• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಚಿವರು, ಶಾಸಕರಿಗೂ ಕೋವಿಡ್ ನೆಗಟಿವ್ ಪರೀಕ್ಷಾ ವರದಿ ಕಡ್ಡಾಯ

|

ಬೆಂಗಳೂರು, ಸೆ. 20: ಕೋವಿಡ್ ಆತಂಕದ ಮಧ್ಯೆ ನಾಳೆಯಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. 10 ದಿನಗಳ ಕಾಲ ನಡೆಯಲಿರುವ ಅಧಿವೇಶನ ನಡೆಸಲು ವಿಧಾನಸಭೆ ಸಚಿವಾಲಯ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜೊತೆಗೆ ಕಲಾಪದ ಸಂದರ್ಭದಲ್ಲಿ ಪಾಲನೆ ಮಾಡಲು ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು ವಿಧಾನಸೌಧ ಹಾಗೂ ವಿಕಾಸಸೌಧಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಜೊತೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗು ಸಚಿವರ ಆಪ್ತ ಸಹಾಯಕರು ವಿಧಾನಸೌಧ, ವಿಕಾಸಸೌಧ ಪ್ರವೇಶಕ್ಕೆ ಮಾರ್ಗಸೂಚಿ ಹೊರಡಿಸಲಾಗಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತೆಯಿಂದರು ವಿಧಾನಸಭೆ ಸಚಿವಾಲಯ ಕ್ರಮ ಕೈಗೊಂಡಿದೆ. ಜೊತೆಗೆ ಸಚಿವರು, ಶಾಸಕರೂ ಸೇರಿದಂತೆ ಎಲ್ಲರ ಕೋವಿಡ್ ಪರೀಕ್ಷಾ ವರದಿ ನೆಗಟಿವ್ ಇರುವುದು ಕೂಡ ಅಗತ್ಯವಾಗಿದೆ. ಜೊತೆಗೆ ಸುರಕ್ಷತಾ ಕ್ರಮಗಳನ್ನು ಸೂಚಿಸಿದ್ದು, ಕಡ್ಡಾಯವಾಗಿ ಪಾಲನೆ ಮಾಡಲು ಸೂಚಿಸಲಾಗಿದೆ.

ಪರೀಕ್ಷಾ ವರದಿ ನೆಗಟಿವ್ ಕಡ್ಡಾಯ

ಪರೀಕ್ಷಾ ವರದಿ ನೆಗಟಿವ್ ಕಡ್ಡಾಯ

ಅಧಿವೇಶನದಲ್ಲಿ ಭಾಗವಹಿಸಲು ವಿಧಾನಸಭೆಯ ಸದಸ್ಯರು ಸೇರಿದಂತೆ ಎಲ್ಲರೂ 72 ಘಂಟೆಗಳಿಗೆ ಮುಂಚಿತವಾಗಿ ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ. ಸ್ವತಃ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿ ಪರೀಕ್ಷಾ ವರದಿ ಪಡೆದಿದ್ದಾರೆ.

ಇತಿಹಾಸ ನಿರ್ಮಿಸಲಿದೆ ಈ ಮಳೆಗಾಲದ ವಿಧಾನ ಮಂಡಲ ಅಧಿವೇಶನ!

ವಿಧಾನಸಭೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಮಾಧ್ಯಮದವರು ಪರೀಕ್ಷೆಗೆ ಒಳಗಾಗಿದ್ದಾರೆ. ಪರೀಕ್ಷಾ ವರದಿ ಕೋವಿಡ್ ನೆಗಟಿವ್ ಬಂದವರು ಮಾತ್ರ ವಿಧಾನಸೌಧ ಪ್ರವೇಶಿಸಲು ಅನುಮತಿಯಿದೆ.

ಶಾಸಕರು, ಸಚಿವರ ಪ್ರವೇಶ

ಶಾಸಕರು, ಸಚಿವರ ಪ್ರವೇಶ

ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಸಚಿವರು, ಶಾಸಕರು ಜೊತೆಗೆ ಒಬ್ಬ ಆಪ್ತ ಸಹಾಯಕರು, ಒಬ್ಬ ಗನ್‌ಮ್ಯಾನ್‌ಗಳಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುತ್ತದೆ.

ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಪ್ರವೇಶಿಸುವ ಆಪ್ತ ಸಹಾಯಕರು, ಗನ್‌ಮ್ಯಾನ್‌ಗಳು ಪಶ್ಚಿಮ ದ್ವಾರದ 1ನೇ ಮಹಡಿಗೆ ಹೋಗಲು ಅವಕಾಶ ಇರುವುದಿಲ್ಲ. ಗನ್‌ಮ್ಯಾನ್‌ಗಳಿಗೆ ಬ್ಯಾಂಕ್ವಟ್ ಹಾಲ್‌ನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಆಪ್ತ ಸಹಾಯಕರಿಗೆ ಪೂರ್ವ ದ್ವಾರದ ಸೆಂಟ್ರಲ್ ಹಾಲ್‌ನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

ವಿಧಾನಸೌಧದ ಉತ್ತರ ದ್ವಾರ

ವಿಧಾನಸೌಧದ ಉತ್ತರ ದ್ವಾರ

ವಿಧಾನಸೌಧದ ಉತ್ತರ ದ್ವಾರದ ಮೂಲಕ ಎಲ್ಲಾ ಆಧಿಕಾರಿಗಳಿಗೆ, ಸಿಬ್ಬಂದಿಗೆ ಹಾಗೂ ಮಧ್ಯಮದವರಿಗೆ ಪ್ರವೇಶಕ್ಕೆ ಅವಕಾಶವಿದೆ.

ನಾಳೆಯಿಂದ ಮಳೆಗಾಲದ ಅಧಿವೇಶನ ಕಾಂಗ್ರೆಸ್ ಪಕ್ಷದ ರಣತಂತ್ರ ಏನು ಗೊತ್ತಾ?

ವಿಧಾನಸೌಧದ ಪೂರ್ವ ದ್ವಾರದಲ್ಲಿ ಮಾಧ್ಯಮದವರ ಪ್ರವೇಶಕ್ಕೆ ಅವಕಾಶವಿದೆ. ಜೊತೆಗೆ ಮಾಧ್ಯಮದವರಿಗೆ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಮೀಡಿಯಾ ಸ್ಟ್ಯಾಂಡ್ ಮತ್ತು ಸೆಂಟ್ರಲ್ ಹಾಲ್‌ನಲ್ಲಿರುವ ಮೀಡಿಯಾ ಸ್ಟ್ಯಾಂಡ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

  8 ಜನ ರಾಜ್ಯಸಭಾ ಸದಸ್ಯರು ಅಮಾನತು !! | Oneindia Kannada
  ವಿಧಾನಸೌಧದ ಪಶ್ಚಿಮ ದ್ವಾರ

  ವಿಧಾನಸೌಧದ ಪಶ್ಚಿಮ ದ್ವಾರ

  ವಿಧಾನಸೌಧದ ಪಶ್ಚಿಮ ದ್ವಾರದ ಮೊದಲ ಮಹಡಿಯ ಮೊಗಸಾಲೆಯಲ್ಲಿ ಕುಳಿತುಕೊಳ್ಳಲು, ನಿಲ್ಲಲು ಯಾರಿಗೂ ಅವಕಾಶವಿರುವುದಿಲ್ಲ. ವಿಧಾನಸೌಧದ ಪೂರ್ವದ್ವಾರದ ಸೆಂಟ್ರಲ್ ಹಾಲ್‌ನಲ್ಲಿ ಮಾಧ್ಯಮದವರಿಗೆ, ಆಪ್ತ ಸಹಾಯಕರಿಗೆ ಹಾಗೂ ವಿಧಾನಸಭೆ-ವಿಧಾನ ಪರಿಷತ್ ಸಿಬ್ಬಂದಿ ಬಿಟ್ಟು ಬೇರೆಯವರಿಗೆ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.

  ಅಧಿವೇಶನದ ಅವಧಿಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪ್ರತಿಯೊಬ್ಬರು ಸಹ ಕಡ್ಡಾಯ ವಾಗಿ ಮಾಸ್ಕ್ ಧರಿಸುವಂತೆ ಹಾಗೂ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದಯಕೊಳ್ಳಬೇಕು.

  English summary
  Amidst Covid's anxiety, the assembly session will start tomorrow. The Karnataka legislative assembly has made all arrangements to hold a 10-day session.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X