ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KSRTC ಮತ್ತು BMTC ಬಸ್ ಸಂಚಾರಕ್ಕೆ ಕರ್ನಾಟಕದಲ್ಲಿ ಗ್ರೀನ್ ಸಿಗ್ನಲ್.!

|
Google Oneindia Kannada News

ಬೆಂಗಳೂರು, ಮೇ 18: ಮೇ 31 ರವರೆಗೂ ಲಾಕ್ ಡೌನ್ 4.0 ಮುಂದುವರೆಯಲಿದ್ದು, ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ, ಹಲವು ಷರತ್ತುಗಳ ಮೇಲೆ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಬಸ್ ಸಂಚಾರ ಆರಂಭಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇಂದು ಬೆಳಗ್ಗೆ ವಿಧಾನ ಸೌಧದಲ್ಲಿ ಮಹತ್ವದ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರ್ನಾಟಕದಲ್ಲಿ ಲಾಕ್ ಡೌನ್ 4.0 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದರು. ಅದರ ಅನ್ವಯ, ಕರ್ನಾಟಕದಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಿದರು.

ಬಸ್ ಸಂಚಾರ: ಬಿಎಂಟಿಸಿ ಸಿಬ್ಬಂದಿಗಳಿಗೆ ಹೊಸ ಮಾರ್ಗಸೂಚಿ ಬಸ್ ಸಂಚಾರ: ಬಿಎಂಟಿಸಿ ಸಿಬ್ಬಂದಿಗಳಿಗೆ ಹೊಸ ಮಾರ್ಗಸೂಚಿ

ಆ ಮೂಲಕ ನಾಳೆ ಬೆಳಗ್ಗೆಯಿಂದ ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ, ನೈರುತ್ಯ, ಈಶಾನ್ಯ ಸಾರಿಗೆ ಸಂಸ್ಥೆ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಖಾಸಗಿ ಬಸ್ ಗಳ ಓಡಾಟಕ್ಕೂ ಅನುಮತಿ ನೀಡಲಾಗಿದೆ.

ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ

ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ

* ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಬಸ್ ಸಂಚಾರ ಆರಂಭ.

* ಮಂಗಳವಾರ ಬೆಳಗ್ಗೆಯಿಂದ ಕೆ.ಎಸ್.ಆರ್.ಟಿ.ಸಿ ಯಲ್ಲಿನ ನಾಲ್ಕು ವಿಭಾಗಗಳ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್.

* ರೆಡ್ ಝೋನ್ ಮತ್ತು ಕಂಟೇನ್ಮೆಂಟ್ ಝೋನ್ ನಲ್ಲಿ ಸಾರಿಗೆ ಸಂಚಾರ ನಿಷಿದ್ಧ.

* ಖಾಸಗಿ ಬಸ್ ಗಳ ಓಡಾಟಕ್ಕೆ ಅನುಮತಿ.

* ಒಂದು ಬಸ್ ನಲ್ಲಿ 30 ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅವಕಾಶ.

* ಟಿಕೆಟ್ ಬೆಲೆ ಜಾಸ್ತಿ ಮಾಡಲ್ಲ ಎಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.

ಮಾಸ್ಕ್ ಕಡ್ಡಾಯ

ಮಾಸ್ಕ್ ಕಡ್ಡಾಯ

* ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

* ಸಾಮಾಜಿಕ ಅಂತರ ಪಾಲನೆ ಮಾಡಲೇಬೇಕು.

* ಅಂತರ ರಾಜ್ಯದಿಂದ ಪ್ರಯಾಣ ಮಾಡುವವರು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಬೇಕು.

* ಮಹಾರಾಷ್ಟ್ರ, ಕೇರಳ, ತಮಿಳುನಾಡು, ಗುಜರಾತ್ ಬಸ್ ಗಳಿಗೆ ರಾಜ್ಯದಲ್ಲಿ ಪ್ರವೇಶ ಇಲ್ಲ.

* ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಸಂಚಾರಕ್ಕೆ ಅನುಮತಿ.

* ಆರೆಂಜ್ ಮತ್ತು ಗ್ರೀನ್ ಝೋನ್ ಗಳಲ್ಲಿ ಮಾತ್ರ ಬಸ್ ಓಡಾಟಕ್ಕೆ ಅವಕಾಶ.

ಕೆ.ಎಸ್.ಆರ್.ಟಿ.ಸಿ ಸಂಚಾರ: ಹೊಸ ನಿಯಮಗಳು ಇಂತಿವೆಕೆ.ಎಸ್.ಆರ್.ಟಿ.ಸಿ ಸಂಚಾರ: ಹೊಸ ನಿಯಮಗಳು ಇಂತಿವೆ

ಬಿ.ಎಂ.ಟಿ.ಸಿ ಸಿಬ್ಬಂದಿಗಳಿಗೆ ಮಾರ್ಗಸೂಚಿ

ಬಿ.ಎಂ.ಟಿ.ಸಿ ಸಿಬ್ಬಂದಿಗಳಿಗೆ ಮಾರ್ಗಸೂಚಿ

* ಪ್ರತಿಯೊಬ್ಬ ಸಿಬ್ಬಂದಿಯು ವೈಯಕ್ತಿಕ ಶುಚಿತ್ವಕ್ಕೆ ಮೊದಲ ಆದ್ಯತೆ ಕೊಡಬೇಕು.

* ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು.

* ಕರ್ತವ್ಯಕ್ಕೆ ಹಾಜರಾಗುವ ಪ್ರತಿಯೊಬ್ಬ ಸಿಬ್ಬಂದಿಯನ್ನು ಪ್ರವೇಶ ದ್ವಾರದ ಬಳಿಯೇ ಥರ್ಮಲ್ ಟೆಸ್ಟಿಂಗ್ ಗೆ ಒಳಪಡಿಸಬೇಕು.

* ಸಾರಿಗೆ ನೌಕರರು ಯಾವುದೇ ವ್ಯಕ್ತಿಯೊಂದಿಗೆ ವ್ಯವಹರಿಸುವಾಗ ಕನಿಷ್ಠ ಆರು ಅಡಿ ಸಾಮಾಜಿಕ ಅಂತರವನ್ನು ಪಾಲಿಸಬೇಕು.

* ಎಲ್ಲಾ ಶಾಖೆಗಳಲ್ಲೂ ಸ್ಯಾನಿಟೈಸರ್ ಅಥವಾ ಸೋಪ್ ವ್ಯವಸ್ಥೆ ಕಲ್ಪಿಸಬೇಕು.

ಆಟೋ ಸಂಚಾರಕ್ಕೂ ಅನುಮತಿ

ಆಟೋ ಸಂಚಾರಕ್ಕೂ ಅನುಮತಿ

* ರಾಜ್ಯದಲ್ಲಿ ರೈಲು ಸಂಚಾರಕ್ಕೂ ಹಸಿರು ನಿಶಾನೆ

* ಟ್ಯಾಕ್ಸಿ, ಆಟೋ ಸಂಚಾರ ಕೂಡ ನಾಳೆಯಿಂದ ಪ್ರಾರಂಭ.

* ಆಟೋ ಮತ್ತು ಟ್ಯಾಕ್ಸಿ ನಲ್ಲಿ ಡ್ರೈವರ್ ಜೊತೆಗೆ ಇಬ್ಬರಿಗೆ ಪ್ರಯಾಣಿಸಲು ಅವಕಾಶ.

* ಮ್ಯಾಕ್ಸಿ ಕ್ಯಾಬ್ ನಲ್ಲಿ ಡ್ರೈವರ್ ಜೊತೆಗೆ ಮೂವರು ಪ್ರಯಾಣಿಸಲು ಅವಕಾಶ.

English summary
Coronavirus Lockdown: BS Yediyurappa allowed KSRTC and BMTC bus service to operate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X