ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಲಾಕ್‌ಡೌನ್: ಪ್ರಯಾಣಿಕರು ಓದಲೇಬೇಕಾದ ನಿಯಮಗಳು

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ಕಟ್ಟಿ ಹಾಕುವ ಉದ್ದೇಶದಿಂದ 14 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಸೋಮವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.

ರಾಜ್ಯದಲ್ಲಿ ಮಂಗಳವಾರ ರಾತ್ರಿಯಿಂದ ಮೇ 12ರವರೆಗೂ ಲಾಕ್‌ಡೌನ್ ಜಾರಿಯಲ್ಲಿ ಇರಲಿದೆ. ರಾಜ್ಯದ ಎಲ್ಲಾ ಗಡಿಗಳು ಬಂದ್ ಆಗಲಿದ್ದು, ಕೆಎಸ್ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಖಾಸಗಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಕರ್ನಾಟಕ; 14 ದಿನ ಲಾಕ್ ಡೌನ್, ಏನು ಓಪನ್, ಕ್ಲೋಸ್?ಕರ್ನಾಟಕ; 14 ದಿನ ಲಾಕ್ ಡೌನ್, ಏನು ಓಪನ್, ಕ್ಲೋಸ್?

ಕರ್ನಾಟಕ ಲಾಕ್‌ಡೌನ್ ವೇಳೆಯಲ್ಲಿ ಸಾರಿಗೆ ವ್ಯವಸ್ಥೆ ಹೇಗಿರಲಿದೆ. ಯಾವೆಲ್ಲ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಯಾವ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಕುರಿತು ಪ್ರಮುಖ ಅಂಶಗಳು ಇಲ್ಲಿವೆ ನೋಡಿ.

Karnataka Lockdown: Travel And Transport Rules You Need to Know.

ಯಾವ ಯಾವ ವಾಹನಗಳ ಸಂಚಾರಕ್ಕೆ ನಿಷೇಧ?

ರಾಜ್ಯದಲ್ಲಿ ಯಾವ ವಾಹನಗಳ ಸಂಚಾರಕ್ಕೆ ನಿರ್ಬಂಧ

  • ಕೆಎಸ್ಆರ್ ಟಿಸಿ
  • ಬಿಎಂಟಿಸಿ
  • ಮೆಟ್ರೋ ರೈಲು
  • ಟ್ಯಾಕ್ಸಿ
  • ಆಟೋರಿಕ್ಷಾ
  • ಕ್ಯಾಬ್

ಜನರ ಚಟುವಟಿಕೆ ಮತ್ತು ಪ್ರಯಾಣಕ್ಕೆ ನಿರ್ಬಂಧ

ರಾಜ್ಯ ಮತ್ತು ಅಂತಾರಾಜ್ಯ ಸಂಚಾರಕ್ಕೆ ನಿಯಮ?

Recommended Video

T20 ಕ್ರಿಕೆಟ್ ನಲ್ಲಿ ದಾಖಲೆ ಬರೆದ ಜಡೇಜಾ | Oneindia Kannada
  • ಮಾರ್ಗಸೂಚಿಯಡಿ ಉಲ್ಲೇಖಿಸಿ ವಾಹನಗಳ ಹೊರತಾಗಿ ಯಾವುದೇ ಸರ್ಕಾರಿ ಮತ್ತು ಖಾಸಗಿ ವಾಹನಗಳು ಮತ್ತು ಪ್ರಯಾಣಿಕರ ಸಂಚಾರಕ್ಕೆ ಅನುಮತಿಯಿಲ್ಲ
  • ರಾಜ್ಯದೊಳಗೆ ಮತ್ತು ಅಂತರ್-ರಾಜ್ಯ ಪ್ರಯಾಣಿಸಲು ತುರ್ತು ಸಂದರ್ಭ ಅಥವಾ ಮಾರ್ಗಸೂಚಿಯಡಿ ಉಲ್ಲೇಖಿಸಿದವರಿಗೆ ಮಾತ್ರ ಅವಕಾಶ
  • ಅಂತರ್-ರಾಜ್ಯಗಳ ನಡುವೆ ವಾಹನ ಮತ್ತು ಪ್ರಯಾಣಿಕರ ಪ್ರಯಾಣವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ತೀರಾ ಅನಿವಾರ್ಯ ಅಥವಾ ತುರ್ತು ಸಂದರ್ಭಗಳಲ್ಲಿ ಎಸ್ಓಪಿ ಅಡಿಯಲ್ಲಿ ಅನುಮತಿ ನೀಡಲಾಗುವುದು.
  • ಪ್ರಯಾಣಿಸುವ ಸಂದರ್ಭಗಳಲ್ಲಿ ಭದ್ರತಾ ಸಿಬ್ಬಂದಿ ಅಥವಾ ಅಧಿಕಾರಿಗಳು ತಮ್ಮ ಸಂಸ್ಥೆ ನೀಡಿರುವ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯ.
  • ಸೂಕ್ತ ದಾಖಲೆಗಳನ್ನು ಹೊಂದಿರುವ ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣಗಳ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ
  • ತುರ್ತು ಸಂದರ್ಭಗಳಲ್ಲಿ ಮಾತ್ರ ಅಗತ್ಯ ದಾಖಲೆಗಳೊಂದಿಗೆ ಆಟೋ, ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ

English summary
Karnataka Lockdown: Travel And Transport Rules You Need to Know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X