ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಡಿಹಳ್ಳಿ Vs ಕುಮಾರಸ್ವಾಮಿ: ಮಾತಿನ ಮೇಲೆ ಹಿಡಿತ ತಪ್ಪಿದಾಗ..

|
Google Oneindia Kannada News

ಬೆಂಗಳೂರು, ಡಿ 10: ಭೂಸುಧಾರಣಾ ಕಾಯ್ದೆ ಮತ್ತು ನೂತನ ಕೃಷಿನೀತಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಭೂಸುಧಾರಣಾ ಕಾಯ್ದೆಯ ಸಂಬಂಧ, ವಿಧಾನಸಭಾ ಕಲಾಪದಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್, ಆಡಳಿತ ಬಿಜೆಪಿ ಪರವಾಗಿ ನಿಲ್ಲುತ್ತಿದ್ದಂತೆಯೇ ಆಕ್ರೋಶಗೊಂಡ ರೈತ ಮುಖಂಡರು, ಎಚ್ಡಿಕೆ ವಿರುದ್ದ ತಿರುಗಿಬಿದ್ದಿದ್ದಾರೆ.

ನಾನು ಸಿದ್ದರಾಮಯ್ಯನವರಂತೆ ತಡರಾತ್ರಿ ಬಿಎಸ್ವೈ ಭೇಟಿಯಾಗಲಿಲ್ಲ, ನಮ್ಮದೇನಿದ್ದರೂ ಓಪನ್: ಕುಮಾರಸ್ವಾಮಿ ನಾನು ಸಿದ್ದರಾಮಯ್ಯನವರಂತೆ ತಡರಾತ್ರಿ ಬಿಎಸ್ವೈ ಭೇಟಿಯಾಗಲಿಲ್ಲ, ನಮ್ಮದೇನಿದ್ದರೂ ಓಪನ್: ಕುಮಾರಸ್ವಾಮಿ

ಅತ್ತ, ಕೋಲಾರದಲ್ಲಿ ತಮ್ಮ ನಿಲುವನ್ನು ಮೊದಲು ಸಮರ್ಥಿಸಿಕೊಂಡ ಕುಮಾರಸ್ವಾಮಿ, ಅಸೆಂಬ್ಲಿಗೆ ಬರುತ್ತಿದ್ದಂತೆಯೇ ಇನ್ನೊಂದು ಹೇಳಿಕೆ ನೀಡಿ ಯೂಟರ್ನ ತೆಗೆದುಕೊಂಡರು. ರೈತ ಮುಖಂಡರನ್ನು ಢೋಂಗಿ ರೈತರು ಎಂದು ಕುಮಾರಸ್ವಾಮಿ ಜರಿದರು.

ಇದಕ್ಕೂ ಮುನ್ನ ಕೋಡಿಹಳ್ಳಿ ಚಂದ್ರಶೇಖರ್, ಕುಮಾರಸ್ವಾಮಿಯವರನ್ನು ಏಕವಚನದಲ್ಲಿ ಹರಿಹಾಯ್ದರು. ಇದರಿಂದ ಇವರಿಬ್ಬರ ನಡುವಿನ ಮಾತಿನ ಚಕಮಕಿ ತೀವ್ರ ಮಟ್ಟಕ್ಕೆ ಹೋಯಿತು. ಅದರ ಕೆಲವೊಂದು ಸ್ಯಾಂಪಲ್ ಹೀಗಿದೆ:

ಜೆಡಿಎಸ್ಸಿನ 'ಬಿಟೀಂ' ಕಾಂಗ್ರೆಸ್: ನಿಮ್ಮ ದೌಲತ್ತೇ ಕಾಂಗ್ರೆಸ್ಸಿನ ಇಂತಹ ದುಸ್ಥಿತಿಗೆ ಕಾರಣ ಜೆಡಿಎಸ್ಸಿನ 'ಬಿಟೀಂ' ಕಾಂಗ್ರೆಸ್: ನಿಮ್ಮ ದೌಲತ್ತೇ ಕಾಂಗ್ರೆಸ್ಸಿನ ಇಂತಹ ದುಸ್ಥಿತಿಗೆ ಕಾರಣ

