ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹಾವಳಿಯ ನಡುವೆ ಸ್ಪೂರ್ತಿ ತುಂಬುವ ಸಚಿವ ಡಾ.ಸುಧಾಕರ್ ಟ್ವೀಟ್

|
Google Oneindia Kannada News

ಬೆಂಗಳೂರು, ಮೇ 12: ದೇಶವ್ಯಾಪಿ ಲಾಕ್ ಡೌನ್ ನಂತರ ಪಾದರಸದಂತೆ ಕೆಲಸ ಮಾಡುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಸ್ಪೂರ್ತಿ ತುಂಬುವ ಟ್ವೀಟ್ ಒಂದನ್ನು ಮಾಡಿದ್ದಾರೆ.

ಇಡೀ ವಿಶ್ವಕ್ಕೆ ಕೊರೊನಾ ಮಾಡಿರುವ ಹಾವಳಿಗೂ ಮತ್ತು ಭಾರತದಲ್ಲಿನ ಅದರ ಸೋಂಕಿನ ಪ್ರಮಾಣಕ್ಕೂ ಗ್ರಾಫ್ ಮೂಲಕ, ಸಚಿವ ಸುಧಾಕರ್ ವಿವರಿಸಿದ್ದಾರೆ.

ಸಂದರ್ಶನ: ಕೊರೊನಾ ಕುರಿತ ಪ್ರಶ್ನೆಗಳಿಗೆ ಸಚಿವ ಸುಧಾಕರ್ ಉತ್ತರಸಂದರ್ಶನ: ಕೊರೊನಾ ಕುರಿತ ಪ್ರಶ್ನೆಗಳಿಗೆ ಸಚಿವ ಸುಧಾಕರ್ ಉತ್ತರ

"ಕರ್ನಾಟಕದಲ್ಲಿನ ಪಾಸಿಟೀವ್ ಕೇಸ್ ಗಳು ವಿಶ್ವದಲ್ಲೇ ಅತಿಕಮ್ಮಿ. ಸರಾಸರಿ ನೂರು ಟೆಸ್ಟ್ ನಲ್ಲಿ ಪಾಸಿಟೀವ್ ಕೇಸ್ ಗಳು ಬರೀ ಒಂದು"ಎಂದು ಸಚಿವರು ಟ್ವೀಟ್ ನಲ್ಲಿ ಹೇಳಿದ್ದಾರೆ.

Karnataka Medical Education Minister Dr.Sudhakar Interesting Tweet On Corona

"ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಸರಾಸರಿ ಶೇ. 5, ಇದು ವಿಶ್ವದ ಇತರ ದೇಶದ ರಾಜ್ಯಗಳಿಗೆ ಹೋಲಿಸಿದರೆ ಕಮ್ಮಿ. ಒಟ್ಟಾರೆಯಾಗಿ ನಮ್ಮ ದೇಶದಲ್ಲಿ ಇದು ಶೇ. 11.8" ಎಂದು ಸಚಿವ ಸುಧಾಕರ್, ಟ್ವೀಟ್ ನಲ್ಲಿ ವಿವರಿಸಿದ್ದಾರೆ.

ವಿವಿಧ ದೇಶಗಳಲ್ಲಿ ನೂರು ಟೆಸ್ಟ್ ನಲ್ಲಿ ಎಷ್ಟು ಪಾಸಿಟೀವ್ ಕೇಸ್ ಗಳು ಬರುತ್ತಿದೆ ಎನ್ನುವುದನ್ನು ಗ್ರಾಫ್ ಮೂಲಕ ಸಚಿವರು ವಿವರಿಸಿದ್ದಾರೆ. ಅದರ ಪ್ರಕಾರ, ಬ್ರಿಟನ್ ನಲ್ಲಿ ಅತಿಹೆಚ್ಚು 19, ಅಮೆರಿಕಾದಲ್ಲಿ 16 ಮತ್ತು ಬೆಲ್ಜಿಯಂ ದೇಶದಲ್ಲಿ 12 ಕೇಸ್ ಗಳು ಬರುತ್ತಿವೆ.

ಕೊರೊನಾ ಹೋರಾಟ: ಒನ್ಇಂಡಿಯಾ ಜೊತೆ ಡಿಸಿಎಂ ಡಾ. ಅಶ್ವಥ್ ಸಂದರ್ಶನಕೊರೊನಾ ಹೋರಾಟ: ಒನ್ಇಂಡಿಯಾ ಜೊತೆ ಡಿಸಿಎಂ ಡಾ. ಅಶ್ವಥ್ ಸಂದರ್ಶನ

"ರಾಜ್ಯದಲ್ಲಿ ಸೋಂಕಿನ ವೇಗ ಮತ್ತು ಸೋಂಕಿತ ಪ್ರದೇಶಗಳ ಅಧ್ಯಯನ ನಡೆಸಿದ ಬಳಿಕ ಗಮನಿಸಿರುವ ಅಂಶಗಳೆಂದರೆ, ಪತ್ತೆಯಾಗುತ್ತಿರುವ ಪಾಸಿಟಿವ್ ಪ್ರಕರಣಗಳು ಈಗಾಗಲೇ ಸೋಂಕಿತರಾದವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರೇ ಆಗಿದ್ದಾರೆ. ಜತೆಗೆ ಸರ್ಕಾರ ಗುರುತಿಸಿರುವ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಇದ್ದವರೇ ಆಗಿದ್ದಾರೆ" ಎಂದು 'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ಸಚಿವ ಡಾ.ಸುಧಾಕರ್ ಹೇಳಿದ್ದರು.

English summary
Karnataka Medical Education Minister Dr.Sudhakar Interesting Tweet On Corona.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X