಡಿದ್ದಾರೆ.

English summary
An order has been issued renamed the State Department of Primary and Secondary Education as the Department of School Education and Literacy, Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X