ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕತ್ತಲೆ ಭಾಗ್ಯ' ಯೋಜನೆಯ ಪ್ರಯೋಜನಗಳು ಯಾವವು?!

|
Google Oneindia Kannada News

ಅವನು: ಬೆಂಗಳೂರಿನ ಮೇಲೆ ಉಗ್ರರ ಕಣ್ಣು ಬೀಳಲು ಸಾಧ್ಯವೇ ಇಲ್ಲ ಯಾಕೆ?
ಇವನು: ಯಾಕಂದ್ರೆ ಕರೆಂಟ್ ಇದ್ರೇ ತಾನೆ ಉಗ್ರರಿಗೆ ಬೆಂಗಳೂರು ಕಾಣೋದು?
-------------
ವಿದೇಶಿಗನೊಬ್ಬ ಕರ್ನಾಟಕದಲ್ಲಿ 15 ದಿನ ಇದ್ದ
ಹೋಗುವಾಗ ಎರಡು ಕನ್ನಡ ಪದ ಕಲಿತ
ಒಂದು 'ಅಬ್ಬಾ ಕರೆಂಟ್ ಬಂತು!
ಇನ್ನೊಂದು....
ಮತ್ತೆ ಹೋಯ್ತು...!
-----------
ಸಂದರ್ಶಕ: ಕರೆಂಟ್ ಅಫೆರ್ಸ್ ಬಗ್ಗೆ ನಿಮಗೇನು ಗೊತ್ತು, ಹೇಳಿ?
ಉದ್ಯೋಗ ಆಕಾಂಕ್ಷಿ: ಕರೆಂಟ್ ಇಲ್ಲ!!!

power


ಜನರೇ ಹಾಗೆ, ಪ್ರತಿಯೊಂದಕ್ಕೂ ಹಾಸ್ಯ ವಿಡಂಬನೆಯನ್ನೇ ಹುಡುಕುತ್ತಿರುತ್ತಾರೆ. ಈರುಳ್ಳಿ ದರ ಏರಿಕೆಯನ್ನು ತಮ್ಮದೇ ದಾಟಿಯಲ್ಲಿ 'ಹಾಡಿ ಹೊಗಳಿದರು'. ಇದೀಗ ಕರ್ನಾಟಕದ ಪವರ್ ಕಟ್ ಸಂಗತಿ ಮೇಲೂ ನೂರಾರು ಜೋಕುಗಳು ಹುಟ್ಟಿಕೊಂಡು ಸಾಮಾಜಿಕ ತಾಣಗಳಲ್ಲಿ ಓಡಾಡುತ್ತಿವೆ. ವಿದ್ಯುತ್ ತಂತಿಗಳ ಮೇಲೆ ಬಟ್ಟೆ ಒಣಗಿಸುವುದು ಹಳೇ ಪ್ರಕಟಣೆ ಆಯ್ತು![ವಿದ್ಯುತ್ ತಂತಿಯಲ್ಲಿ ಬಟ್ಟೆ ಒಣಗಿಸಲು ಸರಕಾರದ ಅನುಮತಿ!]

ಫೇಸ್ ಬುಕ್, ವಾಟ್ಸಪ್ ಮತ್ತು ಟ್ವಿಟ್ಟರ್ ನಲ್ಲಿ ಕರ್ನಾಟಕದಲ್ಲಿ ಆಗುತ್ತಿರುವ ಲೋಡ್ ಶೆಡ್ಡಿಂಗ್ ನ್ನು 'ಕತ್ತಲೆ ಭಾಗ್ಯ' ಯೋಜನೆ ಎಂದು ಕರೆಯಲಾಗಿದೆ. [ರಾಜ್ಯ ಸರ್ಕಾರದ ಅನ್ನ ಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯ ಯೋಜನೆಗಳು ಇದಕ್ಕೆ ಪ್ರೇರಣೆ ಎಂದು ಕಾಣುತ್ತದೆ] ಅವುಗಳಲ್ಲಿ ಕೆಲವು ಆಸಕ್ತಿಕರ ಜೋಕುಗಳನ್ನು ನಿಮ್ಮ ಮುಂದೆ ಇಡ್ತಾ ಇದ್ದೇವೆ .. ಓದಿ ಎಂಜಾಯ್ ಮಾಡಿ....(ಲೇಖಕರು ಯಾರೇ ಆಗಿದ್ದರೂ ಅನಂತ ಧನ್ಯವಾದಗಳು)

