ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕುಮಾರಸ್ವಾಮಿ

|
Google Oneindia Kannada News

Recommended Video

      Live : Karnataka Assembly Session 2019 | Karnataka Floor Test

      ಬೆಂಗಳೂರು, ಜುಲೈ 23: ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಆರು ಗಂಟೆಯಿಂದ ಅನ್ವಯವಾಗುವಂತೆ 48 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ವೇಳೆ ಬಾರ್‌, ಪಬ್‌ಗಳನ್ನು ತೆರೆಯುವಂತಿಲ್ಲ. ನಿಷೇಧಾಜ್ಞೆ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

      ಸ್ಪೀಕರ್‌ ಮೇಲೆ ವಿಶ್ವಾಸ, ಮಧ್ಯ ಪ್ರವೇಶಿಸಲು ಒಪ್ಪದ ಸುಪ್ರಿಂ ಸ್ಪೀಕರ್‌ ಮೇಲೆ ವಿಶ್ವಾಸ, ಮಧ್ಯ ಪ್ರವೇಶಿಸಲು ಒಪ್ಪದ ಸುಪ್ರಿಂ

      ಮಂಗಳವಾರ ಸದನದಲ್ಲಿ ಅನೇಕ ಚರ್ಚೆಗಳು ನಡೆದವು. ಸುಪ್ರೀಂಕೋರ್ಟ್‌ನಲ್ಲಿ ಅತೃಪ್ತ ಶಾಸಕರ ಅರ್ಜಿ ವಿಚಾರಣೆಗೆ ಬರಬೇಕಿದ್ದರಿಂದ ಎಲ್ಲರ ಗಮನ ಅತ್ತ ಇತ್ತು. ಆದರೆ, ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಅದರ ನಡುವೆ ಸ್ಪೀಕರ್ ರಮೇಶ್ ಕುಮಾರ್ ಅವರ ಮೇಲೆ ಜವಾಬ್ದಾರಿಯನ್ನೂ ಹೊರಿಸಿದೆ.

      ಚರ್ಚೆ,ಸಿಟ್ಟು,ಇವತ್ತೇ ಕಡೆ, ಎಲ್ಲವೂ ಮುಗಿಯುತ್ತದೆ: ರಮೇಶ್ ಕುಮಾರ್

      ಮಂಗಳವಾರ ಸಂಜೆ ಆರು ಗಂಟೆ ಒಳಗೆ ವಿಶ್ವಾಸಮತ ಯಾಚನೆ ನಡೆಸುವುದಾಗಿ ಸ್ಪೀಕರ್ ಸೋಮವಾರ ತಿಳಿಸಿದ್ದಾರೆ. ಹಾಗಾಗಿ ಇಂದೇ ವಿಶ್ವಾಸಮತ ಯಾಚನೆ ನಡೆಯಲಿದೆ ಎಂದು ರಮೇಶ್ ಕುಮಾರ್ ಅವರ ಪರ ವಕೀಲ ಕೋರ್ಟ್‌ಗೆ ತಿಳಿಸಿದ್ದರು.

      KuRSi ಸರ್ಕಾರದ ಲೆಕ್ಕಾಚಾರ ಬಿಚ್ಚಿಟ್ಟ ಕೆ.ಎಸ್.ಈಶ್ವರಪ್ಪ ಟ್ವೀಟ್! KuRSi ಸರ್ಕಾರದ ಲೆಕ್ಕಾಚಾರ ಬಿಚ್ಚಿಟ್ಟ ಕೆ.ಎಸ್.ಈಶ್ವರಪ್ಪ ಟ್ವೀಟ್!

      Karnataka political crisis assembly floor test live updates in kannada

      ಅತೃಪ್ತ ಶಾಸಕರು ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿತೇಶ್ ಅಪಾರ್ಟ್‌ಮೆಂಟ್‌ನಲ್ಲಿ ಇದ್ದಾರೆ ಎಂಬ ಸುದ್ದಿ ತಿಳಿದು ಕಾಂಗ್ರೆಸ್ ಕಾರ್ಯಕರ್ತರು ಅಪಾರ್ಟ್‌ಮೆಂಟ್‌ಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಬಿಜೆಪಿ ಕಾರ್ಯಕರ್ತರು ಸಹ ಅಲ್ಲಿ ಸೇರಿಕೊಂಡಿದ್ದರು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಭಾರಿ ಗಲಾಟೆ ನಡೆಯಿತು.

