ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಆಪ್ತ ಕೆಂಪಯ್ಯನವರನ್ನು ದೂರವಿಡಲು ಆರಂಭಿಸಿದರೇ ರಾಮಲಿಂಗಾ ರೆಡ್ಡಿ?

ರಾಮಲಿಂಗಾ ರೆಡ್ಡಿ ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಕೆಂಪಯ್ಯನವರನ್ನು ರೆಡ್ಡಿ ದೂರವಿಡಲು ಆರಂಭಿಸಿದ್ದಾರೆ ಎನ್ನುವ ಮಾತು ಸದ್ಯ ಚಾಲ್ತಿಯಲ್ಲಿದೆ.

|
Google Oneindia Kannada News

ಕೆ ಜೆ ಜಾರ್ಜ್ ಗೃಹ ಸಚಿವರಾಗಿದ್ದಾಗಿನಿಂದ ಹೆಚ್ಚುಕಮ್ಮಿ ಇಲಾಖೆಯ ಸಚಿವರಂತೇ ಕಾರ್ಯನಿರ್ವಹಿಸುತ್ತಿದ್ದ ಮುಖ್ಯಮಂತ್ರಿಗಳ ಆಪ್ತ ಮತ್ತು ಗೃಹ ಸಚಿವರ ಸಲಹೆಗಾರ ಕೆಂಪಯ್ಯನವರ ಇಲಾಖೆಯ ಮೇಲಿನ ನಿಯಂತ್ರಣ ಪರಮೇಶ್ವರ್ ಸಚಿವರಾಗಿದ್ದಾಗಲೂ ಮುಂದುವರಿದಿತ್ತು.

ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡ ನಂತರ, ರಾಮಲಿಂಗಾ ರೆಡ್ಡಿ ನೂತನ ಗೃಹಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಇದಾದ ನಂತರ ಕೆಂಪಯ್ಯನವರನ್ನು ರೆಡ್ಡಿ ದೂರವಿಡಲು ಆರಂಭಿಸಿದ್ದಾರೆ ಎನ್ನುವ ಮಾತು ಸದ್ಯ ಚಾಲ್ತಿಯಲ್ಲಿದೆ.

ನಕಲಿ ಜಾತಿ ಪ್ರಮಾಣ ಪತ್ರ ಆರೋಪ, ಕೆಂಪಯ್ಯಗೆ ಕ್ಲೀನ್ ಚಿಟ್ನಕಲಿ ಜಾತಿ ಪ್ರಮಾಣ ಪತ್ರ ಆರೋಪ, ಕೆಂಪಯ್ಯಗೆ ಕ್ಲೀನ್ ಚಿಟ್

ಇದಕ್ಕೆ ಪುಷ್ಟಿ ನೀಡುವಂತೆ ಗೃಹಸಚಿವರು ಕರೆದ ಎರಡು ಸಭೆಗಳಲ್ಲೂ ಕೆಂಪಯ್ಯನವರ ಗೈರು ಎದ್ದು ಕಾಣುತ್ತಿತ್ತು. ಸಾಮಾನ್ಯವಾಗಿ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಸಭೆಗಳಲ್ಲಿ ಹಾಜರಿರುತ್ತಿದ್ದ ಕೆಂಪಯ್ಯ, ಪೊಲೀಸ್ ಅಧಿಕಾರಿಗಳ ಎರಡೂ ಸಭೆಯಲ್ಲಿ ಹಾಜರಿರಲಿಲ್ಲ.

ಅಧಿಕಾರ ಸ್ವೀಕಾರ ತೆಗೆದುಕೊಂಡ ದಿನದಿಂದಲೇ ಕೆಂಪಯ್ಯನವರ ಜೊತೆ ಅಂತರ ಕಾಯ್ದುಕೊಂಡು ಬಂದಿರುವ ರೆಡ್ಡಿ, ಅಗತ್ಯಬಿದ್ದಾಗ ಕೆಂಪಯ್ಯನವರ ಸಲಹೆಯನ್ನು ಕೇಳುತ್ತೇನೆ ಎನ್ನುವ ಮೂಲಕ ಸಚಿವಾಲಯದ ಆಡಳಿತದಲ್ಲಿ ಯಾರೂ ಮೂಗು ತೂರಿಸುವ ಅಗತ್ಯವಿಲ್ಲ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