ಹಲವು ದಿನಗಳಿಂದ ಸರ್ಕಾರದ ಮಹತ್ವಾಕಾಂಕ್ಷಿ ಭಾಗ್ಯ, ಕತ್ತಲೆಭಾಗ್ಯವನ್ನು ಅಣಕಿಸುತ್ತಿರುವವರಿಗೆ, ವಿರೋಧಿಸುತ್ತಿರುವವರಿಗೆ ಈ ಲೇಖನ..
ಸ್ವಲ್ಪ ಸಕಾರಾತ್ಮಕವಾಗಿ ಯೋಚಿಸಿದರೆ ಕತ್ತಲೆಭಾಗ್ಯದ ಮಹತ್ವ ನಿಮಗೆ ಅರಿವಾಗುತ್ತದೆ..[ಕಣ್ಣೀರುಳ್ಳಿ: ಸಾಮಾಜಿಕ ತಾಣದಲ್ಲಿ ಕಂಡಿದ್ದು, ಕೇಳಿದ್ದು]

ಕತ್ತಲೆಭಾಗ್ಯದ ಸತ್ಪ್ರಯೋಜನಗಳು..
(ಸರಿಯಾಗಿ ಓದಿ..ಸತ್ತ ಅಲ್ಲ...!!!)
* ವಿದ್ಯುತ್ ಶುಲ್ಕ ಕಡಿಮೆ..
ದಿನದ ಬಹಳ ಹೊತ್ತು ವಿದ್ಯುತ್ ಇದ್ದರೆ,ವಿದ್ಯುತ್ ಸಲಕರಣೆಗಳನ್ನು ಬಳಸುವುದು ಜಾಸ್ತಿ.ವಿದ್ಯುತ್ ಬಿಲ್ ಕೂಡ ಜಾಸ್ತಿ ಬರುತ್ತದೆ.ವಿದ್ಯುತ್ತೇ ಇಲ್ಲದಿದ್ದರೆ ಜಾಸ್ತಿ ಬಿಲ್ ಬರಲು ಹೇಗೆ ಸಾಧ್ಯ..?ಹಾಗಾಗಿ ಇದೊಂದು ಅದ್ಭುತ ಯೋಜನೆ. ವಿದ್ಯುತ್ ಬಿಲ್ಲನ್ನು ನಿಯಂತ್ರಿಸುವ ಯೋಜನೆ.

* ಸವಕಳಿ ಕಡಿಮೆ..
ವಿದ್ಯುತ್ ಇಲ್ಲದಿದ್ದರೆ ವಿದ್ಯುತ್ ಉಪಕರಣಗಳಿಗೂ ವಿಶ್ರಾಂತಿ. ಸವಕಳಿ ವೆಚ್ಚವೂ ಕಡಿಮೆ. ದುರಸ್ತಿ ಮಾಡುವ ತಾಪತ್ರಯ ಇಲ್ಲ.

* ಧಾರಾವಾಹಿಗಳಿಗೆ ವಿರಾಮ
ದೂರದರ್ಶನದ ಧಾರವಾಹಿಗಳಿಂದ ವಿರಾಮ. ಹಾಗಾಗಿ ಮನೆಯಲ್ಲಿ ಹೆಂಗಸರಿಂದ ರುಚಿ- ರುಚಿಯಾದ ಅಡುಗೆ. ನೇತ್ರಸಂಬಂಧಿ ಕಾಯಿಲೆಗಳ ಇಳಿಮುಖ. ಕುಟುಂಬ ಸದಸ್ಯರಿಂದ ಆತ್ಮೀಯ ಮಾತುಕತೆ. ಸಂಬಂಧಗಳಲ್ಲಿ ಆತ್ಮೀಯತೆ.

* ಜಾಗತಿಕ ತಾಪಮಾನ ಇಳಿಕೆ
ಮೊದಲೇ ಹೆಚ್ಚಾಗುತ್ತಿರುವ ತಾಪಮಾನ ಇಳಿಕೆಗೆ ಕರ್ನಾಟಕದಿಂದ ಅದ್ಭುತ ಯೋಜನೆ. ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಪರಿಸರದ ಸಮತೋಲನೆ.

* ಮೊಬೈಲ್ ಬಳಕೆ ನಿಯಂತ್ರಣ
ಯುವಜನತೆ ನಿರಂತರ ಮೊಬೈಲ್ ಬಳಕೆಯಿಂದ ದಾರಿ ತಪ್ಪುತ್ತಿದ್ದಾರೆ ಎಂಬ ಮಾತಿತ್ತು. ಮೊಬೈಲಲ್ಲಿ ಚಾರ್ಚೇ ಇಲ್ಲದಿದ್ದರೆ ಹೇಗೆ ಬಳಸಿಯಾರು..? ಎಂತಹ ಅದ್ಭುತ ಉಪಾಯ..!!