      Newest FirstOldest First
      8:42 PM, 23 Jul

      ವಿಶ್ವಾಸಮತಕ್ಕೆ ಗೈರಾಗಿದ್ದಕ್ಕೆ ಬಿಎಸ್‌ಪಿ ಶಾಸಕ ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
      8:32 PM, 23 Jul

      ವಿಶ್ವಾಸಮತ ಸೋತ ಕುಮಾರಸ್ವಾಮಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು.
      8:01 PM, 23 Jul

      ಪ್ರಜಾಪ್ರಭುತ್ವಕ್ಕೆ ತಾತ್ಕಾಲಿಕ ಸೋಲು. ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಆರ್ ಎಸ್ಎಸ್/ಬಿಜೆಪಿಯವರ ಸಂಚಿನಿಂದ ಕರ್ನಾಟಕದ ಸೋಲು ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
      7:51 PM, 23 Jul

      ಬಹುಮತ ಕಳೆದುಕೊಂಡ ಕಾರಣ ಸಿಎಂ ಸ್ಥಾನಕ್ಕೆ ಕುಮಾರಸ್ವಾಮಿ ಅವರು ನಾಳೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಕೊಡಲಿದ್ದಾರೆ. ಆ ನಂತರ ಬಿಜೆಪಿಯು ತಮ್ಮ ಬಳಿ ಸಂಖ್ಯೆ ಇರುವುದಾಗಿ ಪ್ರಸ್ತಾವನೆ ಸಲ್ಲಿಸಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
      7:50 PM, 23 Jul

      ಯಡಿಯೂರಪ್ಪ ಅವರು ಆರ್.ಅಶೋಕ್ ಹಾಗೂ ಇತರ ಸದಸ್ಯರೊಡನೆ ಗೆಲುವಿನ ಚಿಹ್ನೆ ತೋರಿಸಿದರು. ಶಾಸಕರು ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
      7:48 PM, 23 Jul

      ಕುಮಾರಸ್ವಾಮಿ ಅವರು ಮಂಡಿಸಿದ್ದ ವಿಶ್ವಾಸಮತ ಪ್ರಸ್ತಾವನೆಯ ಪರವಾಗಿ 99 ಮತಗಳು ಚಲಾವಣೆ ಆದವು. ಪ್ರಸ್ತಾವನೆಯ ವಿರುದ್ಧವಾಗಿ 105 ಮತಗಳು ಚಲಾವಣೆ ಆದವು. 20 ಮಂದಿ ಸದನಕ್ಕೆ ಗೈರಾಗಿದ್ದರು. ಸ್ಪೀಕರ್ ಅವರು ಯಾರ ಪರವಾಗಿಯೂ ಮತ ಚಲಾವಣೆ ಮಾಡುವಂತೆ ಇರಲಿಲ್ಲ ಹಾಗಾಗಿ ಅವರು ಮತ ಚಲಾವಣೆ ಮಾಡಲಿಲ್ಲ.
      7:40 PM, 23 Jul

      ಸರ್ಕಾರದ ಪರವಾಗಿ 99 ಮತಗಳು, ಸರ್ಕಾರದ ವಿರುದ್ಧವಾಗಿ 105 ಮತಗಳು ಚಲಾವಣೆ ಆಗಿವೆ.
      Advertisement
      7:24 PM, 23 Jul

      ಡಿವಿಷನ್ ಬೆಲ್ ಆಗಿದ್ದು, ಸದನದ ಬಾಗಿಲು ಹಾಕಲಾಗಿದ್ದು, ಇನ್ನು ಯಾರೂ ಸಹ ಸದನದ ಒಳಗೆ ಬಂದು ವಿಶ್ವಾಸಮತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಇಲ್ಲ. ಈಗ ಎಣಿಕೆ ಪ್ರಾರಂಭವಾಗಿದ್ದು ವಿಶ್ವಾಸಮತದ ಪರ ಇರುವವರು ಕೈ ಎತ್ತಿ ಮತ ಹಾಕಬೇಕಿದೆ.
      7:20 PM, 23 Jul

