ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಿಂದ ಬೆಳಗಾವಿ ತನಕದ ಜಿಲ್ಲಾ ಸಂಕ್ಷಿಪ್ತ ಸುದ್ದಿಗಳು

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಗಾಗಿ ಪ್ರತಿಭಟನೆ, ರಾಯಚೂರಿನಲ್ಲಿ ಬಿಜೆಪಿಯಿಂದ ಎಸ್ಟಿ ಸಮಾವೇಶ, ಕಾಂಗ್ರೆಸ್ಸಿನಿಂದ ಶ್ರೀನಿವಾಸ್ ಪ್ರಸಾದ್ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನ, ರೌಡಿ ಶೀಟರ್ ಹತ್ಯೆ, ಚಿತ್ರದುರ್ಗದ ಬಳಿ ಭೀಕರ ರಸ್ತೆ ಅಪಘಾತ..ಇವೆ ಮುಂತಾದ ಹೆಡ್ ಲೈನ್ ಸುದ್ದಿಗಳು ಸಂಕ್ಷಿಪ್ತವಾಗಿ ನಿಮ್ಮ ಮುಂದೆ...

ಮಂಡ್ಯ : ಪಾಲಿಶ್ ನೆಪದಲ್ಲಿ ಚಿನ್ನ ಕದಿಯುತ್ತಿದ್ದ ಆರೋಪಿ ಬಂಧನ
ವಿವಿಧೆಡೆ ಚಿನ್ನಾಭರಣ ಪಾಲಿಶ್ ಮಾಡುವ ನೆಪದಲ್ಲಿ ಚಿನ್ನ ಲಪಟಾಯಿಸುತ್ತಿದ್ದ ವ್ಯಕ್ತಿಯನ್ನು ಕೆ.ಆರ್.ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಚಂದನ್ (25) ಬಂಧಿತ ಆರೋಪಿ.

ಕೆ.ಆರ್.ಪೇಟೆ ತಾಲೂಕಿನ ಯಲಾದಹಳ್ಳಿ ಶೋಭ ಮಹೇಶ್ ಎಂಬುವರ ಪತ್ನಿಯ ಚಿನ್ನದ ಸರ ಪಾಲೀಸ್ ಮಾಡುವ ಸಂದರ್ಭದಲ್ಲಿ 16 ಗ್ರಾಂ ಚಿನ್ನ ಲಪಟಾಯಿಸಿ ಪರಾರಿಯಾಗಿದ್ದ ಚಂದನ್, ಚಿಕ್ಕೋಸಹಳ್ಳಿ ಗ್ರಾಮದಲ್ಲಿ ಪಾಲೀಸ್ ಮಾಡಿಕೊಡುವುದಾಗಿ ಮಹಿಳೆಯರ ಮನವೊಲಿಸುತ್ತಿದ್ದಾಗ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.



ಬೆಳಗಾವಿ :ಕಿತ್ತೂರು ಚೆನ್ನಮ್ಮ ಉತ್ಸವಕ್ಕೆ ಚಾಲನೆ

ಕಿತ್ತೂರು ಉತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆಯಾದ್ಯಂತ ಸಂಚರಿಸಿದ ವೀರಜ್ಯೋತಿಯನ್ನು ಕಿತ್ತೂರು ಮಹಾದ್ವಾರದ ಬಳಿ ಭಾನುವಾರದಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬರಮಾಡಿಕೊಂಡರು. ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು.

Karnataka Latest Top Headlines News in Brief of Sunday October 23

ಹಿರಿಯೂರು ಬಳಿ ಭೀಕರ ಅಪಘಾತ
ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಆಂಜನೇಯ ಶೆಟ್ಟಿ, ಪತ್ನಿ, ಮಗ ಜನಾರ್ಧನ್ ಎಂದು ಗುರುತಿಸಲಾಗಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ಎದುರಿಗೆ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ.

