• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಸಾವಿಗೆ ಗಣ್ಯರ ಕಂಬನಿ

|

ಬೆಂಗಳೂರು, ಡಿಸೆಂಬರ್ 29 : ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ನಿಧನಕ್ಕೆ ಕರ್ನಾಟಕ ಕಂಬನಿ ಮಿಡಿದಿದೆ. ದಕ್ಷ ಅಧಿಕಾರಿಯ ಸಾವಿಗೆ ರಾಜ್ಯದ ವಿವಿಧ ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಎಚ್ 1 ಎನ್‌ 1ನಿಂದ ಬಳಲುತ್ತಿದ್ದ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ (47) ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. 1999ನೇ ಬ್ಯಾಚ್ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರು ಉಡುಪಿ ಜಿಲ್ಲೆಯವರು.

ಅಗಲಿದ ನಿಷ್ಠಾವಂತ ಅಧಿಕಾರಿಗೆ ಕಣ್ಣೀರಾದ ಕರ್ನಾಟಕಅಗಲಿದ ನಿಷ್ಠಾವಂತ ಅಧಿಕಾರಿಗೆ ಕಣ್ಣೀರಾದ ಕರ್ನಾಟಕ

ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರ ಮಧುಕರ ಶೆಟ್ಟಿ ಅವರು ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದರು. ವೀರಪ್ಪನ್ ಎನ್‌ಕೌಂಟರ್ ಮಾಡಿದ ಟಾಸ್ಕ್ ಪೋರ್ಸ್, ಎಎನ್‌ಎಫ್ ಎಸ್‌ಪಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ವಿಧಿವಶಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ವಿಧಿವಶ

ಬೆಂಗಳೂರು ಟ್ರಾಫಿಕ್ ವಿಭಾಗದ ಆಯುಕ್ತರಾಗಿಯೂ ಕೆಲಸ ಮಾಡಿದ್ದರು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದಾಗ ಅವರ ಜೊತೆ ಕೆಲಸ ಮಾಡಿದ್ದರು. ಬಿಜೆಪಿ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡು ಪುತ್ರನನ್ನು ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದರು.....

ದಿಟ್ಟ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ನಿಧನಕ್ಕೆ ಕಂಬನಿ ಮಿಡಿದ HDKದಿಟ್ಟ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ನಿಧನಕ್ಕೆ ಕಂಬನಿ ಮಿಡಿದ HDK

ಮುಖ್ಯಮಂತ್ರಿಗಳ ಸಂತಾಪ

ಐಪಿಎಸ್ ಅಧಿಕಾರಿ ವಿ.ಮಧುಕರ್ ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಅಧಿಕಾರಿಯಾಗಿದ್ದ ಅವರು ನೇರ ನಡೆನುಡಿಗಳಿಂದ ಜನಪ್ರಿಯರಾಗಿದ್ದರು. ಅವರ ಅಕಾಲಿಕ ನಿಧನ ತೀವ್ರ ಆಘಾತ ಉಂಟು ಮಾಡಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಈ ಆಘಾತ ಸಹಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

ಹೆಚ್ಚು ಪ್ರೀತಿಪಾತ್ರರಾಗಿದ್ದರು

ಯುವ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಸಾವಿನಿಂದ ಆಘಾತಕ್ಕಿಡಾಗಿದ್ದೇನೆ. ಹಿರಿಯ ಪತ್ರಕರ್ತ ಮತ್ತು ನನ್ನ ಹಿತೈಷಿಯಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರ ಮಗ ಎನ್ನುವ ಕಾರಣದಿಂದಾಗಿ ನನಗೆ ಹೆಚ್ಚು ಪ್ರೀತಿಪಾತ್ರರಾಗಿದ್ದರು. ಅವರ ಕುಟುಂಬ ವರ್ಗದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.

ಭ್ರಷ್ಟರಿಗೆ ಸಿಂಹ ಸ್ವಪ್ನರಂತಿದ್ದರು

ಐಪಿಎಸ್‌ ಅಧಿಕಾರಿ, ಕನ್ನಡಿಗರೇ ಆದ ಮಧುಕರ್‌ ಶೆಟ್ಟಿ ಅವರ ಅಕಾಲಿಕ ಮರಣ ನೋವುಂಟು ಮಾಡಿದೆ. ಭ್ರಷ್ಟರಿಗೆ ಸಿಂಹ ಸ್ವಪ್ನರಂತಿದ್ದ ಇವರು, ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಮತ್ತು ಆ್ಯಂಟಿ ನಕ್ಸಲ್ ಸ್ಕ್ವಾಡ್ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದಾರೆ. ಇವರ ಅಗಲಿಕೆ‌ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ.

