ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣದ ಹಕ್ಕು ಮತ್ತು ಆಯ್ಕೆಯ ಸ್ವಾತಂತ್ರ್ಯವೇ ನಮ್ಮ ಆದ್ಯತೆಯಾಗಬೇಕು

|
Google Oneindia Kannada News

ಬೆಂಗಳೂರು, ಮಾರ್ಚ್ 18; ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ತನ್ನ ತೀರ್ಪು ಪ್ರಕಟಿಸಿದೆ.

ಕರ್ನಾಟಕ ಜನಶಕ್ತಿ ಸಂಘಟನೆ ಕರ್ನಾಟಕ ಹೈಕೋರ್ಟ್‌ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದೆ. ನಂಬಿಕೆ, ಭಾಷೆ, ಉಡುಗೆ, ಆಲೋಚನೆ ಮತ್ತು ಆಚರಣೆಗಳಲ್ಲಿ ಭಿನ್ನತೆ ಇದ್ದರೂ ಮಾನವೀಯತೆಯ, ಭಾರತೀಯತೆಯ ನೆಲೆಯಲ್ಲಿ ನಾವೆಲ್ಲರೂ ಒಂದು. ಸಂವಿಧಾನದ ಆಶಯಗಳನ್ನು ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಿರಿ. ಶಿಕ್ಷಣದ ಹಕ್ಕಿನಿಂದ ವಿದ್ಯಾರ್ಥಿನಿಯರು ವಂಚಿತರಾಗಲು ಅವಕಾಶವಿರುವ ಕರ್ನಾಟಕದ ತೀರ್ಪನ್ನು ತಕ್ಷಣವೇ ತಡೆಯಿಡಿಯಿರಿ ಎಂದು ಮನವಿ ಮಾಡಿದೆ.

ಹಿಜಾಬ್ ತೀರ್ಪು ಪ್ರಶ್ನಿಸಿ SC ಮೆಟ್ಟಿಲೇರಿದ 66 ವರ್ಷದ ಮುಸ್ಲಿಂ ಮಹಿಳೆ ಹಿಜಾಬ್ ತೀರ್ಪು ಪ್ರಶ್ನಿಸಿ SC ಮೆಟ್ಟಿಲೇರಿದ 66 ವರ್ಷದ ಮುಸ್ಲಿಂ ಮಹಿಳೆ

ಕರ್ನಾಟಕವು ಇತ್ತೀಚೆಗೆ ಕಂಡ ಸಾಮಾಜಿಕ ಸಂಕ್ಷೋಭೆಯನ್ನು ನ್ಯಾಯಯುತವಾಗಿ ಮತ್ತು ಸಾಂವಿಧಾನಿಕವಾಗಿ ಬಗೆಹರಿಸಬೇಕಿದ್ದ ಸಂದರ್ಭದಲ್ಲಿ ಬಂದಿರುವ ಕೋರ್ಟ್ ಆದೇಶವು ದೊಡ್ಡ ಆಘಾತವನ್ನೂ, ಅಪಾರ ಆತಂಕವನ್ನೂ ಉಂಟುಮಾಡಿದೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಸಂಘಟನೆ ಹೇಳಿದೆ.

ಕುರಾನ್ ಹೇಳಿದಂತೆ ನಡೆಯುತ್ತೇವೆ, ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ; ಉಡುಪಿ ವಿದ್ಯಾರ್ಥಿನಿಯರುಕುರಾನ್ ಹೇಳಿದಂತೆ ನಡೆಯುತ್ತೇವೆ, ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ; ಉಡುಪಿ ವಿದ್ಯಾರ್ಥಿನಿಯರು

ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನೂ ಸೇರಿಸಿದೆ ಮತ್ತು ಅದರ ಪ್ರಕಾರ ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮ ಧಾರ್ಮಿಕ ಅಸ್ಮಿತೆಗಳೊಂದಿಗೆ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಬೇಕಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇದರಲ್ಲಿ ಶಾಲಾ-ಕಾಲೇಜುಗಳ ಸಮವಸ್ತ್ರಗಳಿಗೆ ಸಂಬಂಧಿಸಿದ ನಿರ್ದಿಷ್ಟ ಸೂಚನೆಗಳಿರುವುದಿಲ್ಲವಾದ್ದರಿಂದ ಅದು ಆಯಾ ಸರ್ಕಾರಗಳ ಅಥವಾ ನ್ಯಾಯಾಲಯಗಳ ವಿವೇಚನೆಗೆ ತಕ್ಕಂತೆ ಬೇರೆ ಬೇರೆ ರೀತಿಗಳಲ್ಲಿ ವ್ಯಾಖ್ಯಾನಗೊಂಡಿದೆ ಎಂದು ತಿಳಿಸಿದೆ.