ಮಂಗಳೂರಿಗೆ ಕೆಂಪಯ್ಯರನ್ನು ಕಳಿಸಿದ್ದಕ್ಕೆ ಸಿದ್ದುಗೆ ಜಾಡಿಸಿದ ಸುರೇಶ್ಮಂಗಳೂರಿಗೆ ಕೆಂಪಯ್ಯರನ್ನು ಕಳಿಸಿದ್ದಕ್ಕೆ ಸಿದ್ದುಗೆ ಜಾಡಿಸಿದ ಸುರೇಶ್

ಒಂದು ಮೂಲಗಳ ಪ್ರಕಾರ ಅರಣ್ಯ ಸಚಿವ ರಮಾನಾಥ ರೈಗೆ ಗೃಹಸಚಿವ ಸ್ಥಾನ ನೀಡಲು ಎಲ್ಲಾ ಸಿದ್ದತೆ ನಡೆಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ತಡೆದಿದ್ದು ಒಕ್ಕಲಿಗ ಲಾಬಿ ಎನ್ನುವ ಮಾತು ಕೇಳಿಬರುತ್ತಿತ್ತು. ಇದಕ್ಕಾಗಿಯೇ ರಾಮಲಿಂಗಾ ರೆಡ್ಡಿಗೆ ಸ್ಥಾನ ನೀಡಲಾಯಿತು ಎನ್ನಲಾಗುತ್ತಿದೆ. ಮುಂದೆ ಓದಿ..

ಸಿದ್ದರಾಮಯ್ಯನವರಲ್ಲಿ ರೆಡ್ಡಿ ಮನವಿ

ಸಿದ್ದರಾಮಯ್ಯನವರಲ್ಲಿ ರೆಡ್ಡಿ ಮನವಿ

ಇನ್ನೊಂದು ಮೂಲಗಳ ಪ್ರಕಾರ ರಾಮಲಿಂಗ ರೆಡ್ಡಿಯವರನ್ನು ಗೃಹಸಚಿವರನ್ನಾಗಿ ಘೋಷಿಸಿದ ದಿನವೇ, ಕೆಂಪಯ್ಯನವರನ್ನು ಆ ಸ್ಥಾನದಿಂದ ಕೈಬಿಡುವಂತೆ ರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದರು ಎಂಬ ಮಾತು ಕೇಳಿ ಬರುತ್ತಿತ್ತು.

ಮುಲಾಜಿಲ್ಲದೇ ಕಿತ್ತೊಗೆಯುತ್ತೇನೆ, ರೆಡ್ಡಿ ಎಚ್ಚರಿಕೆ

ಮುಲಾಜಿಲ್ಲದೇ ಕಿತ್ತೊಗೆಯುತ್ತೇನೆ, ರೆಡ್ಡಿ ಎಚ್ಚರಿಕೆ

ಶನಿವಾರ (ಸೆ 9) ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ರಾಮಲಿಂಗಾ ರೆಡ್ಡಿ ನೀಡಿದ ಎಚ್ಚರಿಕೆಯೂ ಜಬರ್ದಸ್ತಾಗಿತ್ತು. ನಾನು ಅವರ ಕಡೆಯವರು, ಇವರ ಕಡೆಯವರು ಎಂದು ಇಷ್ಟು ದಿನಯಿದ್ದರೆ, ಇನ್ನು ಮುಂದೆ ಮರೆತು ಬಿಡಿ. ಮುಲಾಜಿಲ್ಲದೇ ಕಿತ್ತೊಗೆಯುತ್ತೇನೆಂದು ರೆಡ್ಡಿ, ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕೆಂಪಯ್ಯನವರ ಸಲಹೆ ಅವಶ್ಯಕತೆ ಬಿದ್ದಾಗ ಕೇಳುತ್ತೇನೆ

