ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸಲ್ಮಾನರ ಮದುವೆಗೆ ಶಾದಿ ಭಾಗ್ಯ; ಬಿಜೆಪಿ ಕಿಡಿ

By Srinath
|
Google Oneindia Kannada News

ಬೆಂಗಳೂರು, ಅ. 29: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮುಸ್ಲಿಂ ಹೆಣ್ಣುಮಕ್ಕಳಿಗೆ ಭಾಗ್ಯದ ಬಾಗಿಲು ತೆರೆದಿದೆ. ಈಗಾಗಲೇ ಅನೇಕ ಭಾಗ್ಯಗಳನ್ನು ದಯಪಾಲಿಸಿರುವ ಹಾಲಿ ಸರಕಾರ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಲ್ಪಸಂಖ್ಯಾತ ಮುಸ್ಲಿಂ ಮತಗಳತ್ತ ದೃಷ್ಟಿ ನೆಟ್ಟಿದ್ದು, ವಿದಾಯಿ Bidayee ಎಂಬ ವಿನೂತನ ಯೋಜನೆಯನ್ನು ತಕ್ಷಣದಿಂದಲೇ ಜಾರಿಗೆ ತಂದಿದೆ.

Bidayee ಬದಾಯಿ: ಅಂದಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಈ ಹೊಸ ಯೋಜನೆಯನ್ನು ಘೋಷಿಸಿದ್ದರು. ಅದರಂತೆ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಜೀವಮಾನದಲ್ಲಿ ಒಮ್ಮೆ ಮಾತ್ರವೇ ಈ ಸೌಭಾಗ್ಯ: ಮುಸ್ಲಿಂ ಸಮುದಾಯದ ಬಡ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಹೆಣ್ಣು ಮಕ್ಕಳ ವಿವಾಹ ಮಾಡುವುದು ಕಷ್ಟಕರವಾಗಿದೆ. ಮುಸ್ಲಿಂ ಸಮುದಾಯದ ಬಡ ಹೆಣ್ಣುಮಕ್ಕಳಷ್ಟೇ ಅಲ್ಲದೆ ಈ ಸಮುದಾಯದ ವಿಧವೆಯರು ಮತ್ತು ವಿಚ್ಛೇದಿತರ ಮರು ಮದುವೆಗೂ 50 ಸಾವಿರ ರೂ. ನೆರವು ದೊರೆಯಲಿದೆ. ಆದರೆ ಜೀವಮಾನದಲ್ಲಿ ಒಮ್ಮೆ ಮಾತ್ರವೇ ಈ ಸೌಭಾಗ್ಯ.

ಮುಸ್ಲಿಮರಿಗೆ ಮಾತ್ರ:
ಗಮನಿಸಿ, ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಜಾರಿಗೊಳಿಸುತ್ತಿರುವ ವಿದಾಯ್‌ ಯೋಜನೆ ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರ. ಕ್ರಿಶ್ಚಿಯನ್‌, ಜೈನ ಸೇರಿದಂತೆ ಅಲ್ಪಸಂಖ್ಯಾತರ ವರ್ಗಕ್ಕೆ ಬರುವ ಇತರೆ ಸಮುದಾಯಗಳಿಗಿಲ್ಲ.

ಮದುವೆ ಪ್ರೋತ್ಸಾಹ ಧನ ಎಲ್ಲರಿಗೂ ದೊರೆಯಲಿ

ಮದುವೆ ಪ್ರೋತ್ಸಾಹ ಧನ ಎಲ್ಲರಿಗೂ ದೊರೆಯಲಿ

ವಿವಾಹ ಪ್ರೋತ್ಸಾಹ ಹಣವನ್ನು ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ವರ್ಗದ ಬಡ ಮಹಿಳೆಯರಿಗೂ ನೀಡಬೇಕು ಎಂದು ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿಸಿ ಮೋಹನ್ ಒತ್ತಾಯಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜ್ಯ ಸರ್ಕಾರ ಇದನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ಮುಸ್ಲಿಂ ಸಮುದಾಯದಲ್ಲಿ ಮಾತ್ರ ಹಿಂದುಳಿದ ವರ್ಗದ ಹೆಣ್ಣುಮಕ್ಕಳಿಲ್ಲ. ಕ್ರಿಶ್ಚಿಯನ್ನರು, ಜೈನರು, ಬೌದ್ಧರು ಸೇರಿದಂತೆ ವಿವಿಧ ವರ್ಗಗಳಿಗೆ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.

