ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಜೊತೆ ವಿಧಾನಸಭೆ ಪ್ರವೇಶಿಸಿ ಇತಿಹಾಸ ನಿರ್ಮಿಸಲಿರುವ ಕುಮಾರಸ್ವಾಮಿ!

|
Google Oneindia Kannada News

Recommended Video

ಪತ್ನಿ ಜೊತೆ ವಿಧಾನಸಭೆ ಪ್ರವೇಶಿಸಲಿರುವ ಮೊದಲ ಸಿ ಎಂ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ನವೆಂಬರ್ 7: ಪತ್ನಿಯೊಂದಿಗೆ ವಿಧಾನಸಭೆ ಪ್ರವೇಶಿಸಿ, ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಎಚ್ ಡಿ ಕುಮಾರಸ್ವಾಮಿ ಪಾತ್ರರಾಗಲಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ನ.03 ರಂದು ನಡೆದಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಅವರನ್ನು ಸುಮಾರು 1.09 ಲಕ್ಷ ಮತಗಳ ಅಂತರದಿಂದ ಸೋಲಿಸುವ ಮೂಲಕ ರಾಮನಗರದ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರಾಮನಗರ ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಅನಿತಾ ಕುಮಾರಸ್ವಾಮಿರಾಮನಗರ ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಅನಿತಾ ಕುಮಾರಸ್ವಾಮಿ

ಇದೀಗ ಮುಖ್ಯಮಂತ್ರಿಗಳ ಪತ್ನಿಯಾಗಿ ವಿಧಾನಸಭೆಗೆ ಪ್ರವೇಶಿಸಲಿರುವ ಅನಿತಾ ಕುಮಾರಸ್ವಾಮಿ ಹೊಸ ದಾಖಲೆ ಬರೆಯಲಿದ್ದಾರೆ.

ಇತಿಹಾಸ ನಿರ್ಮಿಸಲಿರುವ ದಂಪತಿ

ಇತಿಹಾಸ ನಿರ್ಮಿಸಲಿರುವ ದಂಪತಿ

ಇದಕ್ಕೂ ಮುನ್ನ ರಾಮನಗರ ಮತ್ತು ಮಧುಗಿರಿ ಶಾಸಕರಾಗಿ ಎಚ್ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ವಿಧಾನಸಭೆ ಪ್ರವೇಶಿಸಿದ್ದರಾದರೂ ಆಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಲಿಲ್ಲ. ಆದರೆ ಈಗ ರಾಮನಗರದಲ್ಲಿ ಜಯ ಸಾಧಿಸುವ ಮೂಲಕ ಪತಿಯೊಂದಿಗೆ ಅನಿತಾ ಅವರು ವಿಧಾನಸಭೆ ಪ್ರವೇಶಿಸಲಿದ್ದಾರೆ!

ಕರ್ನಾಟಕ ಉಪ ಚುನಾವಣೆ: ಯಾವ ಪಕ್ಷದ ಮತ ಗಳಿಕೆ ಪ್ರಮಾಣ ಎಷ್ಟು?ಕರ್ನಾಟಕ ಉಪ ಚುನಾವಣೆ: ಯಾವ ಪಕ್ಷದ ಮತ ಗಳಿಕೆ ಪ್ರಮಾಣ ಎಷ್ಟು?

ಅತ್ಯಪರೂಪದ ಕ್ಷಣ

ಅತ್ಯಪರೂಪದ ಕ್ಷಣ

"ಇದೊಂದು ಅತ್ಯಪರೂಪದ ಕ್ಷಣ. ಮುಖ್ಯಮಂತ್ರಿಗಳು ತಮ್ಮ ಪತ್ನಿಯೊಂದಿಗೆ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ! ಹೀಗೆ ಮುಖ್ಯಮಂತ್ರಿ ಮತ್ತು ಅವರ ಶಾಸಕಿ ಪತ್ನಿ ಇಬ್ಬರೂ ಒಟ್ಟಿಗೇ ವಿಧಾನಸಭೆಯಲ್ಲಿ ಇರುವ ಪ್ರಕರಣ ತೀರಾ ವಿರಳವಾಗಿದೆ" ಎಂದು ಜೆಡಿಎಸ್ ಶಾಸಕ ಕೆ ಗೋಪಾಲಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್-ಜೆಡಿಎಸ್‌ ಗೆದ್ದಿದ್ದು ಮೈತ್ರಿಯಿಂದಲ್ಲ, ಸ್ವಂತ ಬಲದಿಂದ, ಇಲ್ಲಿದೆ ವಿಶ್ಲೇಷಣೆ ಕಾಂಗ್ರೆಸ್-ಜೆಡಿಎಸ್‌ ಗೆದ್ದಿದ್ದು ಮೈತ್ರಿಯಿಂದಲ್ಲ, ಸ್ವಂತ ಬಲದಿಂದ, ಇಲ್ಲಿದೆ ವಿಶ್ಲೇಷಣೆ

ಐದು ಕ್ಷೇತ್ರಗಳಲ್ಲಿ ಚುನಾವಣೆ

ಐದು ಕ್ಷೇತ್ರಗಳಲ್ಲಿ ಚುನಾವಣೆ

ಲೋಕಸಭಾ ಕ್ಷೇತ್ರಗಳಾದ ಮಂಡ್ಯ, ಬಳ್ಳಾರಿ, ಶಿವಮೊಗ್ಗ ಈ ಮೂರು ಕ್ಷೇತ್ರಗಳಿಗೆ ಮತ್ತು ವಿಧಾನಸಭಾ ಕ್ಷೇತ್ರಗಳಾದ ರಾಮನಗರ ಮತ್ತು ಜಮಖಂಡಿ ಕ್ಷೇತ್ರಗಳಿಗೆ ನ.3 ರಂದು ಉಪಚುನಾವಣೆ ನಡೆದಿತ್ತು. ನ.6 ರಂದು ಹೊರಬಿದ್ದ ಫಲಿತಾಂಶದಲ್ಲಿ ಒಟ್ಟು ಐದು ಕ್ಷೇತ್ರಗಳಲ್ಲಿ ನಾಲ್ಕನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿಪಕ್ಷ ಗೆದ್ದರೆ, ಕೇವಲ ಒಂದನ್ನಷ್ಟೇ ಗೆಲ್ಲಲು ಬಿಜೆಪಿ ಶಕ್ತವಾಯಿತು.

ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ

ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕಡೆಗಳಲ್ಲಿ ಗೆಲುವು ಸಾಧಿಸಿದ್ದರು. ನಂತರ ಚನ್ನಪಟ್ಟಣವನ್ನು ತಮ್ಮ ಬಳಿಯೇ ಉಳಿಸಿಕೊಂಡು ರಾಮನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್ ಚಂದ್ರಶೇಖರ್ ಅವರು ಚುನಾವಣೆಗೆ ಎರಡು ದಿನ ಬಾಕಿ ಉಳಿದಿರುವಾಗ ಕಾಂಗ್ರೆಸ್ ಪಕ್ಷ ಸೇರಿದ್ದರಿಂದ ಜೆಡಿಎಸ್ ಗೆಲುವು ಮತ್ತಷ್ಟು ಸುಲಭವಾಯಿತು.

English summary
Karnataka Chief Minister HD Kumaraswamy and his wife Anitha Kumaraswamy have made history in the recently held byelections in the state. In a first, a chief minister will be entering state assembly with his wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X