• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜುಲೈ 18ಕ್ಕೆ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ

|

ಬೆಂಗಳೂರು, ಜುಲೈ 15: ಕರ್ನಾಟಕ ರಾಜಕೀಯ ತೂಗುಯ್ಯಾಲೆ ಮೇಲಿದ್ದು ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್ ನಾಯಕರಿಂದ ರಕ್ಷಿಸಿ: ಅತೃಪ್ತ ಶಾಸಕರಿಂದ ಪೊಲೀಸ್ ದೂರು

ಜೆಡಿಎಸ್-ಕಾಂಗ್ರೆಸ್‌ನ ಒಟ್ಟು 16 ಶಾಸಕರು ರಾಜೀನಾಮೆ ನೀಡಿದ್ದು, ಇಬ್ಬರು ಪಕ್ಷೇತರರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದಾರೆ. ಮೈತ್ರಿ ಸರ್ಕಾರದ ಬಲ ಬಿಜೆಪಿಯ ಮುಂದೆ ಕುಸಿದಿದ್ದು, ಸರ್ಕಾರ ಪತನದ ಅಂಚಿನಲ್ಲಿದೆ.

ಅತೃಪ್ತರ ಕರೆತರಲು ಮುಂಬೈಗೆ ತೆರಳಲಿದ್ದಾರೆ ಖರ್ಗೆ, ದೇವೇಗೌಡ

ಮುಂಬೈ ಸೇರಿರುವ 13 ಶಾಸಕರು ಸುತಾರಾಂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅವರ ಮನವೊಲಿಸಲು ಡಿಕೆಶಿ ಮಾಡಿದ ಪ್ರಯತ್ನ ವ್ಯರ್ಥವಾಗಿದ್ದು, ಇಂದು ದೋಸ್ತಿ ಪಕ್ಷಗಳ ಟಾಪ್ ನಾಯಕರು ಮುಂಬೈಗೆ ತೆರಳಲಿದ್ದಾರೆ.

Karnataka politics LIVE: coalition government, dissident MLAs

ವಿಶ್ವಾಸಮತ ಯಾಚನೆ ಮಾಡುವುದಾಗಿ ಕುಮಾರಸ್ವಾಮಿ ಅವರು ಸದನದಲ್ಲಿ ಈಗಾಗಲೇ ಘೋಷಿಸಿದ್ದು, ಸಮಯ ನಿಗದಿ ಮಾಡಬೇಕಿದೆ. ಇಂದು ಅಧಿವೇಶನದ ಎರಡನೇ ದಿನವಾಗಿದ್ದು, ಇಂದೇ ವಿಶ್ವಾಸ ಮತ ಯಾಚನೆ ಮಾಡುವಂತೆ ಬಿಜೆಪಿಯು ಪಟ್ಟು ಹಿಡಿಯಲಿದೆ.