ಬಡ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ನೆರವು

ಬಡ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ನೆರವು

ಮುಸ್ಲಿಂ ಸಮುದಾಯದಲ್ಲಿನ ಬಡ ಹೆಣ್ಣುಮಕ್ಕಳ ಮದುವೆಗೆ 50 ಸಾವಿರ ರೂ. ನೆರವು ನೀಡುವುದು ಈ ಯೋಜನೆಯ ಉದ್ದೇಶ, ಮದುವೆಯ ಖರ್ಚಿಗೆ 15 ಸಾವಿರ ರೂ. ನಗದು ಹಾಗೂ 35 ಸಾವಿರ ರೂ. ಮೌಲ್ಯದ ಜೀವನಾವಶ್ಯಕ ಸಾಮಗ್ರಿಗಳಾದ ಅಡುಗೆ ಪಾತ್ರೆ, ಮಂಚ, ಹಾಸಿಗೆ, ಕಪಾಟು ಮತ್ತಿತರ ವಸ್ತುಗಳನ್ನು ಈ ಯೋಜನೆಯಡಿ ಖರೀದಿಸಬಹುದಾಗಿದೆ. ಅಥವಾ 50 ಸಾವಿರ ರೂ. ಪೂರ್ತಿಯಾಗಿ ನಗದು ರೂಪದಲ್ಲೇ ಪಡೆಯಬಹುದು.

* ಕಂಡೀಷನ್ಸ್ ಅಪ್ಲೈ

* ಕಂಡೀಷನ್ಸ್ ಅಪ್ಲೈ

ಈ ಯೋಜನೆಯ ಸೌಲಭ್ಯ ಪಡೆಯಲು ವಧುವಿಗೆ 18 ವರ್ಷ, ವರನಿಗೆ 21 ವರ್ಷ ತುಂಬಿರಬೇಕು. ಕುಟುಂಬದ ವಾರ್ಷಿಕ ಆದಾಯ 1.50 ಲಕ್ಷ ರೂ. ಮೀರಿರಬಾರದು. ಕನಿಷ್ಠ ಮೂರು ವರ್ಷಗಳಿಂದ ರಾಜ್ಯದಲ್ಲಿ ವಾಸಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ ಹೊಂದಿರಬೇಕು. ಮದುವೆ ನಿಶ್ಚಯವಾಗಿರುವ ಲಗ್ನ ಪತ್ರಿಕೆ ಮತ್ತಿತರ ದಾಖಲೆ ಒದಗಿಸಬೇಕು. ನೆರವಿಗಾಗಿ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ 1 ತಿಂಗಳು ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.

ವಕ್ಫ್ ಮಂಡಳಿ ವತಿಯಿಂದಲೇ ಪ್ರಮಾಣ ಪತ್ರ

ವಕ್ಫ್ ಮಂಡಳಿ ವತಿಯಿಂದಲೇ ಪ್ರಮಾಣ ಪತ್ರ

'ವಿದಾಯಿ' ಯೋಜನೆಯಡಿ ವಿವಾಹ ನೋಂದಣಿ ಹಾಗೂ ಪ್ರಮಾಣ ಪತ್ರ ಒದಗಿಸುವುದು ಕಡ್ಡಾಯವಾಗಿದ್ದು, ವಕ್ಫ್ ಮಂಡಳಿ ವತಿಯಿಂದಲೇ ಪ್ರಮಾಣ ಪತ್ರ ನೀಡುವ ವ್ಯವಸ್ಥೆಯನ್ನೂ ಮಾಡಲು ನಿರ್ಧರಿಸಲಾಗಿದೆ. ವಿಚ್ಛೇದಿತರಾಗಿದ್ದರೆ ವಿಚ್ಛೇದನ ಪಡೆದಿರುವುದಕ್ಕೆ ದೃಢೀಕೃತ ದಾಖಲೆ, ವಿಧ‌ವೆಯಾಗಿದ್ದಲ್ಲಿ ಗಂಡನ ಮರಣ ಪ್ರಮಾಣ ಪತ್ರ ಸಲ್ಲಿಸಬೇಕು.

