ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವರು ಕೊಟ್ಟರು ಪೂಜಾರಿ ಕೊಡಲ್ಲ; ಸಂಪುಟ ಸೇರಲು ಅಮಿತ್ ಶಾ ಬಿಡಲ್ಲ!

|
Google Oneindia Kannada News

Recommended Video

ದೇವರು ಕೊಟ್ಟರು ಪೂಜಾರಿ ಕೊಡಲ್ಲ; ಅಮಿತ್ ಶಾ ಬಿಡಲ್ಲ! | Oneindia Kannada

ಹದಿನಾಲ್ಕು ತಿಂಗಳ ಅವಿರತ ಶ್ರಮದ ನಂತರ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆಗೇರಿದೆ. ಯಡಿಯೂರಪ್ಪ ಮಾತ್ರ ಇದುವರೆಗೆ ಪ್ರಮಾಣವಚನ ಸ್ವೀಕರಿಸಿದ್ದನ್ನು ಬಿಟ್ಟರೆ, ಬೇರೆ ಯಾವ ಹಿರಿಯ, ಕಿರಿಯ ಶಾಸಕರು ಸಂಪುಟದಲ್ಲಿ ಇರಲಿದ್ದಾರೆ ಎನ್ನುವುದು ಖಾತ್ರಿಯಾಗಿಲ್ಲ.

ಅತೃಪ್ತ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸುವ ಮೊದಲು, ಕೆಲವರು ಯಡಿಯೂರಪ್ಪನವರ ಜೊತೆಗೇ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಹೇಳಲಾಗುತ್ತಿತ್ತು. 'ಮುಂಬೈನಲ್ಲಿರುವ ನಮ್ಮ ಗೆಳೆಯರಿಗೆ ಸರಿಯಾದ ಸ್ಥಾನಮಾನ ಸಿಗದಿದ್ದರೆ, ಯಡಿಯೂರಪ್ಪನವರ ಕಥೆ ಗೋವಿಂದಾ' ಎಂದು ಡಿ ಕೆ ಶಿವಕುಮಾರ್ ಕೂಡಾ ಲೇವಡಿ ಮಾಡಿದ್ದರು.

ಸ್ಪೀಕರ್‌ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆಸ್ಪೀಕರ್‌ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧ ಆಯ್ಕೆ

ವಿಶ್ವಾಸಮತ ಗೆದ್ದ ನಂತರ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಆದರೆ, ಸಮಯ ನಿಗದಿಯಾಗದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ದೆಹಲಿ ಪ್ರವಾಸ ರದ್ದಾಯಿತು.

ಮಹಾ ವಲಸೆ : ಬಿಜೆಪಿ ಸೇರಲು ಮುಂದಾದ ಎನ್ಸಿಪಿಯ 50 ಶಾಸಕರುಮಹಾ ವಲಸೆ : ಬಿಜೆಪಿ ಸೇರಲು ಮುಂದಾದ ಎನ್ಸಿಪಿಯ 50 ಶಾಸಕರು

ರಾಜ್ಯ ಬಿಜೆಪಿ ನಾಯಕರ ವೇಗಕ್ಕೆ ದೆಹಲಿಯ ವರಿಷ್ಠರು ಬ್ರೇಕ್ ಹಾಕುತ್ತಲೇ ಬರುತ್ತಿದ್ದಾರೆ. ಕುಮಾರಸ್ವಾಮಿ ಸರಕಾರ ಬಿದ್ದು ಹೋದ ನಂತರ, ಸರಕಾರ ರಚನೆ ಮಂಡಿಸಲು ಅಮಿತ್ ಶಾ ಅನುಮತಿ ಸಿಗಲು ಸಾಕಷ್ಟು ಸಮಯ ಬಿಜೆಪಿ ಮುಖಂಡರು ಕಾಯಬೇಕಾಯಿತು. ಈಗ, ಹೊಸ ಸಚಿವ ಸಂಪುಟ ರಚನೆಗೂ ಅದೇ ಪರಿಸ್ಥಿತಿ.

ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ

ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ

ಸ್ಪೀಕರ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಆಯ್ಕೆ ಮಾಡಿದ್ದನ್ನು ಬಿಟ್ಟರೆ, ಯಡಿಯೂರಪ್ಪ ಸಂಪುಟದಲ್ಲಿ ಯಾರ್ಯಾರು ಇರಲಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆಯನ್ನು ಯಾರಾದರೂ ಅಲಂಕರಿಸಲಿದ್ದಾರೆಯೇ, ಆಯಕಟ್ಟಿನ ಸಚಿವ ಸ್ಥಾನ ಯಾರಿಗೆ ಸಿಗಲಿದೆ ಎನ್ನುವ ಸುಳಿವು ಸದ್ಯಕ್ಕಿಲ್ಲ.