* ರಿಚಾರ್ಚ್ ಮಾಡಿಸದೇ ಹಣ ಉಳಿತಾಯ
ಚಾರ್ಚ್ ಇಲ್ಲದಿದ್ದರೆ ಮೊಬೈಲ್ ಸ್ಥಗಿತ. ಮೊಬೈಲ್ ಸ್ಥಗಿತವಾದರೆ ಹಣ ಉಳಿತಾಯ. ಎಂಥಾ ಉಳಿತಾಯ ಯೋಜನೆ!

* ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ
ಕ್ಯಾಂಡಲ್ ತಯಾರಿಕೆಯ ಉದ್ಯಮ ಬಹಳ ನಷ್ಟದಲ್ಲಿತ್ತು. ಕತ್ತಲೆ ಭಾಗ್ಯದಿಂದ ಕ್ಯಾಂಡಲ್ ಉದ್ಯಮದವರಿಗೆ ಪ್ರೋತ್ಸಾಹ ಸಿಗುತ್ತಿದೆ.

* ಸೊಳ್ಳೆ ಬ್ಯಾಟ್, ಗುಡ್ನೈಟ್
ಸೊಳ್ಳೆಬತ್ತಿಗಳು ಹಾಗೂ ಸೊಳ್ಳೆಪರದೆ ಉದ್ಯಮಗಳಿಗೆ ಪ್ರೋತ್ಸಾಹ. ವಿದ್ಯುತ್ ಇಲ್ಲದಿದ್ದಾಗ ಸೊಳ್ಳೆಗಳ ನಿಯಂತ್ರಣಕ್ಕೆ ಈ ಸಾಧನಗಳನ್ನು ಬಳಸಲಾಗುತ್ತದೆ. ಇದರ ಉತ್ಪಾದಕರಿಗೆ ಮಾರಾಟ ಅಧಿಕವಾಗಿ ಲಾಭವಾಗುತ್ತದೆ.

* ನೀರಿನ ಮಿತವ್ಯಯ
ಟ್ಯಾಂಕಿನಲ್ಲಿ ನೀರು ಖಾಲಿಯಾಗಿ ಅನವಶ್ಯಕವಾಗಿ ನೀರು ಪೋಲಾಗುವುದು ನಿಯಂತ್ರಣಕ್ಕೆ ಬರುತ್ತದೆ. ಇದು Save Water ಅಭಿಯಾನ.

* ತಾರತಮ್ಯ ನೀತಿ ಇಲ್ಲ
ಜಾತಿ-ಮತ-ಧರ್ಮಗಳ ಅಂತರವಿಲ್ಲದೇ ಎಲ್ಲರೂ ಸಮಾನರೆಂದು ಪರಿಗಣಿಸಲಾಗಿರುವ ಏಕೈಕ ಅದ್ಭುತ ಯೋಜನೆ. ಈ ಯೋಜನೆಯಲ್ಲಿ ಎಲ್ಲರೂ ಫಲಾನುಭವಿಗಳೇ.

ಬೆಳಗ್ಗೆ ಸ್ನಾನ ಮಾಡಲು, ದೋಸೆಗೆ ಚಟ್ನಿ ರುಬ್ಬಲು, ಶೌಚಾಲಯಕ್ಕೆ ತೆರಳಿದವರು 'ಸುರಕ್ಷಿತವಾಗಿ' ಹೊರಕ್ಕೆ ಬರಲು ಇಂಧನ ಇಲಾಖೆಗೊಂದು ಫೋನ್ ಮಾಡಿಕೊಂಡೇ ಹೋಗುವುದು ಒಳಿತು(ಫೋನ್ ನಲ್ಲಿ ಚಾರ್ಜ್ ಇದ್ದರೆ ತಾನೆ)

(ಕತ್ತಲೆ ಭಾಗ್ಯದಿಂದ ಮಕ್ಕಳ ಭಾಗ್ಯ ಜಾಸ್ತಿಯಾದರೆ ಅದಕ್ಕೆ ಸಿದ್ದರಾಮಯ್ಯ ಸರ್ಕಾರವೇ ಹೊಣೆ ಅಂತ ಯಾರು ಹೇಳಿದರೋ ಗೊತ್ತಿಲ್ಲ! ಕತ್ತಲೆ ಭಾಗ್ಯದಿಂದ ಇನ್ನು 'ಹೆಚ್ಚಿನ' ಲಾಭಗಳು ಇವೆ. ಅವು ಅನುಭವಿಸಿದವರಿಗೆ ಮಾತ್ರ ಗೊತ್ತು ಎಂದು ನಾಗರಾಜ ಕೂಗ್ತಾ ಓಡ್ತಾ ಇದ್ದ!!!!!!)

English summary
Karnataka facing Power problem. Villages facing 14 hour and Bengaluru facing 4 to 5 hour power cut. This power cut has reflected with with snarky jokes. Social Media like Facebook, and Twitter and Whatsapp is a Medium of sharing the satirical mannerism.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X