ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಶಾಸಕರ ಸಂಬಳ ಎಷ್ಟು ಗೊತ್ತಾ?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆ.12 : ವಿಧಾನಸಭೆಯ ಜಂಟಿ ಅಧಿವೇಶನಕ್ಕೆ ಶಾಸಕರು ಗೈರು ಹಾಜರಾಗುತ್ತಿದ್ದಾರೆ. ತಿಂಗಳಿಗೆ 65,000 ರೂ. ವೇತನ ಪಡೆಯುವ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮಾತ್ರ ಸದನದಲ್ಲಿ ಹಾಜರಿರುವುದಿಲ್ಲ. ಅರ್ಧದಿನ ಸದನದಲ್ಲಿದ್ದು ಪೂರ್ಣ ದಿನದ ವೇತನವನ್ನು ಪಡೆಯುತ್ತಾರೆ.

ಕಳೆದ ವಾರದ ಅಂಕಿ ಸಂಖ್ಯೆಗಳನ್ನೇ ನೋಡುವುದಾದರೆ ಬೆಳಗ್ಗೆ 224 ಶಾಸಕರ ಪೈಕಿ 90 ಶಾಸಕರು ಸದನಕ್ಕೆ ಹಾಜರಾಗಿದ್ದರು. ಮಧ್ಯಾಹ್ನದ ನಂತರ ಶಾಸಕರ ಸಂಖ್ಯೆ 40ಕ್ಕೆ ಇಳಿಕೆಯಾಗುತ್ತದೆ. ಆದರೆ, ಶಾಸಕರು ಪೂರ್ಣದಿನ ಇರುವಂತೆ ವೇತನ ಪಡೆಯುತ್ತಾರೆ. ಶಾಸಕರಿಗೆ ವೇತನ ನೀಡುವುದು ಜನರು ಕಟ್ಟಿದ ತೆರಿಗೆ ಹಣದಲ್ಲಿ.

ಬುಧವಾರ ಕೇವಲ 40 ಶಾಸಕರು ಸದನಕ್ಕೆ ಹಾಜರಾಗಿದ್ದರು. ಪ್ರತಿಪಕ್ಷಗಳು ಶಾಸಕರು, ಸಚಿವರ ಗೈರು ಹಾಜರಿಗೆ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಶುಕ್ರವಾರ ಹತ್ತು ದಿನಗಳ ಜಂಟಿ ಅಧಿವೇಶನ ಮುಕ್ತಾಯಗೊಳ್ಳಲಿದೆ. ಹತ್ತು ದಿನಗಳ ಪೈಕಿ ಸದನ ತುಂಬಿದ್ದು ರಾಜ್ಯಪಾಲರು ಭಾಷಣ ಮಾಡಿದ ಮೊದಲ ದಿನ ಮಾತ್ರ. [ಬುಧವಾರದ ವಿಧಾನಸಭೆ ಕಲಾಪದಲ್ಲಿ ಏನೇನಾಯ್ತು?]

mla

ಶಾಸಕರ ಸಂಬಳ ಎಷ್ಟು : ಕರ್ನಾಟಕದ ಶಾಸಕರ ಮಾಸಿಕ ವೇತನ 65,000 ರೂ.. ಇದರ ಜೊತೆಗೆ ಪ್ರತಿದಿನ ಸಭೆಗಳಿಗೆ ಹಾಜರಾಗಲು 1000 ರೂ. ಭತ್ಯೆ ನೀಡಲಾಗುತ್ತದೆ. ಅಲ್ಲದೇ ಪ್ರತಿ ತಿಂಗಳು ಕ್ಷೇತ್ರಕ್ಕೆ ಭೇಟಿ ನೀಡಲು 25,000 ರೂ. ನೀಡಲಾಗುತ್ತದೆ. ಆದರೆ, ಹಲವು ಶಾಸಕರು ಬೆಂಗಳೂರಿನಲ್ಲೇ ಇರುತ್ತಾರೆ. ['ಪುಟ್ಟಣ್ಣಯ್ಯ ಸೋಪು ಬಳಸಿದ್ದರೆ ಹಾಲಿವುಡ್ ನಲ್ಲಿ ಮಿಂಚುತ್ತಿದ್ದರು']

ಬೆಂಗಳೂರಿನಲ್ಲಿ ಸಭೆಗಳಿಗೆ ಹಾಜರಾಗಲು ಶಾಸಕರಿಗೆ 1000 ರೂ. ಮತ್ತು ಬೆಂಗಳೂರು ನಗರದಿಂದ ಹೊರಗೆ ಸಭೆಗಳಲ್ಲಿ ಪಾಲ್ಗೊಂಡರೆ 1,500 ರೂ. ಭತ್ಯೆ ನೀಡಲಾಗುತ್ತದೆ. ಕ್ಷೇತ್ರಕ್ಕೆ ಭೇಟಿ ನೀಡುವಾಗ ಪ್ರತಿ ಕಿ.ಮೀಗೆ 20 ರೂ.ನಂತೆ ಶಾಸಕರು ಪ್ರಯಾಣ ಭತ್ಯೆಯನ್ನು ಪಡೆಯಬಹುದಾಗಿದೆ.

ಸದನದಲ್ಲಿ ಇರುವುದಿಲ್ಲ : ವಿಧಾನಸಭೆ ಅಧಿವೇಶನ ನಡೆಯುವಾಗ ಬೆಳಗ್ಗಿನ ಕಲಾಪದಲ್ಲಿ ಶಾಸಕರು ಪಾಲ್ಗೊಳ್ಳುತ್ತಾರೆ. ಆದರೆ, ಮಧ್ಯಾಹ್ನದ ಕಲಾಪದಲ್ಲಿ ಹಾಜರಾತಿ ಕೊರತೆ ಕಾಣುತ್ತದೆ. ಒಮ್ಮೆ ಶಾಸಕರು ಬೆಳಗ್ಗೆ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದರೆ ಅವರು ಪೂರ್ಣ ದಿನ ಸದನದಲ್ಲಿ ಇದ್ದರು ಎಂಬಂತಾಗುತ್ತದೆ. ಅದಕ್ಕೆ ಅವರಿಗೆ ಪೂರ್ಣ ದಿನದ ವೇತನ ದೊರೆಯುತ್ತದೆ.

ಅಧಿವೇಶನದಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾದ ಶಾಸಕರು, ಅರ್ಧದಿನ ಕಲಾಪದಲ್ಲಿ ಪಾಲ್ಗೊಂಡು ಜನರ ತೆರಿಗೆ ಹಣದಲ್ಲಿ ನೀಡುವ ಪೂರ್ಣ ದಿನದ ವೇತನವನ್ನು ಪಡೆಯುತ್ತಾರೆ.

English summary
The monthly salary of a legislator in Karnataka is Rs 65,000. Salary which is being paid from public money. The morning sessions of the assembly are alright. There is almost a full house. A visit to the assembly in the afternoon would show several empty benches.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X