ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು

|
Google Oneindia Kannada News

ಬೆಂಗಳೂರು, ನವೆಂಬರ್ 13 : ಕರ್ನಾಟಕ ಜನರು ಬಹುದಿನದಿಂದ ಕಾಯುತ್ತಿದ್ದ ತೀರ್ಪನ್ನು ಬುಧವಾರ ಸುಪ್ರೀಂಕೋರ್ಟ್ ನೀಡಿದೆ. 17 ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಆದೇಶವನ್ನು ಭಾಗಶಃ ಎತ್ತಿಹಿಡಿದ ಸುಪ್ರೀಂಕೋರ್ಟ್, ಶಾಸಕರು ಉಪ ಚುಣಾವಣಾ ಕಣಕ್ಕಿಳಿಯಲು ಅವಕಾಶ ನೀಡಿದೆ.

17 ಅನರ್ಹ ಶಾಸಕರ ಅರ್ಜಿ; ಸುಪ್ರೀಂ ತೀರ್ಪಿಗೆ ದಿನಾಂಕ ನಿಗದಿ17 ಅನರ್ಹ ಶಾಸಕರ ಅರ್ಜಿ; ಸುಪ್ರೀಂ ತೀರ್ಪಿಗೆ ದಿನಾಂಕ ನಿಗದಿ

ನ್ಯಾಯಮೂರ್ತಿ ಎನ್‌. ವಿ. ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಅನರ್ಹ ಶಾಸಕರು, ಕಾಂಗ್ರೆಸ್, ಜೆಡಿಎಸ್, ಸ್ಪೀಕರ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಬುಧವಾರ ಪ್ರಕರಣದ ತೀರ್ಪನ್ನು ನೀಡಿದೆ.

mlas

ಸ್ಪೀಕರ್ ಆದೇಶದ ಪ್ರಕಾರ 17 ಅನರ್ಹ ಶಾಸಕರು ಹದಿನೈದನೇ ವಿಧಾನಸಭೆ ಅವಧಿ ಮುಗಿಯುವ 2023ರ ತನಕ ಚುನಾವಣೆಗೆ ಸ್ಫರ್ಧೆ ಮಾಡುವಂತಿರಲಿಲ್ಲ. ಆದರೆ, ಈ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ಆತಂಕದಲ್ಲಿಯೇ ದೆಹಲಿ ವಿಮಾನ ಹತ್ತಿದ ಅನರ್ಹ ಶಾಸಕರುಆತಂಕದಲ್ಲಿಯೇ ದೆಹಲಿ ವಿಮಾನ ಹತ್ತಿದ ಅನರ್ಹ ಶಾಸಕರು

ಸುಪ್ರೀಂಕೋರ್ಟ್ ತೀರ್ಪು, ಕರ್ನಾಟಕದ ರಾಜಕೀಯ ಬೆಳವಣಿಗೆ, ಉಪ ಚುನಾವಣಾ ಚಿತ್ರಣ, ರಾಜಕೀಯ ನಾಯಕರ ಹೇಳಿಕೆ ಮುಂತಾದ ಸಮಗ್ರ ಮಾಹಿತಿ ಈ ಪುಟದಲ್ಲಿ ಓದುಗರಿಗೆ ಸಿಗಲಿದೆ.

Newest FirstOldest First
1:35 PM, 13 Nov

ಅನರ್ಹ ಶಾಸಕರು ನವೆಂಬರ್ 14ರ ಗುರುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ಬಿಜೆಪಿ ಸೇರಲಿದ್ದಾರೆ.
1:09 PM, 13 Nov

ದೆಹಲಿಯಲ್ಲಿರುವ ಅನರ್ಹ ಶಾಸಕರು ಬಿ. ಎಲ್ ಸಂತೋಷ್ ಮನೆಗೆ ಭೇಟಿ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರು ಸಹ ಜೊತೆಗಿದ್ದಾರೆ.
12:29 PM, 13 Nov