ಹಿಜಾಬ್ ವಿವಾದ: ಹೈಕೋರ್ಟ್ ಎತ್ತಿದ ಆ ನಾಲ್ಕು ಪ್ರಶ್ನೆಗಳು ಮತ್ತು ಉತ್ತರಗಳೇನು? ಹಿಜಾಬ್ ವಿವಾದ: ಹೈಕೋರ್ಟ್ ಎತ್ತಿದ ಆ ನಾಲ್ಕು ಪ್ರಶ್ನೆಗಳು ಮತ್ತು ಉತ್ತರಗಳೇನು?

ಹಿಜಾಬ್ ಬಳಕೆ ಹಿಂದಿನಿಂದಲೂ ಇದೆ

ಹಿಜಾಬ್ ಬಳಕೆ ಹಿಂದಿನಿಂದಲೂ ಇದೆ

ಇಡೀ ಭಾರತದಲ್ಲಿ ಒಟ್ಟಾರೆಯಾಗಿ ನೋಡುವುದಾದರೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು ಸಮವಸ್ತ್ರದ ಬಣ್ಣದ ಬಟ್ಟೆಯನ್ನೇ ತಮ್ಮ ಪಗಡಿ, ರುಮಾಲು, ತಲೆವಸ್ತ್ರ (ದೇಶದ ಕೆಲವು ರಾಜ್ಯಗಳಲ್ಲಿ ಹಿಂದೂಗಳಲ್ಲಿಯೂ ಹೆಣ್ಣುಮಕ್ಕಳು ತಲೆವಸ್ತ್ರ ಧರಿಸುವ ಪದ್ಧತಿಯಿದೆ) ಹಿಜಾಬ್ ಇತ್ಯಾದಿಯಾಗಿ ಬಳಸುವುದು ಯಾವಾಗಿನಿಂದಲೂ ಚಾಲ್ತಿಯಲ್ಲಿದೆ.

ಕಳೆದ ಕೆಲವು ವರ್ಷಗಳ ತನಕ ಈ ವಿಚಾರದಲ್ಲಿ ಎಲ್ಲೂ ಗೊಂದಲ, ಗಲಭೆ ಉಂಟಾದ ಉದಾಹರಣೆಗಳಿಲ್ಲ. ಕೇಂದ್ರದಲ್ಲಿ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಅಸ್ತಿತ್ವಕ್ಕೆ ಬಂದಂತೆಲ್ಲ ಇಂತಹ ಸೂಕ್ಷ್ಮ ವಿಚಾರಗಳು ಅಶಾಂತಿಯ ಕಾರಣಗಳಾಗುತ್ತಿವೆ. ಸಂವಿಧಾನವು ನೀಡಿರುವ ಸಾಂಸ್ಕೃತಿಕ ಅನನ್ಯತೆಯನ್ನು ಕಾಪಾಡಿಕೊಳ್ಳುವ ಅವಕಾಶವನ್ನು ಪಕ್ಕಕ್ಕೆ ತಳ್ಳಿ ಸಮವಸ್ತ್ರದ ಏಕರೂಪತೆಯನ್ನು ಮಾತ್ರ ಎತ್ತಿಹಿಡಿದಿರುವುದು ಹೈಕೋರ್ಟ್ ತೀರ್ಪಿನಲ್ಲಿ ಜರುಗಿರುವ ಪ್ರಮಾದವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕ ಹೈಕೋರ್ಟ್‌ ತೀರ್ಪು

