ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಲ್ಲಿ ಮಂಗನ ಕಾಯಿಲೆ ಸವಾಲು: 43 ಮಂದಿಯಲ್ಲಿ ಸೋಂಕಿನ ಶಂಕೆ

|
Google Oneindia Kannada News

Recommended Video

ಮಂಗನ ಕಾಯಿಲೆ ಎಂದರೇನು? ಈ ರೋಗದ ಲಕ್ಷಣಗಳು ಹಾಗು ಚಿಕಿತ್ಸಾ ಕ್ರಮಗಳು? | Oneindia Kannada

ಬೆಂಗಳೂರು, ಜನವರಿ 8: ರಾಜ್ಯದ ಜನರು ಎಚ್‌1ಎನ್‌1 ಕಾಯಿಲೆ ನಂತರ ಮಂಗನಕಾಯಿಲೆಗೆ ತತ್ತರಿಸುವಂತಾಗಿದೆ.

ಮೊದಲು ಕೇವಲ ಜ್ವರದಂತೆ ಕಂಡು ಬರುವ ಕಾಯಿಲೆ ಮಾರಣಾಂತಿಕವಾದ್ದು, ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ 30 ಮಂದಿಯಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ.

ಸಾಗರ-ತೀರ್ಥಹಳ್ಳಿ ತಾಲೂಕಿನ ಮಂಗನಕಾಯಿಲೆ(ಕ್ಯಾಸನೂರು ಫಾರೆಸ್ಟ್ ಡಿಸೀಸ್) ಶಂಕಿತ 41 ರೋಗಿಗಳು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು ಮಂಗನಕಾಯಿಲೆಗೆ ಕಾರಣಗಳು, ಮುಂಜಾಗ್ರತಾ ಕ್ರಮಗಳು

ಆಸ್ಪತ್ರೆಯಲ್ಲಿರುವ ಸಾಗರ ಆಸುಪಾಸಿನ 30 ಮಂದಿ ಶಂಕಿತರಲ್ಲಿ 6 ಮಂದಿಗೆ ಮಂಗನಕಾಯಿಲೆ ಇರುವುದು ದೃಢಪಟ್ಟಿದೆ. ಆ ಪೈಕಿ ಮೂವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಮೂವರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರಲಗೋಡು ಗ್ರಾಮದ 4 ನೇ ತರಗತಿಯ ಇಬ್ಬರು ಬಾಲಕರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮೊದಲ ಬಾರಿಗೆ ಮಂಗನ ಕಾಯಿಲೆ ಪತ್ತೆಯಾಗಿದ್ದು ಯಾವಾಗ?

ಮೊದಲ ಬಾರಿಗೆ ಮಂಗನ ಕಾಯಿಲೆ ಪತ್ತೆಯಾಗಿದ್ದು ಯಾವಾಗ?

ಮೊದಲ ಬಾರಿಗೆ ಮಂಗನ ಕಾಯಿಲೆ 1957ರಲ್ಲಿ ಸೊರಬದ ಕ್ಯಾಸನೂರು ಅರಣ್ಯ ವ್ಯಾಪ್ತಿಯ ಕಣ್ಣೂರು ಗ್ರಾಮದಲ್ಲಿ ವೈರಾಣುಗಳನ್ನು ಪತ್ತೆ ಹಚ್ಚಲಾಗಿತ್ತು. ಹೀಗಾಗಿ ಇದನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂದು ಕರೆಯುತ್ತಾರೆ. ಮಂಗಗಳ ಮೂಲಕ ಈ ವೈರಾಣು ಮನುಷ್ಯರ ದೇಹ ಪ್ರವೇಶಿಸುವುದರಿಂದ ಗ್ರಾಮೀಣ ಭಾಷೆಯಲ್ಲಿ ಮಂಗನ ಕಾಯಿಲೆ ಎಂದು ಕರೆಯುತ್ತಾರೆ.

