ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಎಂಬಿಬಿಎಸ್, ಬಿಡಿಎಸ್ ಮೆರಿಟ್ ಪಟ್ಟಿ ಪ್ರಕಟ

By Mahesh
|
Google Oneindia Kannada News

ಬೆಂಗಳೂರು, ಜುಲೈ 05: ರಾಷ್ಟ್ರೀಯ ಮಟ್ಟದ ಎಂಬಿಬಿಎಸ್ ಅಥವಾ ಬಿಡಿಎಸ್ ನ ಪ್ರವೇಶಕ್ಕಾಗಿ ನಡೆಸಲಾದ ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರನ್ಸ್ ಟೆಸ್ಟ್ (NEET) 2017ರ ಫಲಿತಾಂಶ ಶುಕ್ರವಾರ(ಜೂನ್ 23)ದಂದು ಪ್ರಕಟವಾಗಿದ್ದು ನೆನಪಿರಬಹುದು.

ನೀಟ್ ಫಲಿತಾಂಶ ಪ್ರಕಟ, ಚೆಕ್ ಮಾಡುವುದು ಹೇಗೆನೀಟ್ ಫಲಿತಾಂಶ ಪ್ರಕಟ, ಚೆಕ್ ಮಾಡುವುದು ಹೇಗೆ

ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಕ್ಸಾಮಿನೇಷನ್ (ಸಿಬಿಎಸ್ ಇ) ಪ್ರಕಟಿಸಿದ ಈ ಫಲಿತಾಂಶದ ಆಧಾರದ ಮೇಲೆ ಅಭ್ಯರ್ಥಿಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಲಾಗಿದೆ.

Karnataka MBBS Merit List 2017 released, how to check
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಣೆಯ ಈ ಪಟ್ಟಿಯಲ್ಲಿ ಕರ್ನಾಟಕ ಎಂಬಿಬಿಎಸ್ 2017 ಅಭ್ಯರ್ಥಿಗಳ ಮೆರಿಟ್ ಪಟ್ಟಿ ಸಿಗಲಿದೆ. ಶೇ 85ರಷ್ಟು ರಾಜ್ಯದ ಕೋಟಾದಲ್ಲಿ ಸ್ಥಾನಗಳನ್ನು ತುಂಬಲಾಗುತ್ತದೆ ಹಾಗೂ ಶೇ 15ರಷ್ಟು ಅಖಿಲ ಭಾರತ ಮಟ್ಟದ ಕೋಟಾಕ್ಕೆ ಲಭ್ಯವಿರುತ್ತದೆ.

ಅಭ್ಯರ್ಥಿಗಳ ಮೆರಿಟ್ ಪಟ್ಟಿಯಲ್ಲಿ NEET ಕ್ರಮ ಸಂಖ್ಯೆ, ಹೆಸರು, ನೀಟ್ ಅಖಿಲ ಭಾರತ ಶ್ರೇಯಾಂಕ ವಿವರಗಳು ಲಭ್ಯವಿರುತ್ತದೆ. ಪೂರ್ಣ ಪ್ರಮಾಣದ ಪಟ್ಟಿಯನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.

ಎಂಬಿಬಿಎಸ್ ಹಾಗೂ ಬಿಡಿಎಸ್ ಪ್ರವೇಶಕ್ಕೆ ಐವತ್ತಾರು ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ನೀಟ್ ಪರೀಕ್ಷೆ ಮೇ 7ರಂದು ನಡೆದಿತ್ತು. ದೇಶದಾದ್ಯಂತ 11 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಕನ್ನಡ, ಬೆಂಗಾಲಿ, ಅಸ್ಸಾಮಿ, ಗುಜರಾತಿ ಮತ್ತು ಒಡಿಯಾ ಸೇರಿ ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಇತ್ತು.(ಒನ್ಇಂಡಿಯಾ ಸುದ್ದಿ)

English summary
The Karnataka MBBS Merit List 2017 has been announced. The merit list 2017 is created on the basis of the NEET scores. The conducting body- KEA has created the Karnataka MBBS 2017 merit list for candidates from Karnataka and comprises candidates who have cleared NEET 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X