ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಪ್ರವಾಸ ಎಲ್ಲೆಲ್ಲಿ? ಬಾಗಲಕೋಟೆ, ದಾವಣಗೆರೆ ಜಿಲ್ಲೆಯ ಕಾರ್ಯಕ್ರಮ ಪಟ್ಟಿ

|
Google Oneindia Kannada News

ದಾವಣಗೆರೆ ಏ.22: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏ.23 ರಂದು ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರದಂದು ಬಾಗಲಕೋಟೆ, ಬಾದಾಮಿ ಪ್ರವಾಸ ಕೈಗೊಳ್ಳಲಿದ್ದು, ಕೆರೂರು ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕಲಬುರಗಿ, ಬಾಗಲಕೋಟೆ, ಬೆಳಗಾವಿ ಪ್ರವಾಸ ವಿವರ:
ಕಲಬುರಗಿ: ಏಪ್ರಿಲ್ 22ರಂದು ಬೆಳಗ್ಗೆ 10ಕ್ಕೆ ಸ್ಥಳೀಯ ಬಿಜೆಪಿ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಿದರು.

  • ಮಧ್ಯಾಹ್ನ 2 ಗಂಟೆ ನಂತರ ಡಿ.ಎ. ಆರ್ ಮೈದಾನದ ಹೆಲಿಪ್ಯಾಡ್ ಬಳಿ ಬಂದು ಅಲ್ಲಿಂದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಉಗಲವಾಟ ಹೆಲಿಪ್ಯಾಡ್ ಕಡೆಗೆ ಪ್ರಯಾಣ.
  • ಸುಮಾರು 4:40ರ ಬಳಿ ಮತ್ತೆ ಹೆಲಿಕಾಪ್ಟರ್ ಮೂಲಕ ಮುಧೋಳದತ್ತ ಸಿಎಂ ಬೊಮ್ಮಾಯಿ ಪ್ರಯಾಣ

    ಮುಧೋಳ ವಿಧಾನಸಭೆ ಕಾರ್ಯಕ್ರಮ
    ಮುಧೋಳ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಪನೆ ಹಾಗೂ ಉದ್ಘತನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ.

    • ರಾತ್ರಿ 7;30ಕ್ಕೆ ರಸ್ತೆ ಮೂಲಕ ಮುಧೋಳದಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪಯಣ.
    • ರಾತ್ರಿ 9;15ರ ನಂತರ ವಿಶೇಷ ವಿಮಾನ ಮೂಲಕ ಬೆಂಗಳೂರಿನ ಎಚ್ಎಎಲ್ ಕಡೆಗೆ ಆಗಮನ ನಿರೀಕ್ಷೆಯಿದೆ.

    ಬಾದಾಮಿಯಲ್ಲಿ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ:
    ಕೃಷ್ಣಾ ಭಾಗ್ಯ ಜಲ ನಿಗಮ ವತಿಯಿಂದ ಬಾದಾಮಿಯಲ್ಲಿ ಘಟಪ್ರಭೆ ಜೀವಜಲ ಹರಿಯಲಿದೆ. ಕೆರೂರು ಏತ ನೀರಾವರಿ ಯೋಜನೆಗೆ ಏಪ್ರಿಲ್ 22ರಂದು ಮಧ್ಯಾಹ್ನ ಶಂಕುಸ್ಥಾಪನೆ ನೆರವೇರಲಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮ ಉಗಲವಾಟದ ಹಳಗೇರಿಯಲ್ಲಿ ಆಯೋಜನೆಯಾಗಿದೆ.


