ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಪರಿಷತ್ ಚುನಾವಣೆ 2022: 4 ಸ್ಥಾನಗಳಿಗೆ ಮತದಾನ

|
Google Oneindia Kannada News

ಬೆಂಗಳೂರು, ಜೂನ್ 13: ಕರ್ನಾಟಕದ ವಿಧಾನಪರಿಷತ್ತಿನ 4 ಸ್ಥಾನಗಳಿಗೆ ಜೂನ್ 13ರಂದು ಬೆಳಗ್ಗೆ ಮತದಾನ ನಡೆಯಲಿದೆ. ವಾಯುವ್ಯ ಪದವೀಧರರ, ವಾಯುವ್ಯ ಶಿಕ್ಷಕರ, ದಕ್ಷಿಣ ಪದವೀಧರರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 8 ರಿಂದ ಸಂಜೆ 5 ರ ತನಕ ಮತದಾನ ನಿಗದಿಯಾಗಿದೆ.

ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಕಾಂಗ್ರೆಸ್‍ನ ಪ್ರಕಾಶ್ ಹುಕ್ಕೇರಿ ಮುಂತಾದವರ ಭವಿಷ್ಯ ನಿರ್ಧಾರವಾಗಲಿದೆ. ಹೊರಟ್ಟಿ ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಶಾಂತಿಯುತ ಹಾಗೂ ಮುಕ್ತ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು,ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ, ಈಗಾಗಲೇ ಮತಗಟ್ಟೆ ಸಾಮಾಗ್ರಿಗಳೊಂದಿಗೆ ಕರ್ತವ್ಯಕ್ಕೆ ತೆರಳಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Karnataka MLC Elections to four seats, BJP eyes Manjority over Upper House

ವಾಯುವ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕಾ, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಂ.ವಿ ರವಿಶಂಕರ್, ಕಾಂಗ್ರೆಸ್‍ನ ಜಿ.ಎಂ.ಮಧು, ಜೆಡಿಎಸ್‍ನ ಎಚ್.ಕೆ.ರಾಮು, ಕನ್ನಡ ಚಳವಳಿ ಪಕ್ಷದಿಂದ ವಾಟಾಳ್ ನಾಗರಾಜ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಬಸವರಾಜ ಹೊರಟ್ಟಿ, ಜೆಡಿಎಸ್‍ನಿಂದ ಶ್ರೀಶೈಲ ಘಡದಿಮ್ಮಿ ಹಾಗೂ ಕಾಂಗ್ರೆಸ್ ಬಸವರಾಜ ಗುರಿಕಾರ ಅಖಾಡದಲ್ಲಿದ್ದರೆ, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ್‍ಶಹಾಪುರ, ಕಾಂಗ್ರೆಸ್‍ನಿಂದ ಪ್ರಕಾಶ್ ಹುಕ್ಕೇರಿ, ಜೆಡಿಎಸ್‍ನಿಂದ ಚಂದ್ರಶೇಖರ್ ಲೋಣಿ ಸ್ಪರ್ಧಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಜೂ.15ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. ನಾಲ್ಕು ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅಗತ್ಯ ಸಿದ್ದತೆ ಮಾಡಿಕೊಂಡಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಮದ್ಯ ನಿಷೇಧ ಮಾಡಲಾಗಿದೆ. ಅಲ್ಲದೆ, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಕೆಲ ಜಿಲ್ಲೆಗಳಲ್ಲಿ ಸಾಂದರ್ಭಿಕ ರಜೆ
ಚುನಾವಣೆ ನಡೆಯುವ ಜಿಲ್ಲೆಗಳಲ್ಲಿ ಜೂನ್ 13ರಂದು ವಿಶೇಷ ಸಾಂದರ್ಭಿಕ ರಜೆಯನ್ನು ಘೋಷಣೆ ಮಾಡಲಾಗಿದೆ. ಶಿಕ್ಷಕರು ಮತ್ತು ಪದವೀಧರರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ವಿಧಾನ ಪರಿಷತ್ ನ ಮತದಾನ ಕ್ಷೇತ್ರಗಳಲ್ಲಿನ ಸರಕಾರಿ, ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ, ಅನುದಾನ ರಹಿತ ವಿದ್ಯಾಸಂಸ್ಥೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕ್ ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಇನ್ನುಳಿದ ಕೈಗಾರಿಕ ಸಂಸ್ಥೆಗಲು ಹಾಗೂ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಎಲ್ಲಾ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕಾಯಂ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುವ ಪದವೀಧರು ಮತ್ತು ಶಿಕ್ಷಕರಿಗೆ ಮತದಾನ ಮಾಡಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾಂದರ್ಭಿಕ ರಜೆಯನ್ನು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವಿಧಾನಪರಿಷತ್ ಚುನಾವಣೆ 2022 ಸಂಕ್ಷಿಪ್ತ ವಿವರ