ಕರ್ನಾಟಕ ಹೈಕೋರ್ಟ್‌ ತೀರ್ಪು

ಭಾರತದಲ್ಲಿ ಶಾಲಾ-ಕಾಲೇಜುಗಳ ಸಮವಸ್ತ್ರಗಳು ಎಲ್ಲ ಸಂದರ್ಭಗಳಲ್ಲೂ ಸಾಮಾಜಿಕ ಮತ್ತು ಧಾರ್ಮಿಕ ವೈವಿಧ್ಯತೆಗಳಿಗೆ ಅವಕಾಶ ನೀಡಿರುತ್ತದೆ. ಸಿಖ್ ಹುಡುಗರು ಮತ್ತು ಹುಡುಗಿಯರು ಟರ್ಬನ್ ಬಳಸಲು ಅವಕಾಶ ನೀಡುವುದು ಒಂದು ನಿದರ್ಶನ. ಹಾಗಾಗಿ ಸಿಖ್ಖರ ಟರ್ಬನ್ ಮತ್ತು ಮುಸ್ಲಿಮರ ಹಿಜಾಬ್ ಧರಿಸುವುದು ಸಮವಸ್ತ್ರ ನಿಯಮವನ್ನು ಉಲ್ಲಂಘಿಸುವುದಿಲ್ಲ. ಭಾರತದ ಶಾಲಾ ಕಾಲೇಜುಗಳಲ್ಲಿ ಎಂದೂ ಸಹ ಕಡ್ಡಾಯವಾದ ಏಕರೂಪತೆಯನ್ನು ಜಾರಿಗೊಳಿಸಿಲ್ಲ ಎಂಬುವುದನ್ನು ಕಾಣಬಹುದಾಗಿದೆ.

ಇಂತಹ ಸಂಕೀರ್ಣ ಸನ್ನಿವೇಶದಲ್ಲಿ ಗೌರವಾನ್ವಿತ ಉಚ್ಛ ನ್ಯಾಯಾಲಯವೂ ಕೂಡಾ ಆಯ್ಕೆಯ ವಿಚಾರದಲ್ಲಿ ಮಹಿಳೆಯ ಸ್ವಾಯತ್ತತೆ ಮತ್ತು ಸಮ್ಮತಿಯ ಮೂಲ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳದೆ ಹೋಗಿರುವುದು ಮತ್ತು ಧಾರ್ಮಿಕ ಆಚರಣೆಯೋ ಅಥವಾ ಶಿಕ್ಷಣವೋ ಎಂಬ ಅತ್ಯಂತ ಸಂದಿಗ್ಧ ಆಯ್ಕೆಯನ್ನು ಈಗಾಗಲೇ ಅವಕಾಶ ವಂಚಿತ ಅಲ್ಪಸಂಖ್ಯಾತರ ಸಮುದಾಯದ ಮಹಿಳೆಯರ ಮುಂದಿಟ್ಟಿರುವುದು ದುರದೃಷ್ಟಕರ.

ವ್ಯಕ್ತಿಗತ ಸಾಂಸ್ಕೃತಿಕ ನಂಬಿಕೆಗಳು

ವ್ಯಕ್ತಿಗತ ಸಾಂಸ್ಕೃತಿಕ ನಂಬಿಕೆಗಳು

ಅದಕ್ಕಿಂತ ಮುಖ್ಯವಾಗಿ ಈ ತೀರ್ಪು ಸಮವಸ್ತ್ರದ ನಿಯಮ ರೂಪಿಸುವ ಅಧಿಕಾರ ಕಾಲೇಜುಗಳ ಅಭಿವೃದ್ದಿ ಸಮಿತಿಗಳಿಗಿದೆ (ಸಿಡಿಸಿ) ಎಂದು ಹೇಳಿರುವಾಗಲೂ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಹಿಜಾಬ್ ಹಾಕಿರುವ ಕಾರಣಕ್ಕೆ ಪರೀಕ್ಷೆಯಿಂದ ಎಬ್ಬಿಸಿ ಕಳುಹಿಸಿದ್ದಾರೆ. ಇದು ಅತ್ಯಂತ ಆತಂಕಕಾರಿ, ಅವಮಾನಕಾರಿ ವಿದ್ಯಮಾನಕ್ಕೆ ದಾರಿ ಮಾಡಿದೆ. ಕುಂಕುಮ, ದುಪ್ಪಟ, ಪಗಡಿ, ಹಿಜಾಬ್ ಇವೆಲ್ಲಾ ವ್ಯಕ್ತಿಗತ ಸಾಂಸ್ಕೃತಿಕ ನಂಬಿಕೆಗಳು.

