• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಷರ ಮಾಂತ್ರಿಕ ರವಿ ಬೆಳಗೆರೆ ನಿಧನಕ್ಕೆ ಗಣ್ಯರ ಸಂತಾಪ

|

ಬೆಂಗಳೂರು, ನವೆಂಬರ್ 13: ಪ್ರಸಿದ್ಧ ಪತ್ರಕರ್ತ, ಅಕ್ಷರ ಮಾಂತ್ರಿಕ ರವಿ ಬೆಳಗೆರೆ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ, ಕೆ ಸುಧಾಕರ್, ಸಚಿವ ಸುರೇಶ್ ಕುಮಾರ್ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ತೀವ್ರ ಹೃದಯಾಘಾತಕ್ಕೊಳಗಾದ ಬೆಳಗೆರೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ 'ಓ ಮನಸೇ' ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿದ್ದರು.

ಅಕ್ಷರ ಗಾರುಡಿಗ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನ

   ಆ ವ್ಯಕ್ತಿಯ inside ಸ್ಟೋರಿ ಹೇಳ್ತಿನಿ ಅಂದಿದ್ದ ರವಿ !! | Oneindia Kannada

   ಜೊತೆಗೆ ಅವರು ಕನ್ನಡ ಸಾಹಿತಿ, ಚಿತ್ರಕಥೆ ಬರಹಗಾರ, ಈ-ಟಿವಿ ಕನ್ನಡ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದರು.

   ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆ ಯ ಸಂಸ್ಥಾಪಕರು, ಹಾಯ್ ಬೆಂಗಳೂರ್' ಪತ್ರಿಕೆ ಪ್ರಾರಂಭಿಸುವ ಮುನ್ನ ಕರ್ಮವೀರ, ಸಂಯುಕ್ತ ಕರ್ನಾಟಕ ಮತ್ತು ಕಸ್ತೂರಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು.

   ಪತ್ರಕರ್ತ- ಸಾಹಿತಿ ರವಿ ಬೆಳಗೆರೆ ನಿಧನ- 1958ರಿಂದ 2020ರ ಹಾದಿ

   ರವಿ ಬೆಳಗೆರೆ ನಿರೂಪಕರಾಗಿಯೂ ಜನಪ್ರಿಯತೆ ಗಳಿಸಿದ್ದರು

   ರವಿ ಬೆಳಗೆರೆ ನಿರೂಪಕರಾಗಿಯೂ ಜನಪ್ರಿಯತೆ ಗಳಿಸಿದ್ದರು

   ಪತ್ರಕರ್ತ, ಬರಹಗಾರ ರವಿ ಬೆಳಗೆರೆ ನಿಧನರಾದ ಸುದ್ದಿ ತಿಳಿದು ದುಃಖವಾಗಿದೆ. ಪತ್ರಕರ್ತರಾಗಿ, ಲೇಖಕರಾಗಿ, ನಿರೂಪಕರಾಗಿ ಜನಪ್ರಿಯತೆ ಗಳಿಸಿದ್ದ ಅವರು, ಶಿಕ್ಷಣ ಸಂಸ್ಥೆಯನ್ನೂ ನಡೆಸುತ್ತಿದ್ದರು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಕುಟುಂಬದವರಿಗೆ, ಅಭಿಮಾನಿಗಳಿಗೆ, ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