  • ಜೂನ್ 13: ಮತದಾನ
  • ಮತದಾನ ಅವಧಿ: ಬೆಳಗ್ಗೆ 8 ರಿಂದ ಸಂಜೆ 5
  • ಮತ ಎಣಿಕೆ, ಫಲಿತಾಂಶ: ಜೂನ್ 15

ವಾಯುವ್ಯ ಶಿಕ್ಷಕರ ಕ್ಷೇತ್ರ:

  • ಮತಗಟ್ಟೆ ಸಂಖ್ಯೆ: 150, ಬೆಳಗಾವಿಯಲ್ಲಿ ಅತಿ ಹೆಚ್ಚು 95 ಮತಗಟ್ಟೆಗಳಿವೆ.
  • ಮತ ಕ್ಷೇತ್ರದಲ್ಲಿನ ಜಿಲ್ಲೆಗಳು: ಬೆಳಗಾವಿ, ಬಾಗಲಕೋಟೆ, ವಿಜಯಪುರ

ವಾಯುವ್ಯ ಪದವೀಧರರ ಕ್ಷೇತ್ರ:

  • ಮತಗಟ್ಟೆ ಸಂಖ್ಯೆ: 150
  • ಮತದಾರರ ಸಂಖ್ಯೆ: 95,598(71, 040 ಪುರುಷರು, 28,554 ಮಹಿಳೆಯರು, 4 ಇತರೆ)

ವಾಯುವ್ಯ ಶಿಕ್ಷಕರ ಕ್ಷೇತ್ರ:

  • ಮತಗಟ್ಟೆ ಸಂಖ್ಯೆ: 150
  • ಮತದಾರರ ಸಂಖ್ಯೆ: 25, 388 (17, 238 ಪುರುಷರು ಹಾಗೂ 8,150 ಮಹಿಳೆಯರು)

ಪಶ್ಚಿಮ ಶಿಕ್ಷಕರ ಕ್ಷೇತ್ರ:

  • ಮತಗಟ್ಟೆ ಸಂಖ್ಯೆ: 176
  • ಮತ ಕ್ಷೇತ್ರದಲ್ಲಿನ ಜಿಲ್ಲೆಗಳು: ಧಾರವಾಡ, ಉತ್ತರ ಕನ್ನಡ, ಹಾವೇರಿ ಹಾಗೂ ಗದಗ.
  • ಮತದಾರರ ಸಂಖ್ಯೆ: 17, 973 (10, 983 ಪುರುಷರು ಹಾಗೂ 6,990 ಮಹಿಳೆಯರು)

ದಕ್ಷಿಣ ಪದವೀಧರ ಕ್ಷೇತ್ರ:

  • ಮತಗಟ್ಟೆ ಸಂಖ್ಯೆ: 64
  • ಮತ ಕ್ಷೇತ್ರದಲ್ಲಿನ ಜಿಲ್ಲೆಗಳು: ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ
  • ಮತದಾರರ ಸಂಖ್ಯೆ: 1,41, 963 (82,512 ಪುರುಷರು, 59, 427 ಮಹಿಳೆಯರು ಹಾಗೂ 24 ಇತರೆ)
English summary
Karnataka MLC Elections to four seats to be held today(June 13), BJP eyes Manjority over Upper House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X