ದಕ್ಷ ಅಧಿಕಾರಿ

ದಕ್ಷ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ನಿಧನ ಸುದ್ದಿ ಅತೀವ ನೋವು ತಂದಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಮಧುಕರ್ ಶೆಟ್ಟಿಯವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ, ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಬರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಕರ್ನಾಟಕದ ಸಿಂಘಂ

ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರು ಕರ್ನಾಟಕ ರಿಯಲ್ ಸಿಂಘಂ

ಅವರ ಸೇವೆ ಅಮೂಲ್ಯವಾಗಿತ್ತು

ನಮಗೆಲ್ಲಾ ಬೇಕಾಗಿದ್ದ ಮಧುಕರ ಶೆಟ್ಟಿ ಉಳಿಯಲಿಲ್ಲ ಎಂಬ ಸುದ್ಧಿ ಕೇಳಿ ಮನಸ್ಸು ಅಸ್ವಸ್ಥಗೊಂಡಿದೆ. ನಮ್ಮ ರಾಜ್ಯಕ್ಕೆ ಅವರು ಅತ್ಯಗತ್ಯವಾಗಿ ಬೇಕಾಗಿದ್ದರು. ಅವರ ಸೇವೆ ಅಮೂಲ್ಯವಾಗಿತ್ತು. ಅವರು ಅತ್ಯಗತ್ಯವಾಗಿ ಉಳಿಯಬೇಕಿತ್ತು.

ಅತೀವ ದುಃಖವಾಗಿದೆ

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿಯವರು ತೀವ್ರ ಅನಾರೋಗ್ಯದಿಂದ ನಿಧನರಾದ ಸುದ್ದಿ‌ ಕೇಳಿ ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.

ಅವರ ಸೇವೆಯನ್ನು ಸದಾ ಸ್ಮರಿಸಬೇಕು

ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಸೇವೆಯನ್ನು ಸ್ಮರಿಸಬೇಕು ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ

ಚಾಮರಾಜನಗರ ಪೊಲೀಸ್

ನಿಷ್ಠಾವಂತ, ಪ್ರಾಮಾಣಿಕ ಐಪಿಎಸ್ ಅಧಿಕಾರಿಯವರಾದ ಶ್ರಿ ಮಧುಕರ್ ಶೆಟ್ಟಿ ರವರ ಅಕಾಲಿಕ ನಿಧನಕ್ಕೆ ಚಾಮರಾಜನಗರ ಜಿಲ್ಲಾ ಪೂಲೀಸ್ ತೀವ್ರ ಸಂತಾಪವನ್ನು ಸೂಚಿಸುತ್ತದೆ.

ಸರ್ ನಿಮ್ಮ ಅಕಾಲಿಕ ಮರಣ ನಮಗೆ ನೋವುಂಟು ಮಾಡಿದೆ

ಅತ್ಯಂತ ಸಜ್ಜನ, ಶುದ್ಧ ಹಸ್ತ, ಕರ್ತವ್ಯವೇ ದೇವರೆಂದು ತಿಳಿದ ಮಹಾನ್ ಮಾನವತಾವಾದಿಯಾಗಿದ್ದ ನಮ್ಮೆಲ್ಲರ ನಲ್ಮೆಯ ಶ್ರೀ. ಮಧುಕರ ಶೆಟ್ಟಿ ಯವರ ಆತ್ಮಕ್ಕೆ ‌ಶಾಂತಿ ದೊರಕಲಿ.

ಸರ್ ನಿಮ್ಮ ಅಕಾಲಿಕ ಮರಣ ನಮಗೆ ನೋವುಂಟು ಮಾಡಿದೆ. ಇವರ ಅಗಲಿಕೆ‌ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲಿ.

English summary
Karnataka leaders condoled the death of 1999 batch IPS officer Madhukar Shetty who dies in Hyderabad hospital on December 28, 2018. Madhukar Shetty suffering from H1N1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X