• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೋಂ ಐಸೊಲೇಷನ್, ಮಾರ್ಗಸೂಚಿ, ತೆಗೆದುಕೊಳ್ಳಬೇಕಾದ ಔಷಧಿಗಳ ವಿವರ

|

ಬೆಂಗಳೂರು, ಮೇ 03: ರಾಜ್ಯದಲ್ಲಿ ನಿತ್ಯ 30 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗುತ್ತಿದ್ದು, ಹೋಂ ಐಸೊಲೇಷನ್ ಕುರಿತು ರಾಜ್ಯ ಸರ್ಕಾರ ಪರಿಷ್ಕೃತ ಅಧಿಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಕೊರೊನಾ ಸೋಂಕು ಲಕ್ಷಣವುಳ್ಳ ವ್ಯಕ್ತಿ ಮನೆ ಪ್ರತ್ಯೇಕತೆ(ಹೋಂ ಐಸೋಲೇಷನ್) ಮನೆ ಆರೈಕೆ ಮತ್ತು ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ರೋಗಲಕ್ಷಣವಿಲ್ಲದ ಮತ್ತು ಸೌಮ್ಯವಾದ ಕೊವಿಡ್-19 ಸೋಂಕಿತ ವ್ಯಕ್ತಿಗಳಿಗೆ ಪರಿಷ್ಕೃತ ಚಿಕಿತ್ಸಾ ಮಾರ್ಗಸೂಚಿಗಳನ್ನು 2021ರ ಏಪ್ರಿಲ್ 30 ರಂದು ನಡೆದ ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ 100ನೇ ಸಭೆಯಲ್ಲಿ ನೀಡಲಾಗಿದೆ.

ಕೊರೊನಾ ಸೋಂಕಿನಿಂದ ಗುಣಮುಖರಾದವರು ಈ ಪರೀಕ್ಷೆಗಳನ್ನು ಮಾಡಿಸಲೇಬೇಕುಕೊರೊನಾ ಸೋಂಕಿನಿಂದ ಗುಣಮುಖರಾದವರು ಈ ಪರೀಕ್ಷೆಗಳನ್ನು ಮಾಡಿಸಲೇಬೇಕು

ವಯಸ್ಕ ಕೋವಿಡ್-19 ರೋಗಿಗಳ ನಿರ್ವಹಣೆಗೆ ಕ್ಲಿನಿಕಲ್ ಮಾರ್ಗದರ್ಶನ ಐಸಿಎಂಆರ್, ಕೋವಿಡ್-19 ರಾಷ್ಟ್ರೀಯ ಕಾರ್ಯಪಡೆ, ಜಂಟಿ ಮೇಲ್ವಿಚಾರಣಾ ಗುಂಪು, ಸೌಮ್ಯ, ಲಕ್ಷಣರಹಿತ ಕೊವಿಡ್-19 ಪ್ರಕರಣಗಳ ಮನೆ ಪ್ರತ್ಯೇಕತೆಗಾಗಿ ಪರಿಷ್ಕೃತ ಮಾರ್ಗಸೂಚಿಗಳು‌ ಇಂತಿವೆ.

ಇತರ ಔಷಧಿಗಳನ್ನು ರೋಗ ಲಕ್ಷಣಗಳ ಆಧಾರದ ಮೇಲೆ ವೈದ್ಯರು ಚಿಕಿತ್ಸೆ ನೀಡುವ ಮೂಲಕ ಸೂಚಿಸಲಾಗುತ್ತದೆ‌‌ ಹಾಗೂ ಸೋಂಕಿತ ಪ್ರಕರಣದ ಆಧಾರದ ಮೇಲೆ, ಮಕ್ಕಳ‌ದೇಹದ ತೂಕಕ್ಕೆ ಅನುಗುಣವಾಗಿ ನೀಡುವ ಚಿಕಿತ್ಸೆ ಪ್ರಮಾಣಗಳು ಅನ್ವಯವಾಗುತ್ತವೆ ಹಾಗೂ ಅಧಿಕ ರಕ್ತದೊತ್ತಡ, ಮಧುಮೇಹ, ಮೆಲ್ಲಿಟಸ್, ಹೈಪೋಥೈರಾಯ್ಡಿಸಮ್ ಇರುವ ಎಲ್ಲಾ ವ್ಯಕ್ತಿಗಳು ಮೊದಲೇ ಸೂಚಿಸಲಾಗಿದ್ದ ತಮ್ಮ ನಿಯಮಿತ ಔಷಧಿಗಳನ್ನು ಮುಂದುವರಿಸುವುದು.

