ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಉಪಚುನಾವಣೆ: ಜಮಖಂಡಿಯಲ್ಲಿ ಹುರುಪು, ಮಂಡ್ಯದಲ್ಲಿ ನಿದ್ದೆ

|
Google Oneindia Kannada News

ಬೆಂಗಳೂರು, ನವೆಂಬರ್ 03: ಕರ್ನಾಟಕದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.

ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಿದ್ದು, ಸಂಜೆ 6 ರವರೆಗೆ ನಡೆಯಲಿದೆ.

ಮಂಡ್ಯದಲ್ಲಿ ಜೆಡಿಎಸ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ ಸಿ ಎಸ್ ಪುಟ್ಟರಾಜು, ಶಿವಮೊಗ್ಗದಲ್ಲಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಬಿ ಎಸ್ ಯಡಿಯೂರಪ್ಪ ಮತ್ತು ಬಳ್ಳಾರಿ ಬಿಜೆಪಿ ಸಂಸದ ಶ್ರೀರಾಮುಲು ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.

ನ.3ಕ್ಕೆ 5 ಕ್ಷೇತ್ರಗಳ ಉಪಚುನಾವಣೆ: ಮೈತ್ರಿ vs ಬಿಜೆಪಿ, ಯಾರ ಪರ ಜನತೆ ನ.3ಕ್ಕೆ 5 ಕ್ಷೇತ್ರಗಳ ಉಪಚುನಾವಣೆ: ಮೈತ್ರಿ vs ಬಿಜೆಪಿ, ಯಾರ ಪರ ಜನತೆ

Karnataka Lok Sabha and Assembly by poll 2018 LIVE

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕಡೆಗಳಲ್ಲಿ ಗೆಲುವು ಸಾಧಿಸಿದ್ದರು. ನಂತರ ಚನ್ನಪಟ್ಟಣವನ್ನು ತಮ್ಮ ಬಳಿಯೇ ಉಳಿಸಿಕೊಂಡು ರಾಮನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ.

ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪಗೆ ಕೋರ್ಟ್ ನೀಡಿದ ಭರ್ಜರಿ ಶಾಕ್ ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ವಿ ಎಸ್ ಉಗ್ರಪ್ಪಗೆ ಕೋರ್ಟ್ ನೀಡಿದ ಭರ್ಜರಿ ಶಾಕ್

ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಕಾಂಗ್ರೆಸ್ ಶಾಸಕರಾಗಿದ್ದ ಸಿದ್ದು ನ್ಯಾಮಗೌಡ ಅವರು ಅಕಾಲಿಕ ಮರಣವನ್ನಪ್ಪಿದ್ದರಿಂದ ತೆರವಾದ ಸ್ಥಾನಕ್ಕೂ ಉಪಚುನಾವಣೆ ನಡೆಯುತ್ತಿದೆ. ಎಲ್ಲಾ ಕ್ಷೇತ್ರಗಳಿಗೂ ಇಂದು ಚುನಾವಣೆ ನಡೆಯಲಿದ್ದು, ಫಲಿತಾಂಶ ನವೆಂಬರ್ 6 ರಂದು ಹೊರಬೀಳಲಿದೆ.

ಉಪಚುನಾವಣೆಗೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಯನ್ನು ಒನ್ ಇಂಡಿಯಾ ನೀಡಲಿದೆ.

ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಹೆಸರು ಮತಯಂತ್ರದಲ್ಲಿ ಇರುತ್ತೆ!ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಹೆಸರು ಮತಯಂತ್ರದಲ್ಲಿ ಇರುತ್ತೆ!

