ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಮಧ್ಯಂತರ ತೀರ್ಪು ಮಾತ್ರ ಎಂದ ಮುಖ್ಯಮಂತ್ರಿ

|
Google Oneindia Kannada News

ಬೆಂಗಳೂರು, ಹುಬ್ಬಳ್ಳಿ, ಜುಲೈ, 27: ಮಹದಾಯಿ ನೀರು ಹಂಚಿಕೆ ಕುರಿತಂತೆ ನ್ಯಾಯಮಂಡಳಿ ನೀಡಿರುವ ತೀರ್ಪಿನಿಂದ ನಿರಾಸೆಯಾಗಿದೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲಿ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ರಾಜ್ಯದ ಜನತೆ ಈ ತಾತ್ಕಾಲಿಕ ಹಿನ್ನಡೆಯ ಕಾರಣಕ್ಕಾಗಿ ಆವೇಶಕ್ಕೀಡಾಗದೇ ಈ ಸಂದರ್ಭದಲ್ಲಿ ಶಾಂತಿ ಕಾಪಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.[ಕರ್ನಾಟಕದ ಅರ್ಜಿ ತಿರಸ್ಕರಿಸಿದ ಮಹಾದಾಯಿ ನ್ಯಾಯ ಮಂಡಳಿ]

Karnataka people should not loose hope: Siddaramaiah

ಮಹದಾಯಿ ನದಿ ವಿವಾದ ಕುರಿತು ನ್ಯಾಯಾಧೀಕರಣದ ನೀಡಿರುವ ತೀರ್ಪು ನಮಗೆ ಆಘಾತ ತಂದಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.[ಉತ್ತರ ಕರ್ನಾಟಕದಲ್ಲಿ ಭುಗಿಲೆದ್ದ ರೈತರ ಆಕ್ರೋಶ]

ಸಿಎಂ ಕಾನೂನು ಪಂಡಿತರ ಜೊತೆ ಚರ್ಚೆ ಮಾಡಿ, ನಂತರ ನ್ಯಾಯಾಧಿಕರಣದ ಮೊರೆ ಹೋದರೂ ರಾಜ್ಯಕ್ಕೆ ಸೋಲಾಗಿದೆ. ಆದರೆ ಜನ ಆತಂಕ್ಕೆ ಒಳಗಾಗಬೇಕಿಲ್ಲ. ರಾಜ್ಯದ ನೀರಿನ ಪಾಲನ್ನು ನಮಗೆ ನೀಡಲೇಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ, ನಾವು ರಾಜಕೀಯ ಮತ್ತು ಕಾನೂನು ಹೋರಾಟ ಮಾಡುತ್ತೇವೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಒತ್ತಾಯ ಮಾಡಿದರು.

English summary
Karnataka people should not loose the hope about Kalasa-Banduri Chief Minister Siddaramaiah said on 27 July 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X