ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಜನಸಂಖ್ಯೆ 6.5 ಕೋಟಿ: ವಾಹನಗಳು 2 ಕೋಟಿ

|
Google Oneindia Kannada News

Recommended Video

ಕರ್ನಾಟಕದ ಜನಸಂಖ್ಯೆ ಹಾಗು ವಾಹನಗಳ ಸಂಖ್ಯೆ ಬಗ್ಗೆ ಬಯಲಾದ ಆಘಾತಕಾರಿ ಮಾಹಿತಿ | Oneindia Kannada

ಬೆಂಗಳೂರು, ಅ.1: ಅಪಾಯಕಾರಿ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ವಾಹನಗಳ ಒಟ್ಟು ಸಂಖ್ಯೆ 2 ಕೋಟಿಗಳಷ್ಟು ತಲುಪುತ್ತಿದ್ದು, ಸಾರ್ವಜನಿಕರು ಸಮೂಹ ಸಾರಿಗೆ ಬಿಟ್ಟು ಖಾಸಗಿ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿರುವುದು ಬೆಳಕಿಗೆ ಬಂದಿದೆ.

ಸಾರಿಗೆ ಇಲಾಖೆ ಮೂಲಗಳ ಪ್ರಕಾರ ಜು.31ಕ್ಕೆ ರಾಜ್ಯದಲ್ಲಿ ಒಟ್ಟು 1.99 ಕೋಟಿ ವಾಹನಗಳಿದ್ದು ಕಳೆದ 7 ವರ್ಷಗಳಲ್ಲಿ ಶೇ.100ರಷ್ಟು ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಪ್ರತಿವರ್ಷ ಶೇ.8ರಿಂದ 10ರಷ್ಟು ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಸೆಪ್ಟೆಂಬರ್ ಅಂತ್ಯಕ್ಕೆ ವಾಹನಗಳ ಸಂಖ್ಯೆ ಒಟ್ಟು 2 ಕೋಟಿಗಳಷ್ಟಾಗಿದೆ.

ಆಸ್ತಿ ತೆರಿಗೆ ಜತೆ ವಾಹನ ತೆರಿಗೇನೂ ಕಟ್ಟಬೇಕು: ನಾಗರಿಕರಿಗೆ ಶಾಕ್ಆಸ್ತಿ ತೆರಿಗೆ ಜತೆ ವಾಹನ ತೆರಿಗೇನೂ ಕಟ್ಟಬೇಕು: ನಾಗರಿಕರಿಗೆ ಶಾಕ್

ಬೆಂಗಳೂರಲ್ಲಿ 76 ಲಕ್ಷ ವಾಹನಗಳಿವೆ, ಇನ್ನು ಕಲಬುರಗಿ ಜಿಲ್ಲೆ ಒಳಗೊಂಡಂತೆ ಕಲಬರಗಿ, ಬಳ್ಳಾರಿ, ರಾಯಚೂರು, ಯಾಗದಿರಿ ಜಿಲ್ಲೆಗಳಲ್ಲಿ ಒಟ್ಟು 19.3 ಲಕ್ಷ ವಾಹನಗಳಿವೆ. ಇನ್ನು ಬೆಂಗಳೂರು ಗ್ರಾಮಾಂತರ ವಿಭಾಗಗಳಲ್ಲಿ ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡಂತೆ ಒಟ್ಟು 16.7 ಲಕ್ಷ ವಾಹನಗಳಿವೆ.

ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಲೋಪದೋಷ

ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಲೋಪದೋಷ

ಇದೇ ವರದಿ ಪ್ರಕಾರ ಸರ್ಕಾರ ಒದಗಿಸುತ್ತಿರುವ ಸಮೂಹ ಸಾರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪದೋಷಗಳಿರುವುದರಿಂದ ಜನರು ಸರ್ಕಾರಿ ಬಸ್, ರೈಲು ಮೆಟ್ರೋ ಮತ್ತಿತರೆ ಸೇವೆಗಳಿಗಿಂತ ಹೆಚ್ಚಾಗಿ ತಮ್ಮ ಸ್ವಂತ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ.