Newest FirstOldest First
7:02 PM, 3 Nov

ಉಪಚುನಾವಣೆ ಅಂತ್ಯವಾಗಿದ್ದು, ಶಿವಮೊಗ್ಗದಲ್ಲಿ 61.05%, ಬಳ್ಳಾರಿಯಲ್ಲಿ 63.85%, ಮಂಡ್ಯದಲ್ಲಿ 53.95%, ರಾಮನಗರ 73.71%, ಜಮಖಂಡಿ 81.58%ಮತ ಚಲಾವಣೆ ಆಗಿದೆ.
6:12 PM, 3 Nov

ಸಂಜೆ 5 ಗಂಟೆ ವೇಳೆಗೆ ರಾಮನಗರದಲ್ಲಿ 67.22%, ಮಂಡ್ಯದಲ್ಲಿ 48.83%, ಶಿವಮೊಗ್ಗದಲ್ಲಿ 55.16%, ಬಳ್ಳಾರಿಯಲ್ಲಿ 57.65%, ಜಮಖಂಡಿಯಲ್ಲಿ 74.41% ಮತದಾನವಾಗಿದೆ.
6:10 PM, 3 Nov

ಐದು ಕ್ಷೇತ್ರಗಳ ಉಪಚುನಾವಣೆ ಮತದಾನ ಮುಗಿದಿದ್ದು, ಸರತಿ ಸಾಲಿನಲ್ಲಿ ನಿಂತಿದ್ದವರಿಗೆ ಮಾತ್ರವೇ ಮತ ಹಾಕಲು ಅವಕಾಶ ನೀಡಲಾಗುತ್ತಿದೆ.
4:22 PM, 3 Nov

ಬಳ್ಳಾರಿಯಲ್ಲಿ 4 ಗಂಟೆ ವರೆಗೆ ಶೇ.50ರಷ್ಟು ಮತದಾನ
3:49 PM, 3 Nov

3 ಗಂಟೆಯವರೆಗೆ ಐದು ಕ್ಷೇತ್ರಗಳ ಸರಾಸರಿ ಮತದಾನ: ಬಳ್ಳಾರಿ- 47%, ಶಿವಮೊಗ್ಗ- 41.49%, ಮಂಡ್ಯ- 37.7%, ಜಮಖಂಡಿ-58.82%, ರಾಮನಗರ-54.76
1:25 PM, 3 Nov

ಮಧ್ಯಾಹ್ನ 1 ಗಂಟೆಯವರೆಗೆ ರಾಮನಗರದಲ್ಲಿ 40%, ಜಮಖಂಡಿಯಲ್ಲಿ 43.5% ರಷ್ಟು ಮತದಾನ
1:07 PM, 3 Nov

ಬಳ್ಳಾರಿಯ ಮತಗಟ್ಟೆ ಸಂಖ್ಯೆ 52 ರಲ್ಲಿ ಮತ ಚಲಾಯಿಸಿದ ಶಾಸಕ ಶ್ರೀರಾಮುಲು ಮತ್ತು ಶಾಸಕ ಕರುಣಾಕರ ರೆಡ್ಡಿ.
Advertisement
1:05 PM, 3 Nov

ರಾಮನಗರ ಕಣದಿಂದ ಹಿಂದಕ್ಕೆ ಸರಿದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್, ರಾಮನಗರ ಜಿಲ್ಲಾಧ್ಯಜ್ಷ ಸ್ಥಾನಕ್ಕೆ ರುದ್ರೇಶ್ ರಾಜೀನಾಮೆ ನೀಡುವ ಸಾಧ್ಯತೆ
12:01 PM, 3 Nov

ಶಿವಮೊಗ್ಗದ ಕುಬ್ತೂರ್ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ.
11:43 AM, 3 Nov

11 ಗಂಟೆವರೆಗೆ ಜಮಖಂಡಿಯಲ್ಲಿ 22%, ರಾಮನಗರದಲ್ಲಿ 16%, ಬಳ್ಳಾರಿಯಲ್ಲಿ 24.58% ರಷ್ಟು ಮತದಾನ
10:43 AM, 3 Nov

ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆಯುತ್ತಿರು ಮತದಾನ‌ ಪ್ರಕ್ರಿಯೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಬೈಂದೂರು ವಿಧಾನಸಭಾ ಕ್ಷೇತ್ರ
10:16 AM, 3 Nov

9 ಗಂಟೆಯ ಹೊತ್ತಿಗೆ ಐದು ಕ್ಷೇತ್ರಗಳ ಸರಾಸರಿ ಮತದಾನ: ಬಳ್ಳಾರಿ:4.40%, ಶಿವಮೊಗ್ಗ: 8.61, ಮಂಡ್ಯ: 4.18, ಜಮಖಂಡಿ:9%, ರಾಮನಗರ: 8%
Advertisement
9:58 AM, 3 Nov

ರಾಮನಗರದ ಮೊಟ್ಟೆದೊಡ್ಡಿ ಮತಗಟ್ಟೆ ಸಂಖ್ಯೆ 179 ರಲ್ಲಿ ಇದ್ದಕ್ಕಿದ್ದಂತೆ ಹಾವು ಕಾಣಿಸಿಕೊಂಡು ಮತಗಟ್ಟೆ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿತ್ತು. ಇದರಿಂದಾಗಿ ಕೆಲಕಾಲ ಮತದಾನ ವಿಳಂಬವಾಗಿತ್ತು.
9:48 AM, 3 Nov

ನನ್ನ ಮತದಾನದ ಹಕ್ಕನ್ನು ಚಲಾಯಿಸಿದ್ದೇನೆ. ನೀವು..? ತಪ್ಪದೇ ಚುನಾವಣೆಯಲ್ಲಿ ಭಾಗವಹಿಸಿ, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ...
9:17 AM, 3 Nov

ಮೂಲಸೌಕರ್ಯ ಆಗ್ರಹಿಸಿ ಮತದಾನ ಬಹಿಷ್ಕರಿಸಿದ ಶಿವಮೊಗ್ಗ ತಾಲೂಕಿನ ಕುಂಸಿ ಬಳಿಯ ದೊಡ್ಡಮಟ್ಟಿ, ಭದ್ರಾವತಿಯ ಹೊಳೆಬೆಳಗಲು ಗ್ರಾಮದ ಜನರು
9:08 AM, 3 Nov

9822 ಬ್ಯಾಲೆಟ್ ಯುನಿಟ್ , 8,438 ಕಂಟ್ರೋಲ್ ಯುನಿಟ್, 8,992 ವಿವಿ ಪ್ಯಾಟ್ ಗಳನ್ನು ಉಪಚುನಾವಣೆಗೆ ಬಳಸಲಾಗುತ್ತಿದೆ. 130 ವಿಡಿಯೋ ಕಾಸ್ಟಿಂಗ್ ಮಾಡಿಸಲಾಗುತ್ತಿದ್ದು, 1312 ಮಂದಿ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ.
9:07 AM, 3 Nov

ಐದು ಕ್ಷೇತ್ರಗಳಲ್ಲಿ ಒಟ್ಟು 54.45 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. 27.21 ಲಕ್ಷ ಪುರುಷ ಮತದಾರರು, 27.30 ಲಕ್ಷ ಮಹಿಳಾ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.
9:06 AM, 3 Nov

ಜಮಖಂಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡ ಮತದಾನ
7:55 AM, 3 Nov

ಶಿವಮೊಗ್ಗದಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ ಬಿ ವೈ ರಾಘವೇಂದ್ರ ಮತ್ತು ಬಿ ವೈ ವಿಜಯೇಂದ್ರ
7:54 AM, 3 Nov

ಜಮಖಂಡಿ ಕ್ಷೇತ್ರದಲ್ಲಿ ಮತದಾನ ಮಾಡಿದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ
7:50 AM, 3 Nov