ಕೊರೊನಾ ಸೋಂಕಿತರು ಗೃಹ ಬಂಧನದಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?: ಕೇಂದ್ರದ ಸಲಹೆಕೊರೊನಾ ಸೋಂಕಿತರು ಗೃಹ ಬಂಧನದಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?: ಕೇಂದ್ರದ ಸಲಹೆ

ರೆಮ್‌ಡೆಸಿವಿರ್ ಅಥವಾ ಇನ್ನಾವುದೇ ತನಿಖಾ ಚಿಕಿತ್ಸೆಯನ್ನು ನಿರ್ವಹಿಸುವ ನಿರ್ಧಾರವನ್ನು ವೈದ್ಯಕೀಯ ವೃತ್ತಿಪರರು ತೆಗೆದುಕೊಳ್ಳಬೇಕು ಮತ್ತು ಆಸ್ಪತ್ರೆಯ ವ್ಯವಸ್ಥೆಯಲ್ಲಿ ಮಾತ್ರ ನಿರ್ಧರಿಸಬಹುದಾಗಿದೆ. ಹಾಗೂ ರೆಮ್‌ಡಿಸಿವಿರ್‌ಅನ್ನು ಮನೆಯಲ್ಲಿ ಸಂಗ್ರಹಿಸಲು ಅಥವಾ ನಿರ್ವಹಿಸಲು ಪ್ರಯತ್ನಿಸಬೇಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಮಾರ್ಗಸೂಚಿ ಕುರಿತು ಮಾಹಿತಿ

ಮಾರ್ಗಸೂಚಿ ಕುರಿತು ಮಾಹಿತಿ

ಕೋವಿಡ್-19 ಸೋಂಕು ದೃಢಪಟ್ಟ(ಪಾಸಿಟಿವ್) ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಮತ್ತು ಕೊವಿಡ್-19 ಗಾಗಿ RGUHS ಕ್ಲಿನಿಕಲ್ ಸಮಿತಿಯ MoHFW-GOI ಮತ್ತು AlIMS-ICMR ನ ಪರಿಷ್ಕೃತ ಚಿಕಿತ್ಸಾ ಪ್ರೋಟೋಕಾಲ್ ಶಿಫಾರಸುಗಳ ಆಧಾರದ ಮೇಲೆ ಮನೆಯ ಪ್ರತ್ಯೇಕತೆ/ ಮನೆಯ ಆರೈಕೆ ಮತ್ತು ಕೊವಿಡ್-19 ಆರೈಕೆ ಕೇಂದ್ರಗಳಲ್ಲಿ (CCC) ಲಕ್ಷಣರಹಿತ ಮತ್ತು ಸೌಮ್ಯ ರೋಗಲಕ್ಷಣದ ಕೊವಿಡ್-19 ಸಕಾರಾತ್ಮಕ ವ್ಯಕ್ತಿಗಳ ಚಿಕಿತ್ಸೆಗಾಗಿ ಈ ಮಾರ್ಗಸೂಚಿಗಳು‌ ಅನ್ವಯಿಸಲಿವೆ.

