• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್ಸಿಗೆ ಅತೃಪ್ತರಲ್ಲಿ ಸದ್ಯ ರೋಷನ್ ಬೇಗ್ ಒಬ್ಬರೇ ಗಟ್ಟಿ: ಯೆಸ್!

|
   ಕರ್ನಾಟಕದಲ್ಲಿ ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಅತೃಪ್ತರಲ್ಲಿ ಈ ಕಾಂಗ್ರೆಸ್ ಶಾಸಕ ಒಬ್ಬರೇ ಗಟ್ಟಿ |Oneindia Kannada

   ಕಾಂಗ್ರೆಸ್ ಅತೃಪ್ತ ಶಾಸಕರಲ್ಲಿ ಕೆಲವರು ದೋಸೆ ಮಗುಚಿ ಹಾಕಿದಂತೆ ತಮ್ಮ ನಿರ್ಧಾರವನ್ನು ಬದಲಿಸುತ್ತಿದ್ದಾರೆ. ಶನಿವಾರ ರಾತ್ರಿ ಏನು ರಾಜ್ಯದ ಜನತೆಯ ಮುಂದೆ ಹೇಳಿಕೆ ನೀಡಿದ್ದರೋ, ಭಾನುವಾರ ಸಾಯಂಕಾಲದ ಹೊತ್ತಿಗೆ ತಮ್ಮ ನಿಯತ್ತು ಬದಲಿಸಿದ್ದಾರೆ.

   ಒಂದು ರಾತ್ರಿಯಲ್ಲಿ ಏನೇನು ಆಗಿರುತ್ತೆ ಎನ್ನುವುದನ್ನು ಊಹಿಸಿ ಕೊಳ್ಳುವುದು ಸುಲಭ. ಉದಾಹರಣೆಗೆ, ಎಂಟಿಬಿ ನಾಗರಾಜ್ ಅವರನ್ನು ಖುದ್ದಾಗಿ ಬಿಜೆಪಿ ಮುಖಂಡ ಆರ್ ಅಶೋಕ್, ಮುಂಬೈಗೆ ವಿಮಾನ ಹತ್ತಿಸಿದ್ದು.

   ಸರಕಾರ ಉಳಿಯಲು ಒಂದೆಡೆ ಹೋಮ, ಇನ್ನೊಂದೆಡೆ ಕಿರಿಕ್: ಹೀಗಾದ್ರೆ ಹೇಗೆ ರೇವಣ್ಣ?

   ಸಮ್ಮಿಶ್ರ ಸರಕಾರ ಉಳಿಸಿಕೊಳ್ಳಲು ಮೈತ್ರಿಪಕ್ಷಗಳಿಗೆ ಸದ್ಯಕ್ಕೆ ಬೇಕಾಗಿರುವ ನಂಬರ್ ಸ್ಪೀಕರ್ ಸೇರಿ ಆರು. ಒಂದು ವೇಳೆ ಟೈ ಆದರೆ, ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರ ಯಾವಕಡೆ ವಾಲುತ್ತೆ ಎನ್ನುವುದು ಗೊತ್ತಿರುವ ವಿಚಾರ. ಯಾಕೆಂದರೆ, ಅವರು ಶ್ರೀನಿವಾಸಪುರದ ಕಾಂಗ್ರೆಸ್ ಶಾಸಕರು.

   ವಿಶ್ವಾಸಮತ, ನಮಗೆ ಗೆಲುವಿನ ಸಿಗ್ನಲ್ ಸಿಕ್ಕಿದೆ: ಡಿ ಕೆ ಶಿವಕುಮಾರ್

   ಅತೃಪ್ತ ಶಾಸಕರು ತಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದು ಹೇಳಿದ ಮೇಲೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಮುಖದಲ್ಲಿ ಮಂದಹಾಸ ಮತ್ತೆ ಚಿಗುರಿದೆ. ಯಾಕೆಂದರೆ, ಹಲವು ಸುತ್ತಿನ ಪ್ರಯತ್ನದ ನಂತರ, ರಾಮಲಿಂಗ ರೆಡ್ಡಿಯವರ ಆಶ್ಚರ್ಯಕರವಾದ ನಿರ್ಧಾರ.