Newest First Oldest First
2:34 PM, 15 Jul
ಗುರುವಾರ ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗುತ್ತದೆ. ಅಂದು ಮೊದಲಿಗೆ ಅವಿಶ್ವಾಸದ ಮೇಲಿನ ಚರ್ಚೆಯನ್ನು ಮೊದಲಿಗೆ ಕೈಗೆತ್ತುಕೊಳ್ಳಲಾಗುತ್ತದೆ. ಅಂದೇ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಅಲ್ಲಿಯವರೆಗೆ ಕಲಾಪ ನಡೆಯುವುದಿಲ್ಲ.
2:33 PM, 15 Jul
ವಿಪಕ್ಷವು ಕಲಾಪದಲ್ಲಿ ಭಾಗವಹಿಸುತ್ತಿಲ್ಲವಾದ್ದರಿಂದ ಅವರ ಹೊರತಾಗಿ ಕಲಾಪ ನಡೆಸುವುದು ನನಗೂ ಸರಿ ಬರುತ್ತಿಲ್ಲ. ಹಾಗಾಗಿ ಗುರುವಾರದ ವರೆಗೆ ಕಲಾಪ ಮುಂದೂಡಲಾಗಿದೆ.
2:31 PM, 15 Jul
ಗುರುವಾರದ ವರೆಗೆ ಕಲಾಪ ನಡೆಯಬೇಕೇ ಬೇಡವೇ ಎಂಬ ಬಗ್ಗೆ ಬಹು ಚರ್ಚೆ ನಡೆಯಿತು. ಬಿಜೆಪಿಯು ಕಲಾಪ ನಡೆಸಬಾರದು ಎಂದು ಹೇಳಿತ್ತು, ಆಕಸ್ಮಾತ್ ಕಲಾಪ ನಡೆಸಿದರೆ ವಿರೋಧಪಕ್ಷವು ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ: ರಮೇಶ್ ಕುಮಾರ್
2:29 PM, 15 Jul
ಸೋಮವಾರ ನಡೆದ ಕಲಾಪ ಸಲಹಾ ಸಮಿತಿಗೆ ಬಿಜೆಪಿ ಭಾಗಿ ಆಗಿರಲಿಲ್ಲ ಹಾಗಾಗಿ ಅಂದು ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿ ಮಾಡಿರಲಿಲ್ಲ. ಇಂದು ಬಿಜೆಪಿಯು ಭಾಗವಹಿಸಿದ್ದರು. ಹಲವು ಚರ್ಚೆಗಳನ್ನು ಮಾಡಿದ ಬಳಿಕ ಗುರುವಾರಕ್ಕೆ ದಿನಾಂಕ ನಿರ್ಣಯ ಮಾಡಲಾಗಿದೆ ಎಂದು ರಮೇಶ್ ಕುಮಾರ್ ಹೇಳಿದರು.
2:26 PM, 15 Jul
ವಿಧಾನಸಭೆ ಕಲಾಪ ಆರಂಭ, ಸದನವನ್ನು ಉದ್ದೇಶಿಸಿ ಸ್ಪೀಕರ್ ರಮೇಶ್ ಕುಮಾರ್ ಅವರು ಮಾತನಾಡಿ, ವಿಶ್ವಾಸಮತ ಯಾಚನೆಗೆ ದಿನಾಂಕ, ಸಮಯ ನಿಗದಿ ಮಾಡಿದ ವಿಚಾರದ ಬಗ್ಗೆ ಮಾಹಿತಿ ನೀಡಿದರು.
2:13 PM, 15 Jul
ಗುರುವಾರದ ವರೆಗೆ ಅಧಿವೇಶನವನ್ನು ನಡೆಸಬೇಡಿ ಎಂದು ಬಿಜೆಪಿಯು ಸ್ಪೀಕರ್ ಅವರಿಗೆ ಒತ್ತಾಯ ಹೇರಿದೆ. ಸಿಎಂ ಅವರಿಗೆ ಬಹುಮತ ಇಲ್ಲವೆಂಬ ವಿಶ್ವಾಸ ಇರದ ಈ ಹೊತ್ತಿನಲ್ಲಿ, ಅಧಿವೇಶನ ನಡೆಸುವುದು, ಸರ್ಕಾರಕ್ಕೆ ಸಂಬಂದಿಸಿದ ನಿರ್ಣಯ ತೆಗೆದುಕೊಳ್ಳುವುದು ನೈತಿಕತೆ ಅಲ್ಲ ಎಂದು ಬಿಜೆಪಿಯ ಮಾಧುಸ್ವಾಮಿ ಅವರು ವಾದ ಮಂಡಿಸಿದ್ದಾರೆ.
1:54 PM, 15 Jul
ಸಿಎಂ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಗುರುವಾರ (ಜುಲೈ 15) ರಂದು ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಇಂದು ಕಲಾಪ ಸಲಹಾ ಸಮಿತಿಯ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಗುರುವಾರ ಬೆಳಿಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ.
1:31 PM, 15 Jul
ಕುಮಾರಸ್ವಾಮಿ ಅವರೇ ಸ್ವ-ಇಚ್ಛೆಯಿಂದ ವಿಶ್ವಾಸಮತ ಯಾಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಮೊದಲು ಅವರು ವಿಶ್ವಾಸ ಮತ ಯಾಚನೆ ಮಾಡಲಿ ಆ ನಂತರ ಉಳಿದದ್ದು, ನಮ್ಮ ಎಲ್ಲ ಶಾಸಕರು ನಮ್ಮೊಂದಿಗೇ ಇದ್ದಾರೆ: ಸುರೇಶ್ ಕುಮಾರ್, ಬಿಜೆಪಿ ಹಿರಿಯ ಶಾಸಕ
1:20 PM, 15 Jul
ಸೂಚನಾ ಪತ್ರ ಕೊಟ್ಟ ನಂತರವಷ್ಟೆ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ವಿಧಾನಸಭಾ ಪರಿಷತ್ ಸಭಾಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ ಅವರು ಪರಿಷತ್ ವಿರೋಧ ಪಕ್ಷದ ಮುಖಂಡರಲ್ಲಿ ವಿನಂತಿ ಮಾಡಿಕೊಂಡರು. ಆದರೂ ಸಹ ಗದ್ದಲ ಕಡಿಮೆ ಆಗಲಿಲ್ಲ.
1:17 PM, 15 Jul