 ಮಾತ್ರೆಗಳ ಹೆಸರು

ಮಾತ್ರೆಗಳ ಹೆಸರು

ವಯಸ್ಕರಿಗೆ ಕೋವಿಡ್ ಸೋಂಕಿತರಿಗೆ ನೀಡಬೇಕಾದ ಮಾತ್ರೆಗಳ ಹೆಸರು ಮತ್ತು ಡೋಸೇಜ್ ವಿವರ: ಐವರ್ಮೆಕ್ಟಿನ್(Ivermectin) ಮಾತ್ರೆ 12 mg, 1-0-0 3 ರಂತೆ 5 ದಿನಗಳವರೆಗೆ ಅಥವಾ ಹೆಚ್‌ಸಿಕ್ಯೂ ಮಾತ್ರೆ (400mg BD for 1 day f/b 400mg OD for 4days) ಅಥವಾ ಫೆವಿಪಿರಾವೀರ್ 1800 mg ಮಾತ್ರೆ(200 mg x 9) BD 1 f/b 800mg(200 mg x 4) BD for 6 ದಿನಗಳವರೆಗೆ, ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಹಾಗೂ ಗರ್ಭಾವಸ್ಥೆಯಲ್ಲಿ ಮತ್ತು 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತೆಗೆದುಕೊಳ್ಳಲು ಸಲಹೆ ನೀಡುವಂತಿಲ್ಲ.

 ಜ್ವರ ನಿರಂತರವಾಗಿದ್ದರೆ ಏನು ಮಾಡಬೇಕು

ಜ್ವರ ನಿರಂತರವಾಗಿದ್ದರೆ ಏನು ಮಾಡಬೇಕು

ಮೀಟರ್ ಡೋಸ್ ಇನ್ಹೇಲರ್, ಡ್ರೈ ಪೌಡರ್ ಇನ್ಹೇಲರ್ ಮೂಲಕ ನೀಡಲಾಗುತ್ತದೆ. ರೋಗದ ಆಕ್ರಮಣದ 5 ದಿನಗಳ ನಂತರ ರೋಗಲಕ್ಷಣಗಳು (ಜ್ವರ ಮತ್ತು / ಅಥವಾ ಕೆಮ್ಮು) ನಿರಂತರವಾಗಿದ್ದರೆ 5 ಇನ್ಹಲೇಶನಲ್ ಬುಡೆಸೊನೈಡ್, 7 ದಿನಗಳವರೆಗೆ ಸತು(zinc) 50 mg 0-1-0 ಮಾತ್ರೆ, ವಿಟಮಿನ್ ಸಿ 500 mg 1-1-1 ಮಾತ್ರೆ 7 ದಿನಗಳವರೆಗೆ, ಜ್ವರಕ್ಕೆ ಪ್ಯಾರೆಸಿಟಮಾಲ್ ದಿನಕ್ಕೆ 500 mg QD ಮಾತ್ರೆ, ಮೂಗು ಸೋರುತ್ತಿದ್ದರೆ(ನೆಗಡಿ) ಇದ್ದಲ್ಲಿ QD ಸೆಟ್ರಿಜಿನ್ 10 mg ಎಸ್ ಒಎಸ್ ಮಾತ್ರೆ, ಅಗತ್ಯವಿದ್ದರೆ ಖಾಲಿ ಹೊಟ್ಟೆಯಲ್ಲಿ ಪ್ಯಾಂಟೊಪ್ರಜೋಲ್ 40 mg ಎಸ್ಒಎಸ್ ಮಾತ್ರೆ, ಒಣಕೆಮ್ಮು ಇದ್ದಲ್ಲಿ ಆಂಟಿ-ಟ್ಯೂಸಿವ್ ಸಿರಪ್ ಎಸ್ಒಎಸ್ ಅನ್ನು ತೆಗೆದುಕೊಳ್ಳುವುದು.