    ದಾವಣಗೆರೆ ಪ್ರವಾಸ:

    ಮುಖ್ಯಮಂತ್ರಿಗಳು ಏ.23 ರ ಶನಿವಾರ ಬೆ.10ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ (ಹೆಲಿಕಾಪ್ಟರ್ ಮೂಲಕ) ದಿಂದ ಹೊರಟು 10.45ಕ್ಕೆ ದಾವಣಗೆರೆ ಜಿಎಂಐಟಿ ಹೆಲಿಪ್ಯಾಡ್‍ಗೆ ಅಗಮಿಸುವರು. ಬೆ.11.15ಕ್ಕೆ ಜಿಎಂಐಟಿ ಹೆಲಿಪ್ಯಾಡ್‍ನಿಂದ (ರಸ್ತೆಯ ಮೂಲಕ) ಹೊರಟು ಬೆ.11.30ಕ್ಕೆ ಶ್ರೀ ಪಂಚಮಶಾಲಿ ಜಗದ್ಗುರು ಪೀಠ ಹರಕ್ಷೇತ್ರ ಹರಿಹರ ವತಿಯಿಂದ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳ ಮತ್ತು ರಾಷ್ಟ್ರೀಯ ಶಿಕ್ಷಣ - ಕೌಶಲ್ಯ ಮತ್ತು ಕೃಷಿ ಸಮಾವೇಶ ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು.

    ಮಧ್ಯಾಹ್ನ 01.30ಕ್ಕೆ ಶ್ರೀ ಪಂಚಮಶಾಲಿ ಗುರುಪೀಠದಿಂದ ಹೊರಟು ಜಿಎಂಐಟಿ ಹೆಲಿಪ್ಯಾಡ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.

    Karnataka Political News & Developments Today (22-04-2022): Political Parties News and Updates

    ಕಲಬುರಗಿ ಪ್ರವಾಸ:

    ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎರಡು ದಿನಗಳ ಜಿಲ್ಲಾ ಪ್ರವಾಸಕ್ಕೆ ಗುರುವಾರ ಕಲಬುರಗಿಗೆ ಆಗಮಿಸಿದರು.

    ಬಳ್ಳಾರಿ ಜಿಂದಾಲ್ ಏರ್ ಸ್ಟ್ರಿಪ್ ನಿಂದ ಹೆಲಿಕಾಪ್ಟರ್ ಮೂಲಕ ಕಲಬುರಗಿ ಡಿ.ಎ.ಅರ್. ಗ್ರೌಂಡ್‍ಗೆ ಅಗಮಿಸಿದ ಮುಖ್ಯಮಂತ್ರಿಗಳನ್ನು ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಕೆ.ಕೆ.ಅರ್.ಡಿ.ಬಿ. ಕಾರ್ಯದರ್ಶಿ ಆರ್.ವೆಂಕಟೇಶ ಕುಮಾರ, ಐ.ಜಿ.ಪಿ. ಖರ್ಬಿಕರ್, ಡಿ.ಸಿ. ಯಶವಂತ ವಿ. ಗುರುಕರ್, ನಗರ ಪೆÇಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ, ಎಸ್.ಪಿ. ಇಶಾ ಪಂತ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ದಿಲೀಪ್ ಸಾಸಿ ಸ್ವಾಗತಿಸಿದರು.

    ಈ ಸಂದರ್ಭದಲ್ಲಿ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ, ಪರಿಶಿಷ್ಟ ಪಂಗಡ ಕಲ್ಯಾಣ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು, ಕೆ.ಕೆ.ಅರ್.ಡಿ.ಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ವಿಧಾನ ಪರಿಷತ್ತಿನ ಶಾಸಕರಾದ ಶಶೀಲ ಜಿ. ನಮೋಶಿ, ಸುನೀಲ ವಲ್ಯಾಪೂರೆ, ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಮಾಜಿ ಎಂ.ಎಲ್.ಸಿ. ಅಮರನಾಥ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ.ಶಂಕರ ವಣಿಕ್ಯಾಳ, ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು, ಎ.ಸಿ.ಪಿ ದೀಪನ್ ಎಂ.ಎನ್.ಮತ್ತಿತರರು ಇದ್ದರು.

English summary
Karnataka political News and Developments Today (22-04-2022) - Stay informed about the recent political developments in Karnataka today, Political Parties Latest News and Updates. Check CM, Opposition, Congress and BJP Latest News,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X