ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಆನ್‌ಲೈನ್ ಜೂಜಾಟ ನಿಷೇಧ ಕಾನೂನಿಗೆ ಅಧಿಸೂಚನೆ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಬೆಂಗಳೂರು, ಅಕ್ಟೋಬರ್ 6: ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್ ನಿಷೇಧಿಸುವ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರ್ಕಾರ ಮಂಗಳವಾರ ಅಧಿಸೂಚನೆ ನೀಡಿದೆ.

ಮುಂಗಾರು ಅಧಿವೇಶನದಲ್ಲಿ ಕರ್ನಾಟಕ ಶಾಸಕಾಂಗದ ಉಭಯ ಸದನದಲ್ಲಿ ಆನ್‌ಲೈನ್ ಜೂಜಾಟ ನಿಷೇಧ ಸಂಬಂಧ ಮಸೂದೆಗೆ ಅಂಗೀಕಾರ ನೀಡಲಾಗಿತ್ತು. ಹಣವನ್ನು ಪಣವಾಗಿ ಕಟ್ಟುವ ಆನ್‌ಲೈನ್‌ ಗೇಮ್ ಸೇರಿದಂತೆ ಎಲ್ಲಾ ಜೂಜಾಟವನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕರ್ನಾಟಕದ ಪೊಲೀಸ್ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮಂಡನೆ ಮಾಡಿದ್ದರು.

ಆನ್‌ಲೈನ್ ಜೂಜು ನಿಷೇಧ ತಿದ್ದುಪಡಿ ಮಸೂದೆ ಮಂಡನೆ ಮಾಡಿದ ಹೋಮ್ ಮಿನಿಸ್ಟರ್ಆನ್‌ಲೈನ್ ಜೂಜು ನಿಷೇಧ ತಿದ್ದುಪಡಿ ಮಸೂದೆ ಮಂಡನೆ ಮಾಡಿದ ಹೋಮ್ ಮಿನಿಸ್ಟರ್

ಅಂಗೀಕರಿಸಲಾದ ಈ ಕಾನೂನಿನ ಅಡಿಯಲ್ಲಿ, ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್‌ ಕಾನೂನು ಉಲ್ಲಂಘನೆಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂವರೆಗೆ ದಂಡ ವಿಧಿಸಲಾಗುತ್ತದೆ.

Karnataka Notifies Law Banning Online Gambling And Betting

ಕಂಪ್ಯೂಟರ್, ಮೊಬೈಲ್ ಸೇರಿದಂತೆ ಯಾವುದೇ ಸಾಧನ ಬಳಸಿಕೊಂಡು ಆನ್‌ಲೈನ್‌ ಮೂಲಕ ಜೂಜು ಆಡುವುದು ಅಪರಾಧ. ಇದರ ಜತೆಗೆ ಮನರಂಜನಾ ಕ್ಲಬ್‌ಗಳು , ಗೇಮ್ ಹೌಸ್‌ಗಳು ಈ ಚಟುವಟಿಕೆ ನಡೆಸುವುದನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಜೂಜು ಕೇಂದ್ರಗಳನ್ನು ನಿಯಂತ್ರಣ ಮಾಡಲು ಸರ್ಕಾರ ಮುಂದಾಗಿದೆ.

ಆನ್‌ಲೈನ್‌ ರಮ್ಮಿ ನಿಷೇಧಕ್ಕೆ ಬ್ರೇಕ್ ಹಾಕಿದ ಕೇರಳ ಹೈಕೋರ್ಟ್ಆನ್‌ಲೈನ್‌ ರಮ್ಮಿ ನಿಷೇಧಕ್ಕೆ ಬ್ರೇಕ್ ಹಾಕಿದ ಕೇರಳ ಹೈಕೋರ್ಟ್

ಈಚೆಗೆ ಆನ್‌ಲೈನ್ ಗೇಮಿಂಗ್ ಉದ್ಯಮದ ಕುರಿತು ಗಂಭೀರ ಕಳವಳ ವ್ಯಕ್ತವಾಗಿತ್ತು. ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆಯಲ್ಲಿನ ತಿದ್ದುಪಡಿಯು ಆನ್‌ಲೈನ್ ಜೂಜಾಟವನ್ನು ಜಾಮೀನುರಹಿತ ಅಪರಾಧ ಎಂದು ಹೇಳಿದೆ. ಹೊಸದಾಗಿ ಜಾರಿಗೊಳಿಸಿದ ನಿಬಂಧನೆಗಳು ಲಾಟರಿ ಹಾಗೂ ಕುದುರೆ ರೇಸಿಂಗ್ ಹೊರತುಪಡಿಸಿ ಎಲ್ಲಾ ರೀತಿಯ ಬೆಟ್ಟಿಂಗ್‌ಗಳಿಗೆ ನಿಬಂಧನೆ ಹೇರಿಲಿದೆ. ರಾಜ್ಯಪಾಲರು ಅನುಮೋದನೆ ನೀಡಿದರೆ ರಾಜ್ಯದಲ್ಲಿಈ ಕಾಯ್ದೆ ಅನುಷ್ಠಾನಕ್ಕೆ ಬರುತ್ತದೆ.