 ವೈದ್ಯರ ಸಲಹೆ ಬೇಕೇಬೇಕು

ವೈದ್ಯರ ಸಲಹೆ ಬೇಕೇಬೇಕು

ವೈದ್ಯ, ವೈದ್ಯಕೀಯ ಅಧಿಕಾರಿಗಳಿಂದ ನೀಡುವ ಪ್ರಿಸ್ಕ್ರಿಪ್ಷನ್ ಅಡಿಯಲ್ಲಿ ಮಾತ್ರ ಚಿಕಿತ್ಸೆಗಾಗಿ ತೆಗೆದುಕೊಳ್ಳಬೇಕು, ಜ್ವರ ಗರಿಷ್ಠ ಪ್ರಮಾಣದ ಮಾತ್ರೆಯೊಂದಿಗೆ ಜ್ವರವನ್ನು ನಿಯಂತ್ರಿಸದಿದ್ದರೆ, ಪ್ಯಾರೆಸಿಟಮಾಲ್ 650 mg ದಿನಕ್ಕೆ ನಾಲ್ಕು ಬಾರಿ, ಸ್ಟೀರಾಯ್ಡ್ ಅಲ್ಲದ ಉರಿಯೂತದ ಔಷಧ (ಎನ್‌ಎಸ್‌ಎಐಡಿ) (ಉದಾ: ಮಾತ್ರೆ ನ್ಯಾಪ್ರೊಕ್ಸೆನ್ 250 mg ದಿನಕ್ಕೆ ಎರಡು ಬಾರಿ) ಇತರ ಔಷಧಗಳಿಗೆ ಸಲಹೆ ನೀಡುವ ಚಿಕಿತ್ಸಕ ವೈದ್ಯರನ್ನು ಸಂಪರ್ಕಿಸಬಹುದು.

  Corona ಕಡಿಮೆಯಾಗಿದೆ ಎಂದು ವರದಿಯಾಗಲು ಇದೇ ಕಾರಣ | Oneindia Kannada
   ಸೋಂಕು 7 ದಿನಗಳಿಗಿಂತ ಹೆಚ್ಚು ದಿನದಗಳಿದ್ದರೆ ವೈದ್ಯರನ್ನು ಭೇಟಿಯಾಗಿ

  ಸೋಂಕು 7 ದಿನಗಳಿಗಿಂತ ಹೆಚ್ಚು ದಿನದಗಳಿದ್ದರೆ ವೈದ್ಯರನ್ನು ಭೇಟಿಯಾಗಿ

  ವ್ಯವಸ್ಥಿತ ಮೌಖಿಕ ಸ್ಟೀರಾಯ್ಡ್‌ಗಳನ್ನು ಸೌಮ್ಯ ರೋಗದಲ್ಲಿ ಸೂಚಿಸಲಾಗುವುದಿಲ್ಲ, ರೋಗಲಕ್ಷಣಗಳು 7 ದಿನಗಳನ್ನು ಮೀರಿ ಮುಂದುವರಿದರೆ(ನಿರಂತರ ಜ್ವರ, ಉಲ್ಬಣಗೊಳ್ಳುವ ಕೆಮ್ಮು, ಇತ್ಯಾದಿ) ಕಡಿಮೆ ಪ್ರಮಾಣದ ಮೌಖಿಕ ಸ್ಟೀರಾಯ್ಡ್ಗಳೊಂದಿಗೆ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸುವುದು‌ ಹಾಗೂ ರೋಗಿಗಳು ಬೆಚ್ಚಗಿನ ನೀರಿನ ಬಾಯಲ್ಲಿ‌ ಹಾಕಿ ಮುಕ್ಕಳಿಸುವುದು ಅಥವಾ ದಿನಕ್ಕೆ ಎರಡು ಬಾರಿ ಬಿಸಿ ನೀರಿನ ಹಬೆಯ ಪಡೆದು ಉಸಿರಾಡುವುದು.

  English summary
  Karnataka Govt issues revised guidelines for Home Isolation of mild & asymptomatic COVID-19 patents. Read on.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X