ಕೊನೆಯ ಹಂತದವರೆಗೆ ಇಲ್ಲದ ವಾಹನ ಸಂಪರ್ಕ

ಕೊನೆಯ ಹಂತದವರೆಗೆ ಇಲ್ಲದ ವಾಹನ ಸಂಪರ್ಕ

ಬೆಂಗಳೂರಿನಂತಹ ಜನನಿಬಿಡ ರಸ್ತೆಗಳನ್ನು ಹೊಂದಿದ ನಗರಗಳಲ್ಲಿ ಮೆಟ್ರೋ ವ್ಯವಸ್ಥೆ ಇದೆಯಾದರೂ ಕೊನೆಯ ಹಂತದ ವರೆಗೆ ಸಂಪರ್ಕ ಸಾಧ್ಯವಾಗದ ಕಾರಣ, ಜನರು ಮೆಟ್ರೋವನ್ನು ಕೂಡ ಅಷ್ಟಾಗಿ ನಂಬದೆ ತಮ್ಮ ಸ್ವಂತ ವಾಹನಗಳ ಮೇಲೆ ಹೆಚ್ಚು ನಂಬಿಕೆಯನ್ನು ಹೊಂದುತ್ತಿದ್ದಾರೆ.

ಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನಬೆಂಗಳೂರಿನ ಬಸವಳಿದ ಬೀದಿಗೆ ಐದೂವರೆ ಲಕ್ಷ ಹೊಸ ವಾಹನ

ಬೆಂಗಳೂರಲ್ಲಿ 76 ಲಕ್ಷ ವಾಹನಗಳಿವೆ

ಬೆಂಗಳೂರಲ್ಲಿ 76 ಲಕ್ಷ ವಾಹನಗಳಿವೆ

ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 10 ಪ್ರಾದೇಶಿಕ ಸಾರಿಗೆ ಕಚೇರಿಗಳಿದ್ದು ಈ ವ್ಯಾಪ್ತಿಯಲ್ಲಿ 76.6 ಲಕ್ಷ ವಾಹನಗಳಿವೆ, ಅಂದರೆ ರಾಜ್ಯದ ಎರಡು ಕೋಟಿ ವಾಹನಗಳ ಪೈಕಿ 76 ಲಕ್ಷ ವಾಹನಗಳು ಬೆಂಗಳೂರಿನಲ್ಲಿವೆ. ಇನ್ನು ಬೆಳಗಾವಿ ಪ್ರಾದೇಶಿಕ ಸಾರಿಗೆ ವಿಭಾಗದ ವ್ಯಾಪ್ತಿಯಲ್ಲಿ 35.7 ಲಕ್ಷ ವಾಹನಗಳಿದ್ದು, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಒಳಗೊಂಡಿದೆ.

ಶಿವಮೊಗ್ಗ ವ್ಯಾಪ್ತಿಯಲ್ಲಿ 29 ಲಕ್ಷ ವಾಹನಗಳಿವೆ

ಶಿವಮೊಗ್ಗ ವ್ಯಾಪ್ತಿಯಲ್ಲಿ 29 ಲಕ್ಷ ವಾಹನಗಳಿವೆ

ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಶಿವಮೊಗ್ಗದಲ್ಲಿ 29.9 ಲಕ್ಷ ವಾಹನಗಳಿವೆ. ಇನ್ನೂ ಮೈಸೂರು ವಿಭಾಗದಲ್ಲಿ ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಒಟ್ಟು 22 ಲಕ್ಷ ವಾಹನಗಳಿವೆ.

ರಾಜ್ಯದ ಒಟ್ಟು 1.99 ಕೋಟಿ ವಾಹನಗಳ ಪೈಕಿ 1.4 ಕೋಟಿಯಷ್ಟು ದ್ವಿಚಕ್ರ ವಾಹನಗಳೇ ಇದ್ದು, 23.7 ಲಕ್ಷ ಕಾರುಗಳಿವೆ. ಇನ್ನು ಕರ್ನಾಟಕದಲ್ಲಿರುವ ಸಮೂಹ ಸಾರಿಗೆ ವಾಹನಗಳನ್ನು ಗಮನಿಸಿದರೆ 1 ಲಕ್ಷ ಬಸ್ ಗಳು, 1.3 ಲಕ್ಷ ಕ್ಯಾಬ್ ಗಳು ಹಾಗೂ 4.4 ಲಕ್ಷ ಆಟೋರಿಕ್ಷಾಗಳಿವೆ.