Karnataka Notifies Law Banning Online Gambling And Betting

ಈ ಕಾನೂನಿನ ಪ್ರಕಾರ, ಗೇಮಿಂಗ್‌ಗೆ ನಗದು ಹಣ ಹೂಡಿಕೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ, ಹಣ ಪಾವತಿ ಮಾಡದ ಟೋಕನ್ ಪಡೆದು ಜೂಜು ಆಡುವುದು, ಡಿಜಿಟಲ್ ಕರೆನ್ಸಿ ಬಳಸಿಕೊಂಡು ಜೂಜಾಟ ಆಡುವುದು ಕೂಡ ನಿಷೇಧಿತ ಜೂಜು ಪರಿವ್ಯಾಪ್ತಿಗೆ ಸೇರಿಸಲಾಗಿದೆ. ಇದರ ಜತೆಗೆ ಯಾವುದೇ ರೀತಿಯ ಜೂಜು ಕೇಂದ್ರ ತೆಗೆಯುವುದು, ಜೂಜು ಕೇಂದ್ರಕ್ಕೆ ಹೂಡಿಕೆ ಮಾಡುವುದು, ಜೂಜು ಕೇಂದ್ರಕ್ಕೆ ಸಹಾಯ ಮಾಡುವುದು, ಸಾರ್ವಜನಿಕ ಸ್ಥಳದಲ್ಲಿ ಜೂಜು ಆಡುವುದು, ಜೂಜಾಟದಲ್ಲಿ ಭಾಗಿಯಾಗಿ ಗಡಿಪಾರು ಆದ ವ್ಯಕ್ತಿ ಪುನಃ ಜೂಜು ಕೃತ್ಯದಲ್ಲಿ ಭಾಗಿಯಾಗುವುದು ಗಂಭೀರ ಅಪರಾಧದ ವ್ಯಾಪ್ತಿಗೆ ತರಲಾಗಿದೆ. ಈ ಮೂಲಕ ವಿವಿಧ ಅಪರಾಧಗಳಿಗೆ ದಂಡದ ಪ್ರಮಾಣ ಹೆಚ್ಚಿಸುವ ಜತೆಗೆ ಶಿಕ್ಷಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ಆನ್‌ಲೈನ್ ಸೇರಿದಂತೆ ಎಲ್ಲಾ ರೀತಿಯ ಜೂಜಾಟವನ್ನು ನಿಷೇಧ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ಜೂಜಾಟದಲ್ಲಿ ಭಾಗಿಯಾದವರಿಗೆ ವಿಧಿಸುವ ಶಿಕ್ಷೆ ಹಾಗೂ ದಂಡದ ಪ್ರಮಾಣ ಹಲವು ಪಟ್ಟು ಹೆಚ್ಚಳ ಮಾಡುವ ಪ್ರಸ್ತಾಪ ಹೊಂದಿದೆ.

ಈಚೆಗೆ ತಮಿಳುನಾಡಿನಲ್ಲಿ ಆನ್‌ಲೈನ್ ಆಟ ನಿಷೇಧಿಸಿ ಮಹತ್ವದ ತೀರ್ಮಾನ ತೆಗೆದುಕೊಂಡಿತ್ತು. ಈ ಆನ್‌ಲೈನ್‌ ಬೆಟ್ಟಿಂಗ್ ಮತ್ತು ಜೂಜು ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುವ ವೈರಸ್ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಜೂಜು ನಿಷೇಧ ಮಾಡುವ ಸಂಬಂಧ ರಾಜ್ಯ ಸರ್ಕಾರ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಇತ್ತೀಚೆಗೆ ಸಚಿವ ಸಂಪುಟದದಲ್ಲಿ ಮಂಡಿಸಿ ವಿಧೇಯಕವನ್ನು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಗಿತ್ತು.

ಆದರೆ ಆನ್‌ಲೈನ್ ರಮ್ಮಿ ನಿಷೇಧ ಸಂಬಂಧ ಕೇರಳ ಗೇಮಿಂಗ್ ಕಾಯಿದೆ 1960ರ ನಿಯಮಗಳ ಅಡಿಯಲ್ಲಿ ಪಿಣರಾಯಿ ಸರ್ಕಾರ ಫೆಬ್ರವರಿ 23, 2021ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕೇರಳ ಹೈಕೋರ್ಟ್ ಅಸಾಂವಿಧಾನಿಕ ಎಂದು ಹೇಳಿತ್ತು.

Recommended Video

Kohli ಅಭ್ಯಾಸ ವಿಡಿಯೋ ನೋಡಿ ಭೇಷ್ ಎಂದ Afridi | Oneindia Kannada

ದುಡ್ಡು ಪಾವತಿಸಿ ಆನ್ ಲೈನ್ ನಲ್ಲಿ ಆಡಲಾಗುವ ರಮ್ಮಿ ಆಟ ಕೌಶಲಯುಕ್ತ ಆಟ. ಈ ಆಟವನ್ನು ನಿಷೇಧಿಸಿ ಕೇರಳ ಸರ್ಕಾರ ಹೊರಡಿಸಿರುವ ಆದೇಶ ಅಸಾಂವಿಧಾನಿಕ, ಆಟಗಳನ್ನು ನಿಷೇಧಿಸುವುದು ಮೂಲ ಹಕ್ಕುಗಳ ಉಲ್ಲಂಘನೆ ಎಂದು ನ್ಯಾಯಮೂರ್ತಿ ಟಿ ಆರ್ ರವಿ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತ್ತು.

English summary
Amendments to the Karnataka Police Act, which bans online gambling and betting was notified by the state government on Tuesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X