15 ಕ್ಷೇತ್ರದ ಉಪ ಚುನಾವಣೆ ಚಿತ್ರಣ ಬದಲಿಸಿದ ತೀರ್ಪು; 5 ಅಂಶಗಳು

ಕರ್ನಾಟಕ ಕಾಯುತ್ತಿದ್ದ ಬಹು ನಿರೀಕ್ಷಿತ ತೀರ್ಪು ಪ್ರಕಟವಾಗಿದೆ. ಕಾಂಗ್ರೆಸ್‌ನ 14, ಜೆಡಿಎಸ್‌ನ 3 ಶಾಸಕರು ಅಧಿಕೃತವಾಗಿ ಅನರ್ಹರಾಗಿದ್ದಾರೆ. ವಿಧಾನಸಭೆ ಸ್ಪೀಕರ್ ಆದೇಶ ಎತ್ತಿ ಹಿಡಿದಿರುವ ನ್ಯಾಯಾಲಯ ಗಾಯದ ಮೇಲೆ ಬರೆ ಎಳೆದಿಲ್ಲ, ಶಾಸಕರು ಚುನಾವಣಾ ಕಣಕ್ಕಿಳಿಯಲು ಸುಪ್ರೀಂಕೋರ್ಟ್ ಅವಕಾಶ ನೀಡಿದೆ.
12:02 PM, 13 Nov

ಅನರ್ಹ ಶಾಸಕರ ತೀರ್ಪು: ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಕರ್ನಾಟಕದ 17 ಶಾಸಕರ ಅನರ್ಹತೆಯ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಕಟಿಸಿದೆ.
11:55 AM, 13 Nov

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟ್ವೀಟ್
11:13 AM, 13 Nov

ಚುನಾವಣಾ ಆಯೋಗ ಈಗಾಗಲೇ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
11:12 AM, 13 Nov

ಉಪ ಚುನಾವಣೆ ಕಣಕ್ಕಿಳಿಯಲು ಅವಕಾಶ ನೀಡಬೇಕು ಎಂಬುದು ಅನರ್ಹಗೊಂಡ ಶಾಸಕರು ಪ್ರಮುಖ ಮನವಿಯಾಗಿತ್ತು. ಇದಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಗೆ ಅನರ್ಹಗೊಂಡ ಶಾಸಕರು ಕಣಕ್ಕಿಳಿಯಬಹುದು
Advertisement
11:05 AM, 13 Nov

ಚುನಾವಣಾ ಕಣಕ್ಕಿಳಿಯಲು ಅವಕಾಶ ನೀಡಿದ ಸುಪ್ರೀಂಕೋರ್ಟ್ ತಕ್ಷಣ ಸಚಿವರಾಗಲು ಒಪ್ಪಿಗೆ ನೀಡಿಲ್ಲ. ಚುನಾವಣೆಯಲ್ಲಿ ಗೆದ್ದ ಬಳಿಕ ಅವರು ಸಚಿವರಾಗಬಹುದು
11:05 AM, 13 Nov

ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದ ನ್ಯಾಯಾಲಯ, 2023ರ ತನಕ ಚುನಾವಣಾ ಕಣಕ್ಕಿಳಿಯದಂತೆ ನೀಡಿದ್ದ ಆದೇಶವನ್ನು ತಳ್ಳಿ ಹಾಕಿದೆ.
10:55 AM, 13 Nov

ಕರ್ನಾಟಕ ಜನರು ಕಾಯುತ್ತಿದ್ದ ಬಹುನಿರೀಕ್ಷಿತ ತೀರ್ಪನ್ನು ಬುಧವಾರ ಸುಪ್ರೀಂಕೋರ್ಟ್ ನೀಡಿದೆ. 17 ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ಆದೇಶವನ್ನು ಭಾಗಶಃ ಎತ್ತಿಹಿಡಿದ ಸುಪ್ರೀಂಕೋರ್ಟ್ ಶಾಸಕರು ಉಪ ಚುಣಾವಣಾ ಕಣಕ್ಕಿಳಿಯಲು ಅವಕಾಶವನ್ನು ನೀಡಿದೆ.
10:46 AM, 13 Nov

ಅನರ್ಹತೆಯ ಅವಧಿ ತೀರ್ಮಾನಿಸುವ ಹಕ್ಕು ವಿಧಾನಸಭೆ ಸ್ಪೀಕರ್‌ಗೆ ಇಲ್ಲ ಎಂದು ಹೇಳಿದ ನ್ಯಾಯಾಲಯ ಅನರ್ಹ ಶಾಸಕರು ಚುನಾವಣಾ ಕಣಕ್ಕಿಳಿಯಲು ಅವಕಾಶ ನೀಡಿದೆ
10:41 AM, 13 Nov