Accident neat Hiriyur

ಹೆಬ್ಬಾಳದಲ್ಲಿ ಸ್ಟೀಲ್ ಬ್ರಿಡ್ಜ್ ಗಾಗಿ ಪ್ರತಿಭಟನೆ
*ಬೆಂಗಳೂರಿನ ಹೆಬ್ಬಾಳದ ನಾಗರೀಕ ಹಿತಾ ಸಮಿತಿ ವತಿಯಿಂದ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.
* ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಗಬೇಕಿದೆ. ಇದಕ್ಕಾಗಿ ಉಕ್ಕಿನ ಸೇತುವೆ ಬೇಕು ಎಂದು ಐನೂರಕ್ಕೂ ಅಧಿಕ ನಾಗರಿಕರ ಸಹಿ ಸಂಗ್ರಹ ಅಭಿಯಾನ ಮಾಡಲಾಗಿದೆ. [ಪೂರ್ಣ ವರದಿ ಇಲ್ಲಿ ಓದಿ]


ಬೆಂಗಳೂರಿನಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ
* ಕುಳ್ಳ ಸೀನನ ಸಹಚರ ಗಣೇಶ್ ನನ್ನು ಕೊಚ್ಚಿ ಕೊಲೆ, ಜಂಬೂ ಸವಾರಿ ದಿಣ್ಣೆಯ ವಿನಾಯಕ ಟಾಕೀಸ್ ಬಳಿ ನಡೆದ ಘಟನೆ
* ಸುಬ್ರಮಣ್ಯ ಪುರ ಪೊಲೀಸರಿಂದ ಪರಿಶೀಲನೆ, ಪ್ರಕರಣ ದಾಖಲು, ತನಿಖೆ ಜಾರಿ.


ರಾಯಚೂರಿನಲ್ಲಿ ಬಿಜೆಪಿಯಿಂದ ಎಸ್ಟಿ ಸಮಾವೇಶ
* ರಾಯಚೂರಿನ ಲಿಂಗಸಗೂರಿನಲ್ಲಿ ಬಿಜೆಪಿ ಪರಿಶಿಷ್ಟ ಪಂಗಡ ಸಮುದಾಯದ ಸಮಾವೇಶ ಹಮ್ಮಿಕೊಂಡಿದೆ.
* ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಕಿಡಿಕಾರಿದರು.


ಜಯಲಲಿತಾಗಾಗಿ ಚಾಮುಂಡಿಗೆ ಪೂಜೆ
* ತಮಿಳುನಾಡಿನ ಸಿಎಂ ಜಯಲಲಿತಾ ಅವರ ಆರೋಗ್ಯ ಸುಧಾರಣೆಗಾಗಿ ಮೈಸೂರಿನ ಚಾಮುಂಡೆ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
* ಜಯಲಲಿತಾ ಅವರ ಹೆಸರಿನಲ್ಲಿ ಬೆಳ್ಳಿರಥೋತ್ಸವ ನಡೆಸಲಾಗಿದೆ.

Karnataka Latest Top Headlines News in Brief of Sunday October 23

ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ
* ಟಿಪ್ಪು ಜಯಂತಿಗೆ ವಿರೋಧ ಬೇಡ, ಟಿಪ್ಪು ಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದ ಸಿಎಂ ಸಿದ್ದರಾಮಯ್ಯ
* ಸಂಘ ಪರಿವಾರದವರು ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ನಿಲ್ಲಿಸಬೇಕು ಎಂದರು.
* ಸ್ಟೀಲ್ ಬ್ರಿಡ್ಜ್ ಬಗ್ಗೆ ಜನರಲ್ಲಿ ತಪ್ಪು ಭಾವನೆ, ಮಾಹಿತಿ ಕೊರತೆ ಇದೆ, ನಿವಾರಿಸುತ್ತೇವೆ.
* ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಕ್ಷೇತ್ರದಲ್ಲಿ ಸಮಾವೇಶಕ್ಕೆ ಹಾಜರಾದ ಸಿಎಂ, ವಿಶ್ವನಾಥ್ ಹಾಗೂ ಸಿಎಂ ಇಬ್ರಾಹಿಂ ವಿರುದ್ಧ ತಿರುಗೇಟು.

English summary
Top Headlines of Sunday October 23: Hebbal residents in Bengaluru are demanding for Steel Flyover project implemention. Congress and BJP busy with rallies, Special pooja for Jayalalithaa's health recovery and many more news in brief from across the Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X