ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೋನಾ ನಡುವೆಯೂ ಕಾನೂನು ವಿವಿ ಪರೀಕ್ಷೆ : ವಿದ್ಯಾರ್ಥಿ ಸಮುದಾಯ ಆಕ್ರೋಶ !

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ವಿದ್ಯಾರ್ಥಿಗಳ ಜೀವನಕ್ಕಿಂತಲೂ ಪರೀಕ್ಷೆಯೇ ಮುಖ್ಯ ವಾಯಿತೇ ? ಕರೋನಾ ತಾಂಡವಾಡುತ್ತಿದ್ದರೂ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯ ಪರೀಕ್ಷೆಗಳನ್ನು ನಡೆಸುತ್ತಿದೆ. ಕಾನೂನು ಪದವಿ ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಇದೀಗ ಕೊರೋನಾ ಭಯದಲ್ಲಿ ಮುಳುಗಿದ್ದಾರೆ.

ಕೊರೋನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಸಿಬಿಎಸ್‌ಸಿ ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ರಾಜ್ಯದೆಲ್ಲೆಡೆ ಶಾಲಾ ಕಾಲೇಜುಗಳಿಗೆ ಮತ್ತೆ ರಜೆ ಘೋಷಣೆ ಮಾಡಲಾಗಿದೆ. ಮುಂದಿನ ಪರೀಕ್ಷೆಗಳನ್ನು ರದ್ದು ಮಾಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಇನ್ನೊಂದಡೆ ರಾಜಧಾನಿ ಸೇರಿದಂತೆ ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ನಿರೀಕ್ಷೆಗೂ ಮೀರಿ ಎದ್ದಿದೆ. ಕೊರೋನಾ ಸೋಂಕಿಗೆ ತುತ್ತಾಗಿರುವ ಮಂದಿ ಆಸ್ಪತ್ರೆಗಳಲ್ಲಿ ಹಾಸಿಗೆಯೂ ಸಿಗದೇ ಬೀದಿಯಲ್ಲಿ ಜೀವ ಬಿಡುತ್ತಿದ್ದಾರೆ. ಇಂಥ ಸಂಕಷ್ಟ ಸ್ಥಿತಿಯಲ್ಲಿ ಕಾನೂನು ವಿಶ್ವ ವಿದ್ಯಾಲಯ ಕಾನೂನು ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುತ್ತಿದೆ.

ಕಾನೂನು ಪದವಿ ವ್ಯಾಸಂಗ ಸಂಬಂಧ ಎರಡನೇ ಸೆಮಿಸ್ಟರ್ ಪರೀಕ್ಷೆಗಳನ್ನು ಕಾನೂನು ವಿವಿ ರದ್ದುಗೊಳಿಸಿದೆ. ಆದರೆ, ಮೂರನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುತ್ತಿದೆ. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗಿ ಪರೀಕ್ಷೆ ಬರೆಯುತ್ತಿದ್ದಾರೆ. ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾನೂನು ವಿವಿ ಪರೀಕ್ಷೆಯನ್ನು ಮುಂದೂಡಬಹುದಿತ್ತು. ಆದರೆ, ಕೊರೋನಾ ಸೋಂಕಿಗೂ ತಮಗೂ ಏನೂ ಸಂಬಂಧ ಇಲ್ಲದಂತೆ ಪರೀಕ್ಷೆ ನಡೆಸುತ್ತಿದೆ. ಇದು ಕಾನೂನು ವಿದ್ಯಾರ್ಥಿ ಸಮುದಾಯದಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

Karnataka law university conducting Examination Despite Corona: Student Community Outrage!

ಸೋಮವಾರ ಕೂಡ ಪರೀಕ್ಷೆ ನಡೆದಿರುವುದು ವಿದ್ಯಾರ್ಥಿಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ನೆರೆ ತಮಿಳುನಾಡು ಮತ್ತು ಕೇರಳದ ವಿದ್ಯಾರ್ಥಿಗಳೇ ಹೆಚ್ಚಾಗಿ ರಾಜ್ಯದ ಕಾನೂನು ವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳು ಇಲ್ಲಿಗೆ ಬಂದಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.

Karnataka law university conducting Examination Despite Corona: Student Community Outrage!

Recommended Video

#Covid19update : ಒಂದೇ ದಿನ ದೇಶದಲ್ಲಿ 2,73,810 ಜನರಿಗೆ ಕೊರೊನಾ ಸೋಂಕು! | Oneindia Kannada

ಈಗಾಗಲೇ ಹದಿನೈದು ದಿನದಿಂದ ಪರೀಕ್ಷೆಗಳು ನಡೆಯುತ್ತಿದೆ. ಕಾನೂನು ವಿವಿ ಮೊದಲೇ ಪರೀಕ್ಷೆ ದಿನಾಂಕ ನಿಗದಿ ಮಾಡಿತ್ತು. ಅದರಂತೆ ಪರೀಕ್ಷೆಗಳು ಮುಗಿದು ಹೋಗಿವೆ. ಕೇವಲ ಇನ್ನೊಂದು ವಿಷಯದ ಪರೀಕ್ಷೆ ಮಾತ್ರ ಇದ್ದು, ಅದು ಕೂಡ ಇವತ್ತು ಪೂರ್ಣವಾಗಲಿದೆ. ಹೀಗಾಗಿ ಕೊರೋನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಪರೀಕ್ಷೆ ಮುಗಿದಿರುವುದರಿಂದ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕಾನೂನು ಪದವಿ ತುಂಬಾ ಮಹತ್ವದ್ದು. ಪ್ರೌಢ ಶಾಲೆ ಮಕ್ಕಳ ರೀತಿ ಪರೀಕ್ಷೆ ಇಲ್ಲದೇ ಉತ್ತೀರ್ಣ ಮಾಡುವುದರಿಂದ ತುಂಬಾ ಪ್ರಮಾದ ಆಗುತ್ತದೆ. ನೊಂದ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುವ ನೋಬಲ್ ವೃತ್ತಿ ವಕೀಲಿವೃತ್ತಿ. ಹೀಗಾಗಿ ಪರೀಕ್ಷೆ ಮಾಡುವುದು ಅಗತ್ಯ ಎಂದು ಕಾನೂನು ಕಾನೂನಿನ ಪ್ರಾಂಶುಪಾಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
Karnataka Law University is conducting examination despite corona virus second wave; law student community is worried know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X