ಇವು ಯಾರಿಗೂ ತೊಂದರೆ ಕೊಡದಿರುವಾಗ, ಏಕರೂಪತೆಯ ಒಣ ತರ್ಕವನ್ನಿಟ್ಟುಕೊಂಡು ಅವರ ಅಸ್ಮಿತೆಯ ಮೇಲೆ ದಾಳಿ ಮಾಡುವುದು ಮತ್ತು ಶಿಕ್ಷಣದಿಂದಲೇ ವಂಚಿತಗೊಳಿಸುವುದು ಕ್ರೌರ್ಯ. ವಿವಿಧ ಜಾತಿ, ಧರ್ಮದ ಹಿನ್ನೆಲೆಯಿಂದ ಬಂದಿರುವ ನಾವು ಭಾರತೀಯರಾಗಿ ಈ ಹೇರಿಕೆಯನ್ನು ಮತ್ತು ಸ್ಯಾಡಿಸ್ಟ್ ಮನೋಭಾವವನ್ನು ತೀವ್ರವಾಗಿ ಖಂಡಿಸುತ್ತೇವೆ. ಹರಿಯಲು ಪ್ರಯತ್ನಿಸಲಾಗುತ್ತಿರುವ ಸಾಮಾಜಿಕ ಸಂಬಂಧಗಳನ್ನು ಉಳಿಸಿಕೊಳ್ಳಲು, ಮುಸ್ಲಿಂ ಸೋದರಿಯರ ಶಿಕ್ಷಣದ ಹಕ್ಕನ್ನು ಸಂರಕ್ಷಿಸಲು ಎಲ್ಲಾ ಹೃದಯವಂತರು, ಒಂದಲ್ಲಾ ಒಂದು ರೂಪದಲ್ಲಿ, ದನಿ ಎತ್ತಲೇಬೇಕೆಂದು ಆತ್ಮೀಯತೆಯೊಂದಿಗೆ ಒತ್ತಾಯಿಸುತ್ತಿದ್ದೇವೆ.

ಹೈಕೋರ್ಟ್‌ ತೀರ್ಪನ್ನು ತಡೆ ಹಿಡಿಯಬೇಕು

ಹೈಕೋರ್ಟ್‌ ತೀರ್ಪನ್ನು ತಡೆ ಹಿಡಿಯಬೇಕು

ನಂಬಿಕೆ, ಭಾಷೆ, ಉಡುಗೆ, ಆಲೋಚನೆ ಮತ್ತು ಆಚರಣೆಗಳಲ್ಲಿ ಭಿನ್ನತೆ ಇದ್ದರೂ ಮಾನವೀಯತೆಯ, ಭಾರತೀಯತೆಯ ನೆಲೆಯಲ್ಲಿ ನಾವೆಲ್ಲರೂ ಒಂದು ಎಂಬ ಸಂಕೇತವನ್ನು ನಾವು ಸಾರಿ ಸಾರಿ ಹೇಳಬೇಕಿದೆ. ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕಿಗಾಗಿ ನಾವು ಸರ್ಕಾರಗಳನ್ನು ಆಗ್ರಹಿಸಬೇಕಿದೆ. ಹಾಗೆಯೇ, ಸರ್ವೋಚ್ಛ ನ್ಯಾಯಾಲಯದ ಮುಂದೆ ಸಂವಿಧಾನದ ಆಶಯಗಳನ್ನು ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಿರಿ; ಶಿಕ್ಷಣದ ಹಕ್ಕಿನಿಂದ ವಿದ್ಯಾರ್ಥಿನಿಯರು ವಂಚಿತರಾಗಲು ಅವಕಾಶವಿರುವ ಕರ್ನಾಟಕದ ತೀರ್ಪನ್ನು ತಕ್ಷಣವೇ ತಡೆಯಿಡಿಯಿರಿ ಎಂದು ಒಕ್ಕೊರಲಿನಿಂದ ಮನವಿ ಮಾಡಬೇಕಾಗಿದೆ.

English summary
Karnataka high court judgement on Hijab; Karnataka janashakthi organization reaction on Hijab verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X