ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಹೈಡ್ರಾಮಕ್ಕೆ ಒಂದು ವಾರ : ಯಾರು, ಏನು ಹೇಳಿದರು?

|
Google Oneindia Kannada News

ಬೆಂಗಳೂರು, ಜುಲೈ 14 : ಒಂದು ವಾರ ಕಳೆದರೂ ಕರ್ನಾಟಕದ ರಾಜಕೀಯ ಹೈಡ್ರಾಮಕ್ಕೆ ತೆರೆ ಬಿದ್ದಿಲ್ಲ. ಸದನದಲ್ಲಿ ವಿಶ್ವಾಸಮತಯಾಚನೆ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಶಾಸಕರ ಮನವೊಲಿಸುವ ಕಾರ್ಯವೂ ನಡೆಯುತ್ತಿದೆ.

ಜುಲೈ 6ರ ಶನಿವಾರ ಕಾಂಗ್ರೆಸ್‌ನ 9, ಜೆಡಿಎಸ್‌ನ 3 ಶಾಸಕರು ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಕೀಯದಲ್ಲಿ ಬೆಳವಣಿಗೆಗಳು ಆರಂಭವಾದವು. ಈಗ 16 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳುವ ಭೀತಿ ಎದುರಾಗಿದೆ.

ಶಾಸಕರ ಜೊತೆ ಮಹತ್ವದ ಸಭೆ ನಡೆಸಿದ ಸಿದ್ದರಾಮಯ್ಯಶಾಸಕರ ಜೊತೆ ಮಹತ್ವದ ಸಭೆ ನಡೆಸಿದ ಸಿದ್ದರಾಮಯ್ಯ

ಶಾಸಕರ ರಾಜೀನಾಮೆ ವಿಚಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ. ಮತ್ತೊಂದು ಕಡೆ ಕಾಂಗ್ರೆಸ್ ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದೆ.

ಸಿದ್ದರಾಮಯ್ಯಗೆ ಕೈ ಕೊಟ್ಟು ಮುಂಬೈಗೆ ವಿಮಾನ ಹತ್ತಿದ ಎಂಟಿಬಿ ನಾಗರಾಜುಸಿದ್ದರಾಮಯ್ಯಗೆ ಕೈ ಕೊಟ್ಟು ಮುಂಬೈಗೆ ವಿಮಾನ ಹತ್ತಿದ ಎಂಟಿಬಿ ನಾಗರಾಜು

ಮೂರು ಪಕ್ಷಗಳ ಶಾಸಕರು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರು ಮುಂಬೈನ ಹೋಟೆಲ್‌ನಲ್ಲಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಪ್ರಯತ್ನ ನಡೆಸುತ್ತಲೇ ಇದ್ದಾರೆ.....

ಅಡ್ಡಗೋಡೆ ಮೇಲೆ ದೀಪವಿಟ್ಟ ಸಿದ್ದರಾಮಯ್ಯ ಆಪ್ತ ಎಂ.ಟಿ.ಬಿ.ನಾಗರಾಜ್ಅಡ್ಡಗೋಡೆ ಮೇಲೆ ದೀಪವಿಟ್ಟ ಸಿದ್ದರಾಮಯ್ಯ ಆಪ್ತ ಎಂ.ಟಿ.ಬಿ.ನಾಗರಾಜ್

ಎಂ.ಪಿ.ರೇಣುಕಾಚಾರ್ಯ ಹೇಳಿಕೆ

ಎಂ.ಪಿ.ರೇಣುಕಾಚಾರ್ಯ ಹೇಳಿಕೆ

ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, 'ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಕುಮಾರಸ್ವಾಮಿಗೆ ನೈತಿಕತೆ ಇದ್ದರೆ ರಾಜೀನಾಮೆ‌ ಕೊಡಬೇಕು. ರೇವಣ್ಣ ಮಾಟ ಮಂತ್ರ ಮಾಡಿಸಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು ಅಷ್ಟೇ. ಮೈತ್ರಿ ನಾಯಕರು ಸರ್ಕಾರ ಉಳಿಸಿಕೊಳ್ಳಲು ಎಲ್ಲ ರೀತಿಯ ವಾಮಮಾರ್ಗ ಹಿಡಿದಿದ್ದಾರೆ. ಆದರೆ ಈ ಸರ್ಕಾರ ಉಳಿಯುವುದು ಅಸಾಧ್ಯ' ಎಂದು ಹೇಳಿದರು.

