ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಪದವೀಧರರ ಕ್ಷೇತ್ರ: ಕಾಂಗ್ರೆಸ್‌ನ ಮಧು ಮಾದೇಗೌಡಗೆ 12,205 ಮತಗಳ ಭಾರಿ ಜಯ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 16: ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ. ಮಾದೇಗೌಡ ಅವರು ಪ್ರತಿಸ್ಪರ್ಧಿ ಬಿಜೆಪಿತ ಮೈ.ವಿ ರವಿಶಂಕರ್‌ ವಿರುದ್ಧ 12,205 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದರು ಮೇಲ್ಮನೆ ಪ್ರವೇಶಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಖಾಲಿಯಿದ್ದ 4 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ದಕ್ಷಿಣ ಪದವೀಧರರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯುವ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಗೆ ಜೂನ್‌ 13 ರಂದು ಚುನಾವಣೆ ನಡೆದಿತ್ತು. ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 45,275 ಮತಗಳನ್ನು ಪಡೆದಿದ್ದರು. ಆದರೆ ನಿಗದಿತ ಕೋಟಾ ತಲುಪಲು (46083) 808 ಮತಗಳ ಕೊರತೆ ಎದುರಾಯಿತು.

ನೂತನ 7 ಎಂಎಲ್‌ಸಿಗಳಿಂದ ಪ್ರಮಾಣ ವಚನ ಸ್ವೀಕಾರನೂತನ 7 ಎಂಎಲ್‌ಸಿಗಳಿಂದ ಪ್ರಮಾಣ ವಚನ ಸ್ವೀಕಾರ

ಆಗ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಸ್ಪರ್ಧಿ ಮೈ.ವಿ. ರವಿಶಂಕರ್ ಅವರ ಮತಪತ್ರದಲ್ಲಿ ಅಗತ್ಯವಿರುವ 808 ಮತಗಳು ಬರುವವರೆಗೆ ಮಾತ್ರವೇ ಎಣಿಕೆ ಪ್ರಕ್ರಿಯೆಯನ್ನು ಮುಂದುವರಿಸಿ ಮಧುರನ್ನು ವಿಜೇತ ಎಂದು ಘೋಷಣೆ ಮಾಡಲಾಯಿತು.

ಬಿಜೆಪಿಯ ಮೈ.ವಿ.‌ರವಿಶಂಕರ್ 33,878 ಮತಗಳನ್ನು ಗಳಿಸಿ 2ನೇ ಸ್ಥಾನ ಪಡೆದರ ಬುಧವಾರ ಬೆಳಿಗ್ಗೆ 8ಕ್ಕೆ ಆರಂಭವಾಗಿದ್ದ ಮತ ಎಣಿಕೆ ಪ್ರಕ್ರಿಯೆಯು ಗುರುವಾರ ಮಧ್ಯಾಹ್ನ 1ರ ಸುಮಾರಿಗೆ ಮುಕ್ತಾಯವಾಯಿತು. ಫಲಿತಾಂಶಕ್ಕಾಗಿ ನಿರಂತರ 29 ಗಂಟೆಗಳವರೆಗೆ ಪ್ರಕ್ರಿಯೆ ನಡೆಯಿತು. ಈ ಕ್ಷೇತ್ರದಲ್ಲಿ ಇಷ್ಟು ಸುದೀರ್ಘ ಸಮಯದವರೆಗೆ ಮತ ಎಣಿಕೆ ಕಾರ್ಯ ನಡೆದದ್ದು ಇದೇ ಮೊದಲು.

ವಿಧಾನ ಪರಿಷತ್ ಫೈಟ್; ಪ್ರಕಾಶ್ ಹುಕ್ಕೇರಿ ಜಯವಿಧಾನ ಪರಿಷತ್ ಫೈಟ್; ಪ್ರಕಾಶ್ ಹುಕ್ಕೇರಿ ಜಯ

 ತಂದೆ ನೆನೆದ ಮಧು

ತಂದೆ ನೆನೆದ ಮಧು

ಗೆಲುವಿನ ಬಳಿಕ ಮಾತನಾಡಿದ ಮಧು ಜಿ ಮಾದೇಗೌಡ, ಈ ಸಂದರ್ಭದಲ್ಲಿ ನಮ್ಮ ತಂದೆ ಇರಬೇಕಿತ್ತು. ಅವರಿಲ್ಲದಿರುವುದು ಶೂನ್ಯದ ರೀತಿಯಲ್ಲಿ ಕಾಡುತ್ತಿದೆ ಎಂದು ಭಾವುಕರಾದರು. ಜೆಡಿಎಸ್ ಸೋಲಿನ ಬಗ್ಗೆ ಮಾತನಾಡಿ, ಕೆಟಿ ಶ್ರೀಕಂಠೇಗೌಡರು ಸೋಲುವ ಭಯದಲ್ಲಿ ಚುನಾವಣೆಗೆ ನಿಲ್ಲಲಿಲ್ಲ. ಅಲ್ಲದೆ ಅವರು ತಮ್ಮ ಅಭ್ಯರ್ಥಿಗಳನ್ನು ಸೋಲಿಸುವಲ್ಲಿ ಎಕ್ಸ್‌ಪರ್ಟ್‌ ಆಗಿದ್ದಾರೆ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ಸುಮಲತಾರನ್ನು ಗೆಲ್ಲಿಸಿದ್ದರು. ಬಿಜೆಪಿ ಸರಕಾರದ ದುರಾಡಳಿತವೇ ಅವರನ್ನು ಇಲ್ಲಿ ಸೋಲುವಂತೆ ಮಾಡಿದೆ ಎಂದರು.