      ವಿಶ್ವಾಸಮತ ಪ್ರಸ್ತಾವವನ್ನು ಕುಮಾರಸ್ವಾಮಿ ಅವರು ಮಂಡಿಸಿದರು. ಅದನ್ನು ಸ್ಪೀಕರ್ ಅವರು ಅಂಗೀಕರಿಸಿದರು. ಮತಕ್ಕೆ ಹಾಕಿದರು. ಮೊದಲಿಗೆ ದ್ವನಿ ಮತ ಅಂಗೀಕಾರ ಮಾಡಿದರು. ವಿಪಕ್ಷ ಸದಸ್ಯರು ಡಿವಿಶನ್‌ಗೆ ಒತ್ತಾಯಿಸಿದರು.
      7:19 PM, 23 Jul

      ಕೆಲವು ಪತ್ರಿಕೆಗಳ ಸಂಪಾದಕೀಯವನ್ನು ಉಲ್ಲೇಖಿಸಿದ ಕುಮಾರಸ್ವಾಮಿ ಅವರು, ಅತೃಪ್ತ ಶಾಸಕರ ವರ್ತನೆ ಮತ್ತು ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಪತ್ರಿಕೆಗಳು ಜರಿದಿರುವುದನ್ನು ಸದನದ ಗಮನಕ್ಕೆ ತಂದರು.
      7:15 PM, 23 Jul

      ಯಡಿಯೂರಪ್ಪ ಅವರು ಸಿಎಂ ಆಗಿ ಮಂತ್ರಿ ಮಂಡಲ ರಚನೆ ಆದ ಕೂಡಲೇ ಬಾಂಬ್ ಬೀಳುತ್ತೆ, ಸಚಿವ ಸಂಪುಟ ರಚನೆ ಆದ ಕೂಡಲೇ ನಿಮಗೂ ಬಿಸಿ ತಟ್ಟುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
      7:15 PM, 23 Jul

      ಪಕ್ಷಕ್ಕೆ ದ್ರೋಹ ಮಾಡಿ ಪಕ್ಷ ತ್ಯಜಿಸಿದ್ದಾರೆ, ಬಿಜೆಪಿ ಆಮೀಷಗಳಿಗೆ ಒಳಗಾಗಿ ಪಕ್ಷ ಬಿಟ್ಟಿದ್ದಾರೆಯೋ ಅವರನ್ನು ಜಗತ್ತೇ ಪ್ರಳಯ ಆದರೂ ಸಹ ಅವರನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಸದನದಲ್ಲಿ ಘೋಷಣೆ ಮಾಡಿದರು. ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು. ಕುಮಾರಸ್ವಾಮಿ ಅವರೂ ಸಹ ಮೂರು ಅತೃಪ್ತ ಶಾಸಕರನ್ನು ವಾಪಸ್ ಪಡೆಯುವುದಿಲ್ಲ ಎಂದು ಹೇಳಿದರು. ಇದು ರಾಜ್ಯದ ಜನರಿಗೆ ಗೊತ್ತಾಗಲಿ ಎಂದು ಹೇಳಿದರು.
      Advertisement
      7:12 PM, 23 Jul

      ಪಕ್ಷಾಂತರ ಒಳ್ಳೆಯದಲ್ಲ, ಆಯ್ಕೆ ಆದ ಪಕ್ಷಕ್ಕೆ ನಿಷ್ಠೆ ತೋರಿಸಿ, ರಾಜೀನಾಮೆ ನೀಡುವ ಬದಲಿಗೆ ಐದು ವರ್ಷ ಪೂರ್ಣ ಮಾಡಿ ಎಂದು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸದನದಲ್ಲಿ ಹೇಳಿದ್ದನ್ನು ಕುಮಾರಸ್ವಾಮಿ ಅವರು ಹೇಳಿದರು.
      7:06 PM, 23 Jul

      ಬರವನ್ನು, ಕೊಡಗು ಪ್ರವಾಹವನ್ನು ಸರ್ಕಾರ ನಿರ್ವಹಿಸಲು ಎಲ್ಲಿಯಾದರೂ ಎಡವಿದೆ ಎಂದರೆ ನಮ್ಮ ಗಮನಕ್ಕೆ ತನ್ನಿ. ಎಲ್ಲ ಜಿಲ್ಲೆಗಳಿಗೂ ನಾವು ಸಮಾನ ಅನುದಾನ ನೀಡಿದ್ದೇನೆ. ಮಂಡ್ಯ ಮತ್ತು ಹಾಸನಕ್ಕೆ ಸ್ವಲ್ಪ ಹೆಚ್ಚು ಅನುದಾನವನ್ನು ನೀಡಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ, ಆದರೆ ಯಾವ ಜಿಲ್ಲೆಯನ್ನೂ ನಾವು ನಿರ್ಲಕ್ಷಿಸಿಲ್ಲ - ಕುಮಾರಸ್ವಾಮಿ
      6:59 PM, 23 Jul