1 ಸಾವಿರ ಮಂದಿಗೆ ನೆರವು 5 ಕೋಟಿ ರೂ.

1 ಸಾವಿರ ಮಂದಿಗೆ ನೆರವು 5 ಕೋಟಿ ರೂ.

'ವಿದಾಯಿ‌' ಯೋಜನೆ ಕುರಿತು ಸೋಮವಾರ ಮಾಹಿತಿ ನೀಡಿದ ವಕ್ಫ್ ಸಚಿವ ಖಮರುಲ್‌ ಇಸ್ಲಾಂ, ಮುಸ್ಲಿಂ ಸಮುದಾಯದ ಬಡ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿದ್ದು, ಹೆಣ್ಣು ಮಕ್ಕಳ ವಿವಾಹ ಮಾಡುವುದು ಕಷ್ಟಕರವಾಗಿದೆ. ರಾಜ್ಯ ಸರ್ಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಜೆಟ್‌ ನಲ್ಲಿ ಮೀಸಲಿಟ್ಟ ಬಾಬತ್ತಿನಿಂದಲೇ 5 ಕೋಟಿ ರೂ. ತೆಗೆದಿರಿಸಲಾಗಿದ್ದು, ಈ ವರ್ಷ 1 ಸಾವಿರ ಮಂದಿಗೆ ನೆರವು ನೀಡಲು ನಿರ್ಧರಿಸಲಾಗಿದೆ. ಪ್ರತಿ ಜಿಲ್ಲೆಗೂ ಜನಸಂಖ್ಯೆಗೆ ಅನುಗುಣವಾಗಿ ಕೋಟಾ ನಿಗದಿಪಡಿಸಲಾಗಿದೆ ಎಂದು ಹೇಳಿದರು.

30 ಜಿಲ್ಲೆಗಳಲ್ಲಿ 1,000 ಫಲಾನುಭವಿಗಳು:

30 ಜಿಲ್ಲೆಗಳಲ್ಲಿ 1,000 ಫಲಾನುಭವಿಗಳು:

ಜಿಲ್ಲಾ ಅಲ್ಪಂಖ್ಯಾತರ ಅಧಿಕಾರಿಗಳ ಕಚೇರಿಯಲ್ಲಿ ನಿಗದಿತ ಅರ್ಜಿ ನಮೂನೆ ದೊರೆಯಲಿದ್ದು, ಪ್ರಾಥಮಿಕ ವಿವರ ನೀಡಿ ಪಡೆಯಬಹುದು. ನೆರವು ಪಡೆಯುವ ಕುಟುಂಬಗಳ ಬಗ್ಗೆ ಅಧಿಕಾರಿಯೊಬ್ಬರು ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಲಿದ್ದಾರೆ. ಪ್ರತಿ ಜಿಲ್ಲೆಯಲ್ಲಿರುವ ಮುಸ್ಲಿಂ ಜನಸಂಖ್ಯೆ ಆಧಾರದ ಮೇಲೆ ಗುರಿ ನಿಗದಿಪಡಿಸಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರು ಆಯಾ ಜಿಲ್ಲೆಗೆ ಅನುದಾನ ಬಿಡುಗಡೆ ಮಾಡುತ್ತಾರೆ.

English summary
Karnataka muslims to get Bidayee finacial help for marriages. The Karnataka government has launched a new scheme ‘Bidayee’ to help poor Muslim girls by providing financial assistance for their marriage, Minister for Minorities Welfare Qamar-ul-Islam said on Wednesday Oct 28 in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X