ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರ ಟೋಪಿ ಬದಲಾಗುತ್ತಿದೆ ನೋಡಿ:ಕಾರ್ಯ ವೈಖರಿಯೂ ಬದಲಾಗಲಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 4: ಕರ್ನಾಟಕ ಪೊಲೀಸರೆಂದರೆ ಪೊಲೀಸರ ದೇಹಕ್ಕೂ ನೆರಳು ನೀಡುವಂತ ದೊಡ್ಡ ಟೋಪಿ ನಮ್ಮ ಕಣ್ಣಮುಂದೆ ಬರುತ್ತದೆ. ಆದರೆ ಇನ್ನುಮುಂದೆ ಕರ್ನಾಟಕ ಪೊಲೀಸರು ಇನ್ನಷ್ಟು ಸ್ಮಾರ್ಟ್‌ ಆಗಲಿದ್ದಾರೆ.ಪೊಲೀಸ್‌ ಪೇದೆಗಳು ಈವರೆಗೂ ಧರಿಸುತ್ತಿದ್ದ ಸುತ್ತಳತೆ ಆಕಾರದ ದೊಡ್ಡ ಟೋಪಿಗೆ ಸರ್ಕಾರ ಕೊಕ್‌ ನೀಡಲು ಮುಂದಾಗಿದೆ.

ಅದರ ಬದಲಿಗೆ ಅಧಿಕಾರಿಗಳ ಮಟ್ಟದ ಪೊಲೀಸರು ಧರಿಸುವ ಪಿ-ಕ್ಯಾಪ್‌ ಮಾದರಿಯ ಟೋಪಿ ಪೇದೆಗಳೂ ಧರಿಸಲಿದ್ದಾರೆ. ಈಗ ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಟೋಪಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಕ್ಯಾಪ್‌ ಬದಲಾಯಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಬೆಂಗಳೂರು ಪೊಲೀಸರಿಗೆ ಹೈಕೋರ್ಟ್‌ ಕಪಾಳಮೋಕ್ಷ: ಕಾರಣ ಇಲ್ಲಿದೆ ನೋಡಿಬೆಂಗಳೂರು ಪೊಲೀಸರಿಗೆ ಹೈಕೋರ್ಟ್‌ ಕಪಾಳಮೋಕ್ಷ: ಕಾರಣ ಇಲ್ಲಿದೆ ನೋಡಿ

ಶನಿವಾರ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ, ಈಗಿರುವ ಕ್ಯಾಪ್‌ ಧರಿಸುವುದುರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟಾಗಲಿದೆ, ಹಾಗಾಗಿ ಕಾನ್‌ಸ್ಟೆಬಲ್‌ ಟೋಪಿಯನ್ನು ಬದಲಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಶಿಫಾರಸ್ಸು ಮಾಡಿದೆ.

Karnataka police cap will be changed soon

ಸಭೆಯಲ್ಲಿ ಕಾನ್‌ಸ್ಟೆಬಲ್‌ಗಳಿಗೆ ಹೊಸ ಮಾದರಿಯ ಪಿ-ಕ್ಯಾಪ್‌ ಧರಿಸಲು ಅವಕಾಶ ಮಾಡಿಕೊಟ್ಟರು, ಆ ಮೂಲಕ ಪೊಲೀಸ್‌ ಅಧಿಕಾರಿಗಳು ಪ್ರಯೋಗ ನಡೆಸಿದ್ದಾರೆ. ಈ ವರದಿ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರ ಮಾದರಿಯಲ್ಲಿ ಪಿ-ಕ್ಯಾಪ್‌ ಬಳಕೆಗೆ ಚಿಂತನೆ ಮಾಡಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಕೆಲವೇ ದಿನಗಳಲ್ಲಿ ಪೊಲೀಸರ ಕ್ಯಾಪ್‌ ಕೋಡ್‌ ಬದಲಾವಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಕೆಲವೇ ದಿನಗಳಲ್ಲಿ ರಾಜ್ಯದ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಟೋಪಿ ಸ್ಲೊಚಾಟ್‌ ಕ್ಯಾಪ್‌ನಿಂದ ಪಿ-ಕ್ಯಾಪ್‌ಗೆ ಬದಲಾವಣೆಯಾಗಲಿದೆ.

English summary
According to recommendation from union health ministry, Karnataka police is thinking to adopt new cap for constables.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X