      ನೂರು ಕೋಟಿ ಹಣವನ್ನು ಸಿಎಂ ಪರಿಹಾರ ನಿಧಿಯ ಅಡಿಯಲ್ಲಿ ಜನರಿಗೆ ನೀಡಿದ್ದೇವೆ. ಅದಕ್ಕೆಲ್ಲಾ ಪಕ್ಷಭೇದ ಮಾಡಿಲ್ಲ- ಕುಮಾರಸ್ವಾಮಿ
      6:58 PM, 23 Jul

      ಅತೃಪ್ತ ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ನೀಡಿದ್ದೇವೆ ಎಂದು ಕುಮಾರಸ್ವಾಮಿ ಅವರು ಲೆಕ್ಕ ನೀಡಿದರು. ಎಲ್ಲ ಅತೃಪ್ತ ಶಾಸಕರ ಕ್ಷೇತ್ರಗಳಿಗೆ ನೂರಾರು ಕೋಟಿ ಅನುದಾನ ನೀಡುವುದನ್ನು ಸಿಎಂ ಅವರು ಸದನದ ಗಮನಕ್ಕೆ ತಂದರು.
      6:56 PM, 23 Jul

      ನಿಮಗೆ, ಸಿದ್ದರಾಮಯ್ಯ ಅವರಿಗೆ ಆಗಬೇಕಿತ್ತು. ಇಂಥಹವರೆನ್ನೆಲ್ಲ ಬೆಳೆಸುವ ಒಳ್ಳೆತನ ತೋರಿಸಿದ್ದಿರಲ್ಲ. ನೀವೇ ಸಾಕಿದ ಗಿಣಿ, ಹದ್ದಾಗಿ ಕುಕ್ಕಿತ್ತಲ್ಲೋ ಎಂಬ ಹಾಡು ಇದೆಯಲ್ಲ- ರಮೇಶ್ ಕುಮಾರ್
      6:54 PM, 23 Jul

      ಕೆಆರ್ ಪೇಟೆ ನಾರಾಯಣ ಗೌಡ, ಬೋರ್‌ವೆಲ್ ಕೊಡಿಸಲೂ ದುಡ್ಡು ಕೊಡಲಿಲ್ಲ. ನಾನೇ ಕೈಯಿಂದ ಖರ್ಚು ಮಾಡಿ ಕೊರೆಯಿಸಿದೆ. ದೇವೇಗೌಡರ ಕುಟುಂಬದವರು ತೊಂದರೆ ಕೊಟ್ಟರು ಎಂದರು. ಬೇಡ ಎಂದರೂ ಅವರಿಗೆ ಟಿಕೆಟ್ ಕೊಡಲಾಗಿತ್ತು. ದೇವೇಗೌಡರ ಮನೆಗೆ ಕಾರ್ಯಕರ್ತರ ಜತೆ ಬ್ರೀಫ್‌ಕೇಸ್ ತಂದು ಇಟ್ಟುಹೋದ. ಅದನ್ನು ಗನ್‌ಮ್ಯಾನ್ ತೆಗೆದು ನೋಡಿದರೆ ಖಾದಿ ಪಂಚೆ, ಜುಬ್ಬಾ ಇರಿಸಿದ್ದ.; ಅದನ್ನು ನೋಡಿದ ಕಾರ್ಯಕರ್ತರು ದೇಣಿಗೆ ಕೊಟ್ಟಿದ್ದಾನೆ ಎಂದುಕೊಳ್ಳಬೇಕು- ರಮೇಶ್ ಕುಮಾರ್
      6:50 PM, 23 Jul