ಶಿವಮೊಗ್ಗ : ಮಂಗನಕಾಯಿಲೆಗೆ 18 ವರ್ಷದ ಯುವತಿ ಬಲಿ ಶಿವಮೊಗ್ಗ : ಮಂಗನಕಾಯಿಲೆಗೆ 18 ವರ್ಷದ ಯುವತಿ ಬಲಿ

ಈ ಕಾಯಿಲೆಗೆ ಪ್ರತ್ಯೇಕ ಔಷಧ

ಈ ಕಾಯಿಲೆಗೆ ಪ್ರತ್ಯೇಕ ಔಷಧ

ರಕ್ತದ ಮಾದರಿಯಲ್ಲಿ ಕೆಎಫ್‌ಡಿ ವೈರಸ್ ಪತ್ತೆ ಹಚ್ಚುವ ಲ್ಯಾಬ್ ಸೌಲಭ್ಯ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿದೆ. ಡೆಂಗ್ಯೂ, ಮಲೇರಿಯಾ ಮಾದರಿಯಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಬಿಟ್ಟು, ಬಿಟ್ಟು ಜ್ವರ ಬರುತ್ತದೆ. ಒಮ್ಮೆಲೆ ಜ್ವರ ಏರಿಕೆ ಇದರ ಲಕ್ಷಣ, ಜ್ವರ ತಗ್ಗಿಸುವ ಔಷಧದಿಂದ ಗುಣಪಡಿಸಬೇಕೇ ಹೊರತು ಇದಕ್ಕೆ ಪ್ರತ್ಯೇಕ ಔಷಧವಿಲ್ಲ.

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ: 50ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ ನಾಲ್ವರು ಬಲಿ: 50ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ

ಕಾಯಿಲೆಯ ಸವಾಲುಗಳು

ಕಾಯಿಲೆಯ ಸವಾಲುಗಳು

ಕೆಎಫ್‌ಡಿ ವೈರಾಣು ಪ್ರತಿವರ್ಷ ಬೇರೆ ಬೇರೆ ಪ್ರದೇಶಗಳಲ್ಲಿ ಪರಿಣಾಮ ಉಂಟು ಮಾಡುತ್ತದೆ. ಇದರ ತಡೆಯೇ ದೊಡ್ಡ ಸವಾಲಾಗಿದೆ. ವೈರಾಣು ಪತ್ತೆಯಾಗಿ ರೋಗ ನಿರೋಧಕ ಲಸಿಕೆ ನೀಡುವಾಗ ಪರಿಸ್ಥಿತಿ ಕೈಮೀರುತ್ತದೆ. ಇದು ಬಾರದಂತೆ ತಡೆಯಲು ಸಾಧ್ಯವಿಲ್ಲ.

ಪ್ರತಿ ವರ್ಷದ ಕಾಯಿಲೆ ಇದೆ

ಪ್ರತಿ ವರ್ಷದ ಕಾಯಿಲೆ ಇದೆ

ಅರಳಗೋಡು ಗ್ರಾಮದ ಮಂಡವಳ್ಳಿ, ವಾಟೆಮಕ್ಕಿ, ಕಂಚಿಕಾಯಿ ಸುತ್ತಮುತ್ತಲಿನ ಜನತೆ ಪ್ರತಿವರ್ಷ ಈ ಊರಿನಲ್ಲಿ ಕಾಣಿಸಿಕೊಳ್ಳುವ ಮಂಗನಕಾಯಿಲೆಯಿಂದ ಆತಂಕ್ಕೀಡಾಗಿದ್ದಾರೆ. ಅರಣ್ಯ, ಆರೋಗ್ಯ ಇಲಾಖೆ ಮುಂಗಾಗ್ರತಾ ಕೈಗೊಳ್ಳದಿರುವುದಕ್ಕೆ ಹೀಗಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

15 ದಿನಗಳಲ್ಲಿ 6 ಮಂದಿ ಬಲಿ

15 ದಿನಗಳಲ್ಲಿ 6 ಮಂದಿ ಬಲಿ

ವರ್ಷದಿಂದ ವರ್ಷಕ್ಕೆ ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ಈ ಕಾಯಿಲೆ ಮಂಗನ ಕಾಯಿಲೆ ಈ ಬಾರಿ ಸಾಗರ ತಾಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊಂಡಿದೆ. ಕಳೆದ 15 ದಿನಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

English summary
KFD disease creating tention in western ghats villges especially in Shivamogga district, already 6 were dead. Publics are demanding precautionary measuures by the Health department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X