ಬೆಂಗಳೂರಿಗರು ಬಸವಳಿದರೇ ಟ್ರಾಫಿಕ್ ಜಾಮ್‌ಗೆ: ವಾಹನ ನೋಂದಣಿ ಕುಸಿತಬೆಂಗಳೂರಿಗರು ಬಸವಳಿದರೇ ಟ್ರಾಫಿಕ್ ಜಾಮ್‌ಗೆ: ವಾಹನ ನೋಂದಣಿ ಕುಸಿತ

ಕರ್ನಾಟಕದ ಒಟ್ಟು ವಾಹನಗಳ ಸಂಖ್ಯೆ

ಕರ್ನಾಟಕದ ಒಟ್ಟು ವಾಹನಗಳ ಸಂಖ್ಯೆ

2008-9ರಲ್ಲಿ ಕರ್ನಾಟಕದಲ್ಲಿ ಒಟ್ಟು 82.9 ಲಕ್ಷ ವಾಹಗಳಿದ್ದರೆ, 20011-12ರಲ್ಲಿ 1ಕೋಟಿ ವಾಹನಗಳಿದ್ದವು. 2015-16 ರಲ್ಲಿ 1.6 ಕೋಟಿ ವಾಹನಗಳಿದ್ದರೆ, 2017-18 ಒಟ್ಟು ವಾಹನಗಳ ಸಂಖ್ಯೆ 1.90 ಲಕ್ಷ ತಲುಪಿದೆ. 2011 ರ ಜನಗಣತಿ ಪ್ರಕಾರ ಕರ್ನಾಟಕದ ಜನಸಂಖ್ಯೆ 6.1 ಕೋಟಿ ಇದೆ.

ಒಂದೆಡೆ ನಗರ ಪ್ರದೇಶದಲ್ಲಿ ರಸ್ತೆಗಳು ಟ್ರಾಫಿಕ್ ನಿಂದ ಕಂಗೆಟ್ಟು ಹೋಗಿದ್ದರೆ ಮತ್ತೊಂದೆಡೆ ವಾಹನ ತಯಾರಿಕಾ ಸಂಸ್ಥೆಗಳು ಹಾಗೂ ಹಣಕಾಸು ಸಂಸ್ಥೆಗಳು ಇಎಂಐ ಸೌಲಭ್ಯಗಳ ಮೂಲಕ ಸ್ವಂತ ವಾಹನ ಖರೀದಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿವೆ. ಇದರಿಂದ ಸಮೂಹ ಸಾರಿಗೆ ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ.

ಸಾರಿಗೆ ತಜ್ಞ ಎಂಎನ್ ಶಾಸ್ತ್ರಿಯವರ ಪ್ರಕಾರ ರಾಜ್ಯ ಸರ್ಕಾರದ ತಪ್ಪಿನಿಂದಾಗಿ ಇಂದು ಬೆಂಗಳೂರಲ್ಲಿ ವಾಹನ ದಟ್ಟಣೆ ಉಂಟಾಗಿದ್ದು, ಯಾರೂ ಕೂಡ ಸಮೂಹ ಸಾರಿಗೆಯನ್ನು ಬಳಸುವ ವಿಶ್ವಾಸವನ್ನು ಹೊಂದಿಲ್ಲ, ಹೀಗಾಗಿ ಸಕಾಲಕ್ಕೆ ಹಾಗೂ ಸಮರ್ಪಕವಾಗಿ ತಮ್ಮ ಕಚೇರಿ ಹಾಗೂ ಮನೆಯನ್ನು ತಲುಪಲು ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ.

ಅಲ್ಲದೆ ಬೆಂಗಳೂರು ನಗರದಲ್ಲಿ ಕೈಗಾರಿಕಾ ಕಾರಿಡಾರ್ ಹಾಗೂ ಐಟಿ ಪಾರ್ಕ್ ಗಳನ್ನು ನಗರ ಪ್ರದೇಶದಿಂದ ಹೊರಗೆ ಸ್ಥಳಾಂತರಿಸುವ ಮೂಲಕ ಬೆಂಗಳೂರು ನಗರದಲ್ಲಿ ಆಗುತ್ತಿರುವ ಸಂಚಾರ ದಟ್ಟಣೆಗೆ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.

ವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರುವಾಯು ಮಾಲಿನ್ಯ: ದೆಹಲಿಯನ್ನೂ ಮೀರಿಸಿದ ಬೆಂಗಳೂರು

English summary
According to 2011 census Karnataka has population of 6.1 crores and probably now it has crossed 6.5 crores. But shockingly, vehicles population in Karnataka reached 2 crores and department of transport itself revealed the truth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X