ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಮೂಲಕ ಕೊವಿಡ್ 19 ಪ್ರತಿರೋಧಕ ಕಷಾಯ ಮನೆ ಮನೆಗೆ

|
Google Oneindia Kannada News

ಬೆಂಗಳೂರು, ಜುಲೈ 15: ಅಂಚೆ ಇಲಾಖೆ ಮೂಲಕ ಮಾವಿನ ಹಣ್ಣನ್ನು ಜನರಿಗೆ ಪೂರೈಕೆ ಮಾಡಿದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕೆಎಸ್‌ಎಂಡಿಎಂಸಿ) ಈಗ ಎಲ್ಲರಿಗೂ ಕಷಾಯ ಕುಡಿಸಲು ಮುಂದಾಗಿದೆ.

Recommended Video

IPL 2020 moving to Dubai | Oneindia Kannada

ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸಾರ್ವಜನಿಕರ ಆರೋಗ್ಯ ವೃದ್ಧಿಗಾಗಿ ಕಷಾಯ ಕುಡಿಸುವುದು ಕರ್ನಾಟಕ ಸರ್ಕಾರದ ಉದ್ದೇಶವಾಗಿದೆ. ಕೊವಿಡ್ 19 ವಿರುದ್ಧ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಇದಾಗಿದ್ದು, ಮನೆ ಮನೆಗೆ ಅಂಚೆ ಇಲಾಖೆ ಮೂಲಕ ತಲುಪಿಸಲು ಕೆಎಸ್‌ಎಂಡಿಎಂಸಿ ಇಚ್ಛಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಸಿ. ಜಿ. ನಾಗರಾಜ್ ಹೇಳಿದ್ದಾರೆ.

ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?ಕೊರೊನಾಭೀತಿ ಇರುವವರು ಯಾವ ಆಹಾರ ಸೇವಿಸಬೇಕು?

ಕಷಾಯ ತಯಾರಿಸಲು ಬೇಕಾದ ಸಿದ್ಧಪದಾರ್ಥಗಳನ್ನು ಒಳಗೊಂಡ 3 ಕೆಜಿಯ ಪ್ಯಾಕೇಜಿಗೆ 600 ರು ವಿಧಿಸಲಾಗಿದೆ. ಇದನ್ನು ಬಳಸಿಕೊಂಡು ಸುಲಭವಾಗಿ ಕಷಾಯ ತಯಾರಿಸಿಕೊಂಡು ಕುಡಿಯಬಹುದು. ಕಷಾಯ ಕಿಟ್ ಬಳಸಲು ಬಯಸುವವರು KSMDMC ಅಧಿಕೃತ ವೆಬ್ ತಾಣದಲ್ಲಿ ಬುಕ್ ಮಾಡಬಹುದು. ಮುಂದಿನ ವಾರದಿಂದ ಕಷಾಯ ಕಿಟ್ ಪೂರೈಕೆ ಆರಂಭವಾಗಲಿದೆ.

Karnataka postmen to now home deliver Ayurvedic concoction for ‘Covid immunity’

ಈ ಹಿಂದೆ 100 ಟನ್ ಗಳಿಗೂ ಅಧಿಕ ಮಾವು ಮಾರಾಟ ಮಾಡಿ ತಕ್ಕಮಟ್ಟಿನ ಯಶಸ್ಸು ಕಂಡಿರುವ KSMDMC ಈಗ ಇದೇ ರೀತಿ ಮಸಾಲೆ ಪದಾರ್ಥ ಬೆಳೆಯುವ ಬೆಳೆಗಾರರಿಗೆ ನೆರವಾಗಲು ಮುಂದಾಗಿದೆ.

ಗಿಡಮೂಲಿಕೆ, ಸಾಂಬಾರು ಪದಾರ್ಥ, ಗಿಡ ಗಂಟೆಗಳನ್ನು ಒಳಗೊಂಡ ಈ ಕಿಟ್ ನಿಂದ ತಯಾರಾಗುವ ಕಷಾಯ ಕೊವಿಡ್ 19 ಹಾಗೂ ವಿಷಯ ಶೀತ ಜ್ವರ, ನೆಗಡಿ, ಕೆಮ್ಮು ಲಕ್ಷಣ ಉಳ್ಳವರ ಪ್ರತಿರೋಧ ಹೆಚ್ಚಿಸಲಿದೆ ಎಂದು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಸಿಹಿಸುದ್ದಿ: ಕೊರೊನಾ ಸೋಂಕಿಗೆ ಬಂತು ಆಯುರ್ವೇದ ಔಷಧಿಸಿಹಿಸುದ್ದಿ: ಕೊರೊನಾ ಸೋಂಕಿಗೆ ಬಂತು ಆಯುರ್ವೇದ ಔಷಧಿ

ಒಂದೆಡೆ ಡಾ. ಗಿರಿಧರ್ ಕಜೆ ಅವರ ಕೊವಿಡ್ 19 ಔಷಧ ಬಳಕೆ ಹೆಚ್ಚಾಗುತ್ತಿದೆ. ಪತಂಜಲಿ ಸಂಸ್ಥೆಯ ಕೊರೊನಿಲ್ ಬಗ್ಗೆ ನಂಬಿಕೆ ಬಂದಿಲ್ಲವಾದರೂ ಕುತೂಹಲದಿಂದ ಬಳಸುವವರ ಸಂಖ್ಯೆ ಕಡಿಮೆಯಾಗಿಲ್ಲ.

English summary
The Karnataka government wants people to drink kashaaya, a special Ayurvedic concoction, to build immunity against Covid-19, and has decided to deliver at the doorstep of residents all the herbs and spices needed to make the potion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X