 ರವಿಶಂಕರ್‌ಗೆ ಸೋಲು

ರವಿಶಂಕರ್‌ಗೆ ಸೋಲು

ಕಳೆದ ಬಾರಿ ಕೇವಲ 183 ಅಲ್ಪ‌ಮತಗಳ ಅಂತರದಿಂದ ಜೆಡಿಎಸ್ ಎದುರು ಪರಾಭವಗೊಂಡಿದ್ದರು. ಈ ಬಾರಿ 12 ಸಾವಿರಕ್ಕೂ ಅಧಿಕ ಮತಗಳಿಂದ ಕಾಂಗ್ರೆಸ್ ಎದುರು ಹೀನಾಯ ಸೋಲು ಅನುಭವಿಸಿದ್ದಾರೆ.
ಪ್ರಾರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ.ಮಾದೇಗೌಡ, ಎರಡನೇ ಪ್ರಾಶಸ್ತ್ಯ ಮತದಲ್ಲೂ ತಮ್ಮ ಮತಗಳ ಸಂಖ್ಯೆ ಯನ್ನು ವೃದ್ಧಿಸಿಕೊಂಡು ವಿಜಯಿಯಾದರು.

 ತಲಾ 2 ಹಂಚಿಕೊಂಡ ಕೈ-ಕಮಲ

ತಲಾ 2 ಹಂಚಿಕೊಂಡ ಕೈ-ಕಮಲ

ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿರೂಢ ಬಿಜೆಪಿ 2 ಸ್ಥಾನಗಳನ್ನು ಪಡೆದುಕೊಂಡಿದೆ. ಮತ್ತೆರಡು ಕ್ಷೇತ್ರಗಳು ವಿಪಕ್ಷ ಕಾಂಗ್ರೆಸ್‌ ಜಯ ಸಾಧಿಸಿದೆ. ಜೆಡಿಎಸ್‌ ತನ್ನ 2 ಸ್ಥಾನಗಳನ್ನು ಕಳೆದುಕೊಂಡಿದೆ. ಕಳೆದ ಬಾರಿ ಪಶ್ಚಿಮ ಕ್ಷೇತ್ರದಲ್ಲಿ ಬಸವರಾಜ ಹೊರಟ್ಟಿ ಮತ್ತು ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಕೆ ಟಿ ಶ್ರೀಕಂಠೇಗೌಡ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಈ ಬಾರಿ ಹೊರಟ್ಟಿ ಬಿಜೆಪಿಯಲ್ಲಿ ಗೆದ್ದರೆ, ಮಧು ಮಾದೇಗೌಡ ಕಾಂಗ್ರೆಸ್‌ನಲ್ಲಿ ಜಯ ಸಾಧಿಸಿದ್ದಾರೆ. ಬಿಜೆಪಿ ವಾಯುವ್ಯ ಶಿಕ್ಷಕರ ಕ್ಷೇತ್ರವನ್ನು ಕಳೆದುಕೊಂಡಿದೆ. ಕಳೆದ 2 ಬಾರಿ ಇಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ ವಾಯುವ್ಯ ಪದವೀಧರರ ಕ್ಷೇತ್ರದಲ್ಲಿ ಮತ್ತೊಮ್ಮೆ ಹಣಮಂತ ನಿರಾಣಿ ಜಯ ಸಾಧಿಸಿದ್ದಾರೆ.

 ಬಿಜೆಪಿಯಿಂದ ಗೆದ್ದ ಹೊರಟ್ಟಿ

ಬಿಜೆಪಿಯಿಂದ ಗೆದ್ದ ಹೊರಟ್ಟಿ

20 ವರ್ಷಗಳ ಜೆಡಿಎಸ್‌ ಪಕ್ಷದ ಒಡೆನಾಟವನ್ನು ಕಡೆದುಕೊಂಡು ಬಿಜೆಪಿ ಸೇರಿದ್ದ ಬಸವರಾಜ ಹೊರಟ್ಟಿ ಸತತ 8ನೇ ಬಾರಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಗೆಲುವು ಸಾಧಿಸಿ ಮೇಲ್ಮನೆ ಪ್ರವೇಶಿಸಿದರು. ಬಸವರಾಜ ಹೊರಟ್ಟಿ 9266 ಮತಗಳನ್ನು ಪಡೆದು ಗೆಲುವು ಸಾಧಿಸಿದರು, ಒಟ್ಟು 15, 583 ಮತಗಳು ಚಲಾವಣೆಗೊಂಡಿದ್ದವು, ಅದರಲ್ಲಿ 1223 ಮತಗಳು ಅಸಿಂಧುವಾಗಿದ್ದವು. ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ 4597 ಮತಗಳನ್ನು ಪಡೆದು ಸೋಲು ಕಂಡರು.

(ಒನ್ಇಂಡಿಯಾ ಸುದ್ದಿ)

Recommended Video

Bangaloreನ 31 ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟಿವ್; ನಾಲ್ಕನೇ ಅಲೆ ಭೀತಿ | *Karnataka | OneIndia Kannada

English summary
Karnataka legistative council election results were announced on wednesday. Congress Candidate Madhu G Madegowda wins in south graduate constituency seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X