ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರಿಗೆ ಒಲಿದು ಬರಲಿದೆ ಲ್ಯಾಪ್‌ಟಾಪ್ ಭಾಗ್ಯ!

|
Google Oneindia Kannada News

ಬೆಂಗಳೂರು, ಜ.22 : ಕರ್ನಾಟಕದ ಶಾಸಕರಿಗೆ ಸದ್ಯ ಲ್ಯಾಪ್‌ಟಾಪ್ ಭಾಗ್ಯ ಒದಗಿ ಬಂದಿದೆ. ಹೌದು ಪ್ರತಿ ಶಾಸಕರಿಗೆ ಲ್ಯಾಲ್ ಟಾಪ್ ಖರೀದಿಸಲು ಸರ್ಕಾರ ಅನುದಾನ ನೀಡಲು ಮುಂದಾಗಿದೆ. ಈ ಕುರಿತು ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾಹಿತಿ ನೀಡಿದ್ದು, ಲ್ಯಾಪ್ ಟಾಪ್ ಖರೀದಿ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸರ್ಕಾರದ ವತಿಯಿಂದ ಪ್ರತಿ ಶಾಸಕರಿಗೆ ಲ್ಯಾಪ್ ಟಾಪ್ ಖರೀದಿಸಲು 60,000ರೂ ನೀಡಲಾಗುವುದು ಎಂದು ಹೇಳಿದರು. ಇದಕ್ಕಾಗಿ ಸುಮಾರು 1.34 ಕೋಟಿ ವೆಚ್ಚವಾಗಲಿದ್ದು, ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Kagodu Thimmappa

ಸರ್ಕಾರ ನೀಡಿದ ಹಣಕಾಸಿನ ನೆರವಿನಲ್ಲಿ ಶಾಸಕರು ತಮ್ಮಿಷ್ಟದ ಕಂಪನಿಯ ಲ್ಯಾಪ್ ಟಾಪ್ ಖರೀದಿಸಬಹುದು. ಲ್ಯಾಪ್ ಟಾಲ್ ಖರೀದಿಸಿದ ಶಾಸಕರು ಅದರ ಬಿಲ್ ಅನ್ನು ವಿಧಾನಸಭೆಯ ಮುಖ್ಯ ಕಾರ್ಯರ್ಶಿಅವರಿಗೆ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು. ಇಂದಿನ ತಂತ್ರಜ್ಞಾನದ ಯುಗದಲ್ಲಿ ಲ್ಯಾಪ್ ಟಾಪ್ ಶಾಸಕರಿಗೆ ಸಹಾಯಕವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.[ಶಾಸಕರಿಗೆ ಐಪ್ಯಾಡ್]

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕರಿಗೆ ಐಪಾಡ್ ನೀಡಲಾಗಿತ್ತು. ಆದರೆ, ಐಪಾಡ್ ಗಿಂತ ಲ್ಯಾಪ್ ಟಾಪ್ ಶಾಸಕರಿಗೆ ಹೆಚ್ಚು ನೆರವಾಗಲಿದೆ. ಶಾಸಕರು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು. ಸರ್ಕಾರದಿಂದ ಕೇವಲ ಒಂದು ಬಾರಿ ಮಾತ್ರ ಖರೀದಿಗೆ ಅನುದಾನ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಮಾರ್ಗಸೂಚಿ ಬಳಿಕ ಕ್ರಮ : ಶಾಸಕರ ವಿದೇಶ ಪ್ರವಾಸ ಸದ್ಯಕ್ಕೆ ನಿಂತಿದ್ದು, ಈ ಕುರಿತು ಸ್ಪಷ್ಟ ಮಾರ್ಗಸೂಚಿ ಸಿದ್ಧವಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಶಾಸಕರ ವಿದೇಶ ಪ್ರವಾಸ ಕುರಿತಂತೆ ಮಾರ್ಗಸೂಚಿ ಸಿದ್ಧಪಡಿಸಲು ವಿಧಾನಸಭೆ, ವಿಧಾನ ಪರಿಷತ್ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ರಚಿಸಲಾಗಿದೆ. ಪ್ರವಾಸದಿಂದ ಅರ್ಥಪೂರ್ಣ ಕೆಲಸವಾಗಬೇಕು ಎಂಬ ನಿಟ್ಟಿನಲ್ಲಿ ಮಾರ್ಗಸೂಚಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಶಾಸಕರ ಅಭಿಪ್ರಾಯ ಪಡೆದು ಸಮಿತಿ ಫೆಬ್ರವರಿ 20ರೊಳಗೆ ಸಮಿತಿ ವರದಿ ನೀಡಲಿದೆ ಎಂದರು.

English summary
Karnataka Assembly Speaker Kagodu Thimmappa said on Tuesday that, every sitting MLA would be given a one-time financial assistance of Rs 60,000 for buying a laptop of their choice. With as many as 224 MLAs, the State exchequer is likely to spend Rs 1.34 core for the purpose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X