      ಎಲ್ಲ ಸಭೆಗಳಲ್ಲಿಯೂ ಉಡುಗೊರೆ ಕೊಡಲು ಅವಕಾಶವಿದೆ. ಹಾಗೆಯೇ ಬಿಜೆಪಿಯವರಿಗೂ ಕೊಟ್ಟಿದ್ದೆ. ರಾಜೀವ್ ಚಂದ್ರಶೇಖರ್ ಅದನ್ನು ಟ್ವೀಟ್ ಮಾಡಿದರು. ಬಿಜೆಪಿಯವರು ನಮಗೆ ಬೇಡ ಎಂದರು. ಮರುದಿನವೇ ಐಟಿಯವರ ನೋಟಿಸ್ ಬಂತು. ನಾನು ವಿವರಣೆ ನೀಡಿದರೂ ಮತ್ತೆ ನೋಟಿಸ್. ಬಿಜೆಪಿಯಲ್ಲಿ ಮೂವರನ್ನು ಬಿಟ್ಟು ಮತ್ತೆಲ್ಲರೂ ಉಡುಗೊರೆ ಪಡೆದುಕೊಂಡಿದ್ದರು- ಡಿಕೆ ಶಿವಕುಮಾರ್
      6:47 PM, 23 Jul

      ಎಲ್ಲಿ ಹೋದರು ನಿಮ್ಮ ಐಟಿಯವರು? ಯಾರನ್ನೂ ಹಿಡಿದಿದ್ದು ನೋಡಿಲ್ಲ- ಕುಮಾರಸ್ವಾಮಿ
      6:46 PM, 23 Jul

      ದುಬೈನಿಂದ ಆ ವ್ಯಕ್ತಿಯನ್ನು ಕರೆದುಕೊಂಡು ಬಂದಿದ್ದು ನಮ್ಮ ರಾಜ್ಯದ ಅಧಿಕಾರಿಗಳು. ಅಲ್ಲಿನ ಎಂಬೆಸಿ ಪರ್ಮಿಷನ್ ತೆಗೆದುಕೊಳ್ಳಬೇಕು. ದೆಹಲಿಗೆ ತೆಗೆದುಕೊಂಡು ಹೋಗಬೇಕು ಎನ್ನುತ್ತಾರೆ. ಅಲ್ಲಿ ಇಳಿದ ಕೂಡಲೇ ಇಡಿಯವರು ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಯಾರನ್ನು ಫಿಕ್ಸ್ ಮಾಡಲು ಇದನ್ನು ಮಾಡಿದ್ದೀರಿ?- ಕುಮಾರಸ್ವಾಮಿ
      6:44 PM, 23 Jul

      ಅಧಿಕಾರಕ್ಕಾಗಿ ವಿಶೇಷ ವಿಮಾನ ತೆಗೆದುಕೊಂಡು ಕಳಿಸಲು ಹೋದರಲ್ಲ, ವಿಮಾನ ನಿಲ್ದಾಣದ ಸಿಸಿಟಿವಿ ಫೂಟೇಜ್ ಬೇಕೇ? ಅಧಿಕಾರ ದುರ್ಬಳಕೆ ಮಾಡಿಕೊಂಡು ಐಎಂ ಪ್ರಕರಣದಲ್ಲಿ ಶಾಸಕನನ್ನು ಬಂಧಿಸಿದರು ಎಂದು ಹೇಳಿದರು- ಕುಮಾರಸ್ವಾಮಿ
      6:43 PM, 23 Jul

      ವಿದ್ಯುನ್ಮಾನ ಮಾಧ್ಯಮಗಳಿಗೆ ಹೇಳುತ್ತೇನೆ, ನಿಮ್ಮ ತೆವಲುಗಳಿಗೆ ದೇಶ ಹಾಳು ಮಾಡಬೇಡಿ- ಕುಮಾರಸ್ವಾಮಿ
      6:42 PM, 23 Jul

      ಇದರಿಂದ ಕುಮಾರಸ್ವಾಮಿಗೆ ನಷ್ಟವಿಲ್ಲ. ನಾನೇನು ಶಾಶ್ವತವಾಗಿ ಇರುತ್ತೀನಾ.? 22-23 ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಯಾರೂ ಶಾಶ್ವತವಲ್ಲ- ಕುಮಾರಸ್ವಾಮಿ
      6:41 PM, 23 Jul