ವಿಧಾನಪರಿಷತ್ ಕಲಾಪ ಆರಂಭವಾದ ಕೂಡಲೇ ಬಿಜೆಪಿಯ ಪರಿಷತ್ ಸದಸ್ಯರು ಗದ್ದಲ ಆರಂಭಿಸಿದರು. ಸಭಾಧ್ಯಕ್ಷರು ಕಲಾಪ ಮುಂದೂಡಿದರು. ಕಲಾಪ ಪುನರ್ ಆರಂಭವಾದಾಗಲೂ ಸಹ ಗಲಭೆ ಆರಂಭವಾಯಿತು. ಕುಮಾರಸ್ವಾಮಿ ಅವರು ಇಂದೇ ವಿಶ್ವಾಸಮತ ಯಾಚನೆ ಮಾಡಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ.
1:11 PM, 15 Jul
ವಿಧಾನಸೌಧದಲ್ಲಿ ಕಲಾಪ ಸಲಹಾ ಸಮಿತಿ ಸಭೆ ಆರಂಭವಾಗಿದೆ. ವಿಶ್ವಾಸಮತ ಯಾಚನೆಗೆ ಎಂದು ಅವಕಾಶ ನೀಡಬೇಕು ಎಂಬುದರ ಬಗ್ಗೆ ಚರ್ಚೆ ಆಗಲಿದೆ. ಕಲಾಪ ಸಲಹಾ ಸಮಿತಿಯಲ್ಲಿ ಮೂರೂ ಪಕ್ಷದ ನಾಯಕರು ಸದಸ್ಯರಾಗಿದ್ದಾರೆ.
12:33 PM, 15 Jul
ಯಡಿಯೂರಪ್ಪ ಅವರು ಸ್ಪೀಕರ್ ಅವರನ್ನು ಭೇಟಿ ಆದ ನಂತರ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಇನ್ನೂ ಕೆಲವು ಕಾಂಗ್ರೆಸ್ ನಾಯಕರು ಸ್ಪೀಕರ್ ಅವರನ್ನು ಕಚೇರಿಯಲ್ಲಿ ಭೇಟಿ ಆದರು, ಕೆಲವೇ ಸಮಯದಲ್ಲಿ ಸಿಎಂ ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರ ಜೊತೆ ಸ್ಪೀಕರ್ ಕಚೇರಿಗೆ ಆಗಮಿಸಿದರು.
12:28 PM, 15 Jul
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಆಗಿದ್ದು, ವಿಶ್ವಾಸಮತ ಯಾಚನೆಯನ್ನು ಇಂದೆ ನಡೆಸುವಂತೆ ಮನವಿ ಮಾಡಿದ್ದಾರೆ.
11:50 AM, 15 Jul
ಅಧಿವೇಶನದಲ್ಲಿ ಭಾಗವಹಿಸಲು ಬಿಜೆಪಿ ಶಾಸಕರು ರೆಸಾರ್ಟ್‌ನಿಂದ ವಿಧಾನಸೌಧಕ್ಕೆ ಖಾಸಗಿ ಬಸ್‌ಗಳಲ್ಲಿ ಆಗಮಿಸಿದ್ದಾರೆ. ಕಾಂಗ್ರೆಸ್ ಶಾಸಕರು ಸಹ ಕೆಲವೇ ನಿಮಿಷದಲ್ಲಿ ವಿಧಾನಸೌಧಕ್ಕೆ ಆಗಮಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೂ ಸಹ ಶಾಸಕರೊಂದಿಗೆ ಬಸ್‌ನಲ್ಲಿ ಆಗಮಿಸುತ್ತಿದ್ದಾರೆ.
10:05 AM, 15 Jul
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾ ರೆಡ್ಡಿ ಅವರು ಇಂದಿನ ಅಧಿವೇಶನಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ. 'ನನ್ನ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ, ನಾನಿನ್ನೂ ವಿಧಾನಸಭೆ ಸದಸ್ಯ ಹಾಗಾಗಿ ಅಧಿವೇಶನಕ್ಕೆ ಹಾಜರಾಗುತ್ತೇನೆ' ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
9:19 AM, 15 Jul
ಯಶವಂತಪುರ ತಾಜ್ ವಿವಾಂತಾ ಐಶಾರಾಮಿ ಹೊಟೆಲ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ ನಡೆಯುತ್ತಿದೆ. ಇಂದು ವಿಧಾನಸಭೆ ಅಧಿವೇಶನದ ಎರಡನೇ ದಿನವಾಗಿದ್ದು, ಬಿಜೆಪಿಯು ಕುಮಾರಸ್ವಾಮಿ ಅವರ ರಾಜೀನಾಮೆಗೆ ಒತ್ತಾಯಿಸಲಿದೆ, ಹಾಗಾಗಿ ತನ್ನ ಶಾಸಕರಿಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಲು ಈ ಸಭೆಯನ್ನು ಆಯೋಜಿಸಲಾಗಿದೆ.
9:18 AM, 15 Jul
ಖರ್ಗೆ, ದೇವೇಗೌಡ, ಗುಲಾಂ ನಬಿ ಆಜಾದ್ ಬರುವುದು ತಿಳಿದ ಅತೃಪ್ತ ಶಾಸಕರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.
9:09 AM, 15 Jul
ಮುಂಬೈನ ರಿನೈಸೆನ್ಸ್‌ ಹೊಟೆಲ್ ನಲ್ಲಿ ತಂಗಿರುವ 13 ಅತೃಪ್ತ ಶಾಸಕರನ್ನು ಭೇಟಿ ಆಗಲು ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಇಂದು ತೆರಳಲಿದ್ದಾರೆ.

English summary
Karnataka politics taking turns from last one week. Dissident MLAs are sticked on to their resignation decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more