   ಎಂಟಿಬಿ ನಾಗರಾಜ್ ಮನವೊಲಿಸಲು ಬಂದಿಲ್ಲ, ನಮ್ಮೊಂದಿಗಿರಲು ಬಂದಿದ್ದಾರೆ

   ಎಂಟಿಬಿ ನಾಗರಾಜ್ ಮನವೊಲಿಸಲು ಬಂದಿಲ್ಲ, ನಮ್ಮೊಂದಿಗಿರಲು ಬಂದಿದ್ದಾರೆ

   ಎಂಟಿಬಿ ನಾಗರಾಜ್ ನಮ್ಮನ್ನು ಮನವೊಲಿಸಲು ಬಂದಿಲ್ಲ, ಬದಲಿಗೆ ನಮ್ಮೊಂದಿಗೆ ಕೈಜೋಡಿಸಲು ಬಂದಿದ್ದಾರೆ ಎನ್ನುವ ಮುಂಬೈನಿಂದ ಎಸ್ ಟಿ ಸೋಮಶೇಖರ್ ನೀಡಿದ ಹೇಳಿಕೆ, ಮೈತ್ರಿಪಕ್ಷದ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಎದೆ ಬಗೆದರೆ, ಸಿದ್ದರಾಮಯ್ಯ ಇರುತ್ತಾರೆ ಎಂದಿದ್ದ ಎಂಟಿಬಿ, ಸಮನ್ವಯ ಸಮಿತಿ ಅಧ್ಯಕ್ಷರ ಮಾತಿಗೆ ಕ್ಯಾರೇ ಅನ್ನದೇ, ವಾಣಿಜ್ಯ ನಗರಿಯಲ್ಲಿ ಬೀಡು ಬಿಟ್ಟಿದ್ದಾರೆ.

   ಕಾಂಗ್ರೆಸ್ಸಿನ ಮುಖಂಡರು ನಡೆದುಕೊಂಡ ರೀತಿಗೆ ತೀವ್ರ ಬೇಸರ

   ಕಾಂಗ್ರೆಸ್ಸಿನ ಮುಖಂಡರು ನಡೆದುಕೊಂಡ ರೀತಿಗೆ ತೀವ್ರ ಬೇಸರ

   ರಾಜೀನಾಮೆ ನೀಡಲು ಬಂದಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್, ತಮ್ಮ ಜೊತೆ ಕಾಂಗ್ರೆಸ್ಸಿನ ಮುಖಂಡರು ನಡೆದುಕೊಂಡ ರೀತಿಗೆ ತೀವ್ರ ಬೇಸರಿಸಿಕೊಂಡಿದ್ದಾರೆ ಎನ್ನುವ ಸುದ್ದಿಯ ನಡುವೆ, ಅವರನ್ನು ಭೇಟಿ ಮಾಡಲು ಡಿ ಕೆ ಶಿವಕುಮಾರ್ ನಡೆಸಿದ್ದ ಪ್ರಯತ್ನ ವಿಫಲವಾಗಿತ್ತು. ಈವರೆಗೂ ಅವರನ್ನು ಭೇಟಿಯಾಗಲು ಕಾಂಗ್ರೆಸ್ ಮುಖಂಡರಿಗೆ ಸಾಧ್ಯವಾಗಿಲ್ಲ. ತಮ್ಮ ಪರಮಾಪ್ತ ಎಂಟಿಬಿ ನಾಗರಾಜ್ ಮುಂಬೈನಲ್ಲಿ ಇರುವುದರಿಂದ ಸುಧಾಕರ್ ಅವರ ನಡೆ ಯಾವಕಡೆ ಎನ್ನುವುದು ರಾಜಕೀಯದಲ್ಲಿ ಅವರ ಬಾಸ್ ಸಿದ್ದರಾಮಯ್ಯಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.

