ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಸಾದ್ ಮತ್ತು ಗಣಪತಿ 8 ವರ್ಷದಿಂದ ಭೇಟಿಯೇ ಆಗಿಲ್ಲ!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಜುಲೈ, 08: ಡಿವೈಎಸ್ ಪಿ ಎಮ್ ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗುಪ್ತಚರದಳದ ಅಡಿಶನಲ್ ಜನರಲ್ ಆಫ್ ಪೊಲೀಸ್ ಎ ಎಂ ಪ್ರಸಾದ್ ಅವರ ಹೆಸರು ಕೇಳಿ ಬಂದಿದೆ. ಪ್ರಸಾದ್ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಅಪವಾದವೂ ಕೇಳಿ ಬಂದಿದೆ.

ಆದರೆ ಪೊಲೀಸ್ ಇಲಾಖೆ ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿ ಇನ್ನೊಂದು ಆಯಾಮವನ್ನು ತೆಗೆದಿರಿಸುತ್ತದೆ. ಪೊಲೀಸ್ ಮೂಲಗಳು ಹೇಳುವಂತೆ ಎ ಎಂ ಪ್ರಸಾದ್ ಮತ್ತು ಆತ್ಮಹತ್ಯೆ ಮಾಡಿಕೊಂಡ ಕಳೆದ ಗಣಪತಿ ಎಂಟು ವರ್ಷಗಳಿಂದ ಭೇಟಿಯೇ ಆಗಿಲ್ಲ![ಡಿವೈಎಸ್‌ಪಿ ಎಂ.ಕೆ.ಗಣಪತಿ ಡೆತ್ ನೋಟ್ ಎಲ್ಲಿ?]

mk ganapati

2008 ರಲ್ಲಿ ಎ ಎಂ ಪ್ರಸಾದ್ ಪಶ್ಚಿಮ ವಲಯದ ಐಜಿಪಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಗ ಗಣಪತಿ ಕದ್ರಿ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದರು. ಈ ಸಂದರ್ಭದಲ್ಲಿ ಪ್ರಸಾದ್ ಗಣಪತಿ ಅವರನ್ನು ಒಂದೆರಡು ಸಾರಿ ಭೇಟಿ ಮಾಡಿದ್ದರು. ಗಣಪತಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿದ್ದ ಎನ್ ಸತೀಶ್ ಕುಮಾರ್ ಅವರಿಗೆ ವರದಿ ಮಾಡಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲೇ ಗಣಪತಿ ಹೆಸರು ಚರ್ಚ್ ಗಲಾಟೆಯೊಂದಿಗೆ ತಳುಕು ಹಾಕಿಕೊಂಡಿದ್ದು.[ಸಮವಸ್ತ್ರದಲ್ಲೇ ನೇಣಿಗೆ ಶರಣಾದ ಡಿವೈಎಸ್ಪಿ ಗಣಪತಿ]

2008 ರ ನಂತರ ಪ್ರಸಾದ್ ಗುಪ್ತಚರ ದಳಕ್ಕೆ ನಿಯೋಜನೆಗೊಂಡರು. ಇದಾದ ಮೇಲೆ ಗಣಪತಿ ಮತ್ತು ಪ್ರಸಾದ್ ಭೇಟಿಯಾಗಿದ್ದೇ ಇಲ್ಲ. ಆದರೆ ಸಾವಿಗೂ ಮುನ್ನ ಗಣಪತಿ ಪ್ರಸಾದ್ ಅವರ ಹೆಸರನ್ನು ಯಾಕೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.[ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ : ಯಾರು, ಏನು ಹೇಳಿದರು?]

ಅಲ್ಲದೇ ಗಣಪತಿ ಪ್ರಸಾದ್ ಅವರ ಬಳಿ ಬಂದು ಸಹಾಯ ಕೇಳಿದ್ದರೂ ಎಂಬ ಸಂಗತಿಯನ್ನು ಇಲಾಖೆ ಮೂಲಗಳು ತಳ್ಳಿಹಾಕುತ್ತವೆ. ಒಟ್ಟಿನಲ್ಲಿ ಗಣಪತಿ ಅವರ ಸಾವು ರಾಜ್ಯದ ಪೊಲೀಸ್ ಇಲಾಖೆಗೆ ಆದ ನಷ್ಟ. ಆದರೆ ಅನೇಕ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿಗುವುದು ಯಾವಾಗಲೋ?

English summary
Deputy Superintendent of Police (Dy.SP), Mangaluru, M K Ganapathy had accused incumbent Additional General of Police, Karnataka Intelligence Bureau (IB), A M Prasad of allegedly demanding money and harassing him. Following the allegation, he committed suicide at a lodge in Madikeri, Kodagu. While the Karnataka state government has handed over the probe into the suicide to the CID, top sources in the police department tell OneIndia that the allegations against Prasad are baseless. The source also said that it was unfair to target Prasad who is considered an honest officer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X