ಕೆಂಪಯ್ಯನವರ ಸಲಹೆ ಅವಶ್ಯಕತೆ ಬಿದ್ದಾಗ ಕೇಳುತ್ತೇನೆ

ನನಗೆ 28ವರ್ಷದ ಅನುಭವವಿದೆ, ಯಾವ ಸಮಯದಲ್ಲಿ ಏನು ಮಾಡಬೇಕು, ಯಾರ ಸಲಹೆ ಕೇಳಬೇಕು ಎನ್ನುವುದು ತಿಳಿದಿದೆ. ಅದೇ ರೀತಿ, ಕೆಂಪಯ್ಯನವರ ಸಲಹೆಯ ಅವಶ್ಯಕತೆ ಬಿದ್ದಾಗ ಕೇಳುತ್ತೇನೆ ಎಂದು ರೆಡ್ಡಿ ಹೇಳಿದ್ದಾರೆ. ಹಾಗಾಗಿ, ಮುಂದಿನ ದಿನಗಳಲ್ಲಿ ಗೃಹ ಇಲಾಖೆಯಲ್ಲಿ ಅಪಸ್ವರ ಕೇಳಿ ಬರುವ ಸಾಧ್ಯತೆ ದಟ್ಟವಾಗಿದೆ.

ಮುಖ್ಯಮಂತ್ರಿಗಳು ಭಾಗವಹಿಸುವ ಸಭೆಯಲ್ಲಿ ಮಾತ್ರ ಭಾಗವಹಿಸುವ ಸಾಧ್ಯತೆ

ಮುಖ್ಯಮಂತ್ರಿಗಳು ಭಾಗವಹಿಸುವ ಸಭೆಯಲ್ಲಿ ಮಾತ್ರ ಭಾಗವಹಿಸುವ ಸಾಧ್ಯತೆ

ಈ ಹಿಂದೆ ಜಾರ್ಜ್, ಪರಮೇಶ್ವರ್ ಇಲಾಖೆಯ ಸಚಿವರಾಗಿದ್ದಾಗ, ಅವರ ಪಕ್ಕದಲ್ಲೇ ಕೂರುತ್ತಿದ್ದ ಕೆಂಪಯ್ಯ, ಇನ್ನು ಮುಂದೆ ಮುಖ್ಯಮಂತ್ರಿಗಳು ಭಾಗವಹಿಸುವ ಸಭೆಯಲ್ಲಿ ಮಾತ್ರ ಭಾಗವಹಿಸುವ ಸಾಧ್ಯತೆಯಿದೆ.

ಅನಗತ್ಯವಾಗಿ ಯಾರನ್ನೂ ರೌಡಿಶೀಟರ್ ಪಟ್ಟಿಗೆ ಸೇರಿಸಬೇಡಿ

ಅನಗತ್ಯವಾಗಿ ಯಾರನ್ನೂ ರೌಡಿಶೀಟರ್ ಪಟ್ಟಿಗೆ ಸೇರಿಸಬೇಡಿ

ಶನಿವಾರ ನಡೆದ ಸಭೆಯಲ್ಲಿ ರೆಡ್ಡಿ, ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಯಾರನ್ನೂ ಅಷ್ಟೇ ಅನಗತ್ಯವಾಗಿ ಯಾರನ್ನೂ ರೌಡಿಶೀಟರ್ ಪಟ್ಟಿಗೆ ಸೇರಿಸಬೇಡಿ, ಅವರ ಮನವೊಲಿಸಲು ಪ್ರಯತ್ನಿಸಿ. ಗೃಹ ಸಚಿವರ ಆಪ್ತ, ಸಂಬಂಧಿಕರೆಂದು ಬರುವವರ ಮೇಲೆ ಮೊದಲು ಕಣ್ಣಿಡಿ ಎಂದು ರೆಡ್ಡಿ, ಸಭೆಯಲ್ಲಿ ಸೂಚನೆ ನೀಡಿದ್ದಾರೆ.

English summary
Karnataka Home Minister Ramalinga Reddy keeping distance with Home Minister advisor Kempaiah? In recent, two Police department meetings, Minister Reddy not invited Kempaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X