ಯಾವುದೇ ಪ್ರತಿಕ್ರಿಯೆ ನೀಡಲ್ಲ

ಯಾವುದೇ ಪ್ರತಿಕ್ರಿಯೆ ನೀಡಲ್ಲ

ಬಿ.ಟಿ.ಎಂ.ಲೇಔಟ್ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಮಾತನಾಡಿ, 'ಶಾಸಕ ಸ್ಥಾನಕ್ಕೆ ರಾಜೀನಾಮೆ‌‌ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ‌ನೀಡಲ್ಲ. ವಾಪಾಸ್ ತೆಗೆದುಕೊಳ್ಳುವುದು ಬೇಡವೋ ಎಂಬ ಬಗ್ಗೆ‌ ನಿರ್ಧಾರ ಮಾಡುತ್ತೇನೆ. ನನಗೆ ರಾಜೀನಾಮೆ ವಾಪಾಸ್ ಪಡೆಯದಂತೆ ಬಿಜೆಪಿ ನಾಯಕರು ಒತ್ತಡ ಹೇರಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ನನಗೆ ಎಲ್ಲ ಪಕ್ಷದಲ್ಲಿ ಸ್ನೇಹಿತರಿದ್ದಾರೆ. ಎಲ್ಲರೂ ಭೇಟಿ ಯಾಗುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ' ಎಂದು ಸ್ಪಷ್ಟಪಡಿಸಿದರು.

ಪಕ್ಷಕ್ಕೆ ಸೇರಿಸಿಕೊಳ್ಳಲು ನಮಗೆ ತಲೆ ಕೆಟ್ಟಿಲ್ಲ

ಪಕ್ಷಕ್ಕೆ ಸೇರಿಸಿಕೊಳ್ಳಲು ನಮಗೆ ತಲೆ ಕೆಟ್ಟಿಲ್ಲ

'ಕಾಂಗ್ರೆಸ್ ಶಾಸಕಿ ‌ಲಕ್ಷ್ಮೀ‌ ಹೆಬ್ಬಾಳ್ಕರ್ ಬಿಜೆಪಿ ಸೇರ್ಪಡೆ ಪ್ರಶ್ನೆಯೇ ಇಲ್ಲ. ‌ಲಕ್ಷ್ಮೀ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ನಮಗೆ ತಲೆ ಕೆಟ್ಟಿಲ್ಲ. ಅವರ ವಿರುದ್ದ ತಿರುಗಿಬಿದ್ದು ಶಾಸಕರು ಮುಂಬೈಗೆ ಹೋಗಿದ್ದಾರೆ. ಅವರು ಬಿಜೆಪಿಗೆ ಬರುವುದಾಗಿ ಹೇಳಿಲ್ಲ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯಿಲ್ಲ' ಎಂದು ಯಡಿಯೂರಪ್ಪ ಹೇಳಿದರು.

ದೇವೇಗೌಡರು‌ ಸೂಕ್ತ ತೀರ್ಮಾನ ಮಾಡಬೇಕಿದೆ

ದೇವೇಗೌಡರು‌ ಸೂಕ್ತ ತೀರ್ಮಾನ ಮಾಡಬೇಕಿದೆ

ಮುಂಬೈನಲ್ಲಿರುವ ಹುಣಸೂರು ಶಾಸಕ ಎಚ್.ವಿಶ್ವನಾಥ್ ಮಾತನಾಡಿ, 'ದೇವೇಗೌಡ ಕುಟುಂಬದವರು ಎಲ್ಲ ಅಧಿಕಾರವನ್ನು ಅನುಭವಿಸಿದ್ದಾರೆ. ಸಚಿವ, ಮುಖ್ಯಮಂತ್ರಿ, ಪ್ರಧಾನಿ ಹುದ್ದೆ ನಿಭಾಯಿಸಿದ್ದಾರೆ. ರಾಜ್ಯದಲ್ಲಿ ಈಗ ಸಂವಿಧಾನ ಬಿಕ್ಕಟ್ಟು ನಿರ್ಮಾಣವಾಗಿದೆ. ಇಂತಹ ಸಂದರ್ಭ ದಲ್ಲಿ ದೇವೇಗೌಡರು‌ ಸೂಕ್ತ ತೀರ್ಮಾನ ಮಾಡಬೇಕಿದೆ. ನಾವು ಅತೃಪ್ತ ಶಾಸಕರಲ್ಲ. ರಾಜ್ಯದ ಜನತೆಗೆ ಮೈತ್ರಿ ಸರ್ಕಾರದ ಮೇಲಿರುವ ಅತೃಪ್ತ, ಅಸಮಾಧಾನದ‌ ಪ್ರತಿನಿಧಿಯಾಗಿ ರಾಜೀನಾಮೆ ‌ನೀಡಿದ್ದೇವೆ' ಎಂದರು.

ಸರ್ಕಾರ ವಿಶ್ವಾಸಮತ ಗೆಲ್ಲಲಿದೆ

ಸರ್ಕಾರ ವಿಶ್ವಾಸಮತ ಗೆಲ್ಲಲಿದೆ

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, 'ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲಲಿದೆ. ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದವರು ಪಕ್ಷಕ್ಕಾಗಿ ಬಹಳ ವರ್ಷ ದುಡಿದಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಹುಲಿಯ ಹಾಗೆ ಹೋರಾಟ ನಡೆಸಿದ್ದಾರೆ' ಎಂದು ಹೇಳಿದರು.

English summary
Karnataka Chief Minister H.D.Kumaraswamy announced that he will go for floor test after Congress and JD(S) MLAs resignation. Who said what about political crisis of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X