      ಮತ್ತೊಬ್ಬ ನಮಗೆ ಎರಡನೆಯ ಬಾರಿ ಟೋಪಿ ಹಾಕಿರುವವನು. ಗೋಪಾಲಯ್ಯ ಎಂಬುವವನು. ಆತ ಕೊಲೆ ಪ್ರಕರಣದಲ್ಲಿದ್ದಾನೆ. ಅವನಿಗೆ ರಕ್ಷಣೆ ಕೊಡಲು ನಾನು ಸರ್ಕಾರ ನಡೆಸಬೇಕೇ? ಈಗ ನೀವು ಅವರಿಗೆ ರಕ್ಷಣೆ ಕೊಡಿ ಕರೆದುಕೊಂಡು ಹೋಗಿ. ಅಧಿಕಾರಕ್ಕೆ ಬಂದಾಗ ಎಂದೂ ದುರುಪಯೋಗಪಡಿಸಿಕೊಂಡಿಲ್ಲ- ಕುಮಾರಸ್ವಾಮಿ
      6:40 PM, 23 Jul

      ವಿಶ್ವನಾಥ್ ಅವರ ಬಗ್ಗೆ ಬಹಳ ಗೌರವ ಇತ್ತು. ಇತ್ತೀಚಿನ ಅವರ ನಡವಳಿಕೆ ನೋಡಿದಾಗ, ಹಲವು ವಿಚಾರಗಳ ಅವಶ್ಯಕತೆ ಇಲ್ಲಿ ಇಲ್ಲ. ಸಾರ್ವಜನಿಕವಾಗಿ ಹೇಳುವುದೇ ಒಂದು, ಒಳಗಿರುವುದೇ ಒಂದು. ಸಮ್ಮಿಶ್ರ ಸರ್ಕಾರ ಅನಾಗರಿಕವೋ ಎಂದು ಚರ್ಚೆ ಮಾಡಲಿ. ತಮ್ಮ ಬಗ್ಗೆ ಚರ್ಚಿಸುವುದು ಸರಿಯಲ್ಲ- ಕುಮಾರಸ್ವಾಮಿ
      6:37 PM, 23 Jul

      ರಾಜೀನಾಮೆ ಪತ್ರವನ್ನು ಎಲ್ಲರೂ ನೋಡಲಿ ಎಂದು ಕಳುಹಿಸಿದ ಸ್ಪೀಕರ್ ರಮೇಶ್ ಕುಮಾರ್
      6:33 PM, 23 Jul

      ಕೆಎಚ್ ರಂಗನಾಥ್ ಅವರ ನೆರಳಿನಲ್ಲಿ ಬೆಳೆದವನು ನಾನು. ಹೇಗಿರಬಹುದು ಯೋಚಿಸಿ ನನ್ನ ಪರಿಸ್ಥಿತಿ. ಇಂದು ಮತ್ತೆ ಸದನ ಮುಂದಕ್ಕೆ ಹೋಗುವಂತಾದರೆ ನನಗೇಕೆ ಎಂದು ಸಿದ್ಧನಾಗಿ ಬಂದಿದ್ದೇನೆ- ರಮೇಶ್ ಕುಮಾರ್
      6:32 PM, 23 Jul

      ಇದು ಸಭಾನಿಂದನೆ. ಸದನವನ್ನು ತಪ್ಪು ದಾರಿಗೆ ಎಳೆಯುತ್ತದೆ. ಇಂದು ಪತ್ರವನ್ನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದೇನೆ. ನನಗೆ ಒಂದು ಚೂರು ಸಮಸ್ಯೆಯಾದರೆ ರಾಜೀನಾಮೆ ಕೊಟ್ಟು ಹೋಗಲು ಸಿದ್ಧನಾಗಿ ಬಂದಿದ್ದೇನೆ- ರಮೇಶ್ ಕುಮಾರ್
      6:31 PM, 23 Jul

      ಯಾರು ಯಾರಿಗೆ ಸರ್ಟಿಫಿಕೇಟ್ ಕೊಡುವವರು. ಒಂದು ರಾಜೀನಾಮೆ ಪತ್ರವನ್ನು ಯಾವ ನಮೂನೆಯಲ್ಲಿ ಕೊಡಬೇಕೋ ಹಾಗೆ ಕೊಡುವುದಕ್ಕೆ ಸಿದ್ಧರಿರದವರು ಸ್ಪೀಕರ್ ನಡವಳಿಕೆ ಬಗ್ಗೆ ಮಾತನಾಡುತ್ತಾರೆ- ರಮೇಶ್ ಕುಮಾರ್
      READ MORE

      English summary
      Karnataka assembly floor-test live updates in kannada. Karnataka political crisis. Speaker Ramesh Kumar gave deadline of 5-6 pm to Chief Minister HD Kumaraswamy for floor test.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X