ರಾಮನಗರದ ಮೊಟ್ಟೆದಡ್ಡಿ ಮತಗಟ್ಟೆಯೊಳಗೆ ಕಾಣಿಸಿಕೊಂಡ ಹಾವು: ಬೆಚ್ಚಿಬಿದ್ದ ಮತಗಟ್ಟೆ ಸಿಬ್ಬಂದಿ
7:41 AM, 3 Nov

"101% ಖಚಿತವಾಗಿ ಹೇಳಬಲ್ಲೆ, ಶಿವಮೊಗ್ಗದಲ್ಲಿ ನನ್ನ ಮಗ ಬಿ ವೈ ರಾಘವೇಂದ್ರನೇ ಗೆಲುವು ಸಾಧಿಸುವುದು. ಅಷ್ಟೇ ಅಲ್ಲ, ಜಮಖಂಡಿ ಮತ್ತು ಬಳ್ಳಾರಿಯಲ್ಲೂ ನಾವು ಜಯ ಸಾಧಿಸುತ್ತೇವೆ" - ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
7:38 AM, 3 Nov

ಜಮಖಂಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದ್ ನ್ಯಾಮಗೌಡ, ಬಿಜೆಪಿ ಅಭ್ಯರ್ಥಿಯಾಗಿ ಶ್ರೀಕಾಂತ್ ಕುಲಕರ್ಣಿ, ಪ್ರಜಾ ಪರಿವರ್ತನಾ ಪಕ್ಷದ ಅಭ್ಯರ್ಥಿಯಾಗಿ ಪರುಶರಾಮ ಮಹಾರಾಜನವರ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಯಮನಪ್ಪ ಗುಣದಾಳ ಕಣದಲ್ಲಿದ್ದಾರೆ.
7:37 AM, 3 Nov

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಎಲ್.ಚಂದ್ರಶೇಖರ್ ಕಣದಲ್ಲಿದ್ದಾರೆ.
7:18 AM, 3 Nov

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ ಸ್ಪರ್ಧಿಸಿದ್ದರೆ, ಜೆಡಿಎಸ್ ನಿಂದ ಮಧು ಬಂಗಾರಪ್ಪ, ಜೆಡಿಯು ನಿಂದ ಮಹಿಮಾ ಪಟೇಲ್ ಕಣದಲ್ಲಿದ್ದಾರೆ.
7:18 AM, 3 Nov

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜೆ.ಶಾಂತ ಅವರು ಕಣದಲ್ಲಿದ್ದರೆ ಕಾಂಗ್ರೆಸ್ ನಿಂದ ವಿ.ಎಸ್.ಉಗ್ರಪ್ಪ ಮತ್ತು ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಡಾ.ಟಿ.ಆರ್.ಶ್ರೀನಿವಾಸ್ ಕಣದಲ್ಲಿದ್ದಾರೆ.
7:17 AM, 3 Nov

ಮತದಾಕ್ಕೂ ಮೊದಲು ಶಿಕಾರಿಪುರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ.
6:47 AM, 3 Nov

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜೆ.ಶಾಂತ ಅವರು ಕಣದಲ್ಲಿದ್ದರೆ ಕಾಂಗ್ರೆಸ್ ನಿಂದ ವಿ.ಎಸ್.ಉಗ್ರಪ್ಪ ಮತ್ತು ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಡಾ.ಟಿ.ಆರ್.ಶ್ರೀನಿವಾಸ್ ಕಣದಲ್ಲಿದ್ದಾರೆ.
6:47 AM, 3 Nov

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಎಲ್.ಆರ್.ಶಿವರಾಮೇಗೌಡ ಅವರು ಸ್ಪರ್ಧಿಸಿದ್ದರೆ ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಸ್ಪರ್ಧಿಸಿದ್ದಾರೆ.

English summary
Karnataka Lok Sabha and Assembly by poll 2018 LIVE in Kannada. Lok Sabha - Shimoga(Shivamogga), Mandya, Bellary(Ballari); Assembly - Ramanagara and Jamakhandi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X