ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಬದಲಾವಣೆ: ಕೋವಿಡ್ ನಿರ್ವಹಣೆ ಬಿಟ್ಟು ಏನಿದು ಬಿಜೆಪಿಯಲ್ಲಿ, ಜನ ನಿಮ್ಮನ್ನು ಕ್ಷಮಿಸಿಯಾರೇ?

|
Google Oneindia Kannada News

ಬೆಂಗಳೂರು, ಮೇ 26: ಬಿಜೆಪಿಯಲ್ಲಾಗಲಿ ಅಥವಾ ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪನವರಿಗಾಗಲಿ ಸಿಎಂ ಬದಲಾವಣೆ ವಿಚಾರ ಹೊಸದೇನಲ್ಲ. ಹೊಸಹೊಸ ಪ್ರಯತ್ನ ನಡೆದಾಗಲೆಲ್ಲಾ ಈ ರೀತಿಯ ಸುದ್ದಿ ಮುನ್ನಲೆಗೆ ಬರುತ್ತದೆ.

ಯಡಿಯೂರಪ್ಪನವರು ಸಿಎಂ ಹುದ್ದೆಯಿಂದ ಕೆಳಗಿಳಿಯಬೇಕು, ಅವರನ್ನು ಗೌರವಯುತವಾಗಿ ನಡೆಸಿಕೊಂಡು ಅವರಿಗೆ ರಾಜ್ಯಪಾಲರ ಹುದ್ದೆಯ ಆಮಿಷವನ್ನು ನೀಡಲಾಗಿದೆ ಎನ್ನುವ ಸುದ್ದಿಯೂ ಬಂದಷ್ಟೇ ವೇಗದಲ್ಲಿ ಮಾಯವಾಗಿತ್ತು.

ಸಿಎಂ ರೇಸ್‌ನಲ್ಲಿ ಉತ್ತರ ಕರ್ನಾಟಕದ ಈ ಬಿಜೆಪಿ ನಾಯಕ!?ಸಿಎಂ ರೇಸ್‌ನಲ್ಲಿ ಉತ್ತರ ಕರ್ನಾಟಕದ ಈ ಬಿಜೆಪಿ ನಾಯಕ!?

ಈ ರೀತಿಯ ಸುದ್ದಿಗಳನ್ನು ಬಿಜೆಪಿಯ ಒಂದು ಬಣದವರೇ ಉದ್ದೇಶಪೂರ್ವಕವಾಗಿಯೇ ಹರಿದಾಡಲು ಬಿಟ್ಟಿರುವ ಸಾಧ್ಯತೆಯಿಲ್ಲದಿಲ್ಲ. ಈ ರೀತಿಯ ವಿಚಾರ ಬಂದಾಗಲೆಲ್ಲಾ ಹೈಕಮಾಂಡ್ ಅಥವಾ ರಾಜ್ಯ ಉಸ್ತುವಾರಿಗಳು ಸ್ಪಷ್ಟನೆಯನ್ನು ನೀಡಿ ಸುಮ್ಮನಾಗುತ್ತಿದ್ದರು.

 ಸಿಎಂ ಬದಲಾವಣೆ ಚಟುವಟಿಕೆ ನಿಜ ಆದರೆ ನಾನು ಕೊರೊನಾ ಕಾರ್ಯದಲ್ಲಿ ನಿರತ- ಆರ್‌ ಅಶೋಕ್‌ ಸಿಎಂ ಬದಲಾವಣೆ ಚಟುವಟಿಕೆ ನಿಜ ಆದರೆ ನಾನು ಕೊರೊನಾ ಕಾರ್ಯದಲ್ಲಿ ನಿರತ- ಆರ್‌ ಅಶೋಕ್‌

ಹಾಗಾದರೆ, ಈಗ ಮತ್ತೆ ಎರಡು ದಿನಗಳಿಂದ ಹರಿದಾಡುತ್ತಿರುವ ಸಿಎಂ ಬದಲಾವಣೆ ಸುದ್ದಿ ಕೂಡಾ ಅದೇ ರೀತಿಯದ್ದಾ ಎಂದರೆ ಅಲ್ಲ ಎನ್ನಬಹುದು, ಯಾಕೆಂದರೆ, ಖುದ್ದು ಬಿಜೆಪಿ ಸಚಿವರುಗಳೇ ಇದನ್ನು ಒಪ್ಪಿಕೊಂಡಿರುವುದು.

 ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಒಂದು ಮಾತನ್ನು ಹೇಳಿದ್ದರು. "ಕೋವಿಡ್ ನಂತಹ ಈ ಸಮಯದಲ್ಲಿ ಕ್ಷೇತ್ರದಲ್ಲಿ ಇರುವುದನ್ನು ಬಿಟ್ಟು, ದೆಹಲಿಯಲ್ಲಿ ಲಾಬಿ ಮಾಡಿಕೊಂಡು ಕೂತಿದಿಯಾ" ಎಂದು. ಇವರ ಸಿಟ್ಟು ನೇರವಾಗಿ ಸಿ.ಪಿ.ಯೋಗೇಶ್ವರ್ ಮೇಲಿತ್ತು. ಆಗಲೇ, ಸಿಎಂ ಬದಲಾವಣೆಯ ವಿಚಾರ ಗುಸುಗುಸು ಹರಿದಾಡಲಾರಂಭಿಸಿದ್ದು.

 ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೆಸರು ಕೇಳಿ ಬರುತ್ತಿತ್ತು

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೆಸರು ಕೇಳಿ ಬರುತ್ತಿತ್ತು

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬಿಜೆಪಿ ಹೈಕಮಾಂಡ್, ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಜೊತೆ ತಮ್ಮ ಸಚಿವಾಲಯದ ಕೆಲಸದ ಮೂಲಕ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಇವರಿಗೆ ಬಿಜೆಪಿ ಮಾತೃ ಸಂಘಟನೆಯ ಬಲವಾದ ಆಶೀರ್ವಾದವೂ ಇದೆ. ಇವರೇ ಮುಂದಿನ ಸಿಎಂ ಎನ್ನುವ ಮಾತು, ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೆ, ಇವರ ಜಾತಿ ಇವರಿಗೆ ಈ ಸ್ಥಾನ ಸಿಗದಂತೆ ಮಾಡುತ್ತಾ ಎನ್ನುವುದಿಲ್ಲಿ ಪ್ರಶ್ನೆ.

 ಹೌದು ಎಂದು ಕಂದಾಯ ಸಚಿವ ಆರ್.ಅಶೋಕ್ ಒಪ್ಪಿಕೊಂಡಿದ್ದಾರೆ

ಹೌದು ಎಂದು ಕಂದಾಯ ಸಚಿವ ಆರ್.ಅಶೋಕ್ ಒಪ್ಪಿಕೊಂಡಿದ್ದಾರೆ

ಬೆಂಕಿಯಿಲ್ಲದೇ ಹೊಗೆಯಾಡುವುದಿಲ್ಲ, ಹಾಗೆಯೇ ಈಗ ಮತ್ತೆ ಚಾಲ್ತಿಯಲ್ಲಿರುವ ಸಿಎಂ ಬದಲಾವಣೆ ಸುದ್ದಿಯನ್ನು ರಾಜ್ಯದ ಎರಡು ಪ್ರಮುಖ ಸಚಿವರು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಇದರೆ ಬೆನ್ನಲ್ಲೇ, ಮುಖ್ಯಮಂತ್ರಿಗಳು ಬಿಜೆಪಿ ಶಾಸಕರ ಸಭೆಯನ್ನು ಕರೆದಿದ್ದಾರೆ. ರಹಸ್ಯ ಸಭೆಗಳನ್ನು ಶಾಸಕರು ಮತ್ತು ಸಚಿವರು ಮಾಡುತ್ತಿರುವುದು ಹೌದು ಎಂದು ಕಂದಾಯ ಸಚಿವ ಆರ್.ಅಶೋಕ್ ಒಪ್ಪಿಕೊಂಡಿದ್ದಾರೆ.

Recommended Video

ನಾಯಿ ಮರಿಯನ್ನು ಒಂದೇ ಏಟಿಗೆ ನುಂಗಿದ ಮೊಸಳೆ | Oneindia Kannada
 ಸಿಎಂ ಬದಲಾವಣೆ: ಕೋವಿಡ್ ನಿರ್ವಹಣೆ ಬಿಟ್ಟು ಏನಿದು

ಸಿಎಂ ಬದಲಾವಣೆ: ಕೋವಿಡ್ ನಿರ್ವಹಣೆ ಬಿಟ್ಟು ಏನಿದು

ಒಂದು ವೇಳೆ ಇದು ನಿಜವಾದಲ್ಲಿ ಬಿಜೆಪಿ ತನ್ನ ಬುಡಕ್ಕೇ ತಾನೇ ಕೊಡಲಿ ಏಟು ಕೊಟ್ಟಂತೆ. ಯಾಕೆಂದರೆ, ಯಾವುದಕ್ಕೂ ಸಮಯ, ಸಂದರ್ಭ ಎನ್ನುವುದು ಇರುತ್ತೆ. ರಾಜ್ಯ ಇನ್ನೂ ಕೋವಿಡ್ ಅಲೆಯಲ್ಲಿ ಚೇತರಿಸಿಕೊಳ್ಳದೇ ಇರುವುದು ಒಂದು ಕಡೆ, ಇನ್ನೊಂದು ಕಡೆ ಕೊರೊನಾ ನಿರ್ವಹಣೆಯಲ್ಲಿ ವೈಫಲ್ಯತೆ. ಮೊದಲು ರಾಜ್ಯದ ಜನರ ಆರೋಗ್ಯದ ಕಡೆ ಗಮನಕೊಡದೇ, ರಾಜಕೀಯದಲ್ಲಿ ತೊಡಗಿಸಿಕೊಂಡರೆ, ಜನ ಕ್ಷಮಿಸಿಯಾರೇ?

English summary
Karnataka leadership change: Now is the time to manage and control Covid-19 in the state, not the right time to change CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X