ಪ್ರತಿಭಟನೆ ನಡೆಸುತ್ತಿರುವವರು ರೈತರ ಹೆಸರಿನ ಢೋಂಗಿಗಳು

ಪ್ರತಿಭಟನೆ ನಡೆಸುತ್ತಿರುವವರು ರೈತರ ಹೆಸರಿನ ಢೋಂಗಿಗಳು

ಎಚ್ಡಿಕೆ: ಈಗ ಪ್ರತಿಭಟನೆ ನಡೆಸುತ್ತಿರುವವರು ರೈತರ ಹೆಸರಿನ ಢೋಂಗಿಗಳು. ಭೂಸುಧಾರಣಾ ಕಾಯ್ದೆಗೆ ಮೊದಲು ವಿರೋಧಿಸಿದವರು ನಾನು ಮತ್ತು ದೇವೇಗೌಡ್ರು. ಕಾಯ್ದೆಯಲ್ಲಿ ಕೆಲವೊಂದು ತಿದ್ದುಪಡಿ ತಂದಿದ್ದಾರೆ. ಹಾಗಾಗಿ, ರೈತರ ಹೋರಾಟಕ್ಕೆ ನನ್ನ ಬೆಂಬಲವಿಲ್ಲ.

ಕೋಡಿಹಳ್ಳಿ: ನಾನು ಕುಮಾರಸ್ವಾಮೀನಾ ಬೆಂಬಲ ಕೊಡು ಅಂತಾ ಕೇಳುತ್ತಾ ಇಲ್ಲ. ಯಾಕೆಂದರೆ ರೈತರ ಬಾಯಿಗೆ ಮಣ್ಣು ಹಾಕುವವರ ಬೆಂಬಲ ನಮಗೆ ಬೇಕಾಗಿಲ್ಲ. ಯಾರ ಉದ್ದಾರಕ್ಕಾಗಿ ಭೂಕಾಯ್ದೆ ತಂದೆ ಮಿಸ್ಟರ್ ಕುಮಾರಸ್ವಾಮಿ?

ನೈಸ್ ಕಂಪೆನಿಗೆ ಸುಪ್ರೀಂಕೋರ್ಟಿಗೆ ಅಫಿಡವಿಟ್

ನೈಸ್ ಕಂಪೆನಿಗೆ ಸುಪ್ರೀಂಕೋರ್ಟಿಗೆ ಅಫಿಡವಿಟ್

ಕೋಡಿಹಳ್ಳಿ: ಈ ಕಾಯ್ದೆಗೆ ಯಾಕೆ ಬೆಂಬಲ ಕೊಟ್ಟಿದ್ದೀಯಾ, ನೈಸ್ ಕಂಪೆನಿಗೆ ಸುಪ್ರೀಂಕೋರ್ಟಿಗೆ ಅಫಿಡವಿಟ್ ಹಾಕಿದ್ದೀಯಾ. ನೀನು ರೈತರ ಪರಯಿಲ್ಲ, ಈ ಮಣ್ಣಿನ ಪರ ಇಲ್ಲ.

ಎಚ್ಡಿಕೆ: ರೈತರ ಪರವಾಗಿಲ್ಲ ಎಂದು ಅವರಿಂದ ಸರ್ಟಿಫಿಕೇಟ್ ಪಡೆದುಕೊಳ್ಳಬೇಕಾಗಿಲ್ಲ. ಜೆಡಿಎಸ್‌ನ ಮೇಲೆ ದಾಳಿ ಮಾಡುತ್ತಿರುವ ಕೆಲ ರೈತ ಮುಖಂಡರು ಒಂದು ಬಾರಿ ಪರಾಮರ್ಶೆ ಮಾಡಲಿ. ಜೆಡಿಎಸ್‌ ರೈತ ವಿರೋಧಿ ನಿಲುವು ತಳೆಯಲು ಎಂದಾದರೂ ಸಾಧ್ಯವೇ ಎಂದು ಪ್ರಶ್ನೆ ಮಾಡಿಕೊಳ್ಳಲಿ