ಮೊದಲ ಹಂತದಲ್ಲಿ 18-20 ಮುಖಂಡರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ

ಮೊದಲ ಹಂತದಲ್ಲಿ 18-20 ಮುಖಂಡರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ

ಕೆಲವೊಂದು ಮೂಲಗಳ ಪ್ರಕಾರ ಮೊದಲ ಹಂತದಲ್ಲಿ 18-20 ಮುಖಂಡರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಇವರೆಲ್ಲರ ಪ್ರಮಾಣವಚನ ಸ್ವೀಕಾರ ಮುಗಿದ ನಂತರ, ಮುಂದಿನ ಬೆಳವಣಿಗೆಗಳನ್ನು ಆಧರಿಸಿ, ದೆಹಲಿ ವರಿಷ್ಠರು ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಲೋಕಸಭೆಯ ಹಾಲೀ ಮಾನ್ಸೂನ್ ಅಧಿವೇಶನ

ಲೋಕಸಭೆಯ ಹಾಲೀ ಮಾನ್ಸೂನ್ ಅಧಿವೇಶನ

ಲೋಕಸಭೆಯ ಹಾಲೀ ಮಾನ್ಸೂನ್ ಅಧಿವೇಶನ ಆಗಸ್ಟ್ ಏಳರವರೆಗೆ ನಡೆಯುವುದರಿಂದ, ಇದಾದ ನಂತರವೇ ಅಮಿತ್ ಶಾ, ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಅಂತಿಮ ಷರಾ ಒತ್ತುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸಂಸತ್ತಿನಲ್ಲಿ ಹಾಜರಾತಿ ಇರಲೇಬೇಕೆಂದು ಪ್ರಧಾನಿ ಮೋದಿ ಸೂಚನೆ ನೀಡಿರುವುದರಿಂದ, ಅಮಿತ್ ಶಾ, ಅದಕ್ಕೆ ಮೊದಲು ಆದ್ಯತೆ ನೀಡುತ್ತಿದ್ದಾರೆಂದು ವರದಿಯಾಗಿದೆ.

ವಿಶ್ವಾಸಮತ ಗೆದ್ದದ್ದು, ಸಂಪುಟ ವಿಸ್ತರಣೆ

ವಿಶ್ವಾಸಮತ ಗೆದ್ದದ್ದು, ಸಂಪುಟ ವಿಸ್ತರಣೆ

"ವಿಶ್ವಾಸಮತ ಗೆದ್ದದ್ದು, ಸಂಪುಟ ವಿಸ್ತರಣೆ, ಬರ ಪರಿಹಾರದ ಬಗ್ಗೆ ಸವಿಸ್ತಾರವಾಗಿ ಮಾತುಕತೆ ನಡೆಸಲು, ವರಿಷ್ಠರ ಬಳಿ ಆಗಸ್ಟ್ ಐದು ಮತ್ತು ಆರಕ್ಕೆ ದೆಹಲಿಗೆ ಹೋಗಲಿದ್ದೇನೆ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಾಗಾಗಿ, ಅದಕ್ಕೂ ಮೊದಲು, ಹೊಸ ಸಂಪುಟ ರಚನೆಯಾಗುವ ಸಾಧ್ಯತೆಗಳು ಕಮ್ಮಿ.

ಯಡಿಯೂರಪ್ಪ, ವರಿಷ್ಠರ ಬಳಿ ಮಾತುಕತೆ

ಯಡಿಯೂರಪ್ಪ, ವರಿಷ್ಠರ ಬಳಿ ಮಾತುಕತೆ

ಸ್ಪೀಕರ್ ಎಲ್ಲಾ ಹದಿನೇಳು ಶಾಸಕರನ್ನು ಅನರ್ಹಗೊಳಿಸಿದ ನಂತರ, ಇವರ ಮುಂದಿನ ಕಾನೂನು ಹೋರಾಟ, ಮುಂಬರುವ ಅವರ ಪ್ರತಿನಿಧಿಸುವ ಕ್ಷೇತ್ರಗಳ ಉಪಚುನಾವಣೆ, ಅಭ್ಯರ್ಥಿಗಳ ಆಯ್ಕೆಯ ಬಗ್ಗೆಯೂ, ಯಡಿಯೂರಪ್ಪ, ವರಿಷ್ಠರ ಬಳಿ ಮಾತುಕತೆ ನಡೆಸುವ ಸಾಧ್ಯತೆಯಿಲ್ಲದಿಲ್ಲ.

English summary
Karnataka New Cabinet: BJP National President Amit Shah May Take Call On This after LS Monsoon Session i.e. After August 6th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X