ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಎಲ್ಸಿ ಸ್ಥಾನಕ್ಕಾಗಿ ಮೂರು ಪಕ್ಷಗಳಲ್ಲಿ ಲಾಬಿಯೋ ಲಾಬಿ!

By Mahesh
|
Google Oneindia Kannada News

ಬೆಂಗಳೂರು, ಮೇ 27: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸ್ಥಾನ ಹೊಂದಲು ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಎಂಎಲ್ಸಿ ಸ್ಥಾನಕ್ಕಾಗಿ ಮೂರು ಪಕ್ಷಗಳಲ್ಲಿ ಲಾಬಿ ನಡೆಯುತ್ತಿದೆ.

ವಿಧಾನಪರಿಷತ್ತಿನ 11 ಸದಸ್ಯರ ಅಧಿಕಾರ ಅವಧಿ ಮುಕ್ತಾಯವಾಗಿರುವುದರಿಂದ ಈ ಸ್ಥಾನಗಳಿಗಾಗಿ ಜೂನ್ 11ರಂದು ಚುನಾವಣೆ ನಡೆಯಲಿದೆ. ಈ ನಡುವೆ ನಾಮ ನಿರ್ದೇಶನಗೊಳ್ಳಲು 20ಕ್ಕೂ ಅಧಿಕ ಮಂದಿ ಸಿದ್ಧವಾಗಿದ್ದಾರೆ.

ಕಾಂಗ್ರೆಸ್-ಜೆಡಿಎಸ್‌ ಮೈತ್ರಿ, ಜೆಡಿಎಸ್‌ಗೆ ಸಭಾಪತಿ ಹುದ್ದೆ! ಕಾಂಗ್ರೆಸ್-ಜೆಡಿಎಸ್‌ ಮೈತ್ರಿ, ಜೆಡಿಎಸ್‌ಗೆ ಸಭಾಪತಿ ಹುದ್ದೆ!

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡ ಸದಸ್ಯರ ಪಟ್ಟಿ ಭಾನುವಾರ ರಾತ್ರಿ ಅಥವಾ ಸೋಮವಾರ ಪಟ್ಟಿಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.

Karnataka Legislative Council Election 2018: 11 seats Nominating Members lobby

ಬಿಜೆಪಿಯ ಕೆ.ಎಸ್.ಈಶ್ವರಪ್ಪ ಹಾಗೂ ಕಾಂಗ್ರೆಸ್​ನ ಡಾ.ಜಿ.ಪರಮೇಶ್ವರ್ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ಆ ಎರಡು ಸ್ಥಾನಗಳು ಖಾಲಿ ಯಾಗಿವೆ. ಈ ಸ್ಥಾನಗಳಿಗೆ ಹೊಸದಾಗಿ ಅಧಿಸೂಚನೆ ಹೊರಡಬೇಕಿದೆ. ವಿಧಾನಸಭೆಯ 19 ಸದಸ್ಯರಿಗೆ ಒಬ್ಬ ಸದಸ್ಯರನ್ನು ವಿಧಾನಪರಿಷತ್​ಗೆ ಕಳುಹಿಸುವ ಅವಕಾಶವಿದೆ. ಸದ್ಯ ಬಿಜೆಪಿಯ ಬಲದ ಮೇಲೆ 5, ಕಾಂಗ್ರೆಸ್ 4, ಜೆಡಿಎಸ್ ಇಬ್ಬರನ್ನು ನಾಮನಿರ್ದೇಶನ ಮಾಡಬಹುದಾಗಿದೆ.

ಬಿಜೆಪಿ ಸದಸ್ಯರಾದ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನ ಮರದ, ರಘುನಾಥ ರಾವ್ ಮಲ್ಕಾಪುರೆ, ಭಾನುಪ್ರಕಾಶ್, ಕಾಂಗ್ರೆಸ್​ನ ಎಂ.ಆರ್.ಸೀತಾರಾಂ, ಇಬ್ರಾಹಿಂ, ಮೋಟಮ್ಮ, ಕೆ.ಗೋವಿಂದರಾಜು, ಜೆಡಿಎಸ್​ನ ಸೈಯದ್ ಮುದೀರ್, ಪಕ್ಷೇತರ ಅಭ್ಯರ್ಥಿ ಬಿ.ಎನ್.ಸುರೇಶ್ ಅವಧಿ ಜೂನ್ 17ಕ್ಕೆ ಪೂರ್ಣಗೊಳ್ಳಲಿದೆ.

ವಿಧಾನಪರಿಷತ್ತಿನ 11 ಸ್ಥಾನಗಳ ಚುನಾವಣೆ ದಿನಾಂಕ ಘೋಷಣೆ ವಿಧಾನಪರಿಷತ್ತಿನ 11 ಸ್ಥಾನಗಳ ಚುನಾವಣೆ ದಿನಾಂಕ ಘೋಷಣೆ

ಯಾರು ಯಾರು ಲಾಬಿ ನಡೆಸಿದ್ದಾರೆ?:
ಬಿಜೆಪಿ ಪಾಲಿಗಿರುವ 5 ಸ್ಥಾನಗಳ ಪೈಕಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಿವಮೊಗ್ಗದ ರುದ್ರೇಗೌಡ, ಕೆ.ಪಿ.ನಂಜುಂಡಿ ಆಯ್ಕೆ ಬಹುತೇಕ ಖಚಿತವಾಗಿದೆ.

ಉಳಿದಂತೆ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಎಂ.ಬಿ.ಭಾನುಪ್ರಕಾಶ್ ಪುನಾರಾಯ್ಕೆ ಬಯಸಿದ್ದಾರೆ. ಜೊತೆಗೆ ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣ, ತೇಜಸ್ವಿನಿ ಅವರೂ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್ಸಿನಲ್ಲಿರುವ 4 ಸ್ಥಾನಕ್ಕೆ ಮಾಜಿ ಸಚಿವ ಎಂ.ಆರ್.ಸೀತಾರಾಂ, ಮೋಟಮ್ಮ ಮರು ಆಯ್ಕೆ ಬಯಸಿದ್ದರೆ, ಕಾಮಾಕ್ಷಿ ರಾಜಣ್ಣ, ರಾಮಚಂದ್ರಪ್ಪ, ವಿ.ಆರ್.ಸುದರ್ಶನ್, ನಿವೇದಿತಾ ಆಳ್ವ, ನಾಗರಾಜ್ ಯಾದವ್, ಹುಚ್ಚಪ್ಪ, ನಂಜಯ್ಯನ ಮಠ, ರಾಣಿ ಸತೀಶ್, ಮುಖ್ಯಮಂತ್ರಿ ಚಂದ್ರು ಮತ್ತಿತರರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಜೆಡಿಎಸ್​ನಿಂದ ಫಾರೂಕ್, ವೈಎಸ್​ವಿ ದತ್ತ ಆಯ್ಕೆ ಮಾಡುವ ಸಾಧ್ಯತೆ ಇದೆ.

English summary
Karnataka Legislative Council Election 2018: Lobby for 11 seats Nominated Members has intensified has All three BJP, Conrgess and JDS is able to nominate five, four and 2 members respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X