ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿದಾಡುತ್ತಿರುವ ಸಂದೇಶವನ್ನೊಮ್ಮೆ ನೋಡಿ: ಇನ್ನಾದರೂ ಆತ್ಮವಿಮರ್ಶೆ ಮಾಡಿಕೊಳ್ಳಿ

|
Google Oneindia Kannada News

ಕಳೆದ ಒಂದು ವಾರದಿಂದ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ತಲೆತಗ್ಗಿಸುವಂತದ್ದು. ರಾಜಕಾರಣಿಗಳ 'ಅವಕಾಶವಾದ ರಾಜಕಾರಣ'ದ ಬಗ್ಗೆ ಜನ ಬೀದಿಬೀದಿಯಲ್ಲಿ ಲೇವಡಿ ಮಾಡುತ್ತಿದ್ದಾರೆ.

ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿರುವ ಈ ಸಂದೇಶವನ್ನೊಮ್ಮೆ ರಾಜಕಾರಣಿಗಳು ಓದಿ, ಆತ್ಮವಿಮರ್ಶೆ ಮಾಡಿಕೊಳ್ಳಲಿ. ವಾಟ್ಸಾಪ್ ನಲ್ಲಿ ಬಂದ ಸಂದೇಶ ಹೀಗಿದೆ. ಓವರ್ ಟು ಪೊಲಿಟಿಶಿಯನ್ಸ್

ಸಂಜೆ ತನಕ ಕಾದುನೋಡಿ: ಹೊಸ ಬಾಂಬ್ ಸಿಡಿಸಿದ ಡಿ ಕೆ ಶಿವಕುಮಾರ್ಸಂಜೆ ತನಕ ಕಾದುನೋಡಿ: ಹೊಸ ಬಾಂಬ್ ಸಿಡಿಸಿದ ಡಿ ಕೆ ಶಿವಕುಮಾರ್

> ಒಬ್ಬನೇ ಒಬ್ಬ ತನ್ನ ಕ್ಷೇತ್ರಕ್ಕೆ ಅನುದಾನ ಬರುತ್ತಿಲ್ಲ ಎಂದು ರಾಜೀನಾಮೆ ಕೊಡಲಿಲ್ಲ. ತನ್ನ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು, ಆಸ್ಪತ್ರೆ ಆಗಲಿಲ್ಲ ಎಂದು ಸಹ ರಾಜೀನಾಮೆ ನೀಡಲಿಲ್ಲ.

Karnataka political crisis: Message spreading in whatsapp, politicians should look into this

> ಒಬ್ಬನೇ ಒಬ್ಬ ಚಿಕ್ಕ ಕಂದಮ್ಮಗಳ ಮೇಲೆ ಅತ್ಯಾಚಾರ ಆಗುತ್ತಿದೆ, ಕಾನೂನು ವ್ಯವಸ್ಥೆ ಪ್ರಬಲವಾಗುವ ವರೆಗೂ ನನಗೆ ಅಧಿಕಾರ ಬೇಡ ಎಂದು ರಾಜೀನಾಮೆ ನೀಡಿಲ್ಲ. ಸಾಲದ ಸುಳಿಗೆ ಸಿಲುಕಿ ಅನ್ನದಾತ ಸಾವಿಗೆ ಶರಣಾಗುತ್ತಿದ್ದಾನೆ ಎಂದು ಒಬ್ಬನೂ ರಾಜೀನಾಮೆ ನೀಡಲಿಲ್ಲ.

> ನೀರಿಗಾಗಿ ಹಾಹಾಕಾರ ಉಂಟಾಗಿದ್ದು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಒಬ್ಬನೇ ಒಬ್ಬ ರಾಜೀನಾಮೆ ನೀಡಲಿಲ್ಲ. ಕರ್ನಾಟಕದಲ್ಲಿ ಉದ್ಯೋಗ ಕನ್ನಡಿಗರಿಗೇ ನೀಡಿ ಎಂದು ಒತ್ತಾಯಿಸಿ ಯಾರೊಬ್ಬನೂ ರಾಜೀನಾಮೆ ನೀಡಲಿಲ್ಲ.

> ಕಾವೇರಿ ನದಿಗಾಗಿ ಇಲ್ಲ, ಶರಾವತಿ, ನೇತ್ರಾವತಿ ಉಳಿವಿಗಾಗಿ ಯಾರೊಬ್ಬನೂ ರಾಜೀನಾಮೆ ನೀಡಲಿಲ್ಲ. ಬಡಜನರಿಗೆ ತಲುಪುವ ಸೌಲಭ್ಯಗಳು ಹಾಗೂ ಯೋಜನೆಗಳು ತಲುಪದೇ ಇದ್ದಾಗ ರಾಜೀನಾಮೆ ಕೊಡಲಿಲ್ಲ

> ಮಹದಾಯಿ ನೀರಿಗಾಗಿ ರಾಜ್ಯದಲ್ಲಿ ಹೋರಾಟ ನಡೆದಾಗ ರಾಜೀನಾಮೆಯ ಪದ ಬಳಸಲಿಲ್ಲ. ಕಳಸ ಬಂಡೂರಿ ಹೋರಾಟ ನಡೆದಾಗ ರಾಜೀನಾಮೆ ಕೊಡಲಿಲ್ಲ. ಕಬ್ಬು ಬೆಳೆಗಾರರು ಸಂಕಷ್ಟದಲ್ಲಿರುವಾಗ ರಾಜೀನಾಮೆ ನೀಡಲಿಲ್ಲವೇಕೆ ...

ರಾಜಕೀಯ ಅಸಹ್ಯ ಮೂಡಿಸಿದೆ : ಕ್ಷಮೆ ಕೇಳಿದ ಯುವ ಕಾಂಗ್ರೆಸ್ ಶಾಸಕರಾಜಕೀಯ ಅಸಹ್ಯ ಮೂಡಿಸಿದೆ : ಕ್ಷಮೆ ಕೇಳಿದ ಯುವ ಕಾಂಗ್ರೆಸ್ ಶಾಸಕ

'ಸ್ವಾರ್ಥ, ಸ್ವಹಿತ, ಅಧಿಕಾರ ವ್ಯಾಮೋಹಕ್ಕಾಗಿ "ಪ್ರಜಾಪ್ರಭುತ್ವ" ವನ್ನೇ ಕಗ್ಗೊಲೆ ಮಾಡಲು ಹೊರಟಿರುವ ಎಲ್ಲಾ ಶಾಸಕರಿಗೂ ನಮ್ಮ ಧಿಕ್ಕಾರವಿರಲಿ ಹಾಗೂ ತಕ್ಕ ಶಾಸ್ತಿಯಾಗಲಿ ಕಠಿಣ ಕ್ರಮ ಜರುಗಿಸಲು ತಿದ್ದುಪಡಿ ತರಲಿ'

English summary
Karnataka political crisis: Message spreading in whatsapp, politicians of all the parties should look into this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X