ಈ ಪ್ರಕರಣದ ವಿಚಾರಣೆ ಮೊದಲು ಹೈಕೋರ್ಟ್‌ನಲ್ಲಿ ನಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ
Advertisement
10:40 AM, 13 Nov

ಸಂಸದೀಯ ವ್ಯವಸ್ಥೆಯಲ್ಲಿ ನೈತಿಕತೆ ಮುಖ್ಯ. ಒಂದು ಪಕ್ಷ ಆಡಳಿತದಲ್ಲಿದ್ದಾಗ ಮತ್ತೊಂದು ವಿರೋಧ ಪಕ್ಷದ ಸ್ಥಾನದಲ್ಲಿ ಇರುತ್ತದೆ : ತೀರ್ಪಿನ ಪ್ರಾಥಮಿಕ ಪಕ್ಷ
10:39 AM, 13 Nov

ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿ ಎನ್‌. ವಿ. ರಮಣ
10:36 AM, 13 Nov

ಕೋರ್ಟ್ ಹಾಲ್‌ಗೆ ಆಗಮಿಸಿದ ನ್ಯಾಯಮೂರ್ತಿ ಎನ್. ವಿ. ರಮಣ
10:32 AM, 13 Nov

ಅನರ್ಹ ಶಾಸಕರು, ಸ್ಪೀಕರ್, ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಒಟ್ಟು 9 ಅರ್ಜಿಗಳ ವಾದವನ್ನು ಆಲಿಸಿ ತೀರ್ಪನ್ನು ಸಿದ್ಧಪಡಿಸಲಾಗಿದೆ.
10:30 AM, 13 Nov

ಕೆಲವೇ ಕ್ಷಣಗಳಲ್ಲಿ ನ್ಯಾಯಾಲಯದ ಕಲಾಪ ಆರಂಭವಾಗಲಿದೆ.
10:19 AM, 13 Nov

ಆನಂದ್ ಸಿಂಗ್, ಎಂಟಿಬಿ ನಾಗರಾಜ್ ಹೊರತುಪಡಿಸಿ ಉಳಿದ 15 ಅನರ್ಹ ಶಾಸಕರು ದೆಹಲಿಯಲ್ಲಿದ್ದಾರೆ. ಎಚ್. ವಿಶ್ವನಾಥ್ ಕೋರ್ಟ್ ಹಾಲ್‌ನಲ್ಲಿದ್ದಾರೆ
10:10 AM, 13 Nov

"ಜನರ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ" ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿದ್ದಾಗಲೇ 17 ಶಾಸಕರನ್ನು ಅನರ್ಹಗೊಳಿಸಲಾಗಿತ್ತು.
10:04 AM, 13 Nov

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೂ ಅನರ್ಹಗೊಳಿಸಲಾಗಿದೆ. ಅನಾರೋಗ್ಯದ ಕಾರಣ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣದಿಂದಾಗಿ ಶಾಸಕಾಂಗ ಸಭೆಗೆ ಹಾಜರಾಗಲು ಆಗಲಿಲ್ಲ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.
10:01 AM, 13 Nov

ಸುಪ್ರೀಂಕೋರ್ಟ್‌ಗೆ ಆಗಮಿಸಿದ ಅನರ್ಹ ಶಾಸಕ ಎಚ್. ವಿಶ್ವನಾಥ್, ಜೆಡಿಎಸ್ ಪರ ವಕೀಲ ರಾಜೀವ್ ಧವನ್
9:56 AM, 13 Nov

"ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ. ನನ್ನ ದೃಷ್ಟಿಯಿಂದ ಅವರು ಅನರ್ಹರಾಗಿದ್ದಾರೆ. ಆದರೆ, ಅವರು ಚುನಾವಣೆಗೆ ನಿಲ್ಲಬಾರದು ಎಂದು ಹೇಳಲು ಆಗುವುದಿಲ್ಲ. ನ್ಯಾಯಾಲಯ ರಾಜೀನಾಮೆ ಕೊಡಿ ಎಂದು ಮತ್ತೊಮ್ಮೆ ಹೇಳಲಾರದು. ಸುಪ್ರೀಂಕೋರ್ಟ್ ತೀರ್ಪು ಉಹಿಸಲು ಸಾಧ್ಯವಿಲ್ಲ" ಎಂದು ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದರು.
9:52 AM, 13 Nov