   ರವಿ ಅತ್ಯಂತ ಮೇಧಾವಿ ಬರಹಗಾರ-ಸುರೇಶ್ ಕುಮಾರ್

   ರವಿ ಅತ್ಯಂತ ಮೇಧಾವಿ ಬರಹಗಾರ-ಸುರೇಶ್ ಕುಮಾರ್

   ರವಿ ಬೆಳಗೆರೆ ಕರ್ನಾಟಕದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಎರಡೂವರೆ ದಶಕಗಳಿಂದ ಕೇಳಿಬಂದ ದೊಡ್ಡ ಹೆಸರು. ಅತ್ಯಂತ ಮೇಧಾವಿ ಬರಹಗಾರ. ಬರೆಯಲಿಕ್ಕೆ ಕೂತರೆ ಅವರದು ದೈತ್ಯ ಶಕ್ತಿ. ಬಹಳ ನಿರ್ಭಿಡೆ ವ್ಯಕ್ತಿತ್ವ. "ಹಾಯ್ ಬೆಂಗಳೂರು" ಎಂಬ ಹೆಸರಿನ ಪತ್ರಿಕೆಯ ಮೂಲಕ ಬಹಳ ಒಳ್ಳೆಯ ಹೆಸರು ಮತ್ತು ಸ್ವಲ್ಪ ನಕಾರಾತ್ಮಕ ಹೆಸರನ್ನೂ ಸಹ ಗಳಿಸಿದ ಓರ್ವ ಪತ್ರಕರ್ತ.

   ಒಂದು ಶಾಲೆಯನ್ನು ಹೀಗೂ ಕಟ್ಟಬಹುದು, ಹೀಗೂ ನಡೆಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಅವರ "ಪ್ರಾರ್ಥನಾ ಶಾಲೆ". ನನಗಿನ್ನೂ ಚೆನ್ನಾಗಿ ನೆನಪಿದೆ. ಹಾಯ್ ಬೆಂಗಳೂರು ಮೊದಲ ಸಂಚಿಕೆ ಪ್ರಕಟವಾಗುವ ಮುನ್ನ ರವಿ ನನ್ನ ಮನೆಗೆ ಬಂದು ಬಿಬಿಎಂಪಿ ಕಾರ್ಯವೈಖರಿಯ ಬಗ್ಗೆ ನಡೆಯುವ ಲಾಬಿಗಳ ಬಗ್ಗೆ ಸಂಪೂರ್ಣ ವಿಷಯ ತಿಳಿದುಕೊಂಡು ಹೋಗಿ ಅದ್ಭುತವಾದ ಒಂದು ಮುಖ ಲೇಖನ ಬರೆದಿದ್ದರು. ಇತ್ತೀಚಿನ ಕೆಲವು ವರ್ಷಗಳಿಂದ ಅವರ ಆರೋಗ್ಯ ಕುಸಿಯುತ್ತಾ ಬಂದಿತ್ತು. ರವಿ ಬೆಳಗೆರೆ ನಾವ್ಯಾರೂ ಮರೆಯಲಾಗದ ಪತ್ರಕರ್ತ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ

   ರವಿ ಬೆಳಗೆರೆ ನಿಧನಕ್ಕೆ ಸಚಿವ ಸುಧಾಕರ್ ಸಂತಾಪ

   ರವಿ ಬೆಳಗೆರೆ ನಿಧನಕ್ಕೆ ಸಚಿವ ಸುಧಾಕರ್ ಸಂತಾಪ

   ಖ್ಯಾತ ಲೇಖಕರು, ಹಿರಿಯ ಪತ್ರಕರ್ತರಾದ ಶ್ರೀ ರವಿ ಬೆಳೆಗೆರೆ ಅವರ ನಿಧನದಿಂದ ಕನ್ನಡ ಮಾಧ್ಯಮ ಲೋಕ ಬಡವಾಗಿದೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದ ಬೆಳೆಗೆರೆ ಅವರು ತಮ್ಮ ನೇರೆ-ನಿಷ್ಠುರ ಬರವಣಿಗೆಯಿಂದ ಅಪಾರ ಓದುಗ ಬಳಗವನ್ನು ಹೊಂದಿದ್ದರು.

   ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥನಾರಾಯಣ ಸಂತಾಪ

   ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥನಾರಾಯಣ ಸಂತಾಪ

   ಹಿರಿಯ ಪತ್ರಕರ್ತ, ಬರಹಗಾರ ರವಿ ಬೆಳಗೆರೆಯವರ ನಿಧನಕ್ಕೆ ನಾನು ಸಂತಾಪ ಸೂಚಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬ-ಹಿತೈಷಿವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

   English summary
   Here are the Karnataka Political Leaders Condolence To Journalist Ravi Belagere Demise.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X