   ಕಾಂಗೆಸ್ಸಿಗೆ ಗಟ್ಟಿಯೆಂದರೆ ಶಿವಾಜಿನಗರ ಕ್ಷೇತ್ರದ 'ಕಾಂಗ್ರೆಸ್' ಶಾಸಕ ರೋಷನ್ ಬೇಗ್

   ಕಾಂಗೆಸ್ಸಿಗೆ ಗಟ್ಟಿಯೆಂದರೆ ಶಿವಾಜಿನಗರ ಕ್ಷೇತ್ರದ 'ಕಾಂಗ್ರೆಸ್' ಶಾಸಕ ರೋಷನ್ ಬೇಗ್

   ಸದ್ಯದ ಮಟ್ಟಿಗೆ ಕಾಂಗೆಸ್ಸಿಗೆ ಗಟ್ಟಿಯೆಂದರೆ ಬೆಂಗಳೂರು, ಶಿವಾಜಿನಗರ ಕ್ಷೇತ್ರದ 'ಕಾಂಗ್ರೆಸ್' ಶಾಸಕ ರೋಷನ್ ಬೇಗ್. ಅದ್ಯಾವ ಇಕ್ಕಟ್ಟಿನಲ್ಲಿ ಅವರು ಇದ್ದಾರೋ, ಕಾಂಗ್ರೆಸ್ಸಿಗೆ ಅವರು ಬೆಂಬಲ ನೀಡುವ ಸಾಧ್ಯತೆಯಿಲ್ಲದಿಲ್ಲ. ಇವರ ಸಿಟ್ಟು ನೇರ ಸಿದ್ದರಾಮಯ್ಯನವರ ಮೇಲೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಬಹುಕೋಟಿ ಹಗರಣದಲ್ಲಿ ತಮ್ಮ ಹೆಸರು ತಗಲಾಕಿಕೊಂಡಿರುವುದರಿಂದ, ಇವರ ಬೇರೆ ದಾರಿಯಿಲ್ಲದೇ ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಬಹುದು. ಆದರೆ, ಬಿಜೆಪಿ ವಿಶ್ವಾಸಮತ ಗೆಲ್ಲುವುದು ಖಾತ್ರಿಯಾದರೆ, ಖಂಡಿತ ಇವರ ನಿಯತ್ತು ಬದಲಾಗಬಹುದು.

   ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗ ರೆಡ್ಡಿಯವರ ನಿರ್ಧಾರ

   ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗ ರೆಡ್ಡಿಯವರ ನಿರ್ಧಾರ

   ಕಳೆದ ಕೆಲವು ಗಂಟೆಯಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸುವಾಗ, ಬದಲಾಗುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗ ರೆಡ್ಡಿಯವರ ನಿರ್ಧಾರ. ಗುಲಾಂನಬಿ ಆಜಾದ್, ಅಹಮದ್ ಪಟೇಲ್, ಮಲ್ಲಿಕಾರ್ಜುನ ಖರ್ಗೆ, ಕುಮಾರಸ್ವಾಮಿ ಬಂದು ಮಾತುಕತೆ ನಡೆಸಿದ್ದರೂ, ರಾಮಲಿಂಗ ರೆಡ್ಡಿ ತಮ್ಮ ರಾಜೀನಾಮೆಯ ನಿರ್ಧಾರದಿಂದ ಹಿಂದಕ್ಕೆ ಸರಿಯುವಂತೆ ಕಾಣುತ್ತಿಲ್ಲ. ಭಾನುವಾರ ಸಾಯಂಕಾಲದ ಹೊತ್ತಿಗೆ ಕಾಂಗ್ರೆಸ್ಸಿಗೆ ಆದ ದೊಡ್ಡ ಸೆಟ್ ಬ್ಯಾಕ್ ಇದು.

   ತಂದೆಯ ನಿರ್ಧಾರವನ್ನೇ ಮಗಳು, ಶಾಸಕಿ ಸೌಮ್ಯ ರೆಡ್ಡಿ ಹಿಂಬಾಲಿಸುವ ಸಾಧ್ಯತೆಯಿಲ್ಲದಿಲ್ಲ

   ತಂದೆಯ ನಿರ್ಧಾರವನ್ನೇ ಮಗಳು, ಶಾಸಕಿ ಸೌಮ್ಯ ರೆಡ್ಡಿ ಹಿಂಬಾಲಿಸುವ ಸಾಧ್ಯತೆಯಿಲ್ಲದಿಲ್ಲ

   ತಂದೆಯ ನಿರ್ಧಾರವನ್ನೇ ಮಗಳು, ಶಾಸಕಿ ಸೌಮ್ಯ ರೆಡ್ಡಿ ಹಿಂಬಾಲಿಸುವ ಸಾಧ್ಯತೆಯಿಲ್ಲದಿಲ್ಲ. ಹಾಗಾಗಿ, ರಾಮಲಿಂಗ ರೆಡ್ಡಿ ಸಮ್ಮಿಶ್ರ ಸರಕಾರದ ಪರವಾಗಿ ನಿಂತರೆ, ಕಾಂಗ್ರೆಸ್ಸಿಗೆ ಪರವಾಗಿಲ್ಲ. ಇಲ್ಲದಿದ್ದರೆ, ಸಮ್ಮಿಶ್ರ ಸರಕಾರಕ್ಕೆ ಇದ್ದಿದ್ದರಲ್ಲಿ ಮತ್ತೆ ಮೈನಸ್ ಒನ್. ಅಲ್ಲಿಗೆ, ಸರಕಾರದ ಒಟ್ಟು ಬಲ ನೂರರ ಕಮ್ಮಿಗೆ ಇಳಿಯಲಿದೆ.

   English summary
   Karnataka political crisis: Only MLA Roshan Baig as of now for Congress, no guarantee from other MLAs including MTB Nagaraj and Dr. Sudhakar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X