ನೀನು ಬರೀ ಡೀಲ್ ಪರ ಎನ್ನುವುದು ನಮಗೆ ಗೊತ್ತಿದೆ

ನೀನು ಬರೀ ಡೀಲ್ ಪರ ಎನ್ನುವುದು ನಮಗೆ ಗೊತ್ತಿದೆ

ಎಚ್ಡಿಕೆ: ಮಿತಿಗಳು, ಭಿನ್ನಮತಗಳ ನಡುವೆಯೂ ರೈತರ 25 ಸಾವಿರ ಕೋಟಿಗೂ ಮಿಗಿಲಾದ ಸಾಲ ಮನ್ನಾ ಮಾಡಿದ್ದು ಇದೇ ಕುಮಾರಸ್ವಾಮಿಯೇ ಹೊರತು ಬೇರಾರೂ ಅಲ್ಲ. ಆಗ ನನ್ನನ್ನು ಯಾರೊಬ್ಬರೂ ಬೆನ್ನುತಟ್ಟಲಿಲ್ಲ, ರೈತರಿಗೆ ನೀಡಿದ ವಚನ ಪಾಲಿಸಿ, ಅಧಿಕಾರದಿಂದ ಹೊರ ನಡೆದಾಗ ನನ್ನ ಬೆಂಬಲಕ್ಕೆ ಯಾರೂ ಬರಲಿಲ್ಲ. ಈಗ ಸುಧಾರಣೆ ಕ್ರಮಗಳನ್ನು ಸಾಧಿಸಿದಾಗಲೂ ನಾನು ಏಕಾಂಗಿ.

ಕೋಡಿಹಳ್ಳಿ: ನೀನು ಬರೀ ಡೀಲ್ ಪರ ಎನ್ನುವುದು ನಮಗೆ ಗೊತ್ತಿದೆ. ಹಾಗಾಗಿ ನಿಮ್ಮ ಬೆಂಬಲ ನಮಗೆ ಬೇಕಾಗಿಲ್ಲ. ಮೈಸೂರು, ಮಂಡ್ಯ ಮಣ್ಣಿನ ಜನರು ನಿಮ್ಮ ಪಕ್ಷದ ಬಗ್ಗೆ ತೀರ್ಮಾನ ಮಾಡುತ್ತಾರೆ. ದೇವೇಗೌಡ್ರು ಮಗನಿಗೆ ಬುದ್ದಿ ಹೇಳಲಿ.

Recommended Video

ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1.15 ಕೆಜಿ ಚಿನ್ನ ವಶಕ್ಕೆ ಪಡೆದ ಕಸ್ಟಮ್ ಅಧಿಕಾರಿಗಳು | Oneindia Kannada
ರೈತರಿಗೆ ಸಾಲಮನ್ನಾ ಮಾಡಿದ್ದು, ನಿಮ್ಮ ಜಮೀನು ಮಾರಿದ್ದರಿಂದ ಬಂದಿದ್ದಾ

ರೈತರಿಗೆ ಸಾಲಮನ್ನಾ ಮಾಡಿದ್ದು, ನಿಮ್ಮ ಜಮೀನು ಮಾರಿದ್ದರಿಂದ ಬಂದಿದ್ದಾ

ಎಚ್ಡಿಕೆ: ನನ್ನ ಬಗ್ಗೆ ಮಾತನಾಡುವಾಗ ಎಚ್ಚರ. ನಿಮ್ಮಲ್ಲಿರುವ ಹುಳುಕನ್ನು ಮೊದಲು ಸರಿಪಡಿಸಿಕೊಳ್ಳಿ. ಸಾಲಮನ್ನಾ ಮಾಡಿದಾಗ ಒಂದು ಥ್ಯಾಂಕ್ಸ್ ಹೇಳದ ಜನ ನೀವು. ನಿಮ್ಮಂತವರಿಂದ ರೈತರ ಪರವೋ, ವಿರೋಧಿಯೋ ಎಂದು ಹೇಳಿಸಿಕೊಳ್ಳಬೇಕಾಗಿಲ್ಲ. ಕಾಯ್ದೆ ಬಗ್ಗೆ ಹೋರಾಟ ಮಾಡುತ್ತಿರುವರಿಗೆ ಏನೂ ಗೊತ್ತಿಲ್ಲ.

ಕೋಡಿಹಳ್ಳಿ: ನಿನ್ನ ಜೊತೆ ಚರ್ಚೆಗೆ ಬರುತ್ತೇನೆ, ಕಾಯ್ದೆ ಬಗ್ಗೆ ಮಾತನಾಡೋಣ. ರೈತರಿಗೆ ಸಾಲಮನ್ನಾ ಮಾಡಿದ್ದು, ನಿಮ್ಮ ಜಮೀನು ಮಾರಿದ್ದರಿಂದ ಬಂದಿದ್ದಾ, ಅಥವಾ ಕೊಬ್ಬರಿ ಮಾರಿದ್ದಾ. ಜನರ ತೆರಿಗೆಯ ದುಡ್ಡು ಅದು. ಜನರ ತೆರಿಗೆ ದುಡ್ಡನ್ನು ಗುಡ್ಡೆ ಹಾಕಿ ಸಾಲಮನ್ನಾ ಮಾಡಿರುವುದು.

English summary
Karnataka Land Reform Bill: War Of Words Between HD Kumaraswamy And Kodihalli Chandrasekhar,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X