ಅನರ್ಹ ಶಾಸಕರು ಚುನಾವಣಾ ಕಣಕ್ಕಿಳಿಯುವಂತಿಲ್ಲ ಎಂಬ ಸ್ಪೀಕರ್ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿದರೆ ಅನರ್ಹ ಶಾಸಕರು ತಮ್ಮ ಕ್ಷೇತ್ರದಲ್ಲಿ ಕುಟುಂಬ ಸದಸ್ಯರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
9:37 AM, 13 Nov

"ಬಿಜೆಪಿ ನಾಯಕರಿಗೆ ಎರಡು ನಾಲಿಗೆಗಳಿವೆಯೆ?. ಒಮ್ಮೆ, ಅನರ್ಹರಿಗು ನಮಗೂ ಸಂಬಂಧವಿಲ್ಲ ಎನ್ನುತ್ತಾರೆ, ಮತ್ತೊಮ್ಮೆ, ಅನರ್ಹರ ತ್ಯಾಗದಿಂದ ನಮ್ಮ ಸರ್ಕಾರ ರಚನೆಯಾಗಿದೆ, ಅವರಿಗೆ ಅನ್ಯಾಯ ಮಾಡೊಲ್ಲ ಎನ್ನುತ್ತಾರೆ. ಬಿಜೆಪಿ ಜನತೆಯ ನಂಬಿಕೆ ಕಳೆದುಕೊಂಡಿದೆ. ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಮತದಾರರು ಪಾಠ ಕಲಿಸಲಿದ್ದಾರೆ" ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
9:12 AM, 13 Nov

ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ. ಕೆ. ಸುಧಾಕರ್ ಟ್ವೀಟ್ ಮೂಲಕ ಜನರ ಅಶೀರ್ವಾದ ಕೇಳಿದ್ದಾರೆ.
9:05 AM, 13 Nov

ಗೋಕಾಕ್ ನ ನಂದಗಾಂವ್ ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಪರ ತೀರ್ಪು ಬರಲಿ ಎಂದು ಅಭಿಮಾನಿಗಳು ಉರುಳುಸೇವೆ ಮಾಡುತ್ತಿರುವ ಘಟನೆಯೂ ನಡೆದಿದೆ.
9:02 AM, 13 Nov

ದೆಹಲಿಯಲ್ಲಿ ಅನರ್ಹ ಶಾಸಕರೊಂದಿಗೆ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರಿದ್ದು, ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪನವರೂ ಅನರ್ಹರೊಂದಿಗೆ ಈಗಾಗಲೇ ಚರ್ಚೆ ನಡೆಸಿ, ಅಭಯ ನೀಡಿದ್ದಾರೆ.
8:46 AM, 13 Nov

ಕರ್ನಾಟಕದ ರಾಜಕೀಯದ ಮುಂದಿನ ಬೆಳವಣಿಗೆಗಳು ಇಂದಿನ ತೀರ್ಪಿನ ಮೇಲೆ ಅವಲಂಬಿತವಾಗಿವೆ. ಅದರಲ್ಲೂ ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆ ಬಗ್ಗೆ ಇಂದಿನ ತೀರ್ಪು ಪ್ರಭಾವವನ್ನು ಬೀರಲಿದೆ.
8:31 AM, 13 Nov

ವಿಧಾನಸಭೆ ಸ್ಪೀಕರ್ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಅನರ್ಹಗೊಳಿಸಿದ್ದಾರೆ. ಈ ಕ್ರಮವನ್ನು ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿ ಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, ತೀರ್ಪನ್ನು ಪ್ರಕಟಿಸಲಿದೆ.
8:14 AM, 13 Nov

ಕರ್ನಾಟಕದ ಕಾಂಗ್ರೆಸ್-ಜೆಡಿಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಇದು ಮೊದಲ ಹೆಜ್ಜೆ ಆಯಿತು. ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದು 17 ಶಾಸಕರು ರಾಜೀನಾಮೆ ನೀಡಿದರು. ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದು, ರಾಜೀನಾಮೆಯನ್ನು ಇನ್ನೂ ಅಂಗೀಕಾರ ಮಾಡಿಲ್ಲ.
READ MORE

English summary
Karnataka MLAs Disqualification Case Verdict Live Updates in Kannada: Supreme Court allowed 14 Congress and 3 JD(S) MLA's to contest for by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X